Home
ಸುದ್ದಿಜಾಲ

ಈ ಟೆಲಿಗ್ರಾಮ್ ಬಳಕೆದಾರರೇ ಎಚ್ಚರ...ಇಲ್ಲವಾದ್ರೆ ನಿಮಗೆ ಕಾದಿದೆ ಗ್ರಹಚಾರ!

ಪ್ರಮುಖ ಮೆಸೆಜಿಂಗ್‌ ಆಪ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಬಳಕೆದಾರರಿಗೆ ಭಿನ್ನ ಸೇವೆ ನೀಡುತ್ತಾ ಬರುತ್ತಿದ್ದು, ಇದರಲ್ಲೂ ಸಹ ಆಗಾಗ್ಗೆ ಹೊಸ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿಕೊಂಡು ಬರಲಾಗುತ್ತಿದೆ. ಈ ನಡುವೆ ಟೆಲಿಗ್ರಾಮ್‌ ಬಳಕೆದಾರರು ಶಾಕ್‌ ಆಗುವ ಸುದ್ದಿಯೊಂದು ಹೊರ ಬಿದ್ದಿದೆ.

ಹೌದು, ಆಂಡ್ರಾಯ್ಡ್‌ಗಾಗಿ ಜನಪ್ರಿಯ ಮೆಸೇಜಿಂಗ್ ಆಪ್ ಆಗಿರುವ ಟೆಲಿಗ್ರಾಮ್‌ನ ಹೊಸ ಆವೃತ್ತಿ ಎಂದು ಕಾಣಿಸಿಕೊಂಡಿರುವ ನಕಲಿ ಟೆಲಿಗ್ರಾಮ್‌ ಬಳಕೆದಾರರ ಡೇಟಾವನ್ನು ಕದಿಯುವ ಸಾಮರ್ಥ್ಯವಿರುವ ದುರುದ್ದೇಶಪೂರಿತ ಆಪ್‌ ಎಂದು ಹೇಳಲಾಗುತ್ತಿದೆ. ಹಾಗಿದ್ರೆ, ಏನಿದು ನಕಲಿ ಟೆಲಿಗ್ರಾಮ್‌ನಲ್ಲಿ ಕಂಡು ಬಂದಿರುವ ಲೋಪ?, ಇದರಿಂದ ಬಳಕೆದಾರರಿಗೆ ಏನೆಲ್ಲಾ ಸಂಕಷ್ಟ ಎದುರಾಗಲಿದೆ. ಇದರಿಂದ ಎಚ್ಚರಿಕೆ ವಹಿಸುವುದು ಹೇಗೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಈ ಟೆಲಿಗ್ರಾಮ್ ಬಳಕೆದಾರರೇ ಎಚ್ಚರ...ಇಲ್ಲವಾದ್ರೆ ನಿಮಗೆ ಕಾದಿದೆ ಗ್ರಹಚಾರ!

ಟೆಲಿಗ್ರಾಮ್‌ನಲ್ಲಿ ಸಮಸ್ಯೆ: ಸೈಬರ್ ಸೆಕ್ಯುರಿಟಿ ಸಂಸ್ಥೆಯ ಚೆಕ್‌ಪಾಯಿಂಟ್ ಜನಪ್ರಿಯ ಮೆಸೇಜಿಂಗ್ ಆಪ್‌ ಟೆಲಿಗ್ರಾಮ್‌ನ ನವೀಕರಿಸಿದ ಆವೃತ್ತಿಯಲ್ಲಿ ಅಪಾಯಕಾರಿ ಮಾಲ್‌ವೇರ್ ಅನ್ನು ಕಂಡುಹಿಡಿದಿದೆ . ಹಾರ್ಮನಿ ಮೊಬೈಲ್ ಈ ಆಪ್‌ ಅನ್ನು ಪತ್ತೆಹಚ್ಚಿದೆ ಮತ್ತು ನಿರ್ಬಂಧಿಸಿದೆ. ವರದಿಗಳ ಪ್ರಕಾರ ಆಪ್‌ನ ನವೀಕರಿಸಿದ ಆವೃತ್ತಿಯು ಟ್ರೋಜನ್ ಟ್ರಯಾಡಾಗೆ ಲಿಂಕ್ ಮಾಡಲಾದ ದುರುದ್ದೇಶಪೂರಿತ ಕೋಡ್‌ನೊಂದಿಗೆ ಎಂಬೆಡ್ ಮಾಡಲಾಗಿದೆ ಎನ್ನಲಾಗಿದೆ.

ಈ ಆಪ್‌ನ ಅನಾನುಕೂಲಗಳು: ಟೆಲಿಗ್ರಾಮ್ ಮೆಸೆಂಜರ್ 9.2.1 ಪ್ಯಾಕೇಜ್‌ನ ಹೆಸರಿನಲ್ಲಿ ಇರುವ ಈ ಆಪ್‌ ಪ್ರತಿಯೊಂದು ವಿಷಯದಲ್ಲೂ ಟೆಲಿಗ್ರಾಮ್‌ನಂತೆ ಕಾಣುತ್ತದೆ. ಅಂದರೆ ಇದು ಮೂಲ ಟೆಲಿಗ್ರಾಮ್ ಆಪ್‌ ಐಕಾನ್ ಅನ್ನೇ ಹೋಲುತ್ತದೆ. ಇದನ್ನು ಬಳಕೆದಾರರು ತಮ್ಮ ಡಿವೈಸ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡು ಓಪನ್‌ ಮಾಡಿದಾಗ ಅವರಿಗೆ ಟೆಲಿಗ್ರಾಮ್ ದೃಢೀಕರಣ ಡಿಸ್‌ಪ್ಲೇಯನ್ನು ತೋರಿಸಲಾಗುತ್ತದೆ. ಅದರಲ್ಲಿ ಬಳಕೆದಾರರು ಫೋನ್ ಸಂಖ್ಯೆಯನ್ನು ಆಡ್‌ ಮಾಡಬೇಕು. ನಂತರ ಆಪ್‌ಗೆ ಸೈನ್ ಇನ್ ಮಾಡಬೇಕಾಗುತ್ತದೆ. ಈ ವೇಳೆ ಕೆಲವು ಅನುಮತಿಗಳನ್ನು ಪಡೆದುಕೊಳ್ಳುತ್ತದೆ.

ಈ ರೀತಿಯ ಆಪ್‌ಗಳು ಬಳಕೆದಾರರನ್ನು ಮೋಸಗೊಳಿಸಲು ವಿಶೇಷ ಫೀಚರ್ಸ್‌ ಆಯ್ಕೆ ನೀಡುತ್ತವೆ. ಹಾಗೆಯೆ ಕಡಿಮೆ ಬೆಲೆಯ ವಸ್ತುಗಳನ್ನು ತೋರಿಸುವ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತವೆ. ಈ ಆಕರ್ಷಕ ಕೊಡುಗೆಗಳು ಅನಧಿಕೃತ ಬಾಹ್ಯ ಆಪ್‌ ಸ್ಟೋರ್‌ಗಳಿಂದ ಕಾಣಿಸಿಕೊಳ್ಳುತ್ತವೆ. ಮತ್ತೆ ಬಳಕೆದಾರರು ಈ ಆಪ್‌ಗಳನ್ನು ಇನ್‌ಸ್ಟಾನ್ ಮಾಡುವ ಮೂಲಕ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಲಾಗುತ್ತದೆ.

ಅಷ್ಟು ಮಾತ್ರವಲ್ಲದೆ ಒಮ್ಮೆ ಈ ಆಪ್‌ ನಿಮ್ಮ ಫೋನ್‌ನಲ್ಲಿ ಆಕ್ಟಿವ್ ಆಯ್ತು ಎಂದಾದರೆ ಮಾಲ್‌ವೇರ್ ಡಿವೈಸ್‌ನ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತದೆ, ಸಂವಹನ ಚಾನಲ್ ಅನ್ನು ಅದರಲ್ಲಿ ಇನ್‌ಸ್ಟಾಲ್‌ ಮಾಡುತ್ತದೆ. ಜೊತೆಗೆ ಕಾನ್ಫಿಗರೇಶನ್ ಫೈಲ್ ಅನ್ನು ಡೌನ್‌ಲೋಡ್ ಮಾಡುತ್ತದೆ ಮತ್ತು ರಿಮೋಟ್ ಸರ್ವರ್‌ನಿಂದ ಪೇಲೋಡ್ ಅನ್ನು ಸ್ವೀಕರಿಸಲು ಕಾಯುತ್ತಿರುತ್ತದೆ.

ಇಷ್ಟು ಮಾತ್ರವಲ್ಲದೆ ಪಾವತಿಸಿದ ಚಂದಾದಾರಿಕೆಗಳಲ್ಲಿ ಬಳಕೆದಾರರನ್ನು ನೋಂದಾಯಿಸುವುದು, ಗ್ರಾಹಕರ ಎಸ್‌ಎಮ್‌ಎಸ್‌ ಮತ್ತು ಫೋನ್ ಸಂಖ್ಯೆಯನ್ನು ಬಳಸಿಕೊಂಡು ಆಪ್‌ ಮೂಲಕ ಖರೀದಿ ಮಾಡುವ ಕೆಲಸ ಮಾಡುತ್ತದೆ. ಇದರೊಂದಿಗೆ ಜಾಹೀರಾತುಗಳನ್ನು ಪ್ರದರ್ಶಿಸುವುದು ಮತ್ತು ಲಾಗಿನ್ ರುಜುವಾತುಗಳು ಮತ್ತು ಇತರ ನಿರ್ಣಾಯಕ ಬಳಕೆದಾರ ಮತ್ತು ಡಿವೈಸ್‌ನ ಡೇಟಾವನ್ನು ಕಳ್ಳತನ ಮಾಡುವುದು ಇದರ ದುರುದ್ದೇಶವಾಗಿದೆ.

ಈ ಟೆಲಿಗ್ರಾಮ್ ಬಳಕೆದಾರರೇ ಎಚ್ಚರ...ಇಲ್ಲವಾದ್ರೆ ನಿಮಗೆ ಕಾದಿದೆ ಗ್ರಹಚಾರ!

ನೀವು ಮಾಡಬೇಕುರುವುದೇನು?: ನೀವು ಯಾವುದೇ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಲು ಮುಂದಾದರೆ ಮೊದಲು ಅದನ್ನು ಪರಿಶೀಲಿಸಿದ ಮೂಲದಿಂದ ಮಾತ್ರ ಡೌನ್‌ಲೋಡ್ ಮಾಡಿ. ಅಧಿಕೃತ ವೆಬ್‌ಸೈಟ್‌ಗಳು ಅಥವಾ ಅಧಿಕೃತ ಆಪ್‌ ಸ್ಟೋರ್‌ಗಳನ್ನು ಈ ವೇಳೆ ಬಳಕೆ ಮಾಡಿ. ಡೌನ್‌ಲೋಡ್ ಮಾಡುವ ಮೊದಲು ಆಪ್‌ನ ಮಾಲೀಕರು ಯಾರು ಎಂಬುದನ್ನು ಪರಿಶೀಲಿಸಿ. ಇದಲ್ಲದೆ, ಜನರು ಬರೆದ ವಿಮರ್ಶೆಗಳನ್ನು ಸಹ ಓದಿ. ಅದಾಗ್ಯೂ ನಿಮಗೆ ಸರಿಯಾದ ಮಾಹಿತಿ ಸಿಗಲಿಲ್ಲ ಎಂದರೆ ಇನ್‌ಸ್ಟಾಲ್‌ ಮಾಡಿದ ನಂತರ ನಿಮ್ಮಿಂದ ಅನಗತ್ಯ ಅನುಮತಿಯನ್ನು ಕೇಳಿದರೆ, ಒಮ್ಮೆ ಕ್ರಾಸ್ ಚೆಕ್ ಮಾಡಿ.

Best Mobiles in India

English summary
Fake Telegram, which appears to be a new version of the popular messaging app Telegram for Android, is said to be a malicious app capable of stealing user data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+