ಈ ಅಸಾಮಾನ್ಯ ಪೆನ್‌ನ ವಿಶೇಷತೆ ಗೊತ್ತಾದ್ರೆ ಈಗಲೇ ಖರೀದಿ ಮಾಡುತ್ತೀರಾ!, ಬೆಲೆ ಬಗ್ಗೆ ಚಿಂತೆಯೇ ಬೇಡ
ಸ್ಮಾರ್ಟ್‌ಗ್ಯಾಜೆಟ್‌ಗಳು ಇಂದು ಜನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಅವರಿಗೆ ಸಂತಸವನ್ನೂ ಸಹ ಹೆಚ್ಚು ಮಾಡುವ ಸಾಮರ್ಥ್ಯ ಪಡೆದುಕೊಂಡಿವೆ. ಈ ಕಾರಣಕ್ಕಾಗಿಯೇ ಪ್ರೀತಿ ಪಾತ್ರರಿಗೆ ವಿಶೇಷ ದಿನಗಳಲ್ಲಿ ಸ್ಮಾರ್ಟ್ ಡಿವೈಸ್‌ಗಳನ್ನು ಕೊಡುಗೆಯಾಗಿ ನೀಡಲಾಗುತ್ತದೆ. ಈ ನಡುವೆ ಈ ವಿಶೇಷ ಸ್ಮಾರ್ಟ್ ಫೆನ್ ಮಾರುಕಟ್ಟೆಯಲ್ಲಿ ಬಹಳ ಪ್ರಸಿದ್ಧಿ ಪಡೆದುಕೊಂಡಿದೆ.
ಹೌದು, ಈ ಹಿಂದೆ ಬಳಕೆ ಮಾಡಲಾಗುತ್ತಿದ್ದ ಬಹುಪಾಲು ಎಲ್ಲಾ ವಸ್ತುಗಳು ಸಹ ಸ್ಮಾರ್ಟ್ ಸ್ವರೂಪ ಪಡೆದುಕೊಳ್ಳುತ್ತಿವೆ. ಅದೇ ರೀತಿ ಈ ಕೆತ್ತನೆ ಪೆನ್ ಸಹ ಸ್ಮಾರ್ಟ್ ಆಗಿದೆ. ಕೆಲವರು ತಮ್ಮ ಅತ್ಮೀಯರಿಗೆ ಏನಾದರೂ ಉಡುಗೊರೆ ನೀಡಲು ಮುಂದಾಗುತ್ತಾರೆ. ಅದರಲ್ಲೂ ಆ ಉಡುಗೊರೆ ಸದಾ ನೆನಪಿನಲ್ಲಿ ಇರಬೇಕು ಎಂದೂ ಸಹ ಇಚ್ಚೆ ಪಡುತ್ತಾರೆ. ಅಂತವರಿಗೆ ಈ ಸ್ಮಾರ್ಟ್ ಕೆತ್ತನೆ ಪೆನ್ ಬೆಸ್ಟ್ ಎನ್ನಬಹುದು. ಹಾಗಿದ್ರೆ ಯಾವುದು ಈ ಪೆನ್?, ಇದರ ಮೂಲಕ ಎಲ್ಲೆಲ್ಲಿ ಬರೆಯಬಹುದು?, ಬೆಲೆ ಎಷ್ಟು ಎಂಬ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಸ್ಮಾರ್ಟ್ ಪೆನ್: ಸ್ಮಾರ್ಟ್‌ಪೆನ್ ಅಂದಾಕ್ಷಣ ನೀವು ಕೈನಲ್ಲಿ ಹಿಡಿದುಕೊಂಡರೆ ಅದೇ ಬರೆದುಕೊಳ್ಳುತ್ತವೆ ಅಂದುಕೊಳ್ಳಬಹುದು. ಆದರೆ ಅದಲ್ಲ. ಬದಲಾಗಿ ಈ ಪೆನ್ ಹಾಳೆಯಲ್ಲಿ ಬರೆಯುವುದರ ಬದಲು ಇತರೆ ವಸ್ತುಗಳ ಮೇಲೆ ಕೆತ್ತನೆ ಮಾಡಬಹುದಾದ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಹೆಸರು ಪವರ್ ಕೆತ್ತನೆ ಪೆನ್. ಇದನ್ನು ಫ್ರೆಸ್‌ಡಿಕಾರ್ಟ್ ಸಂಸ್ಥೆ ತಯಾರು ಮಾಡಿದೆ(FreshDcart Power Engraving Pen). ಈ ಪೆನ್ ನೋಡಲು ಸಾಮಾನ್ಯ ಪೆನ್‌ನಂತೆ ಕಾಣಿಸಿದರೂ ಸಹ ಇದರ ಕೆಲಸ ಅಸಾಮಾನ್ಯ.
ಇದು 100 ಗ್ರಾಂ ತೂಕ ಹೊಂದಿದ್ದು, 15 ಸೆಂಟಿಮೀಟರ್ ಉದ್ದ ಹಾಗೂ 4 ಸೆಂಟಿಮೀಟರ್ ಅಗಲವಾಗಿದೆ. ಇದು ಬ್ಯಾಟರಿ ಮೂಲಕ ಕಾರ್ಯನಿರ್ವಹಿಸಲಿದ್ದು, ಇದಕ್ಕಾಗಿ ಎಎ ಗಾತ್ರದ ಬ್ಯಾಟರಿಗಳನ್ನು ನೀವು ಬಳಕೆ ಮಾಡಬಹುದು. ಜೊತೆಗೆ ಇದನ್ನು ಕಂಟ್ರೋಲ್ ಮಾಡಲು ಮುಂದಿನ ಭಾಗದಲ್ಲಿ ಅಂದರೆ ಹೆಬ್ಬೆರಳು ಕೂರುವ ಜಾಗದಲ್ಲಿ ಬಟನ್ ಆಯ್ಕೆ ನೀಡಲಾಗಿದೆ. ಇದನ್ನು ಆನ್ ಮಾಡಿ ಸ್ವಲ್ಪ ಅದುಮಿ ಹಿಡಿದರೆ ಅದು ತನ್ನ ಕೆಲಸ ಆರಂಭ ಮಾಡುತ್ತದೆ. ಈ ವೇಳೆ ನಿಮ್ಮ ಮನಸ್ಸಿನಲ್ಲಿ ಮೂಡುವುದನ್ನು ಅಲ್ಲಿ ಚಿತ್ರಿಸಬಹುದು.
ಈ ಪೆನ್‌ನಿಂದ ಎಲ್ಲೆಲ್ಲಿ ಬರೆಯಬಹುದು?: ಸಾಮಾನ್ಯ ಪೆನ್‌ಗಳಲ್ಲಿ ಹಾಳೆ ಅಥವಾ ಮೃದುವಾದ ವಸ್ತುಗಳ ಮೇಲೆ ಮಾತ್ರ ಬರೆಯಲು ಸಾಧ್ಯ. ಆದರೆ, ಈ ಪೆನ್ ಮೂಲಕ ಮರ, ಗಾಜು ಆಭರಣ ಸೇರಿದಂತೆ ಎಲ್ಲಿ ಬೇಕೆಂದರಲ್ಲಿ ನೀವು ಬರೆಯಬಹುದು, ಚಿತ್ರ ಮೂಡಿಸಬಹುದು. ಈ ಮೂಲಕ ನಿಮ್ಮ ಕಲೆ ಶಾಶ್ವತವಾಗಿರುವಂತೆ ನೋಡಿಕೊಳ್ಳಬಹುದು. ಅಂದರೆ ಒಮ್ಮೆ ಬರೆದರೆ ಯವುದೇ ಕಾರಣಕ್ಕೂ ಅಳಿಸಿಹೋಗುವುದಿಲ್ಲ. ಈ ಕೆತ್ತನೆಗಾಗಿ ಹೆಚ್ಚುವರಿ ಟೂಲ್ ನಿಬ್ ಅನ್ನು ಸಹ ನೀಡಲಾಗುತ್ತದೆ.
ಪ್ರೇಮಿಗಳಿಗಂತೂ ಬೆಸ್ಟ್ ಗಿಫ್ಟ್: ಈ ಡಿವೈಸ್ ಅನ್ನು ಸಾಮಾನ್ಯ ಜನರಿಗೆ ನೀಡುವ ಬದಲು ಪ್ರೇಮಿಗಳಿಗೆ ನೀಡಿದರೆ ಖಂಡಿತಾ ಇಷ್ಟ ಪಡುತ್ತಾರೆ. ಯಾಕೆಂದರೆ ಪ್ರೇಮಿಗಳು ಸಾಮಾನ್ಯವಾಗಿ ತಮ್ಮ ಹೆಸರು ಶಾಶ್ವತವಾಗಿರಲಿ ಎಂದು ಸಿಕ್ಕ ಸಿಕ್ಕಲ್ಲಿ ಬರೆಯುವ ಗೀಳಿನಲ್ಲಿ ಇರುತ್ತಾರೆ. ಆದರೆ, ಈ ವಿಶೇಷವಾದ ಪೆನ್ ಬಳಕೆ ಮಾಡಿಕೊಂಡು ಮರದಲ್ಲಿ(ಈಗಾಗಲೇ ತುಂಡರಿಸಿಟ್ಟಿರುವ ಮರ), ಗಾಜಿನಲ್ಲಿ ಹೆಸರನ್ನು ಆಕರ್ಷಕವಾಗಿ ಕಾಣುವಂತೆ ಬರೆಯಬಹುದು ಅಥವಾ ಚಿತ್ರವನ್ನು ಮೂಡಿಸಬಹದು.
ಮರ, ಗಾಜು ಮಾತ್ರವಲ್ಲದೆ ಸ್ಮಾರ್ಟ್‌ಫೋನ್ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಕ್ಯಾಲ್ಕುಲೇಟರ್, ಮನೆಯಲ್ಲಿನ ಕನ್ನಡಿ, ಸಾಮಾನ್ಯ ಪೆನ್ನುಗಳು, ಲೋಹದ ವಸ್ತುಗಳು ಸೇರಿದಂತೆ ಅನೇಕ ವಸ್ತುಗಳ ಮೇಲೆ ಕೆತ್ತನೆ ಮಾಡಬಹುದಾಗಿದೆ. ಅದರಲ್ಲೂ ಸ್ಪೋರ್ಟ್ ಪ್ರಿಯರಿಗೆ ಇದು ಅತ್ಯಗತ್ಯ ಎನ್ನಬಹುದು. ಅಂದರೆ ಟ್ರೋಫಿ ಹಾಗೂ ಪದಕಗಳನ್ನು ನೀಡುವಾಗ ಈ ಪೆನ್ ಮೂಲಕ ಅವರ ಹೆಸರು ಹಾಗೂ ಸಾಧನೆಯನ್ನು ಕೆತ್ತಬಹುದಾಗಿದೆ.

ಫ್ರೆಸ್‌ಡಿಕಾರ್ಟ್ ಪವರ್ ಕೆತ್ತನೆ ಪೆನ್ ಬೆಲೆ ಹಾಗೂ ಲಭ್ಯತೆ: ಇದು ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್‌ನಲ್ಲಿ ಲಭ್ಯ ಇದ್ದು, ಇದರ ಸಾಮಾನ್ಯ ದರ 499ರೂ.ಗಳಾಗಿದೆ. ಆದರೆ ನೀವು ಇದನ್ನು ಕೇವಲ 249ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಈ ಡಿವೈಸ್‌ಗೆ 50 ರಿಯಾಯಿತಿ ನೀಡಲಾಗಿದೆ. ಇದೇ ರೀತಿಯ ಹಲವಾರು ಪೆನ್‌ಗಳು ಮಾರುಕಟ್ಟೆಯಲ್ಲಿ ಅಥವಾ ಇ-ಕಾಮರ್ಸ್ ಸೈಟ್‌ನಲ್ಲಿ ಲಭ್ಯ ಇದ್ದು, ಖರೀದಿ ಮಾಡುವ ಮುನ್ನ ಒಮ್ಮೆ ವಿಮರ್ಶೆಗಳನ್ನು ಗಮನಿಸಿ.


Click it and Unblock the Notifications








