ಉದುರಿದ ತಲೆಕೂದಲಿಗೆ ಮರುಬೆಳವಣಿಗೆ ನೀಡುವ ಲೇಸರ್‌ಬ್ಯಾಂಡ್‌ 82

By Suneel
|

ಇತ್ತೀಚಿನ ದಿನಗಳಿಂದಲೋ ಅಥವಾ ಮೊದಲಿಂದಲೋ ಗೊತ್ತಿಲ್ಲಾ. ನಮ್‌ ಜನ್ರುಗೆ ಒಂದು ಒತ್ತು ಊಟ ಇಲ್ಲ ಅಂದ್ರು ಬೇಸರ ಮಾಡಿಕೊಳ್ಳಲ್ಲಾ. ಎರಡು ಒತ್ತು ಊಟ ಇಲ್ಲಾಂದ್ರು ಕೊರಗಲ್ಲಾ. ಆದರೆ ತಲೆ ಮೇಲೆ ಕೂದಲೂ ಇಲ್ಲಾಂದ್ರೆ ಮಾತ್ರ ಯಾಕೋ ಏನೋ ತುಂಬಾ ಕೊರಗುತ್ತಾರೆ. ಅಲ್ಲದೇ ಇನ್ನು ಗೆಳೆಯರಂತು "ಬಾಂಡ್ಲಿ" ಅಂತಲೇ ಹೆಸರು ಇಡುತ್ತಾರೆ. ದುಡ್ಡಿರೋರು ಬಿಡಿ ಈಗಂತು ತಲೆ ಕೂದಲನ್ನ ನಾಟಿ ಮಾಡಿಸುತ್ತಾರೆ. ಆದ್ರೆ ದುಡ್ಡು ಇಲ್ಲದಿರೊರಾ ಗತಿ ಹೇಳಿ. ಇನ್ನೊಂದು ವಿಷಯ ಏನಪ್ಪಾ ಅಂದ್ರೆ ನಮ್‌ ಹಳ್ಳಿಕಡೆ ಮನೆಯವರೇ ಅದೇ ಮನೆ ಸದಸ್ಯನನ್ನ ತಲೆ ಕೂದಲು ಉದುರಿ ಬಾಂಡ್ಲಿ ಆದ್ರೆ "ಲೋ ತಲೆ ಕೂದಲು ಉದುರಿ ಬಾಂಡ್ಲಿ ಆದ್ರೆ ಹೆಣ್ಯಾರು ಕೊಟ್ಟರೋ ಮೂದೇವಿ ನಿಂಗೆ ಅಂತಲೂ ರೇಗಿಸುವುದು ಉಂಟು.

ಓದಿರಿ:ನೀರು ಮತ್ತು ಉಪ್ಪಿನಿಂದ ಸ್ಮಾರ್ಟ್‌ಫೋನ್‌ ಚಾರ್ಜ್‌

ಅದೇನೇ ಇರ್ಲಿ. ಇದನ್ನಾ ಯಾಕೆ ಹೇಳ್ದೆ ಅಂದ್ರೆ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯಿಂದ ಈಗ ಉದುರಿದ ಕೂದಲನ್ನು ಸಹ ಮರು ಬೆಳವಣಿಗೆ ಮಾಡಬಹುದು. ಹೌದು , ಮೆಡಿಕಲ್‌ ಗ್ರೇಡ್‌ ಲೇಸರ್‌ ಬಳಸಿಕೊಂಡು 'ಉದುರಿದ ಕೂದಲನ್ನು' ಮರುಬೆಳವಣಿಗೆ ಮಾಡುವ ಹೊಸ ಗ್ಯಾಜೆಟ್‌ ಒಂದು ತಯಾರಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿರಿ..

ಲೇಸರ್‌ಬ್ಯಾಂಡ್‌ 82

ಲೇಸರ್‌ಬ್ಯಾಂಡ್‌ 82

ಉದುರಿದ ಕೂದಲು ಮರುಬೆಳವಣಿಗೆ ಹೊಂದಲು ಅಭಿವೃದ್ದಿ ಪಡಿಸಲಾದ ಗ್ಯಾಜೆಟ್‌ "ಲೇಸರ್‌ಬ್ಯಾಂಡ್‌ 82". ಇದನ್ನು ಫಿನಿನ್‌ಫೆರಿನ ತಂತ್ರಜ್ಞಾನ ಕಂಪನಿ ಅಭಿವೃದ್ದಿಪಡಿಸಲಾಗಿದೆ.

ವಿಶಿಷ್ಟ ವಿನ್ಯಾಸ

ವಿಶಿಷ್ಟ ವಿನ್ಯಾಸ

ಲೇಸರ್‌ಬ್ಯಾಂಡ್‌ 82 ಅನ್ನು ಸುಂದರವಾದ ವಿಶಿಷ್ಟ ವಿನ್ಯಾಸದಿಂದ ಅಭಿವೃದ್ದಿಗೊಳಿಸಲಾಗಿದೆ. ಹೆಡ್‌ಬ್ಯಾಂಡ್‌ನಂತೆ ಕಾಣುವ ಲೇಸರ್‌ಬ್ಯಾಂಡ್‌ ಅನ್ನು ನೆತ್ತಿಮೇಲೆ ಚಿಕಿತ್ಸೆ ಮಾಡಲು ಬಳಸಲಾಗುತ್ತದೆ.

ಕಾರ್ಯನಿರ್ವಹಣೆ

ಕಾರ್ಯನಿರ್ವಹಣೆ

ಲೇಸರ್‌ಬ್ಯಾಂಡ್‌ 82 ಬಾಚಣಿಗೆ ರೀತಿಯಲ್ಲಿ ಹಲ್ಲುಗಳನ್ನು ಹೊಂದಿದ್ದು, ಹಲ್ಲುಗಳು ತಲೆಯ ನೆತ್ತಿಗೆ ಸಂಪರ್ಕ ಒದಗಿಸಲು ಸಹಾಯ ಮಾಡುತ್ತವೆ. ನಂತರದಲ್ಲಿ ಲೇಸರ್‌ಬ್ಯಾಂಡ್‌ ಕೂದಲಿನ ಬೇರುಗಳನ್ನು ಮರು ಬೆಳವಣಿಗೆ ಹೊಂದುವಂತೆ ಚಿಕಿತ್ಸೆ ನೀಡುತ್ತದೆ.

ಚಿಕಿತ್ಸೆ

ಚಿಕಿತ್ಸೆ

ಚಿಕಿತ್ಸೆಗಾಗಿ ಅಂತಃಸ್ರಾವಶಾಸ್ತ್ರಜ್ಞ (an Endocrinologist) ರನ್ನು ಸಂಪರ್ಕಿಸಬೇಕಾಗುತ್ತದೆ. ಅಲ್ಲದೇ ಈ ಚಿಕಿತ್ಸೆಯನ್ನು ನೀವು ಮನೆಯಲ್ಲೇ ಕುಳಿತು ಪಡೆಯಬಹುದಾಗಿದೆ.

 ಚಿಕಿತ್ಸೆ ವಿಧಾನ

ಚಿಕಿತ್ಸೆ ವಿಧಾನ

ಕಂಪನಿ ಪ್ರಕಾರ ಲೇಸರ್‌ಬ್ಯಾಂಡ್‌ 82 ಚಿಕಿತ್ಸೆಯು ಕೇವಲ 90 ಸೆಕೆಂಡ್‌ ಮಾತ್ರ. ಒಂದು ವಾರದಲ್ಲಿ ಮೂರು ಭಾರಿ ಈ ರೀತಿ ಚಿಕಿತ್ಸೆ ಪಡೆಯಬೇಕು. ಹೆಡ್‌ಬ್ಯಾಂಡ್‌ ಅನ್ನು ನೆತ್ತಿಯ ಮೇಲೆ ಪೂರ್ಣವಾಗಿ ಜಾರಿಸಬೇಕು.

ಹೆಡ್‌ಬ್ಯಾಂಡ್‌

ಹೆಡ್‌ಬ್ಯಾಂಡ್‌

FDA ಇಂದ ಅಂಗೀಕೃತವಾಗಿದ್ದು, ಗ್ರಾಹಕರು ಉಪಯೋಗಿಸಲು ಸಿದ್ದವಾಗಿದೆ. ಇದರ ಬೆಲೆ $795 (ಸುಮಾರು 53,555 ರೂಪಾಯಿ).

ಲೇಸರ್‌ಬ್ಯಾಂಡ್‌ 82

ಲೇಸರ್‌ಬ್ಯಾಂಡ್‌ ಬಗೆಗಿನ ವೀಡಿಯೋ ನೋಡಿ

Best Mobiles in India

English summary
This Gadget Uses Lasers To Regrow Fallen Hair. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X