iPhone: 2023 ರಲ್ಲಿ ಸೇಲ್ ಆದ ಟಾಪ್ 10 ಫೋನ್‌ಗಳಲ್ಲಿ 7 ಐಫೋನ್‌ಗಳೇ... ಈ ಫೋನ್‌ಗಂತೂ ಭಾರೀ ಬೇಡಿಕೆ
ಐಫೋನ್ (iPhone) ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಈ ಫೋನ್‌ಗಳ ಆಕರ್ಷಕ ಫೀಚರ್ಸ್ ಹಾಗೂ ವಿನ್ಯಾಸ ಎಲ್ಲರನ್ನು ಸೆಳೆಯುತ್ತದೆ. ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳಿಗೆ ವಿಶೇಷವಾದ ಕ್ರೇಜ್ ಇದೆ. ಈ ಬೆಳವಣಿಗೆ ನಡುವೆ ಹೆಚ್ಚು ಸೇಲ್ ಆದ ಐಫೋನ್ ಬಗ್ಗೆ ವರದಿ ಹೊರಬಿದ್ದಿದೆ.
ಹೌದು, ಯಾವುದೇ ಆಪಲ್ ಫೋನ್ ಆದರೂ ಸಹ ದೊಡ್ಡ ಮಟ್ಟದ ಬೇಡಿಕೆಯನ್ನು ಪಡೆಯದೇ ಇರದು. ಆದರೂ ಇತರೆ ಫೋನ್‌ಗಳಿಗೆ ಹೋಲಿಕೆ ಮಾಡಿಕೊಂಡರೆ ಕೆಲವು ಫೋನ್‌ಗಳು ಸ್ಮಾರ್ಟ್‌ಫೋನ್ ವಲಯದಲ್ಲಿ ಸುಂಟರಗಾಳಿ ಎಬ್ಬಿಸುತ್ತವೆ. ಈ ಕಾರಣಕ್ಕೆ ಈ ಫೋನ್ ಅನ್ನು Q4 2023 ನಲ್ಲಿ ಹೆಚ್ಚು ಸೇಲ್ ಆದ ಐಫೋನ್ ಎಂದು ಗುರುತಿಸಲಾಗಿದೆ. ಹಾಗಿದ್ರೆ, ಅದು ಯಾವ ಫೋನ್?, ಇತರೆ ಯಾವೆಲ್ಲಾ ಫೋನ್ ಹೆಚ್ಚು ಸೇಲ್ ಆಗಿವೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

Q4 2023 ನಲ್ಲಿ ಹೆಚ್ಚು ಸೇಲ್ ಆದ ಐಫೋನ್: ಆಪಲ್‌ನ ಐಫೋನ್ 15 ಪ್ರೊ ಮ್ಯಾಕ್ಸ್ (iPhone 15 Pro Max) Q4 2023 ರ ಅತ್ಯುತ್ತಮವಾಗಿ ಸೇಲ್ ಆದ ಸ್ಮಾರ್ಟ್‌ಫೋನ್ ಎಂಬ ಖ್ಯಾತಿ ಪಡೆದುಕೊಂಡಿದೆ. ಅಲ್ಲದೆ 2022 ರಲ್ಲಿ ಬಿಡುಗಡೆಯಾದ ಐಫೋನ್ 14 (iPhone 14) 2023 ರಲ್ಲಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್ ಆಗಿದೆ ಎಂದು ಕೌಂಟರ್‌ಪಾಯಿಂಟ್‌ನ ಹೊಸ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
2023 ರಲ್ಲಿ ಜಾಗತಿಕವಾಗಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ನಲ್ಲಿ ಆಪಲ್ ಮೊದಲ ಬಾರಿಗೆ ಅಗ್ರ ಏಳು ಸ್ಥಾನಗಳನ್ನು ವಶಪಡಿಸಿಕೊಂಡಿದೆ. ಕೌಂಟರ್‌ಪಾಯಿಂಟ್ ರಿಸರ್ಚ್‌ನ ಗ್ಲೋಬಲ್ ಮಾಸಿಕ ಹ್ಯಾಂಡ್‌ಸೆಟ್ ಮಾಡೆಲ್ ಸೇಲ್ಸ್ ಟ್ರ್ಯಾಕರ್ ಪ್ರಕಾರ, 2023 ರಲ್ಲಿ, ಆಪಲ್‌ನ ಐಫೋನ್ 14 ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಆಗಿತ್ತು, ವಿಶೇಷವಾಗಿ ಇದರ ಅರ್ಧದಷ್ಟು ಮಾರಾಟ ಯುಎಸ್ ಮತ್ತು ಚೀನಾದಲ್ಲಿ ಆಗಿದೆ ಎಂದು ತಿಳಿಸಲಾಗಿದೆ.

ಈ ಸ್ಮಾರ್ಟ್‌ಫೋನ್ 2023 ರ ಒಟ್ಟು ಐಫೋನ್ ಮಾರಾಟದಲ್ಲಿ 19 ಪ್ರತಿಶತದ ಕೊಡುಗೆ ನೀಡಿದೆಯಾದರೂ 2022 ರ ಬೆಸ್ಟ್ ಸೆಲ್ಲರ್ ಐಫೋನ್ 13 (iPhone 13) ನ 28 ಶೇಕಡಾ ಪಾಲಿಗಿಂತ ಕಡಿಮೆಯಾಗಿದೆ. 2023 ರ ಕೊನೆಯ ಭಾಗದಲ್ಲಿ ಅಗ್ರ ಮೂರು ಹೆಚ್ಚು ಸೇಲ್ ಆದ ಫೋನ್‌ಗಳು ಐಫೋನ್ 15 ಸರಣಿಯದ್ದೇ (iPhone 15 series) ಆಗಿವೆ. ಇದರಲ್ಲಿ ಐಫೋನ್ 15 ಪ್ರೊ ಮ್ಯಾಕ್ಸ್ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್ ಆಗಿದೆ.
ಇನ್ನು 2023 ರಲ್ಲಿ, ಭಾರತವು ಒಂದೇ ವರ್ಷದಲ್ಲಿ 10 ಮಿಲಿಯನ್ ಐಫೋನ್ ಯೂನಿಟ್ ಸೇಲ್ ಅನ್ನು ಮೀರಿದ ಐದನೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿದೆ. ಈ ಮೂಲಕ ಆಪಲ್‌ಗೆ ಮಾರುಕಟ್ಟೆಯ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಇದರೊಂದಿಗೆ ಆಪಲ್‌ನ ಐಫೋನ್ 13 ಜಪಾನ್ ಮತ್ತು ಭಾರತದಲ್ಲಿ ಎರಡು-ಅಂಕಿಯ YoY ಪರಿಮಾಣದ ಬೆಳವಣಿಗೆಯೊಂದಿಗೆ ತನ್ನ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದೆ.

ಭಾರತದಲ್ಲಿ ಐಫೋನ್ 13 ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿದಾರರಲ್ಲಿ ಜನಪ್ರಿಯ ಆಯ್ಕೆಯಾಗಿದೆ. ಸೆಪ್ಟೆಂಬರ್ 2021 ರಲ್ಲಿ ಬಿಡುಗಡೆಯಾದ ಐಫೋನ್ 13, ಚಿಕ್ಕದಾದ ನಾಚ್, ವೇಗವಾದ A15 ಬಯೋನಿಕ್ ಚಿಪ್ ಮತ್ತು ಸುಧಾರಿತ ಕ್ಯಾಮೆರಾಗಳನ್ನು ಹೊಂದಿದೆ. ಇದರೊಂದಿ್ಎ ವಿಶೇಷ ಕ್ಯಾಮೆರಾ ಫೀಚರ್ಸ್ ಹಾಗೂ ಆಕರ್ಷಕ ವಿನ್ಯಾಸ ಪಡೆದಿರುವ ಕಾರಣಕ್ಕೆ ಈ ಫೋನ್‌ಗೆ ಈಗಲೂ ಬೇಡಿಕೆ ಇದೆ.
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಪಟ್ಟಿಯಲ್ಲಿ ಉಳಿದ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದು 2022 ರ ಪಟ್ಟಿಯಿಂದ ಒಂದು ಸ್ಥಾನವನ್ನು ಹೆಚ್ಚಿಗೆ ಮಾಡಿಕೊಂಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G (Samsung Galaxy A14 5G) ಯುಎಸ್ ಮತ್ತು ಭಾರತದಲ್ಲಿ ಹೆಚ್ಚು ಸೇಲ್ ಆಗಿದ್ದು, ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲದೆ, ಇದು 2023 ರಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಸಹ ಆಗಿದೆ.


Click it and Unblock the Notifications








