155ರೂ. ರೀಚಾರ್ಜ್ ಮಾಡಿ, ಅನಿಯಮಿತ ಕರೆ ಮಾಡಿ!..ಈ ಪ್ಲ್ಯಾನ್ ಉತ್ತಮವೇ?
ದೇಶದ ಟೆಲಿಕಾಂ ವಲಯದಲ್ಲಿ ಭಾರ್ತಿ ಏರ್‌ಟೆಲ್ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಕಾಣಿಸಿಕೊಂಡಿದೆ. ಏರ್‌ಟೆಲ್ ಸಂಸ್ಥೆಯು ತನ್ನ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಅಧಿಕ ಡೇಟಾ ಪ್ರಯೋಜನದ ಯೋಜನೆಗಳನ್ನು ಪರಿಚಯಿಸಿದೆ. ಹಾಗೆಯೇ ಹೆಚ್ಚಿನ ಡೇಟಾ ಅಗತ್ಯ ಇರದ ಚಂದಾದಾರರಿಗಾಗಿ ಕನಿಷ್ಠ ರೀಚಾರ್ಜ್‌ಯೋಜನೆಗಳ ಆಯ್ಕೆಯನ್ನು ಸಹ ನೀಡಿದೆ.
ಹೌದು, ಭಾರ್ತಿ ಏರ್‌ಟೆಲ್ ಟೆಲಿಕಾಂ ಅಗ್ಗದ ಪ್ರೀಪೇಯ್ಡ್ ಯೋಜನೆಗಳ ಲಿಸ್ಟ್ ಕೂಡಾ ಪಡೆದುಕೊಂಡಿದೆ. ಅವುಗಳಲ್ಲಿ ಎಂಟ್ರಿ ಲೆವೆಲ್ ಕಾಣಿಸಿಕೊಂಡಿರುವ ಪ್ಲ್ಯಾನ್ ಅಂದ್ರೆ, ಅದು 155ರೂ. ರೀಚಾರ್ಜ್ ಯೋಜನೆ ಆಗಿದೆ. ಈ ಯೋಜನೆಯು ಸಿಮ್ ಚಾಲ್ತಿ ಇಡಲು ಪೂರಕ ಯೋಜನೆ ಎನಿಸಿದ್ದು, ವಾಯಿಸ್ ಕರೆ ಹೆಚ್ಚಾಗಿ ಬಳಕೆ ಮಾಡುವ ಗ್ರಾಹಕರಿಗೂ ಅತ್ಯುತ್ತಮ ಯೋಜನೆ ಎನಿಸಿದೆ.

ಸಂಸ್ಥೆಯ ಈ ಅಗ್ಗದ ಯೋಜನೆಯು ವಾಯಿಸ್ ಕರೆ, ಎಸ್‌ಎಮ್‌ಎಸ್ ಹಾಗೂ ನಿಗದಿತ ಡೇಟಾ ಪ್ರಯೋಜನ ಕೂಡಾ ಪಡೆದಿದೆ. ಇದರೊಂದಿಗೆ ಏರ್‌ಟೆಲ್ ಇತರೆ ಪ್ರೈಸ್ ಟ್ಯಾಗ್ ದರದಲ್ಲಿ ಭಿನ್ನ ಪ್ರಯೋಜನಗಳ ಕೆಲವು ಅತ್ಯುತ್ತಮ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಆಯ್ಕೆ ಅನ್ನು ಗ್ರಾಹಕರಿಗೆ ಲಭ್ಯ ಮಾಡಿದೆ. ಹಾಗಾದರೇ ಏರ್‌ಟೆಲ್‌ನ 155ರೂ. ಪ್ಲ್ಯಾನ್ ಹಾಗೂ ಇತರೆ ಕೆಲವು ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಭಾರ್ತಿ ಏರ್‌ಟೆಲ್ 155ರೂ. ರೀಚಾರ್ಜ್ ಯೋಜನೆ
ಭಾರ್ತಿ ಏರ್‌ಟೆಲ್ ಟೆಲಿಕಾಂನ 155ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಒಳಗೊಂಡಿದೆ. ಈ ಅವಧಿ ಯಲ್ಲಿ ಒಟ್ಟು 1 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಒಟ್ಟು 300 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಲಭ್ಯ. ಇದಲ್ಲದೇ ಏರ್‌ಟೆಲ್ ಆಪ್ಸ್‌ಗಳು ಸಹ ಸಿಗಲಿದೆ.

ಭಾರ್ತಿ ಏರ್‌ಟೆಲ್ 666ರೂ. ರೀಚಾರ್ಜ್ ಯೋಜನೆ
ಭಾರ್ತಿ ಏರ್‌ಟೆಲ್ ಸಂಸ್ಥೆಯ 666ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಒಳಗೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ಜೊತೆಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ.

ಭಾರ್ತಿ ಏರ್‌ಟೆಲ್ 699ರೂ. ರೀಚಾರ್ಜ್ ಯೋಜನೆ
ಭಾರ್ತಿ ಏರ್‌ಟೆಲ್ ಟೆಲಿಕಾಂನ 699ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದ್ದು, ಈ ವೇಳೆ ಪ್ರತಿದಿನ 3 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಹಾಗೆಯೇ ಗ್ರಾಹಕರಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಿಗಲಿದೆ.
ಭಾರ್ತಿ ಏರ್‌ಟೆಲ್ 719ರೂ. ರೀಚಾರ್ಜ್ ಯೋಜನೆ
ಭಾರ್ತಿ ಏರ್‌ಟೆಲ್ ಟೆಲಿಕಾಂನ 719ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಪಡೆದಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಲಭ್ಯ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 126GB ಡೇಟಾ ಲಭ್ಯ ಆಗುತ್ತದೆ.
ಭಾರ್ತಿ ಏರ್‌ಟೆಲ್‌ನ 779ರೂ. ರೀಚಾರ್ಜ್ ಯೋಜನೆ
ಭಾರ್ತಿ ಏರ್‌ಟೆಲ್ ಸಂಸ್ಥೆಯ 779ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿ ಒಳಗೊಂಡಿದೆ. ಈ ವೇಳೆ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ದೊರೆಯಲಿದ್ದು, ಇದರೊಂದಿಗೆ ಏರ್‌ಟೆಲ್ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ಧ್ವನಿ ಕರೆಗಳ ಸೌಲಭ್ಯ ಖಚಿತ.


Click it and Unblock the Notifications








