Subscribe to Gizbot

ಚೀನಾ ಮೊಬೈಲ್‌ಗಳ ಬೆಲೆ ಕಡಿಮೆ ಏಕೆ?..ಕಾರಣ ನಿಮಗೆ ಗೊತ್ತಿಲ್ಲಾ!!

Written By:

ಭಾರತ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ಫೋನ್‌ ಕಂಪೆನಿಗಳು ತಯಾರಿಸುವ ಫೋನ್‌ಗಳಿಗಿಂತ ಚೀನಾ ಕಂಪೆನಿಗಳು ತಯಾರಿಸುವ ಮೊಬೈಲ್‌ಗಳ ಬೆಲೆ ಕಡಿಮೆ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೆ.! ಆದರೆ, ಚೀನಾ ಮೊಬೈಲ್‌ಗಳ ಬೆಲೆ ಅಷ್ಟೊಂದು ಕಡಿಮೆ ಇರಲು ಕಾರಣ ಏನು ಎಂಬುದು ಎಲ್ಲರಿಗೂ ತಿಳಿಯದಿರಬಹುದು!?

ಹೌದು, ಎಲ್ಲರೂ ಹೇಳುವುದು ಚೀನಾದಲ್ಲಿನ ಕಮ್ಯುನಿಸ್ಟ್ ಸರ್ಕಾರ, ಕಡಿಮೆ ಕಾರ್ಮಿಕ ಕೂಲಿ, ತಂತ್ರಜ್ಞಾನ ಬೆಳವಣಿಗೆಯಿಂದ ಅಲ್ಲಿನ ಮೊಬೈಲ್‌ಗಳ ಬೆಲೆ ಕಡಿಮೆ ಇರುತ್ತದೆ ಎಂದು. ಆದರೆ,  ನಿಜವಾಗಿಯೂ ಚೀನಾ ಮೊಬೈಲ್‌ಗಳ ಬೆಲೆ ಅಷ್ಟು ಕಡಿಮೆ ಇರಲು ಮುಖ್ಯವಾದ ಕಾರಣ 'ತಂತ್ರಜ್ಞಾನ ಲೋಹಗಳು' !!

ಚೀನಾ ಮೊಬೈಲ್‌ಗಳ ಬೆಲೆ ಕಡಿಮೆ ಏಕೆ?..ಕಾರಣ ನಿಮಗೆ ಗೊತ್ತಿಲ್ಲಾ!!

ನಿಮಗೆ ಗೊತ್ತಾ? 'ತಂತ್ರಜ್ಞಾನ ಲೋಹಗಳು' ಎಂದು ಹೆಸರಾಗಿರುವ ನಿಯೋಡೈಮಿಯಂ, ಡಿಸ್‍ಪ್ರೋಸಿಯಂ ಮುಂತಾದ ತಂತ್ರಜ್ಞಾನ ಲೋಹಗಳು ಮೊಬೈಲ್ ತಯಾರಿಕೆಯಲ್ಲಿ ಮುಖ್ಯವಾಗಿವೆ. ಮೊಬೈಲ್ ಡಿಸ್ಪ್ಲೇಯಿಂದಿಡಿದು ಬಹುತೇಕ ಮೊಬೈಲ್‌ನ ಎಲ್ಲಾ ಬಿಡಿಭಾಗಗಳು ಈ ಲೋಹಗಳಿಂದಲೇ ರೂಪಿತವಾಗಿದ್ದರೆ, ಬ್ಯಾಟರಿ ತಯಾರಿಕೆಯಲ್ಲಿ ಬಿಳಿ ಚಿನ್ನ ಲೀಥಿಯಂ ಮುಂದಿದೆ.!!

ಚೀನಾ ಮೊಬೈಲ್‌ಗಳ ಬೆಲೆ ಕಡಿಮೆ ಏಕೆ?..ಕಾರಣ ನಿಮಗೆ ಗೊತ್ತಿಲ್ಲಾ!!

ಇಂತಹ ಲೋಹಗಳ ಉತ್ಪಾದನೆಯೆಲ್ಲ ಕೆಲವೇ ರಾಷ್ಟ್ರಗಳ ಹಿಡಿತದಲ್ಲಿದ್ದು, ಇದರಲ್ಲಿ ಬಹುತೇಕ ಎಲ್ಲಾ ರಾಷ್ಟ್ರಗಳು 'ತಂತ್ರಜ್ಞಾನ ಲೋಹ'ಗಳ ಪೂರೈಕೆಗಾಗಿ ಚೀನಾ ದೇಶವನ್ನೇ ಅವಲಂಬಿವೆ.!! ಈ 'ತಂತ್ರಜ್ಞಾನ ಲೋಹಗಳ' ಬೆಡಿಕೆ ಹೆಚ್ಚಿದ್ದು, ಇವುಗಳ ಬೆಲೆ ನಿರ್ಧಾರ ರಾಜಕೀಯ ಕಾರಣಗಳಿಗೂ ತಳುಕು ಹಾಕಿಕೊಂಡಿದೆ.!!

ಚೀನಾ ಮೊಬೈಲ್‌ಗಳ ಬೆಲೆ ಕಡಿಮೆ ಏಕೆ?..ಕಾರಣ ನಿಮಗೆ ಗೊತ್ತಿಲ್ಲಾ!!

ಈ ಪರಿಸ್ಥಿತಿಯಂತೂ ವಿಶ್ವದ ಉಳಿದೆಲ್ಲ ರಾಷ್ಟ್ರಗಳಿಗೆ ಉಗಿಯಲೂ ಆಗದ ನುಂಗಲೂ ಆಗದ ಬಿಸಿತುಪ್ಪವಾಗಿದ್ದು, ಹೆಚ್ಚು ದರಕ್ಕೆ ಇತರ ರಾಷ್ಟ್ರಗಳು ಚೀನಾದಿಂದ ಇಂತಹ ತಂತ್ರಜ್ಞಾನ ಲೋಹಗಳನ್ನು ಆಮದು ಮಾಡಿಕೊಂಡು ಕಡಿಮೆ ಬೆಲೆಗೆ ಮೊಬೈಲ್ ತಯಾರಿಕೆ ಅಸಾಧ್ಯವೆ ಸರಿ.! ಹಾಗಾಗಿ, ಚೀನಾ ಮೊಬೈಲ್‌ಗಳ ಬೆಲೆ ಅಷ್ಟೊಂದು ಕಡಿಮೆ ಇದೆ.!!

ಓದಿರಿ: ಕಳೆದ ಸ್ಮಾರ್ಟ್‌ಫೋನ್ ಅನ್ನು ಸಿಕ್ಕವರೆ ವಾಪಸ್ ಕೊಡುವ ಹಾಗೆ ಮಾಡಿ!!..ಹೇಗೆ ಗೊತ್ತಾ?

English summary
chinese smartphones are invading the world with their high specs and low prices.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot