Home
ಸುದ್ದಿಜಾಲ

ಈ Jio ಪ್ಲ್ಯಾನ್‌ ರೀಚಾರ್ಜ್‌ ಮಾಡಿದ್ರೆ, 90 ದಿನ ವ್ಯಾಲಿಡಿಟಿ, ಅನಿಯಮಿತ ಡೇಟಾ ಪಕ್ಕಾ!

ರಿಲಯನ್ಸ್‌ ಜಿಯೋ ಟೆಲಿಕಾಂ ಹಲವು ಆಕರ್ಷಕ ರೀಚಾರ್ಜ್‌ ಯೋಜನೆಗಳ ಮೂಲಕ ಈಗಾಗಲೇ ಗ್ರಾಹಕರನ್ನು ಸೆಳೆದಿದೆ. ಸದ್ಯ ದೇಶದ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಮುನ್ನಡೆದಿರುವ ಜಿಯೋ ತನ್ನ ಚಂದಾದಾರರಿಗಾಗಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಯೋಜನೆಗಳ ಆಯ್ಕೆ ನೀಡಿದೆ. ಅವುಗಳಲ್ಲಿ ಬಹುತೇಕ ಪ್ಲ್ಯಾನ್‌ಗಳು ಡೇಟಾ ಪ್ರಯೋಜನ ಪಡೆದಿರುವುದು ಹೈಲೈಟ್‌ ಎನಿಸಿದೆ. ಅದಾಗ್ಯೂ, ಜಿಯೋದ ಈ ಒಂದು ಯೋಜನೆ ಬಹಳ ಆಕರ್ಷಕವಾಗಿ ಗುರುತಿಸಿಕೊಂಡಿದೆ.

ಹೌದು, ಜಿಯೋ ಸಂಸ್ಥೆಯ ಹಲವು ಭಿನ್ನ ರೀಚಾರ್ಜ್‌ ಯೋಜನೆಗಳ ಪೈಕಿ 899ರೂ. ಪ್ಲ್ಯಾನ್‌ ಗಮನ ಸೆಳೆದಿದೆ. ಈ ಯೋಜನೆಯು ದೀರ್ಘಾವಧಿಯ ವ್ಯಾಲಿಡಿಟಿ ಜೊತೆಗೆ ದೈನಂದಿನ ಡೇಟಾ ಪ್ರಯೋಜನ ಪಡೆದಿದೆ. ಇನ್ನು ಗ್ರಾಹಕರು ಈ ಯೋಜನೆ ರೀಚಾರ್ಜ್‌ ಮಾಡಿದ್ರೆ, ಪೂರ್ಣ 90 ದಿನಗಳು ಮತ್ತೆ ರೀಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ. ಹಾಗಾದರೇ ಜಿಯೋ ಟೆಲಿಕಾಂನ 899ರೂ. ಪ್ಲ್ಯಾನ್‌ ಹಾಗೂ ಇತರೆ ದೀರ್ಘಾವಧಿಯ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಮುಂದೆ ಓದಿರಿ.

ಈ Jio ಪ್ಲ್ಯಾನ್‌ ರೀಚಾರ್ಜ್‌ ಮಾಡಿದ್ರೆ, 90 ದಿನ ವ್ಯಾಲಿಡಿಟಿ, ಅನಿಯಮಿತ ಡೇಟಾ ಪಕ

ಜಿಯೋ 899ರೂ.ಗಳ ರೀಚಾರ್ಜ್‌ ಪ್ಲ್ಯಾನ್‌

ಜಿಯೋ ಟೆಲಿಕಾಂನ ಈ ಯೋಜನೆಯು ದೀರ್ಘಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿ (Validity) ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದ್ದು, ಜೊತೆಗೆ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಸಹ ದೊರೆಯುತ್ತದೆ. ಹಾಗೆಯೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಲಭ್ಯ ಆಗಲಿದೆ.

ಅಲ್ಲದೇ ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟಾರೇಯಾಗಿ ಪೂರ್ಣ ವ್ಯಾಲಿಡಿಟಿ ಅವಧಿಗೆ 200GB ಡೇಟಾ ದೊರೆಯುತ್ತದೆ. ಅಲ್ಲದೇ ಹೆಚ್ಚುವರಿಯಾಗಿ 20GB ಡೇಟಾ ಪ್ರಯೋಜನ ಸಹ ಸಿಗಲಿದೆ. ಇದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್‌ ಪ್ರಯೋಜನಗಳು ಸಿಗಲಿವೆ.

ಜಿಯೋ 999ರೂ.ಗಳ ರೀಚಾರ್ಜ್‌ ಪ್ಲ್ಯಾನ್‌

ಜಿಯೋ ಟೆಲಿಕಾಂನ 999ರೂ. ಗಳ ಯೋಜನೆಯು ಸಹ ದೀರ್ಘಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 98 ದಿನಗಳ ವ್ಯಾಲಿಡಿಟಿ (Validity) ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಸಹ ದೊರೆಯುತ್ತದೆ. ಹಾಗೆಯೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಲಭ್ಯ ಆಗಲಿದೆ.

ಹಾಗೆಯೇ ಈ ಪ್ರೀಪೇಯ್ಡ್‌ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟಾರೇಯಾಗಿ ಪೂರ್ಣ ವ್ಯಾಲಿಡಿಟಿ ಅವಧಿಗೆ 196GB ಡೇಟಾ ಸೌಲಭ್ಯ ದೊರೆಯುತ್ತದೆ. ಅಲ್ಲದೇ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್‌ ಪ್ರಯೋಜನಗಳು ಸಿಗಲಿವೆ.

ಜಿಯೋ 859ರೂ.ಗಳ ರೀಚಾರ್ಜ್‌ ಪ್ಲ್ಯಾನ್‌

ಜಿಯೋ (Jio) ಟೆಲಿಕಾಂನ 859ರೂ. ಗಳ ಯೋಜನೆಯು ಸಹ ದೀರ್ಘಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಸಹ ದೊರೆಯುತ್ತದೆ. ಹಾಗೆಯೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಲಭ್ಯ ಆಗಲಿದೆ.

ಹಾಗೆಯೇ ಈ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟಾರೇಯಾಗಿ ಪೂರ್ಣ ವ್ಯಾಲಿಡಿಟಿ ಅವಧಿಗೆ 168GB ಡೇಟಾ ಪ್ರಯೋಜನ ಲಭ್ಯ ಆಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್‌ ಪ್ರಯೋಜನಗಳು ಸಿಗಲಿವೆ.

Best Mobiles in India

English summary
This Jio 5G Plan Offers 90 Days Validity with Unlimited Data, SMS. Check other benefits and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+