ಜಿಯೋ ಗ್ರಾಹಕರಿಗೆ ಸಿಹಿಸುದ್ದಿ: ಈ ಪ್ಲ್ಯಾನಿಗೆ ಖಂಡಿತಾ ನೀವು ಫಿದಾ ಆಗ್ತೀರಾ!
ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯು ಈಗಾಗಲೇ ಆಕರ್ಷಕ ಪ್ಲ್ಯಾನ್‌ಗಳ ಮೂಲಕ ಗ್ರಾಹಕರ ಹಮನ ಸೆಳೆದಿದೆ. ಆ ಪೈಕಿ ಸಂಸ್ಥೆಯ ಹಲವು ಯೋಜನೆಗಳು ಅನಿಯಮಿತ ವಾಯಿಸ್ ಕರೆ, ಡೈಲಿ ಡೇಟಾ ಪ್ರಯೋಜನ ಪಡೆದುಕೊಂಡಿವೆ. ಅಲ್ಲದೇ ಜಿಯೋ ತನ್ನ ಬಳಕೆದಾರರಿಗಾಗಿ ಭಿನ್ನ ದರದಲ್ಲಿ ಅತ್ಯುತ್ತಮ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಜಿಯೋ 895ರೂ. ಪ್ಲ್ಯಾನ್‌ಗೆ ಗ್ರಾಹಕರು ಫಿದಾ ಆಗ್ತಾರೇ!.
ಜಿಯೋ 895ರೂ. ಪ್ಲ್ಯಾನ್ ಒಟ್ಟು 336 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದ್ದು, ಪ್ಲಸ್ ಪಾಯಿಂಟ್ ಆಗಿದೆ. ಹಾಗೆಯೇ ಇದು ಯೋಜನೆಯು ಡೇಟಾ ಪ್ರಯೋಜನ, ಅನಿಯಮಿತ ವಾಯಿಸ್ ಕರೆ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಎಸ್‌ಎಮ್‌ಎಸ್ ಪ್ರಯೋಜನ ಸಹ ಒಳಗೊಂಡಿದೆ. ಹಾಗಾದರೆ ಜಿಯೋ ಟೆಲಿಕಾಂನ 895ರೂ. ಯೋಜನೆಯ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಫೋನ್ ಬಳಕೆದಾರರಿಗೆ :
ಜಿಯೋ ಟೆಲಿಕಾಂ 895ರೂ. ಪ್ಲ್ಯಾನ್ ನಿಜಕ್ಕೂ ಆಕರ್ಷಕ ಪ್ಲ್ಯಾನ್ ಆಗಿದ್ದು, ಇದು ಒಟ್ಟು 336 ದಿನಗಳ ವ್ಯಾಲಿಡಿಟಿ ಪಡೆದಿದೆ. ಆದರೆ ಈ ಯೋಜನೆಯು ಜಿಯೋಫೋನ್ (JioPhone) ಬಳಕೆದಾರರಿಗೆ ಮಾತ್ರ. ಇನ್ನುಳಿದ ಚಂದಾದಾರರಿಗೆ ಈ ಯೋಜನೆ ಅಲಭ್ಯ.
ಜಿಯೋ ಸಂಸ್ಥೆಯ 895ರೂ. ಪ್ಲ್ಯಾನ್ ಸೌಲಭ್ಯ
ಸಂಸ್ಥೆಯ 895ರೂ. ಪ್ಲ್ಯಾನ್ ಒಟ್ಟು 336 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯಲ್ಲಿ ಒಟ್ಟು 24GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿದ್ದು, 28 ದಿನಗಳಿಗೆ 2GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಸಿಗುತ್ತದೆ. ಇದಲ್ಲದೇ ಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ 28 ದಿನಗಳಿಗೊಮ್ಮೆ 50 ಎಸ್‌ಎಮ್ಎಸ್ ಪ್ರಯೋಜನ ಲಭ್ಯ.
ಜಿಯೋ ಸಂಸ್ಥೆಯ 222ರೂ. ಪ್ಲ್ಯಾನ್ ಸೌಲಭ್ಯ
ಸಂಸ್ಥೆಯ 222ರೂ. ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯಲ್ಲಿ ಒಟ್ಟು 56 GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿದ್ದು, ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಸಿಗುತ್ತದೆ. ಇದಲ್ಲದೇ ಪ್ರತಿದಿನ 100 ಎಸ್‌ಎಮ್ಎಸ್ ಪ್ರಯೋಜನ ಲಭ್ಯ.
ಜಿಯೋ ಸಂಸ್ಥೆಯ 186ರೂ. ಪ್ಲ್ಯಾನ್ ಸೌಲಭ್ಯ
ಜಿಯೋ ಸಂಸ್ಥೆಯ 186ರೂ. ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯಲ್ಲಿ ಒಟ್ಟು 28 GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿದ್ದು, ಪ್ರತಿದಿನ 1GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಸಿಗುತ್ತದೆ. ಇದಲ್ಲದೇ ಪ್ರತಿದಿನ 100 ಎಸ್‌ಎಮ್ಎಸ್ ಪ್ರಯೋಜನ ಲಭ್ಯ.
ಜಿಯೋ ಸಂಸ್ಥೆಯ 152ರೂ. ಪ್ಲ್ಯಾನ್ ಸೌಲಭ್ಯ
ಜಿಯೋ ಟೆಲಿಕಾಂನ 152ರೂ. ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯಲ್ಲಿ ಒಟ್ಟು 14 GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿದ್ದು, ಪ್ರತಿದಿನ 0.5 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಸಿಗುತ್ತದೆ. ಇದಲ್ಲದೇ ಪೂರ್ಣ ವ್ಯಾಲಿಡಿಟಿ ಅವಧಿಗೆ 300 ಎಸ್‌ಎಮ್ಎಸ್ ಪ್ರಯೋಜನ ಲಭ್ಯ.
ಜಿಯೋ ಸಂಸ್ಥೆಯ 125ರೂ. ಪ್ಲ್ಯಾನ್ ಸೌಲಭ್ಯ
ಜಿಯೋ ಸಂಸ್ಥೆಯ 125ರೂ. ಪ್ಲ್ಯಾನ್ ಒಟ್ಟು 23 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯಲ್ಲಿ ಒಟ್ಟು 11.5 GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿದ್ದು, ಪ್ರತಿದಿನ 0.5 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಸಿಗುತ್ತದೆ. ಇದಲ್ಲದೇ ಪೂರ್ಣ ವ್ಯಾಲಿಡಿಟಿ ಅವಧಿಗೆ 300 ಎಸ್‌ಎಮ್ಎಸ್ ಪ್ರಯೋಜನ ಲಭ್ಯ.


Click it and Unblock the Notifications








