Home
ಸುದ್ದಿಜಾಲ

ಜಿಯೋದ ಈ ಒಂದು ಪ್ಲ್ಯಾನಿನಲ್ಲಿ 90 ದಿನಗಳ ವ್ಯಾಲಿಡಿಟಿ ಜೊತೆಗೆ 20GB ಡೇಟಾ ಉಚಿತ!

ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್‌ ಜಿಯೋ ಮುಂಚೂಣಿಯ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು, ಹಲವು ಭಿನ್ನ ಪ್ರಿಪೇಯ್ಡ್ ರೀಚಾರ್ಜ್‌ ಯೋಜನೆ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಿದೆ. ಆ ಪೈಕಿ ಜಿಯೋದ ಬಹುತೇಕ ರೀಚಾರ್ಜ್‌ ಯೋಜನೆಗಳು ಅಧಿಕ ದೈನಂದಿನ ಡೇಟಾ ಸೌಲಭ್ಯವನ್ನು ಪಡೆದಿದ್ದು, ಅದರೊಂದಿಗೆ ಆಕರ್ಷಕ ವ್ಯಾಲಿಡಿಟಿ ಪ್ರಯೋಜನ ಕೂಡಾ ಲಭ್ಯ ಇದೆ. ಅದಾಗ್ಯೂ, ಕೆಲವೊಂದು ಯೋಜನೆಗಳು ಡೇಟಾ ಜೊತೆಗೆ ಮತ್ತಷ್ಟು ಆಕರ್ಷಕ ಪ್ರಯೋಜನ ಪಡೆದಿದ್ದು, ಅವುಗಳಲ್ಲಿ ಜಿಯೋದ ಈ ಒಂದು ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 20GB ಉಚಿತ ಡೇಟಾ ಪ್ರಯೋಜನ ಪಡೆದಿದೆ.

ಹೌದು, ಜಿಯೋ ಟೆಲಿಕಾಂ ಕಂಪನಿಯು ಭಿನ್ನ ಡೇಟಾ ಪ್ರಯೋಜನಗಳ ಆಯ್ಕೆ ಒದಗಿಸಿರುವ ಜೊತೆಗೆ ಕೆಲವು ದೀರ್ಘ ವ್ಯಾಲಿಡಿಟಿಯ ಹಾಗೂ ಎಕ್ಸ್‌ಟ್ರಾ ಡೇಟಾ ಪ್ರಯೋಜನದ ಪ್ಲ್ಯಾನ್‌ಗಳ ಆಯ್ಕೆ ಸಹ ಪಡೆದುಕೊಂಡಿದೆ. ಅವುಗಳ ಪೈಕಿ ಜಿಯೋದ 749ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 90 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ 20 GB ಡೇಟಾ ಸೌಲಭ್ಯ ಸಹ ಒಳಗೊಂಡಿದೆ. ಹಾಗಾದರೇ ಈ ರೀಚಾರ್ಜ್‌ ಪ್ಲ್ಯಾನಿನ ಇತರೆ ಪ್ರಯೋಜನಗಳ ಬಗ್ಗೆ ಹಾಗೂ ಇತರೆ ಜನಪ್ರಿಯ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋದ ಈ ಒಂದು ಪ್ಲ್ಯಾನಿನಲ್ಲಿ 90 ದಿನಗಳ ವ್ಯಾಲಿಡಿಟಿ ಜೊತೆಗೆ 20GB ಡೇಟಾ ಉಚಿತ!

ಜಿಯೋದ 749ರೂ. ರೀಚಾರ್ಜ್‌ ಯೋಜನೆ

ಜಿಯೋ ಟೆಲಿಕಾಂನ 749ರೂ. ರೀಚಾರ್ಜ್‌ ಯೋಜನೆ ಪ್ಲ್ಯಾನ್ 90 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಲಭ್ಯ ಆಗಲಿದ್ದು, ಹೆಚ್ಚುವರಿಯಾಗಿ ಈ ಪ್ಲ್ಯಾನ್‌ನಲ್ಲಿ 20GB ಡೇಟಾ ಸೌಲಭ್ಯ ಸಹ ಸಿಗಲಿದೆ. ಅಲ್ಲದೇ ಉಚಿತ 100 ಎಸ್‌ಎಮ್‌ಎಸ್‌ ಕೂಡಾ ಸಿಗಲಿದೆ.

ಅಂದಹಾಗೆ ಈ ಯೋಜನೆಯಲ್ಲಿ ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 200GB ಡೇಟಾ ದೊರೆಯುತ್ತದೆ. ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದ್ದು, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್ಸ್‌ ಸೇವೆ ಸಹ ಲಭ್ಯ.

ಜಿಯೋದ 1198ರೂ. ರೀಚಾರ್ಜ್‌ ಯೋಜನೆ

ಜಿಯೋದ 1198ರೂ. ರೀಚಾರ್ಜ್‌ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಹೊಂದಿದ್ದು, ಈ ವೇಳೆ ಪ್ರತಿದಿನ 2 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ 18GB ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168 GB ಡೇಟಾ ಸೌಲಭ್ಯ ಸಿಗಲಿದೆ. ಇದಲ್ಲದೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಇದ್ದು, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಇನ್ನು ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ 14 ಓಟಿಟಿ ಅಪ್ಲಿಕೇಶನ್‌ಗಳ ಚಂದಾದಾರಿಕೆ ಪ್ರಯೋಜನ ಸಹ ಗ್ರಾಹಕರಿಗೆ ದೊರೆಯುತ್ತದೆ. ಅಮೆಜಾನ್‌ ವಿಡಿಯೋ ಪ್ರೈಮ್‌, ಡಿಸ್ನಿ+ ಹಾಟ್‌ಸ್ಟಾರ್‌, ಸೋನಿ ಲೈವ್‌, ಜೀ5, ಸನ್‌ ಸೆನ್ಸ್ಟ್‌, ಫ್ಯಾನ್‌ ಕೋಡ್‌, ಎಪಿಕ್‌ ಆನ್‌ ಸೇರಿದಂತೆ ಇನ್ನು ಕೆಲವು ಜನಪ್ರಿಯ ಓಟಿಟಿ ಆಪ್‌ ಲಭ್ಯ.

ಜಿಯೋದ 2999ರೂ. ರೀಚಾರ್ಜ್‌ ಯೋಜನೆ

ಜಿಯೋದ 2999ರೂ. ರೀಚಾರ್ಜ್‌ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಹೊಂದಿದೆ. ಈ ವೇಳೆ ಪ್ರತಿದಿನ 2.5 GB ಡೇಟಾ ಪ್ರಯೋಜನ ದೊರೆಯಲಿದ್ದು, ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 912.5 GB ಡೇಟಾ ಸೌಲಭ್ಯ ಸಿಗಲಿದೆ. ಇದಲ್ಲದೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಇದ್ದು, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇನ್ನು ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ಜಿಯೋ ಆಪ್ಸ್‌ಗಳ ಸೇವೆ ಸಹ ಗ್ರಾಹಕರಿಗೆ ದೊರೆಯುತ್ತದೆ.

Best Mobiles in India

English summary
This Jio Plan offer 90 Days Validity with 20GB Free Data. check other benefits and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+