ಜಿಯೋ ಪ್ರಿಯರಿಗೆ ಗುಡ್‌ನ್ಯೂಸ್..ಈ ಪ್ಲ್ಯಾನಿನಲ್ಲಿ ಬರೋಬ್ಬರಿ 196GB ಡೇಟಾ ಲಭ್ಯ!
ದೇಶದ ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿರುವ ರಿಲಯನ್ಸ್ ಜಿಯೋ ( Jio Telecom ) ಸಂಸ್ಥೆಯು ಹಲವು ಆಕರ್ಷಕ ಪ್ರಿಪೇಯ್ಡ್ ಪ್ಲ್ಯಾನ್‌ಗಳ ಆಯ್ಕೆಯನ್ನು ತನ್ನ ಚಂದಾದಾರರಿಗೆ ನೀಡಿದೆ. ಹಾಗೆಯೇ ಜಿಯೋ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಯೋಜನೆಗಳ ಆಯ್ಕೆ ಸಹ ಸೇರಿವೆ. ಅವುಗಳಲ್ಲಿ ಬಹುತೇಕ ಪ್ಲ್ಯಾನ್‌ಗಳು ಡೇಟಾ ಪ್ರಯೋಜನ ಪಡೆದಿರುವುದು ಪ್ಲಸ್ ಪಾಯಿಂಟ್ ಎನಿಸಿದೆ. ಅದಾಗ್ಯೂ, ಜಿಯೋ ಸಂಸ್ಥೆಯ ಈ ಒಂದು ರೀಚಾರ್ಜ್ ಪ್ಲ್ಯಾನ್ ಬರೋಬ್ಬರಿ 196GB ಡೇಟಾ ಸೌಲಭ್ಯ ಪಡೆದಿದೆ.
ಹೌದು, ಜಿಯೋ ಸಂಸ್ಥೆಯ ಹಲವು ಭಿನ್ನ ರೀಚಾರ್ಜ್ ಯೋಜನೆಗಳ ಪೈಕಿ 999ರೂ. ರೀಚಾರ್ಜ್ ಯೋಜನೆ ಆಕರ್ಷಕ ಎನಿಸಿದೆ. ಈ ಯೋಜನೆಯು ದೈನಂದಿನ ಡೇಟಾ ಸೌಲಭ್ಯದ ಜೊತೆಗೆ ಬಿಗ್ ವ್ಯಾಲಿಡಿಟಿ ಪಡೆದಿದೆ. ಒಮ್ಮೆ ಈ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೆ, 98 ದಿನಗಳು ಕಾಲ ಟೆನ್ಷನ್ ಫ್ರೀ ಆಗಿ ಇರಬಹುದು. ಹಾಗಾದರೇ ಜಿಯೋ ಟೆಲಿಕಾಂನ 999ರೂ. ರೀಚಾರ್ಜ್ ಪ್ಲ್ಯಾನಿನ ಹಾಗೂ ಇತರೆ ದೈನಂದಿನ ಡೇಟಾ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಮುಂದೆ ಓದಿರಿ.

ಜಿಯೋ 999ರೂ. ಪ್ರೀಪೇಯ್ಡ್ ಯೋಜನೆ
ಜಿಯೋ ಟೆಲಿಕಾಂನ 999ರೂ. ಪ್ರೀಪೇಯ್ಡ್ ಯೋಜನೆಯು ದೀರ್ಘಾವಧಿಯ ಪ್ಲ್ಯಾನ್ ಆಗಿದ್ದು, ಒಟ್ಟು 98 ದಿನಗಳ ವ್ಯಾಲಿಡಿಟಿ (Validity) ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯ ಇದ್ದು, ಹಾಗೆಯೇ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಸಹ ಲಭ್ಯವಾಗಲಿದೆ. ಅಲ್ಲದೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ದೊರೆಯುತ್ತದೆ.
ಇನ್ನು ಈ ಪ್ರೀಪೇಯ್ಡ್ ಯೋಜನೆಯಲ್ಲಿ ಬಳಕೆದಾರರಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 196GB ಡೇಟಾ ಸೌಲಭ್ಯ ಸಿಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಪ್ರಯೋಜನಗಳು ಸಿಗಲಿವೆ.
ಜಿಯೋ 899ರೂ. ಪ್ರೀಪೇಯ್ಡ್ ಯೋಜನೆ
ಜಿಯೋ ಟೆಲಿಕಾಂನ 899ರೂ. ಪ್ರೀಪೇಯ್ಡ್ ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿ (Validity) ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಲಭ್ಯ ಇದ್ದು, ಹಾಗೆಯೇ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಲಭ್ಯ ಆಗಲಿದೆ.
ಅಲ್ಲದೇ ಈ ಯೋಜನೆಯಲ್ಲಿ ಗ್ರಾಹಕರಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇಯಾಗಿ 200GB ಡೇಟಾ ಸಿಗಲಿದೆ. ಹಾಗೆಯೇ ಹೆಚ್ಚುವರಿಯಾಗಿ 20GB ಡೇಟಾ ಪ್ರಯೋಜನ ಸಹ ಸಿಗಲಿದೆ. ಇದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಪ್ರಯೋಜನಗಳು ಸಹ ಲಭ್ಯ.
ಜಿಯೋ 1049ರೂ. ಪ್ರೀಪೇಯ್ಡ್ ಯೋಜನೆ
ಜಿಯೋ ಟೆಲಿಕಾಂನ 1049ರೂ. ಪ್ರೀಪೇಯ್ಡ್ ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 84 ದಿನಗಳ ವ್ಯಾಲಿಡಿಟಿ (Validity) ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಲಭ್ಯ ಇದ್ದು, ಹಾಗೆಯೇ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಲಭ್ಯ ಆಗಲಿದೆ. ಹೆಚ್ಚುವರಿಯಾಗಿ ಸೋನಿಲೈವ್ ಹಾಗೂ ಜೀ5 ಓಟಿಟಿ ಚಂದಾದಾರಿಕೆ ಲಭ್ಯ.
ಜಿಯೋ 1299ರೂ. ಪ್ರೀಪೇಯ್ಡ್ ಯೋಜನೆ
ಜಿಯೋ ಟೆಲಿಕಾಂನ 1299ರೂ. ಪ್ರೀಪೇಯ್ಡ್ ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 84 ದಿನಗಳ ವ್ಯಾಲಿಡಿಟಿ (Validity) ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಲಭ್ಯ ಇದ್ದು, ಹಾಗೆಯೇ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಲಭ್ಯ ಆಗಲಿದೆ. ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಸೌಲಭ್ಯ ಲಭ್ಯ.


Click it and Unblock the Notifications








