ನೀವು ಜಿಯೋ ಗ್ರಾಹಕರೇ?..ಹಾಗಿದ್ರೆ, ಈ ಪ್ಲ್ಯಾನಿಗೆ ಖಂಡಿತಾ ಫಿದಾ ಆಗ್ತೀರಾ!
ದೇಶಿದ ಟೆಲಿಕಾಂ ವಲಯದಲ್ಲಿ ಮುಂಚೂಣಿ ಸ್ಥಾನದಲ್ಲಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಸಂಸ್ಥೆಯು ಭಿನ್ನ ಪ್ರಿಪೇಯ್ಡ್ ಯೋಜನೆ ಆಯ್ಕೆಯನ್ನು ನೀಡಿದೆ. ಆ ಪೈಕಿ ಜಿಯೋ ರೀಚಾರ್ಜ್ ಯೋಜನೆಯೊಂದು ಬೊಂಬಾಟ್ ಡೇಟಾ ಪ್ರಯೋಜನ ಸಹ ಪಡೆದುಕೊಂಡಿದೆ. ಇದು ಗ್ರಾಹಕರನ್ನು ಹುಬ್ಬೇರಿಸುವಂತೆ ಮಾಡಿದೆ.
ಹೌದು, ಜಿಯೋ ಸಂಸ್ಥೆಯು ಭಿನ್ನ ಡೇಟಾ ಪ್ರಯೋಜನಗಳ ಆಯ್ಕೆ ಪಡೆದಿದೆ. ಅವುಗಳಲ್ಲಿ ದೈನಂದಿನ 1GB ಡೇಟಾ, 1.5GB ಡೇಟಾ, 2GB ಡೇಟಾ ಮತ್ತು 3GB ಡೇಟಾ ಪ್ರಯೋಜನದ ಯೋಜನೆಗಳ ಆಯ್ಕೆ ಇದೆ. ಹಾಗೆಯೇ ಕೆಲವು ಯೋಜನೆಗಳು 2GB ಗೂ ಅಧಿಕ ಡೇಟಾ ಪ್ರಯೋಝನ ಪಡೆದಿವೆ. ಅವುಗಳಲ್ಲಿ 2999ರೂ. ಯೋಜನೆಯು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಹಾಗಾದರೇ ಈ ಯೋಜನೆಯ ಪ್ರಯೋಜನಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ 2999ರೂ. ಯೋಜನೆ ವಿವರ
ಜಿಯೋ ಟೆಲಿಕಾಂನ ಈ ರೀಚಾರ್ಜ್ ಪ್ಲ್ಯಾನ್ ವಾರ್ಷಿಕ ಅವಧಿಯದ್ದಾಗಿದ್ದು, 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಸಿಗಲಿದ್ದು, ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇಯಾಗಿ 912.5 GB ಡೇಟಾ ಲಭ್ಯವಾಗಲಿದೆ.
ಇದರೊಂದಿಗೆ ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದ್ದು, ನಿತ್ಯ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಜಿಯೋ ಸಿನಿಮಾ, ಜಿಯೋ ನ್ಯೂಸ್ ಅಪ್ಲಿಕೇಶನ್ ಗಳು ಕೂಡಾ ದೊರೆಯುತ್ತವೆ.
ಜಿಯೋ 3662ರೂ. ಯೋಜನೆ ವಿವರ
ರಿಲಯನ್ಸ್ ಜಿಯೋ ಸಂಸ್ಥೆಯ 3662ರೂ. ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದ್ದು, ಗ್ರಾಹಕರಿಗೆ ನಿತ್ಯ 2.5GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಈ ಯೋಜನೆಯಲ್ಲಿ ಅನಿಯಮಿತ ವಾಯಿಸ್ ಕರೆ, ಅನಿಯಮಿತ 5G ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಸಿಗಲಿದೆ.
ಇದಲ್ಲದೇ ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇಯಾಗಿ 912.5 GB ಡೇಟಾ ಸಿಗಲಿದೆ. ಹಾಗೆಯೇ ಇದರೊಂದಿಗೆ ಸೋನಿ LIV ಮತ್ತು ಜೀ5 ಓಟಿಟಿ ಚಂದಾದಾರಿಕೆ ಸಹ ಗ್ರಾಹಕರಿಗೆ ದೊರೆಯುತ್ತದೆ. ಅಲ್ಲದೇ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್ ಸಹ ಪಡೆದಿದೆ.
ಜಿಯೋ 3226ರೂ. ಯೋಜನೆ ವಿವರ
ರಿಲಯನ್ಸ್ ಜಿಯೋದ ಈ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದ್ದು, ಗ್ರಾಹಕರಿಗೆ ನಿತ್ಯ 2GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ರೀಚಾರ್ಜ್ ಪ್ಲ್ಯಾನ್‌ಯಲ್ಲಿ ಅನ್‌ಲಿಮಿಟೆಡ್ ವಾಯಿಸ್ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ದೊರೆಯುತ್ತದೆ.
ಹಾಗೆಯೇ ಇದರೊಂದಿಗೆ ಜನಪ್ರಿಯ ಸೋನಿ LIV ಓಟಿಟಿ ಚಂದಾದಾರಿಕೆ ಕೂಡಾ ದೊರೆಯುತ್ತದೆ. ಅಲ್ಲದೇ ಈ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್ ಸಹ ಪಡೆದಿದೆ.
ಜಿಯೋ 3225ರೂ. ಯೋಜನೆ ವಿವರ
ರಿಲಯನ್ಸ್ ಜಿಯೋದ ಈ ಪ್ಲ್ಯಾನ್ ಕೂಡಾ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದ್ದು, ಗ್ರಾಹಕರಿಗೆ ನಿತ್ಯ 2GB ಡೇಟಾ ಪ್ರಯೋಜನ ಸಿಗಲಿದೆ. ಅಲ್ಲದೇ ಈ ರೀಚಾರ್ಜ್ ಪ್ಲ್ಯಾನ್‌ಯಲ್ಲಿ ಅನ್‌ಲಿಮಿಟೆಡ್ ವಾಯಿಸ್ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ದೊರೆಯುತ್ತದೆ.
ಹಾಗೆಯೇ ಇದರೊಂದಿಗೆ ಜನಪ್ರಿಯ ಜೀ5 ಓಟಿಟಿ ಚಂದಾದಾರಿಕೆ ಕೂಡಾ ದೊರೆಯುತ್ತದೆ. ಅಲ್ಲದೇ ಈ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಜೊತೆಗೆ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್ ಸಹ ಪಡೆದಿದೆ.


Click it and Unblock the Notifications








