ಈ ಪ್ಲ್ಯಾನ್ ಬೆಲೆ ಕಡಿಮೆ ಆದ್ರೆ, 336 ದಿನಗಳ ವ್ಯಾಲಿಡಿಟಿ ಖಚಿತ!
ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಕಂಪನಿಯು ಅತ್ಯುತ್ತಮ ಯೋಜನೆಗಳ ಮೂಲಕ ಮುಂಚೂಣಿಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಸಂಸ್ಥೆಯ ಹಲವು ಯೋಜನೆಗಳು ಅನಿಯಮಿತ ಧ್ವನಿ ಕರೆ, ಅಧಿಕ ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಜಿಯೋ ತನ್ನ ಚಂದಾದಾರರಿಗಾಗಿ ಅಲ್ಪಾವಧಿ ಹಾಗೂ ದೀರ್ಘಾವಧಿ ಮಾದರಿಯ ಯೋಜನೆಗಳನ್ನು ಸಹ ಪರಿಚಯಿಸಿದೆ. ಆ ಪೈಕಿ ಈ ಒಂದು ಪ್ಲ್ಯಾನ್ ಹೆಚ್ಚು ಆಕರ್ಷಕವಾಗಿದೆ.
ಹೌದು, ರಿಲಾಯನ್ಸ್ ಜಿಯೋ ಸಂಸ್ಥೆಯ 895ರೂ. ಯೋಜನೆಯು ದೀರ್ಘಾವಧಿಯ ವ್ಯಾಲಿಡಿಟಿ ಪ್ರಯೋಜನ ಪಡೆದಿದ್ದು, ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ. ಈ ಯೋಜನೆಯಲ್ಲಿ ಚಂದಾದಾರರಿಗೆ ಡೇಟಾ ಸೌಲಭ್ಯ, ಅನಿಯಮಿತ ಧ್ವನಿ ಕರೆ ಪ್ರಯೋಜನ ಸಹ ದೊರೆಯುತ್ತದೆ. ಹಾಗೆಯೇ ಉಚಿತ ಎಸ್ಎಮ್ಎಸ್ ಸೌಲಭ್ಯವು ಸಿಗಲಿದೆ. ಹಾಗಾದರೆ ಜಿಯೋ ಸಂಸ್ಥೆಯ 895ರೂ. ರೀಚಾರ್ಜ್ ಯೋಜನೆಯ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಟೆಲಿಕಾಂನ 895ರೂ. ಯೋಜನೆಯ ಪ್ರಯೋಜನಗಳ ಮಾಹಿತಿ : ಜಿಯೋ ಸಂಸ್ಥೆಯ 895ರೂ. ಯೋಜನೆಯಲ್ಲಿ ಒಟ್ಟು 336 ದಿನಗಳ ವ್ಯಾಲಿಡಿಟಿ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 24GB ಡೇಟಾ ಪ್ರಯೋಜನ ಲಭ್ಯ. ಹಾಗೆಯೇ 28 ದಿನಗಳಿಗೆ 2GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇನ್ನುಳಿದಂತೆ ಅನಿಯಮಿತ ಧ್ವನಿ ಕರೆಯ ಪ್ರಯೋಜನ ಹಾಗೂ ಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ 28 ದಿನಗಳಿಗೊಮ್ಮೆ 50 ಉಚಿತ ಎಸ್ಎಮ್ಎಸ್ ಸೌಲಭ್ಯವು ಚಂದಾದಾರರಿಗೆ ಖಚಿತ.
ಜಿಯೋಫೋನ್ ಚಂದಾದಾರಿಗೆ ಈ ಯೋಜನೆ ಅನ್ವಯ : ಜಿಯೋ ಸಂಸ್ಥೆಯ 895ರೂ. ಯೋಜನೆಯು ಸಖತ್ ಉಪಯುಕ್ತ ಪ್ರಯೋಜನ ಪಡೆದಿದ್ದು, ಇದು ಒಟ್ಟು 336 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ. ಆದರೆ ಈ ರೀಚಾರ್ಜ್ ಪ್ಲ್ಯಾನ್ ಜಿಯೋಫೋನ್ (JioPhone) ಗ್ರಾಹಕರಿಗೆ ಮಾತ್ರ ಲಭ್ಯ. ಇತರೆ ಜಿಯೋ ಪ್ರೀಪೇಯ್ಡ್ ಚಂದಾದಾರರಿಗೆ ಈ ಯೋಜನೆ ರೀಚಾರ್ಜ್ಗೆ ಅಲಭ್ಯ ಆಗಿದೆ.
ಜಿಯೋ ಟೆಲಿಕಾಂನ 186ರೂ. ಯೋಜನೆಯ ಸೌಲಭ್ಯಗಳ ಮಾಹಿತಿ : ಜಿಯೋ ಟೆಲಿಕಾಂನ 186ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯಲ್ಲಿ ಒಟ್ಟು 28 GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ಪಡೆದಿದ್ದು, ದೈನಂದಿನ 1GB ಡೇಟಾ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಅನಿಯಮಿತ ಧ್ವನಿ ಕರೆಯ ಪ್ರಯೋಜನ ಸಹ ಸಿಗುತ್ತದೆ. ಇದಲ್ಲದೇ ಡೈಲಿ ಉಚಿತ 100 ಎಸ್ಎಮ್ಎಸ್ ಪ್ರಯೋಜನ ಲಭ್ಯ.
ಜಿಯೋ ಟೆಲಿಕಾಂನ 152ರೂ. ಯೋಜನೆಯ ಸೌಲಭ್ಯಗಳ ಮಾಹಿತಿ : ಜಿಯೋ ಟೆಲಿಕಾಂನ 152ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯಲ್ಲಿ ಒಟ್ಟು 14 GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ಪಡೆದಿದ್ದು, ಡೈಲಿ 0.5 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಸಿಗುತ್ತದೆ. ಇದಲ್ಲದೇ ಪೂರ್ಣ ವ್ಯಾಲಿಡಿಟಿ
ಜಿಯೋ ಟೆಲಿಕಾಂನ 222ರೂ. ಯೋಜನೆಯ ಸೌಲಭ್ಯಗಳ ಮಾಹಿತಿ : ಜಿಯೋ ಟೆಲಿಕಾಂನ 222ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯಲ್ಲಿ ಒಟ್ಟು 56 GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ಪಡೆದಿದ್ದು, ಪ್ರತಿದಿನ 2GB ಡೇಟಾ ಸೌಲಭ್ಯ ಲಭ್ಯ. ಹಾಗೆಯೇ ಅನಿಯಮಿತ ಧ್ವನಿ ಕರೆಯ ಪ್ರಯೋಜನ ಸಹ ದೊರೆಯುತ್ತದೆ. ಹಾಗೆಯೇ ಡೈಲಿ ಉಚಿತ 100 ಎಸ್ಎಮ್ಎಸ್ ಪ್ರಯೋಜನ ಸಿಗಲಿದೆ.


Click it and Unblock the Notifications








