Home
ಸುದ್ದಿಜಾಲ

life2vec AI tool: ಈ ಎಐ ಟೂಲ್ಸ್‌ ನೀವು ಯಾವಾಗ ಸಾಯುತ್ತೀರಿ ಎಂದು ಊಹಿಸುತ್ತದೆ?

ಎಐ (AI) ಬಳಕೆ ಇಂದಿನ ದಿನಗಳಲ್ಲಿ ಎಲ್ಲಾ ಕಡೆ ಬಳಕೆ ಆಗುತ್ತಿದೆ. ಎಐ ಬಗ್ಗೆ ಕೆಲವರು ಆತಂಕ ಹೊರಹಾಕಿದರೆ ಇನ್ನೂ ಕೆಲವರು ಈ ಎಐ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಏನೇ ಆದರೂ ಎಐ ಇಂದಿನ ದಿನಗಳಲ್ಲಿ ಜನರನ್ನು ಆಕ್ರಮಿಸಿಕೊಂಡಿರುವುದಂತೂ ಸತ್ಯ. ಈ ನಡುವೆ ಅಚ್ಚರಿ ಎಐ ಟೂಲ್ಸ್‌ವೊಂದು ಬಹಳ ಸದ್ದು ಮಾಡುತ್ತಿದೆ.

ಹೌದು, ಈಗಾಗಲೇ ಭಿನ್ನ ರೀತಿಯ ಎಐ ಟೂಲ್ಸ್‌ಗಳು (AI Tools) ಲಭ್ಯ ಇದ್ದು, ವಿವಿಧ ರೀತಿಯಲ್ಲಿ ಜನರಿಗೆ ಉಪಯೋಗ ನೀಡುತ್ತಿವೆ. ಆದರೆ ಇವೆಲ್ಲವನ್ನೂ ಮೀರಿಸುವ ಹೊಸ ಎಐ ಟೂಲ್ಸ್‌ ಅನ್ನು ಜನರು ಹೆಚ್ಚು ಬಳಕೆ ಮಾಡಲು ಮುಂದಾಗಿದ್ದಾರೆ. ಅಂದರೆ ಈ ಎಐ ಟೂಲ್ಸ್‌ ಚಾಟ್‌ಜಿಪಿಟಿ (chatGPT) ರೀತಿಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನೀವು ಯಾವಾಗ ಸಾಯುತ್ತೀರಿ ಎಂದು ಊಹಿಸಿ ಮಾಹಿತಿ ನೀಡುತ್ತದೆ. ಹಾಗಿದ್ರೆ, ಏನಿದು ಹೊಸ ಎಐ ಟೂಲ್ಸ್?, ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಈ ಎಐ ಟೂಲ್ಸ್‌ ನೀವು ಯಾವಾಗ ಸಾಯುತ್ತೀರಿ ಎಂದು ಊಹಿಸುತ್ತದೆ?

ನಿಮ್ಮ ಸಾವು ಯಾವಾಗ ಎಂದು ಹೇಳುತ್ತಂತೆ : ಹುಟ್ಟು ಉಚಿತ ಸಾವು ಖಚಿತ ಎಂಬುದು ನಿಮಗೆ ಗೊತ್ತಿರುವ ವಿಷಯ. ಇಂದು ಇದ್ದವರು ನಾಳೆ ಇಹಲೋಕವನ್ನೇ ತ್ಯಜಿಸುವ ಘಟನೆ ನಮ್ಮ ಕಣ್ಣಮುಂದೆಯೇ ನಡೆದು ಬಿಡುತ್ತವೆ. ಆದರೆ, ಈಗ ಸಾವು ಯಾವಾಗ ಬರುತ್ತದೆ ಅನ್ನೋದನ್ನು ಸಹ ಕಂಡುಕೊಳ್ಳಬಹುದಾದ ಮಟ್ಟಕ್ಕೆ ತಂತ್ರಜ್ಞಾನ ಬಳಕೆ ಆಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಂಬಲಾರ್ಹ ಅನ್ನೋದು ಮಾತ್ರ ಪ್ರಶ್ನಾರ್ಹ. ಜೊತೆಗೆ ಇದನ್ನು ಗಂಭಿರವಾಗಿ ಪರಿಗಣಿಸಬಾರದು ಎಂಬ ಮಾಹಿತಿ ಸಹ ನಿಮ್ಮ ಗಮನಕ್ಕೆ ಇರಲಿ.

ಡೆನ್ಮಾರ್ಕ್‌ನ ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಸುನೆ ಲೆಹ್ಮನ್ ಈ ಸಂಬಂಧ ಹೊಸ ಎಐ ಟೂಲ್ಸ್‌ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಟೂಲ್ಸ್‌ 78 ಪ್ರತಿಶತ ನಿಖರತೆಯೊಂದಿಗೆ ವ್ಯಕ್ತಿಯ ಜೀವಿತಾವಧಿಯನ್ನು ಊಹಿಸಿ ಹೇಳುತ್ತದೆ. ಆದಾಗ್ಯೂ, ಇದನ್ನು ಕೇವಲ ಮನರಂಜನಾ ವಿಚಾರಕ್ಕೆ ಮಾತ್ರ ಬಳಕೆ ಮಾಡಬೇಕು ಬದಲಾಗಿ ಇದರ ಆಧಾರದ ಮೇಲೆ ಯಾವುದೇ ನಿರ್ಣಾಯಕ ವಿಷಯಗಳಿಗೆ ಬರಬಾರದು ಎಂದು ಲೆಹ್ಮನ್ ಹೇಳಿದ್ದಾರೆ.

ಈ ಎಐ ಟೂಲ್ಸ್‌ ನೀವು ಯಾವಾಗ ಸಾಯುತ್ತೀರಿ ಎಂದು ಊಹಿಸುತ್ತದೆ?

ಇನ್ನು ಈ ಎಐ ಟೂಲ್ಸ್‌ ಚಾಟ್‌ಜಿಪಿಟಿ ರೀತಿಯಲ್ಲೇ ಇದ್ದರೂ ಸಹ ಭಿನ್ನವಾಗಿ ಕೆಲಸ ಮಾಡಲಿದೆ. ಇದು ಬಳಕೆದಾರರ ಜೀವನವನ್ನು ವಿಶ್ಲೇಷಿಸಲು ಮತ್ತು ಅವರು ಹಾದುಹೋಗುವ ಸಂಭಾವ್ಯ ಸಮಯವನ್ನು ಊಹಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಈ ಸಂಬಂಧ ನ್ಯೂಯಾರ್ಕ್ ಪೋಸ್ಟ್‌ನಲ್ಲಿ ಒಬ್ಬ ವ್ಯಕ್ತಿಯು ಯಾವಾಗ ಮರಣಹೊಂದಬಹುದು ಎಂಬುದನ್ನು ಊಹಿಸುವ ಈ ಅದ್ಭುತ ಎಐ ಟೂಲ್ಸ್‌ ಬಗ್ಗೆ ವರದಿ ಮಾಡಲಾಗಿದೆ.

ಈ ಹೊಸ ಅಲ್ಗಾರಿದಮ್ ಅನ್ನು 'life2vec' ಎಂದು ಹೆಸರಿಸಲಾಗಿದೆ. ಇದು ಆದಾಯ, ವೃತ್ತಿ, ನಿವಾಸ ಮತ್ತು ಆರೋಗ್ಯ ಇತಿಹಾಸದಂತಹ ವ್ಯಕ್ತಿಯ ಜೀವನದ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಇದನ್ನು ವಿಶ್ಲೇಷಣೆ ಮಾಡಿ 78 ರಷ್ಟು ಅಂದಾಜು ಮಾಹಿತಿಯನ್ನು ನೀಡುತ್ತದಂತೆ. ಚಾಟ್‌ಜಿಪಿಟಿ ತಂತ್ರಜ್ಞಾನಕ್ಕಿಂತ ಇದು ಭಿನ್ನವಾಗಿರಲಿದ್ದು, ಇದು ಉದ್ಯೋಗ ಹುಡುಕಾಟಗಳು ಅಥವಾ ಫ್ಯಾಷನ್ ಆಯ್ಕೆಗಳಿಗೂ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಈ ಎಐ ಟೂಲ್ಸ್‌ ನೀವು ಯಾವಾಗ ಸಾಯುತ್ತೀರಿ ಎಂದು ಊಹಿಸುತ್ತದೆ?

ಲೆಹ್ಮನ್ ಅವರು ಅಧ್ಯಯನದಲ್ಲಿ ಭಾಗವಹಿಸಿದವರ ಭವಿಷ್ಯತ್ತಿನ ಜೀವಿತಾವಧಿಯ ಬಗ್ಗೆ ತಿಳಿಸಲಿಲ್ಲ, ಈ ಮೂಲಕ ನೈತಿಕ ಜವಬ್ದಾರಿಯನ್ನು ಎತ್ತಿ ತೋರಿಸಿದ್ದಾರೆ. ಹಾಗೆಯೇ ಈ ಟೂಲ್ಸ್‌ ಸಾರ್ವಜನಿಕರಿಗೆ ಅಥವಾ ಯಾವುದೇ ಸಂಸ್ಥೆಗಳಿಗೆ ಇನ್ನೂ ಲಭ್ಯವಿಲ್ಲ. ಅದಾಗ್ಯೂ ಯಾರ ಗೌಪ್ಯತೆಗೂ ಸಹ ಧಕ್ಕೆಯಾಗದಂತೆ ಸಂಬಂಧಿತ ಅಂಶಗಳನ್ನು ಗುರುತಿಸುವ ಮೂಲಕ ಜನರು ಹೆಚ್ಚು ಕಾಲ ಬದುಕಲು ಈ ಎಐ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಲೆಹ್ಮನ್ ಮತ್ತು ಅವರ ತಂಡವು ಇನ್ನಷ್ಟು ಅಧ್ಯಯನ ಮಾಡಲು ಉದ್ದೇಶಿಸಿದೆ ಎಂದು ತಿಳಿದುಬಂದಿದೆ.

ಇನ್ನು ದೀರ್ಘಾಯುಷ್ಯಕ್ಕೆ ಯಾವ ಅಂಶಗಳು ಕೊಡುಗೆ ನೀಡುತ್ತವೆ ಎಂಬುದನ್ನು ಕಲಿಯುವಲ್ಲಿ ಈ ಎಐ ಅಮೂಲ್ಯವಾಗಿದೆ ಎಂದು ಹೇಳಲಾಗಿದ್ದು, ವೈಯಕ್ತಿಕ ಗೌಪ್ಯತೆಯನ್ನು ಅತಿಕ್ರಮಿಸದೆ ಸಮಾಜಕ್ಕೆ ಪ್ರಯೋಜನವಾಗುವಂತೆ ಈ ಎಐ ಅನ್ನು ಬಳಕೆ ಮಾಡಲು ತಂಡವು ಆಶಿಸುತ್ತಿದೆಯಂತೆ. ಅಂದರೆ ವೈಯಕ್ತಿಕ ಸಾವಿನ ಮುನ್ಸೂಚನೆಗಳನ್ನು ಬಹಿರಂಗಪಡಿಸದೆ ದೀರ್ಘ, ಆರೋಗ್ಯಕರ ಜೀವನವನ್ನು ಉತ್ತೇಜಿಸುವ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

Best Mobiles in India

English summary
An AI tool called 'life2vec' has been developed which takes into account various aspects of a person's life such as income, occupation, residence and health history and provides information about how long a person will live.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+