Home
ಸುದ್ದಿಜಾಲ

Vi ನ ಈ ಡಿವೈಸ್‌ಗೆ ಈಗ ಭಾರೀ ಬೇಡಿಕೆ; 10 ಡಿವೈಸ್‌ಗೆ ಸಂಪರ್ಕ, 200GB ರೋಲ್ ಓವರ್ ಆಯ್ಕೆ!

ವೊಡಾಫೋನ್ ಐಡಿಯಾ (Vi telecom) ಟೆಲಿಕಾಂ ತನ್ನ ಪ್ರತಿಸ್ಪರ್ಧಿಗಳಾದ ಏರ್‌ಟೆಲ್‌, ಜಿಯೋ ಹಾಗೂ ಬಿಎಸ್‌ಎನ್‌ಎಲ್‌ಗೆ ತನ್ನದೇ ಆದ ರೀತಿಯಲ್ಲಿ ಸ್ಪರ್ಧೆ ನೀಡುತ್ತಿದ್ದು, ನಿನ್ನೆಯಷ್ಟೇ ವಿ ಒನ್‌ ಎಂಬ ಹೊಸ ಸೇವೆಯನ್ನೂ ಸಹ ಆರಂಭಿಸಿದೆ. ಈ ಮೂಲಕ ಬಳಕೆದಾರರು ಒಂದೇ ರೀಚಾರ್ಜ್‌ನಲ್ಲಿ ಮೂರು ಸೇವೆಗಳನ್ನು ಪಡೆದುಕೊಳ್ಳಬಹುದು. ಇದರ ನಡುವೆ ವಿ ಟೆಲಿಕಾಂನ Vi MiFi ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ಹೌದು, ವೊಡಾಫೋನ್ ಕಾಲಕಾಲಕ್ಕೆ ಅತ್ಯುತ್ತಮ ಸೇವೆಗಳನ್ನು ನೀಡುವ ಮೂಲಕ ಮುನ್ನೆಲೆಗೆ ಬರುತ್ತಿದೆ. ಇದರ ಭಾಗವಾಗಿಯೇ ಈಗ Vi MiFi ಭಾರೀ ಸದ್ದು ಮಾಡುತ್ತಿದ್ದು, ಗ್ರಾಹಕರು ಸಹ ಈ ಕಡೆ ಮುಖ ಮಾಡುತ್ತಿದ್ದಾರೆ. ಅಷ್ಟಕ್ಕೂ ಇದೇನು ಇತ್ತೀಚೆಗೆ ಲಾಂಚ್‌ ಮಾಡಿದ ಹೊಸ ಸೇವೆಯಲ್ಲ. ಬದಲಾಗಿ ಈ ಹಿಂದಿನಿಂದಲೂ ಡಿವೈಸ್‌ ಮಾರುಕಟ್ಟೆಯಲ್ಲಿ ಲಭ್ಯ ಇದೆ. ಹಾಗಿದ್ರೆ ಏನಿದು Vi MiFi ? ಇದರಿಂದ ಏನೆಲ್ಲಾ ಪ್ರಯೋಜನ ಎಂಬ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.

Vi ನ ಈ ಡಿವೈಸ್‌ಗೆ ಭಾರೀ ಬೇಡಿಕೆ;10ಡಿವೈಸ್‌ಗೆ ಸಂಪರ್ಕ,200GB ರೋಲ್ ಓವರ್ ಆಯ್ಕೆ!

ಬೃಹತ್‌ ಡೇಟಾ, 10 ಡಿವೈಸ್‌ಗಳಿಗೆ ಸಂಪರ್ಕ: ಈ ಡಿವೈಸ್‌ ವೊಡಾಫೋನ್ ಐಡಿಯಾ ಅಡಿಯಲ್ಲಿ ಇರುವ ಪ್ರಮುಖ ಡಿವೈಸ್‌ಗಳಲ್ಲಿ ಒಂದಾಗಿದ್ದು. ಇದನ್ನು ಒಂದೇ ಸಮಯದಲ್ಲಿ ಅನೇಕ ಡಿವೈಸ್‌ಗಳನ್ನು ಸಂಪರ್ಕಿಸಲು ವಿನ್ಯಾಸಗೊಳಿಸಲಾಗಿದೆ. ಈ ಪೋರ್ಟಬಲ್ ಹಾಟ್‌ಸ್ಪಾಟ್ ಮಿನಿ ವೈ-ಫೈ ಡಿವೈಸ್ ಆಗಿದ್ದು, ಇದನ್ನು ನೀವು ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಿ ಬಳಕೆ ಮಾಡಬಹುದಾಗಿದೆ.

ಈ Vi MiFi ನ ಗರಿಷ್ಠ ಡೌನ್‌ಲೋಡ್ ವೇಗವು 150Mbps ಆಗಿದೆ. ಆದರೆ, ಭಾರತದ ಯಾವುದೇ 4G ನೆಟ್‌ವರ್ಕ್‌ಗಳಲ್ಲಿ ಈ ಮಟ್ಟದ ವೇಗ ಲಭ್ಯವಾಗುವುದಿಲ್ಲ. ಅದರಂತೆ Vi MiFi ಡಿವೈಸ್‌ನ ಅಡಿಯಲ್ಲಿ ಲಭ್ಯವಿರುವ ಪ್ರಿಪೇಯ್ಡ್ ಪ್ಲ್ಯಾನ್‌ಗಳ ಕಡೆ ಕಣ್ಣಾಯಿಸುವುದಾದರೆ ಇದು ಎರಡು ಎರಡು ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಹೊಂದಿದೆ. ಮೊದಲನೆಯದು ತಿಂಗಳಿಗೆ 399ರೂ. ಮತ್ತು ಎರಡನೆಯದು 499ರೂ.ಗಳ ರೀಚಾರ್ಜ್‌ ಪ್ಲ್ಯಾನ್‌.

399ರೂ.ಗಳ ಪ್ಲ್ಯಾನ್‌ನಲ್ಲಿ 50GB ಡೇಟಾ ಸಿಗಲಿದ್ದು, ಹೆಚ್ಚುವರಿಯಾಗಿ 200GB ಡೇಟಾ ರೋಲ್‌ಓವರ್ ಬೆಂಬಲ ಸಹ ಇದೆ. ಅಂದರೆ ಬಳಕೆಯಾಗದ ಡೇಟಾವನ್ನು ಮುಂದಿನ ತಿಂಗಳಿಗೆ ರೋಲ್ ಓವರ್ ಮಾಡಲು ಅವಕಾಶ ನೀಡಲಾಗುತ್ತದೆ. ಇದರೊಂದಿಗೆ ನೀವು ಸಂಪೂರ್ಣವಾಗಿ 50GB ಡೇಟಾವನ್ನು ಬಳಕೆ ಆಡಿದ ಆನಂತರ ನೀವು ಬಳಸುವ ಪ್ರತಿ GB ಗೆ 20ರೂ.ಗಳ ಶುಲ್ಕ ವಿಧಿಸಲಾಗುತ್ತದೆ.

ಇನ್ನು ಮತ್ತೊಂದು ಪ್ಲ್ಯಾನ್‌ ಕಡೆ ಗಮನಹರಿಸುವುದಾದರೆ ಇದು 499ರೂ.ಗಳ ಬೆಲೆ ಹೊಂದಿದ್ದು, ಇದರಲ್ಲಿ 90GB ಒಟ್ಟು ಡೇಟಾವನ್ನು ನೀಡಲಾಗುತ್ತದೆ. ಅದರಂತೆ 200GB ಡೇಟಾ ರೋಲ್‌ಓವರ್ ಬೆಂಬಲ ಸಹ ಈ ಪ್ಲ್ಯಾನ್‌ನಲ್ಲಿದ್ದು, ಅದರ ಹೊರತಾಗಿ 399ರೂ.ಗಳ ಪ್ಲ್ಯಾನ್‌ನಂತೆಯೇ 90GB ಡೇಟಾ ಮಿತಿಯನ್ನು ಮೀರಿದ ಬಳಿಕ ಪ್ರತಿ ಹೆಚ್ಚುವರಿ GB ಗೆ 20ರೂ.ಗಳ ಶುಲ್ಕವನ್ನು ಭರಿಸಬೇಕಾಗುತ್ತದೆ.

ಸಾಮಾನ್ಯವಾಗಿ ದೇಶದ ಹಲವಾರು ಭಾಗಗಳಲ್ಲಿ ಅಗ್ಗದ ಫೈಬರ್ ಇಂಟರ್ನೆಟ್ ಯೋಜನೆಗಳು ಲಭ್ಯ ಇವೆ. ಆದಾಗ್ಯೂ ನಿಮಗೆ Vi MiFi ಡಿವೈಸ್‌ನ ಅಗತ್ಯವಿದ್ದರೆ ನೀವು ಅದನ್ನು ವೋಡಾಫೊನ್‌ ಐಡಿಯಾ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ವಿ ನ ಅಧಿಕೃತ ಚಿಲ್ಲರೆ ಸ್ಟೋರ್‌ನಿಂದ ಖರೀದಿ ಮಾಡಬಹುದಾಗಿದೆ. ಜೊತೆಗೆ ಈ ಡಿವೈಸ್‌
ಒಂದು ವರ್ಷದ ವಾರಂಟಿಯೊಂದಿಗೆ ಬರಲಿದೆ. ಇದಕ್ಕೆ 2000ರೂ. ಗಳ ಬೆಲೆ ನಿಗದಿ ಮಾಡಲಿದೆ.

Vi ನ ಈ ಡಿವೈಸ್‌ಗೆ ಭಾರೀ ಬೇಡಿಕೆ;10ಡಿವೈಸ್‌ಗೆ ಸಂಪರ್ಕ,200GB ರೋಲ್ ಓವರ್ ಆಯ್ಕೆ!

ಇನ್ನು ಮೊದಲೇ ತಿಳಿಸಿದಂತೆ ವಿ ಒನ್‌ ಪ್ಲ್ಯಾನ್‌ ಅನ್ನು ಪರಿಚಯಿಸಿದ್ದು, ಈ ಪ್ಲ್ಯಾನ್‌ನಲ್ಲಿ ನಾಲ್ಕು ರೀಚಾರ್ಜ್‌ ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ 2,912ರೂ.ಗಳ ಪ್ಲ್ಯಾನ್‌ 3,109ರೂ., 8,390ರೂ ಹಾಗೂ 12,155ರೂ.ಗಳ ಪ್ಲ್ಯಾನ್ ಆಯ್ಕೆಗಳಿವೆ. ಪ್ರಮುಖವಾಗಿ ಬೇಸಿಕ್‌ ಪ್ಲ್ಯಾನ್‌ ಅಂದರೆ 2,912ರೂ.ಗಳ ಪ್ಲ್ಯಾನ್‌ನಲ್ಲಿ ಬಳಕೆದಾರರು ಅನಿಯಮಿತ ಧ್ವನಿ ಕರೆ, 2GB ದೈನಂದಿನ ಡೇಟಾ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್‌ ಸೌಲಭ್ಯ ಪಡೆದುಕೊಳ್ಳಬಹುದು.

Best Mobiles in India

English summary
Vodafone idea (Vi) is coming to the fore by offering the best services from time to time. As part of this, the Vi MiFi is making a lot of noise.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+