Mini Fridge: ಈ ಸಣ್ಣ ಫ್ರಿಡ್ಜನಲ್ಲಿ USB ಯೊಂದಿಗೆ ಪಾನೀಯವನ್ನು ಬಿಸಿ-ತಣ್ಣಗೆ ಮಾಡಬಹುದು; ಬೆಲೆ ಕೇವಲ ಇಷ್ಟೇ!?
ಫ್ರಿಡ್ಜ್ ಗಳು ಅಗ್ಗದ ದರದಿಂದ ಹಿಡಿದು ದುಬಾರಿ ಬೆಲೆಯಲ್ಲಿ ಲಭ್ಯ ಇದ್ದು, ಇವುಗಳು ಬಳಕೆದಾರರಿಗೆ ತಕ್ಕ ಸೇವೆ ನೀಡುತ್ತಿವೆ. ಅದರಲ್ಲೂ ದೊಡ್ಡ ಗಾತ್ರದ ಫ್ರಿಡ್ಜ್ ಗಳನ್ನು ಕೇವಲ ಮನೆ, ಅಂಗಡಿ ಅಥವಾ ಹೋಟೆಲ್‌ನಲ್ಲಿ ಇರಿಸಿಕೊಳ್ಳಬಹುದು. ಆದರೆ, ಇವುಗಳನ್ನು ಬೇರೆ ಕಡೆ ಬೇಕಾದಾಗ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಆದರೆ, ಈ ಫ್ರಿಡ್ಜ್ಗಳು ನಿಮಗೆ ಇವೆಲ್ಲವನ್ನೂ ಸಾಧ್ಯವಾಗಿಸುತ್ತವೆ.
ಹೌದು, ಸಣ್ಣ ಫ್ರಿಡ್ಜ್ ಗಳನ್ನು ಇಂದು ವಾಹನಗಳಲ್ಲಿ ಬಳಕೆ ಮಾಡಲಾಗುತ್ತದೆ ಜೊತೆಗೆ ಎಲ್ಲಾದರೂ ಹೊರಗಡೆ ಸಭೆ ಸಮಾರಂಭ ಮಾಡಿದಾಗ ಅವುಗಳನ್ನು ಹೆಚ್ಚಾಗಿ ಬಳಕೆ ಮಾಡುವ ಅಭ್ಯಾಸ ಇಂದು ಹೆಚ್ಚಾಗುತ್ತಿದೆ. ಹಾಗಿದ್ರೆ, ಈ ಫ್ರಿಡ್ಜ್ ಏನೆಲ್ಲಾ ಫೀಚರ್ಸ್ ಹೊಂದಿದೆ, ಹೇಗೆ ಕೆಲಸ ಮಾಡಲಿವೆ, ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಎಷ್ಟು ಬೆಲೆ ಹೊಂದಿದೆ ಎಂಬ ಬಗ್ಗೆ ತಿಳಿಯೋಣ ಬನ್ನಿ.

FLAWISH ಕಾರ್ ಮಿನಿ ಫ್ರಿಡ್ಜ್ ಫೀಚರ್ಸ್ :ಈ ಮಿನಿ 5V ಕಾರ್ ಮಿನಿ ಫ್ರಿಡ್ಜ್ ಅನ್ನು ಯಾವಾಗಲೂ ಸಹ ಬಳಕೆ ಮಾಡಬಹುದಾಗಿದೆ. ಇದು ಪಾನೀಯಗಳನ್ನು ಬಿಸಿ ಮತ್ತು ತಂಪು ಮಾಡುವ ಸಾಮರ್ಥ್ಯ ಹೊಂದಿದೆ. ಅದೆಲ್ಲಕ್ಕೂ ಮಿಗಿಲಾಗಿ ಇದು ಯುಎಸ್‌ಬಿ ಪೋರ್ಟ್ ಮೂಲಕ ಕೆಲಸ ಮಾಡಲಿದ್ದು, ಪವರ್ ಬ್ಯಾಂಕ್, ಲ್ಯಾಪ್‌ಟಾಪ್, ಕಂಪ್ಯೂಟರ್, ಯುಎಸ್‌ಬಿ ಚಾರ್ಜರ್ ಗಳನ್ನು ಬಳಕೆ ಮಾಡಿಕೊಳ್ಳಬಹುದು.
ಇನ್ನು ಇದು ಯಾವಾಗ ಆನ್ ಆಗಿರುತ್ತದೋ ಆ ವೇಳೆ ಸಣ್ಣ ಎಲ್ ಇಡಿ ಲೈಟ್ ಉರಿಯುತ್ತದೆ ಈ ಮೂಲಕ ಫ್ರಿಡ್ಜ್ ಕೆಲಸ ಮಾಡುತ್ತಿದೆ ಎಂದು ನೀವು ತಿಳಿದುಕೊಳ್ಳಬಹುದು. ಜೊತೆಗೆ 100 ಗ್ರಾಂ. ತೂಕ ಹೊಂದಿದ್ದು, 10.01 x 10.01 x 10.01 ಸೆಂಟಿ ಮೀಟರ್ ಗಾತ್ರದಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಎಂತಹ ಚಿಕ್ಕ ಜಾಗದಲ್ಲೂ ಇದನ್ನು ಇರಿಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲದೆ ಎಬಿಎಸ್ ಪ್ಲಾಸ್ಟಿಕ್ ವಸ್ತುಗಳಿಂದ ನಿರ್ಮಿಸಲಾಗಿದ್ದು, ಉತ್ತಮ ಬಾಳಿಕೆ ಬರುತ್ತದೆ.
ಇದರೊಂದಿಗೆ ಯಾವುದೇ ಪಾನೀಯಗಳ ತಾಪಮಾನವನ್ನು 5 ನಿಮಿಷಗಳಲ್ಲಿ 8-9 ಡಿಗ್ರಿ ಸೆಂಟಿಗ್ರೇಡ್‌ಗೆ ಕಡಿಮೆ ಮಾಡಬಹುದು. ಅಥವಾ ಅದನ್ನು 40 ರಿಂದ 65 ಡಿಗ್ರಿ ಸೆಂಟಿಗ್ರೇಡ್‌ಗೆ ಹೆಚ್ಚಿಸಬಹುದು. ಪ್ರಮುಖವಾಗಿ ಗಮನಿಸಬೇಕಾದ ವಿಷಯ ಏನೆಂದರೆ ಕಾರ್ಬೊನೇಟೆಡ್ ಪಾನೀಯಗಳು ಇದರಲ್ಲಿ ಬಿಸಿಯಾಗುವುದಿಲ್ಲ. ಈ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಈ ಫ್ರಿಡ್ಜ್ ಅನ್ನು ಕಾರಿನಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

FLAWISH ಕಾರ್ ಮಿನಿ ಫ್ರಿಡ್ಜ್ ಬೆಲೆ ಹಾಗೂ ಲಭ್ಯತೆ: ಈ ಫ್ರಿಡ್ಜ್‌ನ ಮೂಲ ಬೆಲೆ 7,894ರೂ.ಗಳು. ಆದರೆ ಅಮೆಜಾನ್‌ನಲ್ಲಿ 51 % ರಿಯಾಯಿತಿ ನೀಡಲಾಗಿದ್ದು, ಈ ಮೂಲಕ 3,875 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಇಷ್ಟು ಮಾತ್ರವಲ್ಲ 185ರೂ.ಗಳ ಇಎಮ್‌ಐ ಮೂಲಕವೂ ಖರೀದಿ ಮಾಡಬಹುದು.
ಕಾರ್ ಮಿನಿ ಫ್ರಿಡ್ಜ್ ಟ್ರಾವೆಲ್ ರೆಫ್ರಿಜರೇಟರ್: ಇದರೊಂದಿಗೆ ಮಾರುಕಟ್ಟೆಯಲ್ಲಿ HR ಎಂಟರ್‌ಪ್ರೈಸ್ ಪೋರ್ಟಲ್ 12V 7L ABS ಮಲ್ಟಿ-ಫಂಕ್ಷನ್ ಆಟೋ ಕಾರ್ ಮಿನಿ ಫ್ರಿಡ್ಜ್ ಟ್ರಾವೆಲ್ ರೆಫ್ರಿಜರೇಟರ್ ಹೋಮ್ ಕೂಲರ್ ಫ್ರಿಡ್ಜ್ ಸಹ ಬಹಳ ಜನಪ್ರಿಯತೆ ಪಡೆದುಕೊಂಡಿದೆ. ಇದು ಪರಿಸರ ಸ್ನೇಹಿ, ಸೆಮಿಕಂಡಕ್ಟರ್ ಶೈತ್ಯೀಕರಣ ವ್ಯವಸ್ಥೆ ಯನ್ನು ಹೊಂದಿದೆ. ಜೊತೆಗೆ ದೀರ್ಘ ಕಾಲ ಬಾಳಿಕೆ ಬರುತ್ತದೆ.
ಸಾಮಾನ್ಯ ಮನೆಯ ರೆಫ್ರಿಜರೇಟರ್‌ಗಿಂತ ಭಿನ್ನವಾಗಿರುವ ಕಾರ್ ರೆಫ್ರಿಜರೇಟರ್ ಕಡಿಮೆ ತೂಕ ಹೊಂದಿದ್ದು, ಕೆಳಭಾಗದಲ್ಲಿ 4 ಆಂಟಿ-ಸ್ಲಿಪ್ ಫೂಟ್ ಪ್ಯಾಡ್‌ಗಳ ಆಯ್ಕೆ ಪಡೆದಿದೆ. ಇಷ್ಟು ಮಾತ್ರವಲ್ಲದೆ 65 ° C ವರೆಗೆ ಬೆಚ್ಚಗಾಗಲು ಹಾಗೂ 5 ° C ಗೆ ತಣ್ಣಗಾಗಲು ಇದು ಅವಕಾಶ ನೀಡುತ್ತದೆ. ಈ ಮೂಲಕ ಪಾನೀಯಗಳು, ತಿಂಡಿಗಳು ಮತ್ತು ಊಟಗಳಿಗೆ ಇದನ್ನು ಬಳಕೆ ಮಾಡಿಕೊಳ್ಳಬಹುದು.


Click it and Unblock the Notifications








