ಸೊಳ್ಳೆಗಳ ಕಾಟವೇ? ಚಿಂತೆ ಬೇಡ ಈ ಡಿವೈಸ್ ಬಳಿ ಬಂದು ತಾವಾಗೇ ಸಾಯುತ್ತವೆ!
ಮಳೆಗಾಲ ಆರಂಭ ಆದರೆ ಹಲವು ಪ್ರಯೋಜನಗಳ ಜೊತೆಗೆ ಸಮಸ್ಯೆಗಳು ಸಹ ಎದುರಾಗುತ್ತವೆ. ಈ ನಡುವೆ ಸೊಳ್ಳೆಗಳ ಆರ್ಭಟ ಸಹ ಜೋರಾಗುತ್ತದೆ. ಇದರಿಂದಾಗಿ ಕೆಲವರಿಗೆ ಕಾಯಿಲೆಗಳು ಬಂದರೆ ಇನ್ನೂ ಕೆಲವರು ನಿದ್ದೆ ಇಲ್ಲದೆ ತೊಂದರೆ ಅನುಭವಿಸುತ್ತಾರೆ. ಆದರೆ, ಈ ಡಿವೈಸ್‌ಗಳು ನಿಮ್ಮ ಮನೆಯಲ್ಲಿ ಇರುವ ಸೊಳ್ಳೆಗಳು ತಾವಾಗಿಯೇ ಬಂದು ಸಾಯುವಂತೆ ಮಾಡುತ್ತದೆ.
ಹೌದು, ಮಳೆಗಾಲ ಆರಂಭ ಆದರೆ ಸೊಳ್ಳೆಯ ಸಂಖ್ಯೆ ಸಹ ಜಾಸ್ತಿ ಆಗುತ್ತದೆ. ಈ ಸೊಳ್ಳೆಗಳ ನಿಯಂತ್ರಣಕ್ಕೆ ಸಾಮಾನ್ಯವಾಗಿ ಮನೆಯಲ್ಲಿ ಸೊಳ್ಳೆ ಬ್ಯಾಟ್, ಸೊಳ್ಳೆ ಭತ್ತಿ ಸೇರಿದಂತೆ ಅನೇಕ ಟೂಲ್ಸ್‌ಗಳು ಸಿದ್ಧ ಆಗಿರುತ್ತದೆ. ಆದರೆ, ಇವೆಲ್ಲವೂ ಮನೆಯಲ್ಲಿನ ಸಂಪೂರ್ಣ ಸೊಳ್ಳೆಗಳನ್ನು ನಾಶ ಮಾಡಲು ಸಾಧ್ಯ ಆಗುವುದಿಲ್ಲ. ಈ ಕಾರಣಕ್ಕೆ ನಾವಿಂದು ವಿಶೇಷ ಡಿವೈಸ್ ಬಗ್ಗೆ ತಿಳಿಸಿಕೊಡಲಿದ್ದೇವೆ. ಹಾಗಿದ್ರೆ ಬನ್ನಿ ಇವು ಸೊಳ್ಳೆಗಳ ವಿರುದ್ಧ ಹೇಗೆ ಹೋರಾಡುತ್ತವೆ ? ಇವುಗಳ ಬೆಲೆ ಎಷ್ಟು? ಎಂಬ ಮಾಹಿತಿ ತಿಳಿಯೋಣ.

ಇನ್ಸೆಕ್ಟ್ ಕಿಲ್ಲರ್ ಮೆಷಿನ್ : ಮೊದಲೇ ತಿಳಿಸಿದಂತೆ ಸೊಳ್ಳೆಗಳನ್ನು ಕೊಲ್ಲಲು ಮನೆಯಲ್ಲಿ ಹಲವಾರು ಟೂಲ್ಸ್ ಇರಬಹುದು. ಆದರೆ, ಇವು ಸೊಳ್ಳೆಗಳ ಜೊತೆಗೆ ನಿಮ್ಮನ್ನೂ ಸಂಕಷ್ಟಕ್ಕೆ ಈಡು ಮಾಡುತ್ತವೆ. ಯಾಕೆಂದರೆ ಸೊಳ್ಳೆ ಬ್ಯಾಟ್‌ನಿಂದ ಹಾಗೂ ಸೊಳ್ಳೆ ಭತ್ತಿಯಿಂದ ಬರುವ ಹೊಗೆಯ ವಾಸನೆ ನಿಮ್ಮನ್ನು ಖಂಡಿತಾ ಕಾಡುತ್ತದೆ. ಆದರೆ, ಈ ಸೊಳ್ಳೆ ಕಿಲ್ಲರ್ ಡಿವೈಸ್‌ಗಳು ಪರಿಸರ ಸ್ನೇಹಿ ಆಗಿದ್ದು, ಬಳಕೆದಾರರಿಗೆ ಕಿಂಚಿತ್ತೂ ಸಮಸ್ಯೆ ಉಂಟು ಮಾಡುವುದಿಲ್ಲ.
ಸೊಳ್ಳೆಗಳೇ ಬಂದು ಸಾಯುತ್ತವೆ..: ಈ ಡಿವೈಸ್‌ಗಳ ಪ್ರಮುಖ ವಿಶೇಷತೆ ಏನೆಂದರೆ ಸೊಳ್ಳೆಗಳು ಈ ಡಿವೈಸ್‌ನಿಂದ ತಪ್ಪಿಸಿಕೊಂಡು ಹೋಗುವುದಿಲ್ಲ. ಬದಲಾಗಿ ಸೊಳ್ಳೆಗಳೇ ಈ ಡಿವೈಸ್ ಹತ್ತಿರ ಬಂದು ಸಾಯುತ್ತವೆ. ಮೊದಲೇ ತಿಳಿಸಿದಂತೆ ಇದು ಪರಿಸರ ಸ್ನೇಹಿಯಾಗಿದ್ದು, ಡಿವೈಸ್‌ನಲ್ಲಿ ಯಾವುದೇ ದ್ರವ ಮತ್ತು ಸುರುಳಿಯನ್ನು ಬಳಕೆ ಮಾಡಿಲ್ಲ. ಇದರಿಂದ ಗಾಳಿಯಲ್ಲಿ ವಾಸನೆ ಬರುವುದಿಲ್ಲ.
ಇವು ಹೇಗೆ ಕೆಲಸ ಮಾಡುತ್ತದೆ?: ಈ ಯಂತ್ರಗಳು ಪೋರ್ಟಬಲ್ ಆಗಿದ್ದು, ನೀವು ಇದನ್ನು ಎಲ್ಲಿಗೆ ಬೇಕಾದರೂ ಸಹ ತೆಗೆದುಕೊಂಡು ಹೋಗಬಹುದು. ಹಾಗೆಯೇ ಇವುಗಳಲ್ಲಿ ಎಲ್ಇಡಿ ಲೈಟ್ ಆಯ್ಕೆ ನೀಡಲಾಗಿದ್ದು, ಇವು ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಸೊಳ್ಳೆಗಳು ಈ ಯಂತ್ರದ ಕಡೆಗೆ ಬಂದಾಗ ನೇರಳಾತೀತ ಬೆಳಕಿನ ತರಂಗದಿಂದಾಗಿ ಯಂತ್ರದೊಳಗೆ ಸಾವಿಗೀಡಾಗುತ್ತವೆ. ಇದಾದ ನಂತರದಲ್ಲಿ ಅಂದರೆ ಯಾವಾಗ ಬೇಕೋ ಅವಾಗ ಡಿವೈಸ್‌ನಲ್ಲಿನ ಮುಚ್ಚಳ ತೆಗೆದು ಸತ್ತ ಸೊಳ್ಳೆಗಳನ್ನು ಹೊರಹಾಕಬಹುದು.
ಇದನ್ನು ಪ್ರಮುಖವಾಗಿ ಒಳಾಂಗಣ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಡಿವೈಸ್‌ಗಳನ್ನು ಅನ್ನು ಪ್ಲಗ್ ಇನ್ ಮಾಡಿ ಬಳಿ ಬಟನ್ ಒತ್ತಿದರೆ ಸಾಕು. ಹೀಗೆ ಮಾಡುವುದರಿಂದ ಯಂತ್ರವು ಸ್ಟಾರ್ಟ್ ಆಗಿ ಸೊಳ್ಳೆಗಳ ವಿರುದ್ಧ ದೊಡ್ಡ ಸಮರವನ್ನೇ ಸಾರಿಬಿಡುತ್ತವೆ. ಇದರಿಂದಾಗಿ ಮಲೇರಿಯಾ ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಮುಕ್ತಿ ಹಾಡಬಹುದು. ಅದರಲ್ಲೂ ಮಕ್ಕಳಿರುವ ಮನೆಗೆ ಈ ಡಿವೈಸ್‌ಗಳು ಹಲವಾರು ರೀತಿಯಲ್ಲಿ ಪ್ರಯೋಜನ ನೀಡುತ್ತದೆ.
ಈ ಡಿವೈಸ್‌ಗಳ ಬೆಲೆ ಹಾಗೂ ಲಭ್ಯತೆ: ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್‌ಗಳು ಲಭ್ಯ ಇದ್ದು, ಅದರಲ್ಲಿ ಪ್ರಮುಖವಾಗಿ 20w ಎಲೆಕ್ಟ್ರಿಕ್ ಇನ್ಸೆಕ್ಟ್ ಕಿಲ್ಲರ್ ಮೆಷಿನ್ 2,849ರೂ.ಗಳ ಆಫರ್ ಬೆಲೆಗೆ ಲಭ್ಯ ಇದ್ದರೆ, ಅಮೆಜಾನ್‌ನಲ್ಲಿ VOZICA ಕಿಲ್ಲರ್ ಮೆಷಿನ್ ಬಗ್ ಝಾಪರ್ 1,699ರೂ.ಗಳ ಬೆಲೆ ಹೊಂದಿದೆ. ಜೊತೆಗೆ COROID ಇಲೆಕ್ಟ್ರಾನಿಕ್ ಲೆಡ್ ಸಹ 1,699ರೂ.ಗಳ ಬೆಲೆ ಪಡೆದಿದೆ.

ಇದಿಷ್ಟೇ ಅಲ್ಲದೆ ಇನ್ನೂ ಹಲವಾರು ಕಂಪೆನಿಯ ಡಿವೈಸ್‌ಗಳು ಈ ಇ-ಕಾಮರ್ಸ್ ಸೈಟ್‌ಗಳಲ್ಲಿ ಲಭ್ಯ ಇದ್ದು, ಬಳಕೆದಾರರು ಎಲ್ಲಿ ಬಳಕೆ ಮಾಡುತ್ತಾರೆ ಹಾಗೂ ಎಷ್ಟು ವ್ಯಾಟ್‌ನ ಡಿವೈಸ್ ಅಗತ್ಯ ಎಂದು ನಿರ್ಧರಿಸಿಕೊಂಡು ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅದರಲ್ಲೂ ಕೆಲವು ಡಿವೈಸ್‌ಗಳು ರೀಚಾರ್ಜಬಲ್ ಬ್ಯಾಟರಿ ಆಯ್ಕೆ ಸಹ ಪಡೆದುಕೊಂಡಿದ್ದು, ಇದರಿಂದ ಬಳಕೆದಾರರಿಗೆ ಇನ್ನಷ್ಟು ಸಹಕಾರಿ ಆಗಲಿವೆ.


Click it and Unblock the Notifications








