ಜಿಯೋದ ಈ ಹೊಸ ಪ್ಲ್ಯಾನಿನಲ್ಲಿ ಸಕತ್ ಸೌಲಭ್ಯ!..ಬೆಲೆ ಕೇಳಿದ್ರೆ ನೀವು ದಂಗಾಗ್ತೀರಾ!
ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಜಿಯೋ, ಚಂದಾದಾರರನ್ನು ಸೆಳೆಯಲು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅದೇ ಹಾದಿಯಲ್ಲಿ ಮುಂದೆ ಸಾಗಿರುವ ಜಿಯೋ ಇದೀಗ ಮತ್ತೆ ದೀರ್ಘಾವಧಿ ಪ್ರೀಪೇಯ್ಡ್ ಯೋಜನೆಗಳ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಿದೆ. ಆ ಪೈಕಿ ವಾರ್ಷಿಕ ವ್ಯಾಲಿಡಿಟಿ ಸೌಲಭ್ಯ ಒಂದು ಪ್ಲ್ಯಾನ್ ಹೈ ಎಂಡ್ ಪ್ರೈಸ್ ಪಡೆದಿದ್ದು, ಅಚ್ಚರಿ ಮೂಡಿಸಿದೆ.
ಹೌದು, ಜಿಯೋ ಟೆಲಿಕಾಂನ ಇತ್ತೀಚಿನ ಹೊಸ ಪ್ಲ್ಯಾನ್‌ಗಳಲ್ಲಿ ಜಿಯೋ 4498ರೂ. ಪ್ರೀಪೇಯ್ಡ್ ಪ್ಲ್ಯಾನ್ ಬೆಲೆಯಿಂದ ಹಾಗೂ ಪ್ರಯೋಜನಗಳಿಂದ ಆಕರ್ಷಕ ಎನಿಸಿದೆ. ಈ ಯೋಜನೆಯು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, ದೈನಂದಿನ ಡೇಟಾ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಹೊಂದಿದೆ.

ಇದರೊಂದಿಗೆ ಈ ಪ್ರೀಪೇಯ್ಡ್ ಯೋಜನೆಯು ಒಟ್ಟು 14 ಓಟಿಟಿ ಚಂದಾದಾರಿಕೆಯ ಪ್ರಯೋಜನ ಒಳಗೊಂಡಿರುವುದು ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದು. ಇನ್ನು ಈ ಪ್ಲ್ಯಾನ್ ಜಿಯೋ ಆಪ್ಸ್‌ಗಳ ಪ್ರಯೋಜನಗಳನ್ನು ಕೂಡಾ ಪಡೆದಿದೆ. ಹಾಗಾದರೇ ಜಿಯೋ 4498ರೂ. ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳಲು ಉತ್ತಮವೇ?..ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಜಿಯೋ 4498ರೂ. ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಲಿಸ್ಟ್‌ನಲ್ಲೇ ಇದು ಅತ್ಯಂತ ದುಬಾರಿ ಯೋಜನೆ ಆಗಿದೆ. ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯ ಆಗಲಿದ್ದು, ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಗ್ರಾಹಕರಿಗೆ ಸಿಗಲಿದೆ.

ಅಲ್ಲದೇ ಈ ಯೋಜನೆಯು ಡಿಸ್ನಿ+ ಹಾಟ್ ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೋ, ಜೀ5, ಸೋನಿ ಲೈವ್, ಸನ್ ನೆಕ್ಸ್ಟ್, ಡಿಸ್ಕವರಿ+, ಜಿಯೋ ಸಿನಿಮಾಸ್ ಸೇರಿದಂತೆ ಒಟ್ಟು 14 ಜನಪ್ರಿಯ ಓಟಿಟಿ ಚಂದಾದಾರಿಕೆಯ ಪ್ರಯೋಜನ ಒಳಗೊಂಡಿದೆ. ಅಂದಹಾಗೆ ಈ ಯೋಜನೆಯಲ್ಲಿ ಒಟ್ಟಾರೇ 730GB ಡೇಟಾ ಪ್ರಯೋಜನ ಲಭ್ಯವಾಗಲಿದೆ.
ಜಿಯೋ 3662ರೂ. ಯೋಜನೆ
ಜಿಯೋದ 3662ರೂ. ಯೋಜನೆ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯದ ಜೊತೆಗೆ ನಿತ್ಯವು 2.5GB ಡೇಟಾ ಪ್ರಯೋಜನ ನೀಡುತ್ತದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ Sony LIV ಮತ್ತು ZEE5 ಓಟಿಟಿ ಚಂದಾದಾರಿಕೆ ಸಹ ದೊರೆಯಲಿದೆ. ಅಲ್ಲದೇ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್ ಸಹ ಪಡೆದಿದೆ.

ಜಿಯೋ 3226ರೂ. ಯೋಜನೆ
ಜಿಯೋ ಸಂಸ್ಥೆಯ 3226ರೂ. ಯೋಜನೆ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯದ ಜೊತೆಗೆ ದೈನಂದಿನ 2GB ಡೇಟಾ ಪ್ರಯೋಜನ ಒದಗಿಸುತ್ತದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ Sony LIV ಓಟಿಟಿ ಚಂದಾದಾರಿಕೆ ಸಹ ದೊರೆಯಲಿದೆ.
ಜಿಯೋ 3225ರೂ. ಯೋಜನೆ
ಜಿಯೋದ 3225ರೂ. ಯೋಜನೆ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯದ ಜೊತೆಗೆ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ, ಅನಿಯಮಿತ 5G ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದರೊಂದಿಗೆ ZEE5 ಓಟಿಟಿ ಚಂದಾದಾರಿಕೆ ಸಹ ದೊರೆಯಲಿದೆ. ಅಲ್ಲದೇ ಜಿಯೋಟಿವಿ, ಜಿಯೋಸಿನಿಮಾ ಹಾಗೂ ಜಿಯೋಕ್ಲೌಡ್ ಸಹ ಪಡೆದಿದೆ.


Click it and Unblock the Notifications








