Home
ಸುದ್ದಿಜಾಲ

ಈ ಎಂಟ್ರಿ ಲೆವೆಲ್ ಫೋನ್‌ ಈಗ ಮತ್ತಷ್ಟು ಅಗ್ಗದ ಬೆಲೆಗೆ ಲಭ್ಯ; ಬೆಸ್ಟ್‌ ಆಫರ್‌!

ಲೀಡಿಂಗ್ ಮೊಬೈಲ್‌ ಬ್ರ್ಯಾಂಡ್‌ಗಳ ಪೈಕಿ ರೆಡ್ಮಿ ಪ್ರಮುಖವಾಗಿ ಕಾಣಿಸಿಕೊಂಡಿದೆ. ಈ ಕಂಪನಿಯು ಎಂಟ್ರಿ ಲೆವೆಲ್‌ ಹಾಗೂ ಬಜೆಟ್‌ ಬೆಲೆಯಲ್ಲಿ ಹಲವು ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಇನ್ನು ರೆಡ್ಮಿಸಂಸ್ಥೆಯ ಎಂಟ್ರಿ ಲೆವೆಲ್‌ ಫೋನ್‌ಗಳ ಪೈಕಿ ರೆಡ್ಮಿ A2 ಫೋನ್‌ ಕೂಡಾ ಒಂದಾಗಿದ್ದು, ಇದು ಆಕರ್ಷಕ ಡಿಸೈನ್‌ ಹಾಗೂ ಕೆಲವು ಆಕರ್ಷಕ ಫೀಚರ್ಸ್‌ ಮೂಲಕ ವಾವ್‌ ಎನಿಸುವಂತಿದೆ. ಸದ್ಯ ರೆಡ್ಮಿ ವೆಬ್‌ಸೈಟ್‌ನಲ್ಲಿ ರೆಡ್ಮಿ A2 ಫೋನ್‌ ಭರ್ಜರಿ ರಿಯಾಯಿತಿ ಪಡೆದಿದೆ.

ಹೌದು, ರೆಡ್ಮಿ ವೆಬ್‌ಸೈಟ್‌ ನಲ್ಲಿ ರೆಡ್ಮಿ A2 ಮೊಬೈಲ್‌ ಆಕರ್ಷಕ ರಿಯಾಯಿತಿ ಪಡೆದುಕೊಂಡಿದೆ. ಈ ಫೋನಿನ 2 GB RAM + 32 GB ಸ್ಟೋರೇಜ್ ವೇರಿಯಂಟ್‌ 5,999ರೂ. ಗಳ ಆಫರ್‌ ಬೆಲೆ ಖರೀದಿಗೆ ಲಭ್ಯ ಇದೆ. ಇನ್ನು ಈ ಫೋನ್‌ 2GB + 32GB, 2GB + 64GB ಹಾಗೂ 4GB RAM + 64GB ಸ್ಟೋರೇಜ್ ವೇರಿಯಂಟ್‌ ಆಯ್ಕೆಯಲ್ಲಿಯೂ ಖರೀದಿಗೆ ಲಭ್ಯ.

ಈ ಎಂಟ್ರಿ ಲೆವೆಲ್ ಫೋನ್‌ ಈಗ ಮತ್ತಷ್ಟು ಅಗ್ಗದ ಬೆಲೆಗೆ ಲಭ್ಯ; ಬೆಸ್ಟ್‌ ಆಫರ್‌!

ಅಂದಹಾಗೆ ಈ ಫೋನ್ ಮೀಡಿಯಾ ಟೆಕ್‌ ಹಿಲಿಯೋ G36 SoC ಪ್ರೊಸೆಸರ್‌ನಲ್ಲಿ ಪವರ್ ಅನ್ನು ಪಡೆದ್ದು, ಸಿಂಗಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರೊಂದಿಗೆ ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಹಾಗಾದರೆ ರೆಡ್ಮಿ A2 ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ A2 ಮೊಬೈಲ್‌ ಫೀಚರ್ಸ್‌

ರೆಡ್ಮಿ A2 ಮೊಬೈಲ್‌ 6.52 ಇಂಚಿನ IPS LCD ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಈ ಡಿಸ್‌ಪ್ಲೇ 1600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದ್ದು, 20:9 ರಚನೆಯ ಅನುಪಾತವನ್ನು ಪಡೆದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಮತ್ತು 120Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಪಡೆದುಕೊಂಡಿದೆ. ಇದರೊಂದಿಗೆ 400 ನಿಟ್ಸ್ ಬ್ರೈಟ್‌ನೆಸ್ ಅನ್ನು ನೀಡುತ್ತದೆ.

ರೆಡ್ಮಿ A2 ಮೊಬೈಲ್‌ ಮೀಡಿಯಾ ಟೆಕ್‌ ಹಿಲಿಯೋ G36 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದರ ಜೊತೆಗೆ 2 GB RAM + 64 GB ಹಾಗೂ 4GB RAM ಮತ್ತು 64GB ಆಂತರೀಕ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಎಸ್‌ಡಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ಹೆಚ್ಚಿಗೆ ಮಾಡಲು ಅವಕಾಶವನ್ನು ಕೂಡ ನೀಡಲಾಗಿದೆ. ಅಂದಹಾಗೆ ಈ ಎಂಟ್ರಿ ಲೆವೆಲ್‌ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. 5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ರೆಡ್ಮಿ A2 ಫೋನ್‌ 10W ಚಾರ್ಜಿಂಗ್ ಸಪೋರ್ಟ್‌ ಪಡೆದಿದ್ದು, ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್, ಎಫ್‌ಎಂ ರೇಡಿಯೋ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸಹ ಪಡೆದಿದೆ. ಇದರೊಂದಿಗೆ ರೆಡ್ಮಿ A2 ಪ್ಲಸ್‌ ಸ್ಮಾರ್ಟ್‌ಫೋನ್‌ ಹೆಚ್ಚುವರಿಯಾಗಿ ರಿಯರ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಕಾಣಬಹುದಾಗಿದೆ.

ರೆಡ್ಮಿ A2 ಫೋನ್‌ ಮೂರು ವೇರಿಯಂಟ್‌ ಮಾಡೆಲ್‌ಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಅವುಗಳು ಕ್ರಮವಾಗಿ 2GB + 32GB, 2GB + 64GB ಹಾಗೂ 4GB RAM + 64GB ಸ್ಟೋರೇಜ್ ವೇರಿಯಂಟ್‌ ಸಾಮರ್ಥ್ಯದಲ್ಲಿ ಇವೆ. ಇನ್ನು ಗ್ರಾಹಕರು ಈ ಫೋನ್‌ ಬ್ಲ್ಯಾಕ್‌, ಬ್ಲೂ, ಗ್ರೀನ್‌ ಕಲರ್‌ ಆಯ್ಕೆಯಲ್ಲಿ ಖರೀದಿ ಮಾಡಬಹುದು.

Best Mobiles in India

English summary
This Redmi A2 Entry Level Smartphone now available at Rs 5,999. Check offer price, features and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+