Just In
- 16 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 17 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 18 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 20 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Movies
Breaking: ಕನ್ನಡ ಚಲನಚಿತ್ರರಂಗದ ಹಿರಿಯ ನಟ ಮನ್ದೀಪ್ ರಾಯ್ ನಿಧನ
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
32 ವರ್ಷ ಕಳೆದರೂ ಅಯ್ಯಪ್ಪನಿಗೆ ಆರತಿ ಬೆಳಗುತ್ತಿದೆ ಭಾರತದ ಮೊದಲ ರೋಬೋ!!
1987 ರಲ್ಲೇ ಭಾರತೀಯನಿಂದ ತಯಾರಾದ ರೋಬೋಟ್ ಒಂದು ಈಗಲೂ ದೇವರಿಗೆ ಆರತಿ ಬೆಳಗುತ್ತಾ ಕಾರ್ಯನಿರ್ವಹಿಸುತ್ತಿದೆ ಎಂಬ ಸುದ್ದಿಯನ್ನು ನಾನೂ ಒಮ್ಮೆ ಕಣ್ಣರಳಿಸಿ ನೋಡಿದೆ. ಆದರೆ, ಈ ಸುದ್ದಿ ನಿಜ ಎಂದು ತಿಳಿದ ತಕ್ಷಣವೇ ನಾನೂ ಕೂಡ ದಂಗಾಗಿ ಹೋದೆ.! ಹೌದು, ಭಾರತದ ಮೊಟ್ಟ ಮೊದಲ ಸ್ವಾಯತ್ತ ರೋಬೋ ತಯಾರಿಸಿ 32 ವರ್ಷಗಳು ಕಳೆದಿದ್ದರೂ ಕೇರಳದಲ್ಲಿ ಈಗಲೂ ಅಯ್ಯಪ್ಪ ವಿಗ್ರಹಕ್ಕೆ ಆರತಿ, ಪೂಜೆ ಮಾಡುತ್ತಿರುವ ಸುದ್ದಿ ಇದೀಗ ಹೊರಬಿದ್ದಿದೆ.!
1987 ರಲ್ಲಿ ವಿಎಸ್ ಸಾಬು ಎಂಬುವವರು ತಯಾರಿಸಿದ ಈ ವಿಶೇಷ ರೋಬೋ ಈಗಲೂ ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 32 ವರ್ಷ ಕಳೆದರೂ ಅಯ್ಯಪ್ಪನಿಗೆ ಆರತಿ ಬೆಳಗುತ್ತಿರುವ ಸುದ್ದಿ ಮಾಧ್ಯಮಗಳಿಂದ ವೈರಲ್ ಆಗಿದೆ. 1987 ರಲ್ಲಿ ಆರ್ & ಡಿ ಪ್ರಯೋಗಾಲಯದಲ್ಲಿ ವಿಎಸ್ ಸಾಬು ಎಂಬುವವರು ಅಭಿವೃದ್ಧಿಪಡಿಸಿದ್ದ ಶೈಕ್ಷಣಿಕ ಉದ್ದೇಶಗಳಿಗಾಗಿ ದೇಶದ ಮೊದಲ ಸ್ವಾಯತ್ತ ರೋಬೋಟ್ ಈಗ ದೇವರ ವಿಗ್ರಹಕ್ಕೆ ಹಾರ ಹಾಕುವುದು ಸೇರಿದಂತೆ ಬಹುತೇಕ ಕೆಲಸಗಳನ್ನು ನಿರ್ವಹಿಸುತ್ತಿದೆ.

ಎಲೆಕ್ಟಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಮಾಡಿರುವ ವಿಎಸ್ ಸಾಬು ಅವರು 1987 ರಲ್ಲಿ ಸುಮಾರು 40 ಕೆ. ಜಿ ತೂಕವಿರುವ ಈ ರೋಬೋಟ್ ಅನ್ನು ಕೇವಲ ಸ್ಕ್ರಾಪ್ ಹಾಗೂ ಇತರ ವಸ್ತುಗಳನ್ನು ಬಳಸಿ ತಯಾರಿಸಿದ್ದರು. 8-ಬಿಟ್ ಮೈಕ್ರೋ ಪ್ರೊಸೆಸರ್, 5 ಮೋಟರ್‌ಗಳನ್ನು ಬಳಕೆ ಮಾಡಿ ತಯಾರಿಸಲಾಗಿದ್ದ ಈ ಶೇ.98 ರಷ್ಟು ನಿಖರತೆ ಹೊಂದಿದ್ದು, ಈಗ ದೇವರ ವಿಗ್ರಹಕ್ಕೆ ಹಾರ ಹಾಕುವುದು ಸೇರಿದಂತೆ ಬಹುತೇಕ ಕೆಲಸಗಳನ್ನು ನಿರ್ವಹಿಸುತ್ತಿದೆ ಎಂದು ವಿಎಸ್ ಸಾಬು ಅವರು ತಿಳಿಸಿದ್ದಾರೆ.
ಈ ರೋಬೋಟ್ ಅನ್ನು ಧಾರ್ಮಿಕ ಬಳಕೆಗಾಗಿ, ವಾಣಿಜ್ಯ ಉದ್ದೇಶಗಳಿಗೆ ಬಳಸುವ ಯೋಚನೆ ನನಗೆ ಇರಲಿಲ್ಲ. ಅಂದು ಆರ್ & ಡಿ ಪ್ರಯೋಗಾಲಯದಲ್ಲಿ ಶೈಕ್ಷಣಿಕ ಉದ್ದೇಶಗಳಿಗಾಗಿ ಮೊದಲ ಸ್ವಾಯತ್ತ ರೋಬೋಟ್ ಅನ್ನು ಅಭಿವೃದ್ಧಿಪಡಿಸಲಾಗಿತ್ತು. ಆಗ ಈ ರೋಬೋ ಆವಿಷ್ಕಾರವನ್ನು ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರ ಕಚೇರಿ ಮತ್ತು ಕೇರಳದ ಶಿಕ್ಷಣ ಇಲಾಖೆ ಕೂಡ ಶ್ಲಾಘಿಸಿತ್ತು. ಅಂದು ತಯಾರಾದ ರೋಬೋ ಇದೀಗಲೂ ಕೆಲಸ ನಿರ್ವಹಿಸುತ್ತಿರುವುದು ಖುಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಓದಿರಿ: ಮನೆಯಲ್ಲಿ ನೆಟ್‌ವರ್ಕ್ ಸರಿಯಾಗಿ ಸಿಗುತ್ತಿಲ್ಲವೇ? ಇಲ್ಲಿದೆ ಪರಿಹಾರ!!
32 ವರ್ಷ ಕಳೆದರೂ ಅಯ್ಯಪ್ಪನಿಗೆ ಆರತಿ ಬೆಳಗುತ್ತಿರುವ ಭಾರತದ ಮೊದಲ ಸ್ವಾಯತ್ತ ರೋಬೋ ಅನ್ನು ಮ್ಯಾನುಯಲ್ ಆಗಿಯೂ ನಿಯಂತ್ರಿಸಬಹುದಾಗಿದೆ. 150 ವ್ಯಾಟ್ ಗಳಷ್ಟು ವಿದ್ಯುತ್ ಶಕ್ತಿಯಿಂದ ಚಾಲನೆ ಮಾಡಬಹುದಾದ 1.5 ಕಿಲೋಗ್ರಾಂಗಳಷ್ಟು ಲೋಡ್ ಸಾಮರ್ಥ್ಯದ ಓ ರೊಬೋ ಶೇ.98 ರಷ್ಟು ನಿಖರತೆ ಹೊಂದಿದೆ. ಬರೋಬ್ಬರಿ ಮೂರು ಶತಮಾನಗಳ ಹಿಂದೆ ತಯಾರಾಗಿ ಕೇರಳದಲ್ಲಿ ಈಗಲೂ ಅಯ್ಯಪ್ಪ ವಿಗ್ರಹಕ್ಕೆ ಆರತಿ, ಪೂಜೆ ಮಾಡುವ ಮೂಲಕ ಎಲ್ಲರನ್ನು ಮಂತ್ರಮುಗ್ದಗೊಳಿಸಿದೆ.
ಓದಿರಿ: ಮೊಬೈಲ್‌ನಲ್ಲಿ ಪೋರ್ನ್ ವೀಕ್ಷಿಸುವವರಿಗೆ ಶಾಕಿಂಗ್ ಸುದ್ದಿ!..ಗಾಬರಿ ಹುಟ್ಟಿಸುತ್ತಿದೆ ವರದಿ!!
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470