Subscribe to Gizbot

ಮನೆಯಲ್ಲಿ ನೆಟ್‌ವರ್ಕ್‌ ಸರಿಯಾಗಿ ಸಿಗುತ್ತಿಲ್ಲವೇ? ಇಲ್ಲಿದೆ ಪರಿಹಾರ!!

Written By:

ಕೆಲವು ಪ್ರದೇಶಗಳಲ್ಲಿ ಸರಿಯಾಗಿ ಮೊಬೈಲ್ ನೆಟ್‌ವರ್ಕ್‌/ಸಿಗ್ನಲ್‌ ಸಿಗದೇ ಇರುವುದು ಸಾಮಾನ್ಯ. ಟೆಲಿಕಾಂ ಕಂಪೆನಿಗಳ ಸೇವೆ ಎಲ್ಲೆಡೇಯೂ ತಲುಪಲು ಸಾಧ್ಯವಾಗುವುದು ಬಹಳ ಕಷ್ಟವೇ ಸರಿ. ಏಕೆಂದರೇ ಎಲ್ಲೆಡೆ ನೆಟ್‌ವರ್ಕ್ ಸ್ಥಾಪನೆಯ ಕಾರ್ಯ ಅಷ್ಟು ಸುಲಭವಾದುದಲ್ಲ.!!

ಓದಿರಿ: ಜಿಯೋ ಧನ್ ಧನಾ ಧನ್‌ಗೆ ಸೆಡ್ಡು..ಯಾವ ಯಾವ ಕಂಪೆನಿಗಳಿಂದ ಏನೆಲ್ಲಾ ಆಫರ್?

ಹಾಗಾಗಿ, ಗುಡ್ಡಗಾಡು ಪ್ರದೇಶ, ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ನೆಟ್‌ವರ್ಕ್‌ ಸಿಗುವುದಿಲ್ಲ. ಇನ್ನು ಪ್ರಯಾಣಿಸುವಾಗಲೂ ಸಹ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ. ಯಾವುದೇ ಪ್ರದೇಶದಲ್ಲಿ ಸರಿಯಾಗಿ ಸಿಗ್ನಲ್‌ ಸಿಗುತ್ತಿಲ್ಲವಾದಲ್ಲಿ ನಾವು ಮಾಡಬಹುದಾದ ಸರಳ ಕಾರ್ಯಗಳು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1.ಸ್ಪೆಕ್ಟ್ರಮ್ ಬದಲಾಯಿಸಿ.!!

1.ಸ್ಪೆಕ್ಟ್ರಮ್ ಬದಲಾಯಿಸಿ.!!

ಟೆಲಿಕಾಂನಲ್ಲಿ 4ಜಿ, 3ಜಿ ಮತ್ತು 2ಜಿ ನೆಟ್‌ವರ್ಕ್, ಬೇರೆ ಬೇರೆ ಸ್ಪೆಕ್ಟ್ರಮ್‌ಗಳಲ್ಲಿ ಕಾರ್ಯನಿರ್ವಹಣೆ ನೀಡುತ್ತವೆ. ಇವುಗಳಲ್ಲಿ 2ಜಿ ಸೇವೆ ಬಹುತೇಕ ಎಲ್ಲೆಡೆ ಲಭ್ಯವಿರುವುದರಿಂದ ಸ್ಮಾರ್ಟ್‌ಫೋನ್‌ನಲ್ಲಿ 2ಜಿ ಕನೆಕ್ಟಿವಿಟಿಗೆ ಬದಲಾದರೆ ಹೆಚ್ಚು ನೆಟ್‌ವರ್ಕ್ ಸಿಗುತ್ತದೆ.!!

2 ನಂಬರ್ ಫಾರ್ವಡ್ ಮಾಡಿ.!!

2 ನಂಬರ್ ಫಾರ್ವಡ್ ಮಾಡಿ.!!

ಬಹುತೇಕ ಎಲ್ಲರೂ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಉಪಯೋಗ ಮಾಡುತ್ತಿರುತ್ತಾರೆ. ಹಾಗಾಗಿ, ಒಂದು ಕಂಪೆನಿಯ ಸಿಗ್ನಲ್‌ ಸಿಗುತ್ತಿಲ್ಲವೆಂದಾದಲ್ಲಿ ಆ ನಂಬರ್‌ಗೆ ಬರಬೇಕಾದ ಎಲ್ಲಾ ಕರೆಗಳನ್ನು ನಿಮ್ಮದೇ ಮತ್ತೊಂದು ನಂಬರ್‌ಗೆ ಫಾರ್ವಡ್ ಮಾಡಿ.!! ಹೀಗೆ ಸಮಸ್ಯೆ ಬಗೆಹರಿಸಿಕೊಳ್ಳಿ.!!

3. ನೆಟ್‌ವರ್ಕ್ ರಿಸೀವರ್ ಖರೀದಿಸಿ.!!

3. ನೆಟ್‌ವರ್ಕ್ ರಿಸೀವರ್ ಖರೀದಿಸಿ.!!

ಪ್ರಯಾಣದ ವೇಳೆಯಲ್ಲಿ ಇದು ಉಪಯೋಗಕ್ಕೆ ಬರದಿದ್ದರೂ. ಮನೆಯ ಒಳಗೆ ನೆಟ್‌ವರ್ಕ್ ಸರಿಯಾಗಿ ಸಿಗುತ್ತಿಲ್ಲ ಎಂದರೆ ನೆಟ್‌ವರ್ಕ್ ರಿಸೀವರ್ ಬಹಳಷ್ಟು ಉಪಯೋಗಕಾರಿ.!! ಹಾಗಾಗಿ, ಮನೆಯಲ್ಲಿ ಉತ್ತಮ ಸಿಗ್ನಲ್‌ ಪಡೆಯಲು. ನೆಟ್‌ವರ್ಕ್ ರಿಸೀವರ್ ಖರೀದಿಸಿ.!!

4 ಮೊಬೈಲ್ ಕವರ್ ಸಹ ಪ್ರಾಬ್ಲಮ್!!

4 ಮೊಬೈಲ್ ಕವರ್ ಸಹ ಪ್ರಾಬ್ಲಮ್!!

ಹೌದು, ಮೊಬೈಲ್ ಮೇಲೆ ರಕ್ಷಣೆಗೆ ಹಾಕುವ ಕವರ್ ಸಹ ಸಿಗ್ನಲ್ ಪ್ರಾಬ್ಲಮ್ ತರುತ್ತದೆ. ಹಾಗಾಗಿ, ನೆಟ್‌ವರ್ಕ್ ಕ್ಷಿಣವಾಗಿರುವ ಪ್ರದೇಶದಲ್ಲಿ ಮೊಬೈಲ್ ಕವರ್ ತೆಗೆದು ಉಪಯೋಗಿಸಿರಿ.

ಏಪ್ರಿಲ್ 15ರ ನಂತರವೂ ಜಿಯೋ ಉಚಿತ ಸೇವೆ ಕೊನೆಯಾಗಿಲ್ಲ ಏಕೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
nothing is more essential to smartphones than cellular service. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot