Smart Bulb: ವಿದ್ಯುತ್ ಇಲ್ಲಾ ಅಂದ್ರೂ ಈ ಬಲ್ಬ್ 12 ಗಂಟೆ ಉರಿಯುತ್ತದೆ!
ಮನೆಯಲ್ಲಿ ಹಲವು ಡಿವೈಸ್‌ಗಳ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ವಿದ್ಯುತ್ ಬಿಲ್ ದರವೂ ಸಹ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ನಡುವೆ ಪ್ರಮುಖ ಸ್ಮಾರ್ಟ್ ಡಿವೈಸ್ ತಯಾರಿಕಾ ಸಂಸ್ಥೆಗಳು ವಿವಿಧ ರೀತಿಯ ಸ್ಮಾರ್ಟ್ ಬಲ್ಬ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಇವು ವಿದ್ಯುತ್ ಬಿಲ್ ಕಡಿಮೆ ಆಗಲು ಸಹಾಯ ಮಾಡುತ್ತಿವೆ. ಈ ನಡುವೆ ಹೊಸ ಸ್ಮಾರ್ಟ್ ಬಲ್ಬ್ ಅನ್ನು ಲಾಂಚ್ ಮಾಡಿದ್ದು, ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಸಿದೆ.
ಹೌದು, ಬಲ್ಬ್‌ಗಳು ಮನೆಗೆ ಬೆಳಕನ್ನು ನೀಡುವುದರ ಮೂಲಕ ಮನೆಯ ಅಂದವನ್ನೂ ಸಹ ಹೆಚ್ಚಿಗೆ ಮಾಡುತ್ತವೆ. ಆದರೆ, ಇತ್ತೀಚೆಗೆ ಲಾಂಚ್ ಆಗುತ್ತಿರುವ ಸ್ಮಾರ್ಟ್ ಬಲ್ಬ್‌ಗಳು ಮನೆಯ ಜನಮಾನನ ಹಣವನ್ನೂ ಸಹ ಉಳಿತಾಯ ಮಾಡುವ ಕೆಲಸ ಮಾಡುತ್ತಿವೆ. ಇದರ ಭಾಗವಾಗಿಯೇ ಹೊಸ ಬಲ್ಬ್ ಅನ್ನು ಲಾಂಚ್ ಮಾಡಲಾಗಿದ್ದು, ವಿದ್ಯುತ್ ಕಡಿತವಾದರೂ ಸಹ ಬರೋಬ್ಬರಿ 12 ಗಂಟೆಗಳ ವರೆಗೆ ಇದು ಬೆಳಕನ್ನು ನೀಡುತ್ತದೆ. ಹಾಗಿದ್ರೆ, ಯಾವುದು ಈ ಸ್ಮಾರ್ಟ್ ಬಲ್ಬ್, ಇದರ ಫೀಚರ್ಸ್ ಏನು, ಬೆಲೆ ಎಷ್ಟು ತಿಳಿಯೋಣ ಬನ್ನಿ.

ಇನ್ವರ್ಟರ್ ಬಲ್ಬ್ : ದೇಶದಲ್ಲಿ ಡಿಜಿಟಲ್ ಪ್ರಗತಿ ಹೆಚ್ಚಾಗುತ್ತಿದ್ದರೂ ಸಹ ಇನ್ನೂ ಕೆಲವೆಡೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಲಭ್ಯ ಆಗುತ್ತಿಲ್ಲ. ಹಲವೆಡೆ ವಿದ್ಯುತ್ ಕಡಿತದಿಂದ ವಿದ್ಯಾರ್ಥಿಗಳು, ಕಾರ್ಮಿಕರು ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಲ್ಲೂ ರಾತ್ರಿ ವಿದ್ಯುತ್ ಇಲ್ಲದೆ ಬದುಕುವುದು ತುಂಬಾ ಕಷ್ಟ. ಆದರೆ ಈ ಒಂದು ಇನ್ವರ್ಟರ್ ಬಲ್ಬ್ ಈ ಎಲ್ಲಾ ತೊಂದರೆಗಳಿಂದ ನಿಮ್ಮನ್ನು ಪಾರು ಮಾಡಲಿದೆ.
12 ಗಂಟೆಗಳ ವರೆಗೆ ಬೆಳಕು ನೀಡುತ್ತದೆ: ಈ ಸ್ಮಾರ್ಟ್ ಬಲ್ಬ್ 2200 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ನಿಮಗೆ 12 ಗಂಟೆಗಳ ವರೆಗೆ ಬೆಳಕು ನೀಡುತ್ತದೆ. ಅದೂ ಸಹ 12W ನಲ್ಲಿ. ಇನ್ನು ಈ ವಿಪ್ರೋ ನಿರ್ಮಿತ ಬಲ್ಬ್ ಬಹು ಬಣ್ಣದ ಆಯ್ಕೆಗಳಲ್ಲಿ ಕಾಣಿಸಿಕೊಂಡಿದ್ದು, ಈ ಬಲ್ಬ್‌ಗಳನ್ನು ಹಳ್ಳಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳಲ್ಲಿ ಸುಲಭವಾಗಿ ಬಳಕೆ ಮಾಡಬಹುದಾಗಿದೆ.

ಇನ್ವರ್ಟರ್ ಬಲ್ಬ್ ಬೆಲೆ: ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಈ ಬಲ್ಬ ಗೆ 990 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಆದರೆ, ಕೊಡುಗೆಯಾಗಿ 47 % ಡಿಸ್ಕೌಂಟ್ ಲಭ್ಯ ಆಗುತ್ತಿದ್ದು, ಇದರಿಂದ ಈ ಬಲ್ಬ್ ಬೆಲೆ 520 ರೂ.ಗಳಿಗೆ ಇಳಿಯುತ್ತದೆ. ಅದರಲ್ಲೂ ಅಮೆಜಾನ್‌ನಿಂದ ಈ ಇನ್ವರ್ಟರ್ ಬಲ್ಬ್‌ಗಳನ್ನು ಖರೀದಿಸಿದರೆ ಉಚಿತ ಡೆಲಿವರಿ, ಕ್ಯಾಶ್ ಆನ್ ಡೆಲಿವರಿ, 10 ದಿನಗಳ ರಿಟರ್ನ್ ಸೌಲಭ್ಯ ಮತ್ತು ಒಂದು ವರ್ಷದ ವಾರಂಟಿಯನ್ನು ಸಹ ಪಡೆಯುತ್ತೀರಿ.
ಇದರೊಂದಿಗೆ ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಇತರೆ ಸ್ಮಾರ್ಟ್‌ಬಲ್ಬ್‌ಗಳು ಸಹ ಲಭ್ಯ ವಿದ್ದು, ಅವುಗಳ ವಿವರವನ್ನೂ ತಿಳಿಯೋಣ. ಅದರಲ್ಲಿ ಪ್ರಮುಖವಾದುದು 12W ಇನ್ವರ್ಟರ್ ಬಲ್ಬ್ B22 D AC/DC LED ಬಲ್ಬ್: ಈ ಬಲ್ಬ್‌ನ ಮೂಲ ಬೆಲೆ 749ರೂ.ಗಳು. ಆದರೆ ನೀವು ಅದನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಶೇಕಡಾ 47 ರಷ್ಟು ರಿಯಾಯಿತಿ ಪಡೆಯುವ ಮೂಲಕ 399 ರೂ.ಗಳಿಗೆ ಖರೀದಿ ಮಾಡಬಹುದು. ಈ ಬಲ್ಬ್‌ನ 18 ವರ್ಷಗಳವರೆಗೆ ಬಾಳಿಕೆ ಬರುತ್ತದೆ. ವಿದ್ಯುತ್ ಇಲ್ಲದೆ 3 ಗಂಟೆಗಳ ಕಾಲ ಉರಿಯುತ್ತದೆ.

ಆರ್‌ಎಸ್‌ಸಿಟಿ 9 ವ್ಯಾಟ್ ಇನ್‌ವರ್ಟರ್ ಎಲ್‌ಇಡಿ ಬಲ್ಬ್: ಈ ಎಲ್‌ಇಡಿ ಬಲ್ಬ್‌ನ ಬೆಲೆ 399 ಆಗಿದ್ದು, ಪ್ರಮುಖ ಇ-ಕಾಮರ್ಸ್ ಸೈಟ್‌ಗಳ ಮೂಲಕ ಖರೀದಿ ಮಾಡಲು ಮುಂದಾದರೆ ಇದನ್ನು 250ರೂ.ಗಳಿಗೆ ನಿಮ್ಮದಾಗಿಸಿಕೊಳ್ಳಬಹುದು. ಅದರಂತೆ ಕಂಪನಿಯ ಪ್ರಕಾರ ಈ ಬಲ್ಬ್ ಸಹ ವಿದ್ಯುತ್ ಇಲ್ಲದೆ 3 ಗಂಟೆಗಳ ಬ್ಯಾಕಪ್ ಅನ್ನು ನೀಡುತ್ತದೆ. ಅದಾಗ್ಯೂ ಹೊಸದಾಗಿ ಲಾಂಚ್ ಆಗಿರುವ 12 ಗಂಟೆಗಳ ವರೆಗೆ ಬ್ಯಾಕಪ್ ನೀಡುವ ಬಲ್ಬ್ ಖಂಡಿತಾ ಮಾರುಕಟ್ಟೆಯಲ್ಲಿ ಬಿರುಗಾಳಿ ಉಂಟು ಮಾಡಲಿದೆ.


Click it and Unblock the Notifications








