ಈ ಸ್ಮಾರ್ಟ್‌ಫೋನ್ ಇದ್ರೆ, ಪವರ್‌ಬ್ಯಾಂಕ್ ಬೇಡವೇ ಬೇಡಾ!..94 ದಿನ ಬ್ಯಾಟರಿ ಬರುತ್ತೆ!
ಮೊಬೈಲ್ ಮಾರುಕಟ್ಟೆಗೆ ನಾನಾ ತರಹದ ಫೀಚರ್ಸ್‌ವುಳ್ಳ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿ ಆಗುತ್ತವೆ. ಹೊಸದಾಗಿ ಮಾರುಕಟ್ಟೆಗೆ ಲಾಂಚ್ ಆಗಿರುವ ಎನರ್ಜೈಸರ್ ಬ್ರಾಂಡ್‌ನ ಸ್ಮಾರ್ಟ್‌ಫೋನ್‌ವೊಂದು, ಸುಮಾರು 94 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯದ ಮೂಲಕ ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ.
ಹೌದು, ಎನರ್ಜೈಸರ್ ಬ್ರಾಂಡ್ ಹೊಸದಾಗಿ ಎನರ್ಜೈಸರ್ ಹಾರ್ಡ್ ಕೇಸ್ P28K ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 28,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಸುಮಾರು 2252 ಗಂಟೆಗಳ ವರೆಗೆ ಸ್ಟ್ಯಾಂಡ್ ಬೈ ಟೈಮ್ ಅನ್ನು ಪಡೆದಿದೆ ಎಂದು ವರದಿಯಾಗಿದೆ. ಅಲ್ಲದೇ 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಈ ಫೋನ್ ಪಡೆದುಕೊಂಡಿದೆ.

ಹಾಗೆಯೇ ಈ ಫೋನ್ 8GB RAM + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಒಳಗೊಂಡಿದ್ದು, 64 ಮೆಗಾ ಪಿಕ್ಸಲ್ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ IP69 ರೇಟಿಂಗ್ ಸೌಲಭ್ಯ ಒಳಗೊಂಡಿದ್ದು, ಮೀಡಿಯಾ ಟೆಕ್ MT6789 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಹಾಗಾದರೇ ಎನರ್ಜೈಸರ್ ಹಾರ್ಡ್ ಕೇಸ್ P28K ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಎನರ್ಜೈಸರ್ ಹಾರ್ಡ್ ಕೇಸ್ P28K - ಫೀಚರ್ಸ್
ಎನರ್ಜೈಸರ್ ಹಾರ್ಡ್ ಕೇಸ್ P28K ಮೊಬೈಲ್ 6.78 ಇಂಚಿನ IPS FHD ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ MT6789 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕೂಡಾ ಪಡೆದಿದೆ.

ಹಾಗೆಯೇ ಎನರ್ಜೈಸರ್ ಹಾರ್ಡ್ ಕೇಸ್ P28K ಮೊಬೈಲ್ 8 GB RAM + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಪಡೆದುಕೊಂಡಿದೆ. ಅಲ್ಲದೇ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇದೆ.
ಅದೇ ರೀತಿ ಉಳಿದೆರಡು ಕ್ಯಾಮೆರಾಗಳು 20 ಮೆಗಾ ಪಿಕ್ಸಲ್ ಅಲ್ಟ್ರಾ ವೈಲ್ಡ್ ಲೆನ್ಸ್ ಸೆನ್ಸಾರ್ ಸೌಲಭ್ಯದಲ್ಲಿ ಹಾಗೂ 2 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಪಡೆದಿವೆ. ಇನ್ನು ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಪಡೆದುಕೊಂಡಿದೆ.
ಎನರ್ಜೈಸರ್ ಹಾರ್ಡ್ ಕೇಸ್ P28K ಫೋನಿನ ಪ್ರಮುಖ ಹೈಲೈಟ್ ಎಂದರೆ, ಇದು 28,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಪೂರ್ಣ ಬ್ಯಾಟರಿಯು ಸುಮಾರು 2252 ಗಂಟೆಗಳ ವರೆಗೆ ಸ್ಟ್ಯಾಂಡ್‌ಬೈ ಅಥವಾ 122 ಗಂಟೆಗಳ ಟಾಕ್ ಟೈಮ್ ಅಥವಾ ಸರಿಸುಮಾರು 94 ದಿನಗಳು ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
28,000mAh ದೈತ್ಯ ಬ್ಯಾಟರಿ ಬ್ಯಾಕ್‌ಅಪ್‌ಗೆ ಪೂರಕವಾಗಿ ಈ ಫೋನ್‌ಗೆ 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ನೀಡಲಾಗಿದೆ. ಇನ್ನು ಬಹಳ ಆಸಕ್ತಿದಾಯಕ ಸಂಗತಿ ಎಂದರೆ, ಈ ಫೋನಿನ ಬ್ಯಾಟರಿ ಸಂಪೂರ್ಣವಾಗಿ ಭರ್ತಿ ಆಗಲು ಜಸ್ಟ್ 1 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.
ಬೆಲೆ ಹಾಗೂ ಲಭ್ಯತೆ
ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಎನರ್ಜೈಸರ್ ಹಾರ್ಡ್ ಕೇಸ್ P28K ಸ್ಮಾರ್ಟ್‌ಫೋನ್‌ನ ಬೆಲೆ EUR 250 (ಭಾರತದಲ್ಲಿ ಅಂದಾಜು 22,000ರೂ) ಎಂದು ದಿ ವರ್ಜ್ ವರದಿ ಮಾಡಿದೆ. ಇನ್ನು ಈ ರಗಡ್ ಸ್ಮಾರ್ಟ್‌ಫೋನ್ ಇದೇ ಅಕ್ಟೋಬರ್ ತಿಂಗಳಿನಲ್ಲಿ ಮಾರಾಟ ಆರಂಭಿಸಲಿದೆ ಎಂದು ಹೇಳಲಾಗಿದೆ.


Click it and Unblock the Notifications








