ಈ ಡೇಂಜರ್ ಆಪ್ ನಿಮ್ಮ ಫೋನ್‌ನಲ್ಲಿಯೂ ಇರಬಹುದು, ತಕ್ಷಣವೇ ಹುಡುಕಿ, ಅನ್‌ಇನ್‌ಸ್ಟಾಲ್ ಮಾಡಿ
ಸ್ಮಾರ್ಟ್‌ಫೋನ್‌ಗಳು (Smartphones) ಇಂದು ಪ್ರತಿಯೊಬ್ಬರ ಅಗತ್ಯತೆಗಳನ್ನು ಪೂರೈಕೆ ಮಾಡುವ ಡಿವೈಸ್‌ಗಳಾಗಿವೆ. ಅದರಲ್ಲೂ ಈ ಫೋನ್ ನಲ್ಲಿನ ಆಪ್‌ಗಳು(apps) ವಿವಿಧ ಸೇವೆಗಳನ್ನು ನೀಡುತ್ತಿದ್ದು, ಬಳಕೆದಾರರು ಆಪ್ ಸ್ಟೋರ್ (App Store) ಮೂಲಕ ಬೇಕಾದ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಆದರೆ ಕೆಲವು ಆಪ್‌ಗಳೇ ನಿಮ್ಮನ್ನು ಹಲವಾರು ಸಂಕಷ್ಟಕ್ಕೆ ಸಿಲುಕಿಸಬಹುದು.
ಹೌದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ(Google Play Store) ಫ್ರೀ ಸಿಗುತ್ತವೆ ಎಂದು ಸಿಕ್ಕ ಸಿಕ್ಕ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡರೆ ಖಂಡಿತಾ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣಕ್ಕೆ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವ ಮುನ್ನ ಆ ಆಪ್ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಿ. ಈ ನಡುವೆ ನಿಮ್ಮ ಫೋನ್‌ನಲ್ಲಿ ಈ ಡೇಂಜರ್ ಆಪ್ ಏನಾದರೂ ಇದ್ದರೆ ಈ ಕ್ಷಣವೇ ಅನ್‌ಇನ್‌ಸ್ಟಾಲ್ ಮಾಡಿ. ಹಾಗಿದ್ರೆ, ಯಾವುದೂ ಈ ಆಪ್?, ಇದರಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಆಗುವ ಸಮಸ್ಯೆಗಳು ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಸ್ಪೈಹೈಡ್ ಆಪ್: ಸ್ಪೈಹೈಡ್ ಆಪ್ (Spyhide) 2016 ರಿಂದ ಈವರೆಗೆ 60,000 ಡಿವೈಸ್‌ಗಳಲ್ಲಿ ತನ್ನ ಖತರ್ನಾಕ್ ಕೆಲಸ ಮಾಡಿದೆ. ಈ ಆಪ್ ನಿಮ್ಮ ಫೋನ್‌ನಲ್ಲೂ ಸಹ ಇರಬಹುದು. ಯಾಕೆಂದರೆ ಇದು ಯಾರಿಗೂ ಕಾಣದ ಹಾಗೆ ಅಡಗಿಕೊಳ್ಳುವ ಸಾಮರ್ಥ್ಯ ಪಡೆದುಕೊಂಡಿದೆ. ಅದರಂತೆ ಈ ಸ್ಪೈಹೈಡ್ ಆಪ್ ಅನ್ನು ಇರಾನ್‌ನಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಪ್ರಪಂಚದಾದ್ಯಂತ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ(Android device) ಈಗಾಗಲೇ ಬಳಕೆ ಮಾಡಲಾಗಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ.
ಮರೆ ಮಾಡಿಕೊಳ್ಳುವ ಸಾಮರ್ಥ್ಯ: ಮೊದಲೇ ತಿಳಿಸಿದಂತೆ ಈ ಸ್ಪೈಹೈಡ್ ಅಥವಾ ಸ್ಪೈವೇರ್ ಆಪ್ ಏನಾದರೂ ನಿಮ್ಮ ಫೋನ್‌ಗೆ ಎಂಟ್ರಿ ಕೊಟ್ಟಿದೆ ಎಂದರೆ ಅದು ನಿಮಗೆ ಅಷ್ಟು ಸುಲಭವಾಗಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಗೊತ್ತೋ ಗೊತ್ತಿಲ್ಲದೆಯೋ ಅದೆಷ್ಟೋ ಜನರು ಇದನ್ನು ಇದನ್ನು ಡೌನ್‌ಲೋಡ್ ಸಹ ಮಾಡಿಕೊಂಡಿದ್ದಾರೆ. ಆದರೆ ಅದರ ಕಿರಾತಕ ಬುದ್ದಿ ಈಗ ಬಯಲಾಗಿದ್ದು, ಇದು ಬಳಕೆದಾರರ ಎಲ್ಲಾ ಖಾಸಗಿ ಡೇಟಾ ಕದಿಯುತ್ತದೆ ಎಂದು ತಿಳಿದುಬಂದಿದೆ.
ಅಂದರೆ ಈ ಸ್ಪೈಹೈಡ್ ಆಪ್ ಯಾವ ಫೋನ್‌ನಲ್ಲಿ ಇದೆಯೋ ಆ ಫೋನ್‌ನಲ್ಲಿ ಫೋನ್ ಸಂಪರ್ಕಗಳು, ಮೆಸೆಜ್‌ಗಳು, ಫೋಟೋಗಳು, ಕರೆ ದಾಖಲೆಗಳು, ರೆಕಾರ್ಡಿಂಗ್‌ಗಳು ಮತ್ತು ಸ್ಥಳ ಡೇಟಾ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಗಳನ್ನು ಕದ್ದಿದೆ. ಈ ಸ್ಪೈಹೈಡ್ 2016 ರಿಂದ ಜುಲೈ ವರೆಗೂ ಇದೇ ಕೆಲಸ ಮಾಡಿಕೊಂಡು ಬಂದಿದೆ ಎಂದು ಪ್ರಮುಖ ಟೆಕ್ ಸೈಟ್ ವರದಿ ಮಾಡಿದೆ. ಅದರಂತೆ ಈ ಸ್ಪೈಹೈಡ್ ಸಂಗ್ರಹಿಸಿದ ಡೇಟಾದಲ್ಲಿ ಹೆಚ್ಚು ವೈಯಕ್ತಿಕ ಮಾಹಿತಿಗಳೇ ಇವೆ ಎಂದು ತಿಳಿದುಬಂದಿದೆ.
ಇನ್ನು ಈ ವೈಯಕ್ತಿಕ ಡೇಟಾದಲ್ಲಿ 3.29 ಮಿಲಿಯನ್ ಟೆಕ್ಟ್ಸ್ ಮೆಸೆಜ್‌ಗಳಿವೆ. ಇದರಲ್ಲಿ ಎರಡು ಅಂಶಗಳ ಕೋಡ್‌ಗಳು ಮತ್ತು ಪಾಸ್‌ವರ್ಡ್ ಮರುಹೊಂದಿಸುವ ಲಿಂಕ್‌ಗಳು ಸೇರಿವೆ. ಇದರೊಂದಿಗೆ 1.2 ಮಿಲಿಯನ್‌ಗಿಂತಲೂ ಹೆಚ್ಚು ಕರೆ ಲಾಗ್‌ಗಳು, ಸುಮಾರು 312,000 ಕರೆ ರೆಕಾರ್ಡಿಂಗ್ ಫೈಲ್‌ಗಳು, 925,000 ಕ್ಕೂ ಹೆಚ್ಚು ಫೋನ್ ನಂಬರ್‌ಗಳು ಹಾಗೂ 382,000 ಫೋಟೋಗಳು ಮತ್ತು ಚಿತ್ರಗಳನ್ನು ಈ ಆಪ್ ಸಂಗ್ರಹ ಮಾಡಿಕೊಂಡಿದೆ.
ಇಷ್ಟು ಮಾತ್ರವಲ್ಲದೆ ಈ ಆಪ್ ಅನ್ನು ಬಳಕೆ ಮಾಡಲು ನೀಡಲಾದ ಸೈನ್ ಅಪ್ (Sign up) ವಿವರಗಳನ್ನು ಬರೋಬ್ಬರಿ 750,000 ಜನರಿದ್ದ ಕದ್ದಿದೆಯಂತೆ. ಇನ್ನು ಈ ಆಪ್ ಅನ್ನ ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಿಂದ ನಿಷೇಧಿಸಲಾಗಿದೆ. ಆದರೆ, ಈ ಸಂಬಂಧ ವೆಬ್‌ಸೈಟ್ (Website) ಲಭ್ಯ ಇದ್ದು, ಹಲವಾರು ಜನರು ಅದನ್ನು ವೆಬ್‌ಸೈಟ್ ಮೂಲಕವೇ ಡೌನ್‌ಲೋಡ್ (Download) ಮಾಡಿರಬಹುದು ಎಂದು ತಿಳಿದುಬಂದಿದೆ.

ನಿಮ್ಮ ಫೋನ್‌ನಲ್ಲಿ ಈ ಆಪ್ ಇರುವುದನ್ನು ಹೇಗೆ ಪರಿಶೀಲಿಸಬಹುದು: ಸ್ಪೈವೇರ್ ತನ್ನನ್ನು ತಾನೇ ಮರೆಮಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ, ಆಂಡ್ರಾಯ್ಡ್ ಫೋನ್‌ನಲ್ಲಿ ಗುರುತಿಸಲು ಸ್ವಲ್ಪ ಕಷ್ಟಕರವಾದ ಕೆಲಸವಾಗಿದೆ. ಅದರಲ್ಲೂ ನಿತ್ಯ ಬಳಕೆ ಮಾಡುವ ಆಪ್‌ಗಳ ರೀತಿಯಲ್ಲೇ ವೇಷ ಮರೆಮಾಡಿಕೊಳ್ಳುವ ಸಾಮರ್ಥ್ಯ ಸಹ ಪಡೆದುಕೊಂಡಿದೆ. ಇದರಿಂದಾಗಿ ಅನುಮಾನ ಬಂದ ಆಪ್ ಅನ್ನು ಓಪನ್ ಮಾಡಿ ಅದಕ್ಕೆ ನೀಡಲಾಗಿರುವ ಅನುಮತಿಗಳನ್ನು ಒಮ್ಮೆ ಪರಿಶೀಲಿಸಿ.
ಇದರೊಂದಿಗೆ ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್ ವಿಭಾಗಕ್ಕೆ ಎಂಟ್ರಿಯಾಗುವ ಮೂಲಕ ಈ ಆಪ್ ಪತ್ತೆ ಮಾಡಬಹುದು. ಈ ವಿಭಾಗದಲ್ಲಿ ಅಪ್ಲಿಕೇಶನ್ ಲಿಸ್ಟ್ ಅನ್ನು ಓಪನ್ ಮಾಡಿ. ನಂತರದಲ್ಲಿ ಎಲ್ಲಾ ಅಪ್ಲಿಕೇಶನ್‌ಗಳನ್ನು ವೀಕ್ಷಣೆ ಮಾಡಲು ಸ್ಕ್ರಾಲ್ ಮಾಡಿ. ಈ ವೇಳೆ ನೀವು ಇನ್‌ಸ್ಟಾಲ್ ಮಾಡಿರದ ಆಪ್‌ಗಳ ಕಡೆ ಕಣ್ಣಾಯಿಸಿ. ನೀವು ಅಂತಹ ಅಪ್ಲಿಕೇಶನ್ ಅನ್ನು ಕಂಡುಕೊಂಡರೆ ತಕ್ಷಣ ಅದನ್ನು ಅನ್‌ಇನ್‌ಸ್ಟಾಲ್ ಮಾಡಿ.


Click it and Unblock the Notifications








