ಟಾಟಾಸ್ಕೈನ ಈ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗೆ ದಂಗಾದ ಜಿಯೋಫೈಬರ್!
ಪ್ರಸ್ತುತ ಪ್ರತಿಯೊಂದು ಸ್ಮಾರ್ಟ್ ಸಾಧನಗಳಿಗೆ ಇಂಟರ್ನೆಟ್ ಅನಿವಾರ್ಯ ಆಗಿದೆ. ಈ ನಿಟ್ಟಿನಲ್ಲಿ ಬಹುತೇಕರು ತಡೆ ರಹಿತ/ ಸ್ಥಿರಿ ಇಂಟರ್ನೆಟ್ ಸೇವೆಗಾಗಿ ಬ್ರಾಡ್‌ಬ್ಯಾಂಡ್ ಸಂಪರ್ಕಕ್ಕೆ ಮುಂದಾಗುತ್ತಾರೆ. ಇನ್ನು ಜಿಯೋಫೈಬರ್, ಟಾಟಾಸ್ಕೈ ಹಾಗೂ ಏರ್‌ಟೆಲ್ ಪ್ರಮುಖ ಬ್ರಾಡ್‌ಬ್ಯಾಂಡ್ ಪೂರೈಕೆದಾರ ಸಂಸ್ಥೆಗಳಾಗಿ ಗುರುತಿಸಿಕೊಂಡಿವೆ. ಜಿಯೋ ಅಗ್ಗದ ಪ್ರೈಸ್‌ನಲ್ಲಿ ಬ್ರಾಡ್‌ಬ್ಯಾಂಡ್ ಆಯ್ಕೆಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಆದ್ರೆ ಟಾಟಾಸ್ಕೈ ಟೆಲಿಕಾಂನ ಈ ಒಂದು ಕಡಿಮೆ ಬೆಲೆಯ ವೇಗದ ಬ್ರಾಡ್‌ಬ್ಯಾಂಡ್ ಯೋಜನೆ ಜಿಯೋಗೆ ಟಾಂಗ್ ನೀಡುವಂತಿದೆ.

ಹೌದು, ಜನಪ್ರಿಯ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳ ಪೈಕಿ ಟಾಟಾಸ್ಕೈ ಸಹ ಒಂದಾಗಿದ್ದು, ಭಿನ್ನ ಬೆಲೆಯಲ್ಲಿ ಆಕರ್ಷಕ ಯೋಜನೆಗಳನ್ನು ಒಳಗೊಂಡಿದೆ. ಆ ಪೈಕಿ ಟಾಟಾಸ್ಕೈನ 2,300ರೂ. ಬ್ರಾಡ್‌ಬ್ಯಾಂಡ್ ಯೋಜನೆಯು 500mbps ವೇಗದ ಆಯ್ಕೆಗಳಲ್ಲಿ ಅತ್ಯುತ್ತಮ ಎನಿಸಿದೆ. 500mbps ವೇಗದ ಪ್ಲ್ಯಾನ್‌ಗಳಲ್ಲಿ ಟಾಟಾಸ್ಕೈನ 2,300ರೂ. ಯೋಜನೆಯು ಜಿಯೋಫೈಬರ್‌ಗಿಂತ ಭಿನ್ನವಾಗಿ ಕಾಣಿಸಿಕೊಂಡಿದೆ. ಇನ್ನು ಟಾಟಾಸ್ಕೈನ ಈ ಯೋಜನೆಯು 3 ತಿಂಗಳು, 6 ತಿಂಗಳು ಮತ್ತು 12 ತಿಂಗಳುಗಳವರೆಗೆ ಆಯ್ಕೆ ಪಡೆದಿದೆ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಟಾಟಾಸ್ಕೈ ಟೆಲಿಕಾಂನ 2,300ರೂ. ಬ್ರಾಡ್‌ಬ್ಯಾಂಡ್ ಯೋಜನೆಯು ಒಟ್ಟು 3.3TB ಅಥವಾ 3,300GB ತಿಂಗಳ (FUP) ಡೇಟಾವನ್ನು ಪ್ರಯೋಜನ ಒದಗಿಸಲಿದೆ. 500 Mbps ಪ್ಲಾನ್ ಇನ್ನೂ ದೇಶದ ಪ್ರದೇಶಗಳಲ್ಲಿಯೂ ಲಭ್ಯವಿಲ್ಲ ಎಂಬುದನ್ನು ಗಮನಿಸಿಬೇಕಿದೆ. ಹಾಗೆಯೇ ಟಾಟಾಸ್ಕೈ ಕಂಪನಿಯು 50 Mbps ನಿಂದ 1 Gbps ವರೆಗಿನ ಇತರ ಬ್ರಾಡ್‌ಬ್ಯಾಂಡ್ ಯೋಜನೆಗಳ ಶ್ರೇಣಿಯನ್ನು ಹೊಂದಿದೆ. ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಉಚಿತ ಡ್ಯುಯಲ್-ಬ್ಯಾಂಡ್ ವೈ-ಫೈ ರೂಟರ್ ಜೊತೆಗೆ ಉಚಿತ ಇನ್‌ಸ್ಟಾಲೇಶನ್ ನೀಡುತ್ತದೆ.

ಇನ್ನು ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ 500 Mbps ಪ್ಲಾನ್ ಬೆಲೆಯು 2,300ರೂ. ಆಗಿದೆ. ಗ್ರಾಹಕರು ಈ ಯೋಜನೆಯನ್ನು 3 ತಿಂಗಳು, 6 ತಿಂಗಳು ಮತ್ತು 12 ತಿಂಗಳುಗಳವರೆಗಿನ ಆಯ್ಕೆಗಳಲ್ಲಿ ಖರೀದಿಸಲು ಬಹುದಾಗಿದೆ. 3 ತಿಂಗಳ ಯೋಜನೆ 6,900ರೂ. ಕ್ಕೆ ಬರುತ್ತದೆ, 6 ತಿಂಗಳ ಯೋಜನೆ 12,900ರೂ, ಗಳ ಪ್ರೈಸ್ ಟ್ಯಾಗ್ ಪಡೆದಿದೆ. ಮತ್ತು 12 ತಿಂಗಳ ಯೋಜನೆ 24,600 ರೂ . ಗಳ ಬೆಲೆಯಲ್ಲಿ ಬರುತ್ತದೆ. 12 ತಿಂಗಳ ಯೋಜನೆಗೆ ರೀಚಾರ್ಜ್‌ಗೆ ಗಮನಿಸಿದರೇ ಹೆಚ್ಚಿನ ರಿಯಾಯಿತಿ ಪಡೆದಿಲ್ಲ ಎನಿಸುತ್ತದೆ.

ಜಿಯೋ ಫೈಬರ್ 500Mbps ಯೋಜನೆ
ಜಿಯೋ ಫೈಬರ್ 2,499ರೂ. ಯೋಜನೆಯು ಬಳಕೆದಾರರಿಗೆ 500Mbps ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಒದಗಿಸುತ್ತದೆ. ಈ ಯೋಜನೆಯು 2,499ರೂ. ಪ್ರೈಸ್‌ಟ್ಯಾಗ್‌ನಲ್ಲಿದ್ದು, ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯು ವಾರ್ಷಿಕ ಮಾನ್ಯತೆಯೊಂದಿಗೆ ಲಭ್ಯವಿದೆ. ಬಳಕೆದಾರರು ಬ್ರಾಡ್‌ಬ್ಯಾಂಡ್ ಸಂಪರ್ಕ ಮತ್ತು ಉಚಿತ ಜಿಯೋ ಸೆಟ್-ಟಾಪ್ ಬಾಕ್ಸ್‌ನೊಂದಿಗೆ ಅನಿಯಮಿತ ವಾಯಿಸ್ ಕರೆ ಪಡೆಯುತ್ತಾರೆ. ಈ ಯೋಜನೆ 3.3TB ಅಥವಾ 3,300GB ಮಾಸಿಕ ಡೇಟಾವನ್ನು ರವಾನಿಸುತ್ತದೆ.

ಜಿಯೋ ಫೈಬರ್ ಪ್ಲ್ಯಾನ್ ಪ್ರಯೋಜನೆಗಳು
ಯೋಜನೆಯೊಂದಿಗೆ ಉಚಿತ ಓವರ್-ದಿ-ಟಾಪ್ (OTT) ಪ್ಲಾಟ್‌ಫಾರ್ಮ್ ಚಂದಾದಾರಿಕೆಗಳಿವೆ. ಬಳಕೆದಾರರು ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ವೂಟ್ ಕಿಡ್ಸ್, ಎಎಲ್‌ಟಿ ಬಾಲಾಜಿ, ಶೆಮರೂ ಮಿ, ವೂಟ್ ಸೆಲೆಕ್ಟ್, ಹೊಯಿಚೋಯ್, ಲಯನ್ಸ್‌ಗೇಟ್ ಪ್ಲೇ, ಇರೋಸ್ ನೌ, ಜಿಯೋಸಾವ್ನ್, ಸನ್‌ಕ್ಸ್ಟ್, ಸೋನಿಲೈವ್, ಡಿಸ್ಕವರಿ + ಮತ್ತು ಜಿಯೋ ಸಿನೆಮಾದ ಉಚಿತ ಚಂದಾದಾರಿಕೆಯನ್ನು ಬಳಕೆದಾರರು ಪಡೆಯುತ್ತಾರೆ.

ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ 1Gbps ಯೋಜನೆ
ಟಾಟಾ ಸ್ಕೈ ತನ್ನ 1 1Gbps ಯೋಜನೆಯನ್ನು ಮಾಸಿಕ ವೆಚ್ಚಕ್ಕೆ ನೀಡುವುದಿಲ್ಲ. ಇದು 3, 6 ಮತ್ತು 12 ತಿಂಗಳ ಮೂರು ವಿಭಿನ್ನ ಮಾನ್ಯತೆಗಳಲ್ಲಿ ನೀಡುತ್ತದೆ. ಮೇಲೆ ಹೇಳಿದಂತೆ, ಯೋಜನೆಯನ್ನು 12 ತಿಂಗಳವರೆಗೆ ಖರೀದಿಸುವಾಗ, ಅದರ ಮಾಸಿಕ ವೆಚ್ಚವು 4,012 ರೂ.ಗಳಿಗೆ ದೊರೆಯುತ್ತದೆ. ಯೋಜನೆಯೊಂದಿಗೆ ಯಾವುದೇ ಒಟಿಟಿ ಪ್ರಯೋಜನಗಳಿಲ್ಲ, ಆದರೆ ಬಳಕೆದಾರರು 3.3 ಟಿಬಿ ಅಥವಾ 3,300 ಜಿಬಿ ಡೇಟಾವನ್ನು ಅನಿಯಮಿತ ವಾಯಿಸ್ ಕರೆಗಳೊಂದಿಗೆ ಪಡೆಯುತ್ತಾರೆ.

ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ 1Gbps ಯೋಜನೆ
ಜಿಯೋ ಫೈಬರ್ 3,999ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್ 1Gbps ಇಂಟರ್ನೆಟ್ ವೇಗವನ್ನು ಹೊಂದಿದೆ. ಈ ಯೋಜನೆಯು ಅನಿಯಮಿತ ಡೇಟಾ ಸೌಲಭ್ಯ ಪಡೆದಿದೆ (3.3 ಟಿಬಿ ಎಫ್‌ಯುಪಿ ಡೇಟಾ). ಇದರೊಂದಿಗೆ ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್), ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಜೀ 5, ಸೋನಿ ಲಿವ್, ಸನ್‌ನೆಕ್ಸ್ಟ್, ವೂಟ್, ಎಎಲ್‌ಟಿ ಬಾಲಾಜಿ, ಹೊಯ್ಚೊಯ್, ಶೆಮರೂ ಮಿ, ಲಯನ್ಸ್ ಗೇಟ್ ಪ್ಲೇ, ಜಿಯೋ ಸಿನೆಮಾ ಮತ್ತು ಜಿಯೋಸಾವ್ನ್ OTT ಪ್ರಯೋಜನಗಳು ಲಭ್ಯವಾಗಲಿವೆ.


Click it and Unblock the Notifications








