ರೈಲ್ವೆ ಪ್ರಯಾಣಿಕರೆ ಗಮನಿಸಿ!..ತತ್ಕಾಲ್ ಟಿಕೆಟ್‌ ಪಡೆಯಲು ಈ ಆಪ್‌ ಬೆಸ್ಟ್‌!

|

ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗಾಗಿ ಈಗಾಗಲೇ ಹಲವು ಉಪಯುಕ್ತ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ. IRCTC ವೆಬ್‌ಸೈಟ್‌ ಮೂಲಕ ಪ್ರಯಾಣಿಕರು ಟಿಕೆಟ್ ಸೇರಿದಂತೆ ಕೆಲವು ಇತರೆ ಸೇವೆಗಳನ್ನು ಪಡೆಯಬಹುದಾಗಿದೆ. ಪ್ರಯಾಣಿಕರಿಗೆ ಕೆಲವೊಮ್ಮೆ ದಿಢೀರ್ ಪ್ರಯಾಣ ಮಾಡುವ ಸಂದರ್ಭ ಎದುರಾಗುತ್ತವೆ. ಆದರೆ ಇಂತಹ ಸಂದರ್ಭದಲ್ಲಿ ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಸಿಗುವುದು ಕಷ್ಟ. ಆಗ ಪ್ರಯಾಣಿಕರು ತತ್ಕಾಲ್ ಟಿಕೆಟ್‌ಗಾಗಿ ಪ್ರಯತ್ನಿಸಬೇಕಾಗುತ್ತದೆ.

ರೈಲ್ವೆ ಪ್ರಯಾಣಿಕರೆ ಗಮನಿಸಿ!..ತತ್ಕಾಲ್ ಟಿಕೆಟ್‌ ಪಡೆಯಲು ಈ ಆಪ್‌ ಬೆಸ್ಟ್‌!

ಆನ್‌ಲೈನ್‌ ಮೂಲಕ ರೈಲ್ವೆ ತತ್ಕಾಲ್ ಟಿಕೆಟ್‌ ಪಡೆಯಲು ಅವಕಾಶ ಇದೆ. ಕನ್ಫರ್ಮ್ ಟಿಕೆಟ್ (ConfirmTkt) ಅಪ್ಲಿಕೇಶನ್ ಮೂಲಕ ರೈಲಿನಲ್ಲಿ ತತ್ಕಾಲ್ ಕೋಟಾದಡಿ ಲಭ್ಯವಿರುವ ಸೀಟುಗಳ ಮಾಹಿತಿ ಪಡೆಯಬಹುದು. ಅಲ್ಲದೇ ಮನೆಯಲ್ಲಿಯೇ ಕುಳಿತು ಕ್ಷಣಾರ್ಧದಲ್ಲಿ ತತ್ಕಾಲ್ ಟಿಕೆಟ್‌ಗಳನ್ನು (tatkal ticket) ಬುಕ್ ಮಾಡಬಹುದು. ಈ ಆಪ್‌ನಲ್ಲಿ ಟಿಕೆಟ್ ಬುಕಿಂಗ್‌ಗಾಗಿ ಮಾಸ್ಟರ್‌ ಲಿಸ್ಟ್‌ ಅನ್ನು ಸಹ ಹೊಂದಿದ್ದು, ಇದರಿಂದಾಗಿ ಟಿಕೆಟ್ ಬುಕಿಂಗ್‌ಗಾಗಿ ಸಮಯ ಉಳಿಸಬಹುದು. ಪ್ರಯಾಣಿಕರು ಈ ಅಪ್ಲಿಕೇಶನ್ ಅನ್ನು ಗೂಗಲ್‌ ಪ್ಲೇ ಸ್ಟೋರ್‌ ನಿಂದ ಡೌನ್‌ಲೋಡ್ ಮಾಡಬಹುದು. ಹಾಗಾದರೇ ಕನ್ಫರ್ಮ್ ಟಿಕೆಟ್ (ConfirmTkt) ಆಪ್‌ ಬಗ್ಗೆ ಹಾಗೂ ಇತರೆ ಅತ್ಯುತ್ತಮ ಆಪ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಕನ್ಫರ್ಮ್ ಟಿಕೆಟ್ (ConfirmTkt) ಆಪ್
ಕನ್ಫರ್ಮ್ ಟಿಕೆಟ್ ರೈಲ್ವೆಯ ಇಲಾಖೆಯ ಅಧಿಕೃತ IRCTC ಯ ಪಾಲುದಾರ ರೈಲು ಅಪ್ಲಿಕೇಶನ್ ಆಗಿದೆ. ಈ ಆಪ್‌ ಸಹ ಎಲ್ಲಾ ಅಗತ್ಯ ಫೀಚರ್ಸ್‌/ ಸೇವೆಗಳ ಆಯ್ಕೆ ಹೊಂದಿದೆ. ಈ ಆಪ್‌ನಲ್ಲಿ ಸುಲಭವಾಗಿ IRCTC ಟಿಕೆಟ್‌ ಹಾಗೂ ತತ್ಕಾಲ್ ಟಿಕೆಟ್‌ಗಳ ಸುಲಭವಾಗಿ ಸರ್ಚ್ ಮಾಡಬಹುದು. ರನ್ನಿಂಗ್ ಟ್ರೈನಿನ ಲೈವ್ ಸ್ಟೇಟಸ್‌ ಚೆಕ್ ಮಾಡಬಹುದಾಗಿದೆ. ಹಾಗೆಯೇ ರೈಲು ವೇಳಾಪಟ್ಟಿಯನ್ನು ತೋರಿಸುವ ಆಯ್ಕೆಯನ್ನು ಇದು ಒಳಗೊಂಡಿದೆ.

ರೈಲ್ವೆ ಪ್ರಯಾಣಿಕರೆ ಗಮನಿಸಿ!..ತತ್ಕಾಲ್ ಟಿಕೆಟ್‌ ಪಡೆಯಲು ಈ ಆಪ್‌ ಬೆಸ್ಟ್‌!

Ixigo ಟ್ರೈನ್ಸ್ ಆಪ್
ಪ್ರಮುಖ ರೈಲು ಟಿಕೆಟ್ ಬುಕಿಂಗ್ ಆಪ್ಸ್‌ಗಳ ಪೈಕಿ Ixigo ಅಪ್ಲಿಕೇಶನ್‌ ಸಹ ಒಂದಾಗಿದೆ. ಈ ಆಪ್‌ನಲ್ಲಿ ಪ್ರಯಾಣಿಕರು ರೈಲು ಟಿಕೆಟ್ ಕಾಯ್ದಿರಿಸಬಹುದಾಗಿದೆ. ಟ್ರೈನ್ ಲೈವ್ ಸ್ಟೇಟಸ್‌ ಟ್ರಾಕಿಂಗ್ ಮಾಡಬಹುದಾಗಿದ್ದು, ಹಾಗೆಯೇ PNR ಸ್ಟೇಟಸ್‌ ಸಹ ಪರಿಶೀಲಿಸಬಹುದಾಗಿದೆ. ಇನ್ನು ಈ ಆಪ್‌ ಆಂಡ್ರಾಯ್ಡ್ ಮತ್ತು ಐಫೋನ್ ಎರಡೂ ಡಿವೈಸ್‌ಗಳಲ್ಲಿಯೂ ಲಭ್ಯವಿದೆ. ಹಾಗೆಯೇ ಈ ಆಪ್‌ನಲ್ಲಿ ವಿಮಾನಗಳು, ಬಸ್ಸುಗಳು, ಹೋಟೆಲ್‌ಗಳು ಮತ್ತು ಕ್ಯಾಬ್‌ಗಳನ್ನು ಸಹ ಕಾಯ್ದಿರಿಸಬಹುದು.

ರೈಲು ಯಾತ್ರಾ (RailYatra) ಆಪ್
ರೈಲು ಯಾತ್ರಾ ಆಪ್‌ ರೈಲು ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆಯ ಮತ್ತೊಂದು ಅತ್ಯುತ್ತಮ ಅಪ್ಲಿಕೇಶನ್ ಆಗಿದೆ. ಈ ರೈಲು ಯಾತ್ರಾ ಆಪ್‌ ಅಪ್ಲಿಕೇಶನ್ ಐಫೋನ್, ಆಂಡ್ರಾಯ್ಡ್ ಮತ್ತು ವಿಂಡೋಸ್‌ನಲ್ಲಿ ಲಭ್ಯವಿದೆ. ಸೀಟ್ ಲಭ್ಯತೆ, ಟಿಕೆಟ್ ಶುಲ್ಕ ಮತ್ತು ಟ್ರೈನ್ ಲೈವ್ ಸ್ಟೇಟಸ್‌ ಜೊತೆಗೆ ಟ್ರೈನ್ ಆಗಮನ / ನಿರ್ಗಮನವನ್ನು ಪರಿಶೀಲಿಸಲು ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಇನ್ನು ಈ ಆಪ್‌ನಲ್ಲಿ ಸ್ಟೇಷನ್ ಹತ್ತಿರದ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆಯಲು, ಮೆಡಿಕಲ್ ಎಮರ್ಜೆನ್ಸಿ ಎಂಬ ವಿಶೇಷ ಆಯ್ಕೆ ಇದೆ.

ಮೇಕ್ ಮೈ ಟ್ರಿಪ್ (MakeMy Trip) ಆಪ್
ಒಂದೇ ಅಪ್ಲಿಕೇಶನ್ ಮೂಲಕ ರೈಲು, ಹೋಟೆಲ್, ಫ್ಲೈಟ್, ಬಸ್, ಕ್ಯಾಬ್ ಮತ್ತು ಇನ್ನೂ ಹೆಚ್ಚಿನ ಸೇವೆಗಳನ್ನು ಕಾಯ್ದಿರಿಸುವುದಕ್ಕೆ ಮೇಕ್‌ ಮೈ ಟ್ರಿಪ್ ಆಪ್‌ ಒಂದು ಉತ್ತಮ ನಿಲುಗಡೆ. ಈ ಆಪ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಆಯ್ಕೆ ಜೊತೆಗೆ ಟ್ರೈನ್ ವೇಳಾಪಟ್ಟಿಗಳನ್ನು ಸಹ ಪರಿಶೀಲಿಸಬಹುದು. ಹಾಗೆಯೇ ಟ್ರೈನ್‌ ಲೈವ್ ರನ್ನಿಂಗ್ ಸ್ಟೇಟಸ್‌ ಅನ್ನು ತಿಳಿಯಬಹುದಾಗಿದೆ. PNR ಸ್ಟೇಟಸ್‌ ಸಹ ಚೆಕ್ ಮಾಡಬಹುದಾಗಿದೆ.

Best Mobiles in India

English summary
This Ticket Booking App Helps You to Get Railway TATKAL TICKET.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X