Home
ಸುದ್ದಿಜಾಲ

ವಿ ಟೆಲಿಕಾಂನ 839ರೂ. ಪ್ಲ್ಯಾನ್‌ನಲ್ಲಿ ಮೂರು ತಿಂಗಳು ಈ ಜನಪ್ರಿಯ OTT ಆಪ್‌ ಉಚಿತ!

ವಿ ಟೆಲಿಕಾಂ ಚಂದಾದಾರರನ್ನು ಸೆಳೆಯಲು ತರಹೇವಾರಿ ಆಫರ್‌ ನೀಡುತ್ತಾ ಸಾಗಿದೆ. ಸಂಸ್ಥೆಯ ಬಹುತೇಕ ಯೋಜನೆಗಳು ಅಧಿಕ ಡೇಟಾ, ವ್ಯಾಲಿಡಿಟಿ ಪ್ರಯೋಜನಗಳನ್ನು ಒಳಗೊಂಡಿವೆ. ಆ ಪೈಕಿ ವಿ ಟೆಲಿಕಾಂನ 839ರೂ. ಯೋಜನೆಯು ಈಗ ಸಖತ್‌ ಗಮನ ಸೆಳೆದಿದ್ದು, ಈ ಯೋಜನೆಯಲ್ಲಿ ಗ್ರಾಹಕರಿಗೆ ಡೇಟಾ ಜೊತೆಗೆ ಜಬರ್ದಸ್ತ್‌ ಓಟಿಟಿ ಪ್ರಯೋಜನ ಸಹ ದೊರೆಯುತ್ತದೆ.

ಹೌದು, ವಿ ಟೆಲಿಕಾಂ ತನ್ನ 839ರೂ. ಪ್ರೀಪೇಯ್ಡ್‌ ಯೋಜನೆಯಲ್ಲಿ ಇದೀಗ ಓಟಿಟಿ ಕೊಡುಗೆ ಲಭ್ಯ ಮಾಡಿದೆ. ಈ ಯೋಜನೆಯು ದೈನಂದಿನ ಡೇಟಾ ಪ್ರಯೋಜನ ಒಳಗೊಂಡಿದ್ದು, ಆಕರ್ಷಕ ವ್ಯಾಲಿಡಿಟಿ ಸಹ ಪಡೆದಿದೆ. ಇದರೊಂದಿಗೆ ಓಟಿಟಿ ಚಂದಾದಾರಿಕೆ ಸೌಲಭ್ಯ ಸಹ ಒದಗಿಸಿರುವುದು ಈಗ ಪ್ರಮುಖ ಹೈಲೈಟ್ ಎನಿಸಿಕೊಂಡಿದೆ.

ವಿ ಟೆಲಿಕಾಂನ 839ರೂ. ಪ್ಲ್ಯಾನ್‌ನಲ್ಲಿ ಮೂರು ತಿಂಗಳು ಈ ಜನಪ್ರಿಯ OTT ಆಪ್‌ ಉಚಿತ!

ವಿ ಟೆಲಿಕಾಂನ ಈ ಯೋಜನೆಯಲ್ಲಿ ಗ್ರಾಹಕರಿಗೆ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಈ ಪ್ಲ್ಯಾನ್‌ ವಿಕೆಂಡ್‌ ಡೇಟಾ ರೋಲ್‌ ಓವರ್‌ ಕೊಡುಗೆ, ರಾತ್ರಿ 12 ರಿಂದ ಮುಂಜಾನೆ 6 ರ ವರೆಗೆ ಅನಿಯಮಿತ ಇಂಟರ್ನೆಟ್‌ ಬಳಕೆ ಅವಕಾಶ ಪಡೆದಿದೆ. ಇನ್ನುಳಿದಂತೆ ವಿ 839ರೂ. ಪ್ರೀಪೇಯ್ಡ್‌ ಯೋಜನೆಯ ಇತರೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿ 839ರೂ. ಪ್ರೀಪೇಯ್ಡ್‌ ಯೋಜನೆ ಸೌಲಭ್ಯಗಳ ಮಾಹಿತಿ : ವಿ ಟೆಲಿಕಾಂನ ಈ ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಇದರೊಂದಿಗೆ ಈ ಅವಧಿಯಲ್ಲಿ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಹಾಗೆಯೇ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಪಡೆದಿದೆ. ಹಾಗೆಯೇ ವಿಕೆಂಡ್‌ ಡೇಟಾ ರೋಲ್‌ಓವರ್‌ ಸೌಲಭ್ಯವನ್ನು ಪಡೆದಿದೆ.

ಇನ್ನು ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಪ್ರಯೋಜನ ದೊರೆಯುತ್ತದೆ. ಅಂದಹಾಗೆ ಗ್ರಾಹಕರು ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಪಡೆಯಲು ಅಧಿಕೃತ ವಿ ಆಪ್‌ ಮೂಲಕ ರೀಚಾರ್ಜ್‌ ಮಾಡಬೇಕಿದೆ ಎಂಬುದನ್ನು ಗಮನಿಸಬೇಕು. ವಿ ಸಂಸ್ಥೆಯ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ.

ವಿ ಟೆಲಿಕಾಂ 901ರೂ. ರೀಚಾರ್ಜ್‌ ಪ್ಲ್ಯಾನ್ ಸೌಲಭ್ಯಗಳ ಮಾಹಿತಿ : ವಿ ಟೆಲಿಕಾಂನ 901ರೂ. ರೀಚಾರ್ಜ್‌ ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ಸಹ ದೊರೆಯುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಯು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ.

ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯ. ಹಾಗೆಯೇ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ 48 GB ಡೇಟಾ ಸಿಗಲಿದ್ದು, ವಿಕೇಂಡ್‌ ಡೇಟಾ ರೋಲ್‌ ಓವರ್‌, ಅಧಿಕೃತ ವಿ ಆಪ್ಸ್‌ಗಳ ಸೌಲಭ್ಯ ಸಹ ಲಭ್ಯ.

ವಿ ಟೆಲಿಕಾಂನ 3099ರೂ. ರೀಚಾರ್ಜ್‌ ಪ್ಲ್ಯಾನ್ ಪ್ರಯೋಜನಗಳು ಮಾಹಿತಿ : ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಡೈಲಿ 2 GB ಡೇಟಾ ಪ್ರಯೋಜನ ಸಿಗಲಿದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಇರುತ್ತದೆ. ಅಲ್ಲದೇ ಈ ರೀಚಾರ್ಜ್‌ ಯೋಜನೆಯಲ್ಲಿ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸೌಲಭ್ಯ ಸಹ ಸಿಗಲಿದೆ.

ಇನ್ನು ವಿ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಈ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಒಂದು ವರ್ಷದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ಲಭ್ಯವಾಗಲಿದ್ದು, ಇದರೊಂದಿಗೆ ಕೆಲವು ವಿ ಆಪ್ಸ್‌ಗಳು ದೊರೆಯುತ್ತವೆ.

Best Mobiles in India

English summary
This Vi plan offers a free 3-month Disney+ Hotstar subscription to users. all details check here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+