Home
ಸುದ್ದಿಜಾಲ

ಕರೆಂಟ್‌ ಇಲ್ಲದೇ ಬಟ್ಟೆ ಒಗೆಯುವ ವಾಷಿಂಗ್‌ ಮಷಿನ್‌

By Suneel

ಬಟ್ಟೆಗಳನ್ನ ಒಗೆದು ಒಗೆದು ಸುಸ್ತಾಯಿತು ಅನ್ನೋದನ್ನ ನೋಡಲಾಗದೇ, ಹಾಗೂ ಬಟ್ಟೆ ಒಗೆಯಲು ಟೈಮ್‌ ಇಲ್ಲ ಅನ್ನೋ ದುಡ್ಡಿರುವ ಜನರೆಲ್ಲಾ ಇಂದು ವಾಷಿಂಗ್‌ಮಷಿನ್‌ ತಗೋತಾರೆ. ಓಕೆ. ಅಂತು ಇಂತೂ ಬಟ್ಟೆ ಒಗೆಯುವ ಸರಳ ವಿಧಾನವನ್ನು ಕಂಡುಕೊಂಡಿದ್ದಾಯಿತು ಎಂದು ಹಲವು ದಶಕಗಳ ಹಿಂದೆಯೇ ಜನರು, ಅದರಲ್ಲೂ ಮಹಿಳೆಯರು ನಿಟ್ಟುಸಿರು ಬಿಟ್ಟಿದರು. ಹೌದು. ಆದ್ರೆ ಕರೆಂಟ್‌ ಬಿಲ್ಲಂತು ಏನ್‌ ಕಡಿಮೆ ಬರಲ್ಲಾ ಅಲ್ವೇ ? ಹಾಗಾದ್ರೆ ಬಟ್ಟೇನು ಒಗೆದುಕೊಳ್ಳಬೇಕು, ಇತ್ತ ವಿದ್ಯುತ್‌ ಬಿಲ್‌ ಕಡಿಮೇನು ಬರಬೇಕು. ಈ ರೀತಿ ಏನಾದ್ರು ಒಂದು ಆವಿಷ್ಕಾರ ಮಾಡ್‌ಬೇಕು ಅಂತ ಬಹುಸಂಖ್ಯಾತರು ಯೋಚಿಸುವ ಮೊದಲೇ ಅಂತಹ ಸೂಪರ್ ವಾಷಿಂಗ್‌ಮಾಷಿನ್‌ ಆವಿಷ್ಕಾರಗೊಂಡಿದೆ.

ಓದಿರಿ : ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ

ಕೆನೆಡಿಯನ್ನರು ಹೊಸ ವಿಧಾನದ ವಾಷಿಂಗ್‌ ಮಷಿನ್‌ ಒಂದನ್ನು ಆವಿಷ್ಕರಿಸಿದ್ದು, ಈ ವಾಷಿಂಗ್‌ ಮಷಿನ್‌ ಕಾರ್ಯನಿರ್ವಹಿಸಲು ವಿದ್ಯುತ್‌ ಬೇಕಾಗಿಲ್ಲಾ. ಹಾಗಾದ್ರೆ ಅಂತಹ ಈ ವಾಷಿಂಗ್‌ ಮಷಿನ್‌ ವಿಶೇಷತೆ ಏನು ಎಂಬುದನ್ನ ಈ ಲೇಖನ ಓದಿ ತಿಳಿಯಿರಿ..

GiraDora

GiraDora

ಕೆನೆಡಿಯನ್‌ 'Ji A You' ಮತ್ತು 'Alex Cabunoc' ಎಂಬುವವರು ಅಭಿವೃದ್ದಿಪಡಿಸಿರುವ ಹೊಸ ವಾಷಿಂಗ್‌ ಮಷಿನ್‌ ಹೆಸರು "GiraDora".

 ಫೂಟ್‌ ಪವರ್‌

ಫೂಟ್‌ ಪವರ್‌

'GiraDora' ವಾಷಿಂಗ್‌ ಮಷಿನ್‌ ಪಾದಗಳಿಂದ ಪವರ್‌ ಪಡೆದು ಬಟ್ಟೆ ಒಗೆಯುವ ಹೊಸ ವಿಧಾನ ವಾಷಿಂಗ್ ಮಷಿನ್‌ ಆಗಿದೆ. ಇದರ ಬೆಲೆ $40( 2707 ರೂ).

ವಿದ್ಯುತ್‌ ಬೇಡ

ವಿದ್ಯುತ್‌ ಬೇಡ

ಈ ಗ್ಯಾಜೆಟ್‌ ಕಾರ್ಯನಿರ್ವಹಿಸಲು ವಿದ್ಯುತ್‌ ಬೇಕಾಗಿಲ್ಲ. ಸಧಾರಣ ಪ್ಲಾಸ್ಟಿಕ್‌ ಬಕೆಟ್‌ ಅನ್ನು ಬಲಸಿಕೊಂಡು ನೀರನ್ನು ಸಹ ಹಾಕಿ ಸರಳವಾಗಿ ಬಟ್ಟೆಗಳನ್ನು ವಾಸ್‌ ಮಾಡಬಹುದಾಗಿದೆ.

ವಾಷಿಂಗ್ ವಿಧಾನ

ವಾಷಿಂಗ್ ವಿಧಾನ

ಬಟ್ಟೆಗಳನ್ನು ಬಕೆಟ್‌ ಒಳಗೆ ಹಾಕಿ. ಅದಕ್ಕೆ ಅಗತ್ಯ ಸೋಪ್‌, ಮತ್ತು ವಾಷಿಂಗ್‌ ಪೌಢರ್‌ಗಳನ್ನು ಹಾಕಿ ಅದರ ಮುಚ್ಚಲವನ್ನು ಹಾಕಿ ನಂತರ ಅದರ ಮೇಲೆ ಕುಳಿತುಕೊಳ್ಳಿ. ಕುಳಿತನಂತರ ಬಕೆಟ್‌ ಕೆಳಗೆ ನಿಮ್ಮ ಪಾದಕ್ಕೆ ಕೊಟ್ಟ ಪೆಡೆಲ್‌ ಅನ್ನು ಮಷಿನ್‌ಗೆ ಪವರ್‌ ನೀಡಲು ಬಳಸಿ. ಅಂದರೆ ಪೆಡೆಲ್‌ ತುಳಿಯುವ ಮೂಲಕ ವಾಷಿಂಗ್‌ ಮಷಿನ್‌ ಪ್ರಾರಂಭಮಾಡಿ ನಿಮ್ಮ ಬಟ್ಟೆಗಳನ್ನು ಸ್ವಚ್ಛತೆ ಮಾಡಿ. ಈ ವಿಧಾನದಿಂದ ನೀವು ವಿದ್ಯುತ್‌ ಬಿಲ್‌ ಅನ್ನು ಪಾವತಿ ಮಾಡುವ ಅವಶ್ಯಕತೆಯೇ ಇರುವುದಿಲ್ಲಾ.

 ಬಟ್ಟೆ ಒಣಗಿಸಿ

ಬಟ್ಟೆ ಒಣಗಿಸಿ

ಒಮ್ಮೆ ಬಟ್ಟೆ ವಾಷಿಂಗ್‌ ಪೂರ್ಣಗೊಂಡ ನಂತರ ನೀವು ಸ್ಪಿನ್‌ ಡ್ರೈಯರ್‌ ಅನ್ನು ಬಳಸಿ ಬಟ್ಟೆಗಳನ್ನು ಒಣಗಿಸಬಹುದು. ಈ ಮೊದಲು ಈ ಗ್ಯಾಜೆಟ್‌ ಅನ್ನು ಪ್ರತಿಕೂಲ ದೇಶವಾದ ದಕ್ಷಿಣ ಅಮೇರಿಕದಲ್ಲಿ ಪರೀಕ್ಷೆ ನಡೆಸಲಿದ್ದು, ನಂತರದಲ್ಲಿ ಭಾರತದಲ್ಲಿ ಹೇಗೆ ಪ್ರತಿಕೂಲ ಪಡೆಯುತ್ತಾರೆ ಎಂಬುದನ್ನು ಪರೀಕ್ಷಿಸಲಾಗುತ್ತದೆ ಎನ್ನಲಾಗಿದೆ

GiraDora

GiraDora ಬಳಸುವ ವಿಧಾನವನ್ನು ಈ ವೀಡಿಯೋದಲ್ಲಿ ನೋಡಿರಿ.

Best Mobiles in India

English summary
This Washing Machine Runs Without Electricity And Costs Only 40$. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+