ಥಾಮ್ಸನ್ R9 ಟಿವಿಗೆ 46% ರಿಯಾಯಿತಿ; ತಡಮಾಡಬೇಡಿ!
ಸುಧಾರಿತ ಟೆಕ್ನಾಲಜಿ ಇರುವ ಹಲವಾರು ಸ್ಮಾರ್ಟ್‌ಟಿವಿಗಳು ಇಂದು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ನಿರ್ಮಾಣ ಮಾಡಿವೆ. ಈ ಸ್ಮಾರ್ಟ್‌ಟಿವಿಗಳು ಇಂದು ಕೇವಲ ಟಿವಿಗಳಾಗದೆ ಮಾನಿಟರ್ ಅಥವಾ ಇನ್ನಿತರೆ ಉಪಯೋಗಕ್ಕೂ ಯೋಗ್ಯವಾಗಿದ್ದು, ಹಲವು ಕಾರ್ಯಗಳನ್ನು ನಿರ್ವಹಿಸುತ್ತವೆ. ಈ ನಡುವೆ ನೀವು ಉತ್ತಮ ಟಿವಿಯನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಇದು ಉತ್ತಮ ಟೈಮ್.
ಹೌದು, ಥಾಮ್ಸನ್ R9 ಟಿವಿ (Thomson R9) ಬೆಲೆಯಲ್ಲಿ ಭಾರೀ ಬೆಲೆ ಇಳಿಕೆಯಾಗಿದೆ. ಈ ಟಿವಿ 178 ಡಿಗ್ರಿ ವೈಡ್ ವ್ಯೂಯಿಂಗ್ ಆಂಗಲ್ ಸೌಲಭ್ಯ ಹೊಂದಿದ್ದು, ಉತ್ತಮ ಸೌಂಡ್ ಫೀಚರ್ಸ್ ಅನ್ನು ಸಹ ಪಡೆದುಕೊಂಡಿದೆ. ಇಷ್ಟೇ ಅಲ್ಲದೆ 450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಇರುವುದರಿಂದ ಅತ್ಯುತ್ತಮ ವೀಕ್ಷಣೆ ಅನುಭವ ಸಹ ಪಡೆದುಕೊಳ್ಳಬಹುದು. ಮತ್ಯಾಕೆ ತಡ ಬನ್ನಿ ಈ ಟಿವಿಯ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ಬಗ್ಗೆ ತಿಳಿದುಕೊಳ್ಳೋಣ.

ಥಾಮ್ಸನ್ R9 ಟಿವಿ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಟಿವಿಯನ್ನು ಖರೀದಿ ಮಾಡುವ ಮುನ್ನ ಇದರ ಫೀಚರ್ಸ್ ಬಗ್ಗೆ ತಿಳಿದುಕೊಳ್ಳಿ. ಅಂತೆಯೇ ಈ ಟಿವಿ 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 1366 x 768 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ 60 Hz ರಿಫ್ರೆಶ್ ರೇಟ್ ಮತ್ತು 450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹೊಂದಿದ್ದು, ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಇರುವ ಸ್ಮಾರ್ಟ್‌ಟಿವಿ ಎನಿಸಿಕೊಂಡಿದೆ.
ಥಾಮ್ಸನ್ R9 ಟಿವಿ ಫೀಚರ್ಸ್: ಇದರ ಫೀಚರ್ಸ್‌ಕಡೆ ಗಮನಹರಿಸುವುದಾದರೆ ಇನ್‌ಬಿಲ್ಟ್ ಡಿಜಿಟಲ್ ಮೀಡಿಯಾ ಆಯ್ಕೆ, ಬಾಹ್ಯ ಆಡಿಯೊ ಸಿಸ್ಟಮ್‌ಗಳನ್ನು ಸಂಪರ್ಕಿಸಲು ಡಿಜಿಟಲ್ ಆಡಿಯೊ ಔಟ್‌ಪುಟ್, ಡಿಜಿಟಲ್ ನಾಯ್ಸ್‌ರೆಡ್ಯೂಕ್ಷನ್ ಸೇರಿದಂತೆ ಅಗತ್ಯ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಜೊತೆಗೆ ಲ್ಯಾಪ್‌ಟಾಪ್‌ಗೆ ಬೆಂಬಲ ನೀಡಲಿದ್ದು, ಈ ಮೂಲಕ ಕಾಸ್ಟಿಂಗ್ ಸೇವೆ ಪಡೆದುಕೊಳ್ಳಬಹುದು.

ಇನ್ನು ಎರಡು ಸ್ಪೀಕರ್‌ಗಳ ಆಯ್ಕೆ ಪಡೆದುಕೊಂಡಿದ್ದು, ಇವು 20 W ಸೌಂಡ್ ಔಟ್‌ಪುಟ್ ನೀಡಲಿವೆ. ಇವುಗಳ ಸರೌಂಡ್ ಸೌಂಡ್ ಸೌಲಭ್ಯದ ಮೂಲಕ ಸಿನಿಮಾ, ಗೇಮ್ ಹಾಗೂ ಇನ್ನಿತರೆ ವೀಕ್ಷಣೆಯಲ್ಲಿ ಅತ್ಯುತ್ತಮ ಅನುಭವ ಸಿಗಲಿದೆ. ಹಾಗೆಯೇ ಈ ಟಿವಿ WMA, MP3, M4A ಸೇರಿದಂತೆ ಇತರೆ ಆಡಿಯೋ ಮಾದರಿಗಳಿಗೆ ಬೆಂಬಲ ನೀಡುತ್ತದೆ. ಅದೆಲ್ಲಕ್ಕೂ ಮಿಗಿಲಾಗಿ ಇದರಲ್ಲಿ ಆಟೋಮ್ಯಾಟಿಕ್ ವಾಲ್ಯೂಮ್ ಲೆವಲ್ ಇದ್ದು, ಇದರಿಂದ ಬಳಕೆದಾರರು ರೋಮಾಂಚನಕಾರಿ ಅನುಭವ ಪಡೆದುಕೊಳ್ಳಬಹುದಾಗಿದೆ.
ಕನೆಕ್ಟಿವಿಟಿ ವಿಚಾರಕ್ಕೆ ಬರುವುದಾದರೆ ಇದರಲ್ಲಿ ಎರಡು ಹೆಚ್‌ಡಿಎಮ್‌ಐ ಹಾಗೂ ಎರಡು ಯುಎಸ್‌ಬಿ ಪೋರ್ಟ್ ಆಯ್ಕೆ ಇದೆ. ಆದರೆ, ಈ ಟಿವಿಯಲ್ಲಿ ವೈ-ಫೈ ಆಯ್ಕೆ ಇರುವುದಿಲ್ಲ. ಇನ್ನುಳಿದಂತೆ ಈ ಟಿವಿ AVI, MPG, DAT, VOB, DIV, MOV, MKV, RM ಸೇರಿದಂತೆ ವಿವಿಧ ಮಾದರಿಯ ವಿಡಿಯೋಗಳಿಗೆ ಬೆಂಬಲ ನೀಡುತ್ತದೆ.

ಥಾಮ್ಸನ್ R9 ಟಿವಿ ಬೆಲೆ ಹಾಗೂ ಲಭ್ಯತೆ: ಥಾಮ್ಸನ್ R9 ಟಿವಿ 14,990ರೂ. ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವು ಇದನ್ನು 7,999 ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದು. ಯಾಕೆಂದರೆ ಇದಕ್ಕೆ 46% ರಿಯಾಯಿತಿ ಘೋಷಣೆ ಮಾಡಲಾಗಿದೆ. ಅದಾಗ್ಯೂ ನೀವು ಇನ್ನೂ ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಟಿವಿ ಖರೀದಿ ಮಾಡಬೇಕು ಎಂದರೆ ವಿನಿಮಯ ಆಫರ್ ಹಾಗೂ ಬ್ಯಾಂಕ್ ಕಾರ್ಡ್‌ಗಳನ್ನು ಬಳಕೆ ಮಾಡಬಹುದು. ಈ ಬೊಂಬಾಟ್ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.


Click it and Unblock the Notifications