Home
ಸುದ್ದಿಜಾಲ

ಥಾಮ್ಸನ್‌ನಿಂದ 5 ಹೊಸ ಸ್ಮಾರ್ಟ್‌ಟಿವಿಗಳ ಅನಾವರಣ: ಅಗ್ಗದ ಬೆಲೆ!

ಮಾರುಕಟ್ಟೆಯಲ್ಲಿ ಈಗಾಗಲೇ ಸುಧಾರಿತ ಫೀಚರ್ಸ್ ಇರುವ ಸ್ಮಾರ್ಟ್‌ಟಿವಿಗಳನ್ನು ಕಾಣಬಹುದು. ಕೆಲವು ಅಗ್ಗದ ಬೆಲೆಯಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವು ಸ್ಮಾರ್ಟ್‌ಟಿವಿಗಳು ಲಕ್ಷಗಟ್ಟಲೆ ಬೆಲೆ ಹೊಂದಿದೆ. ಈ ನಡುವೆ ಕೈಗೆಟಕುವ ದರದಲ್ಲಿ ಸ್ಮಾರ್ಟ್‌ಟಿವಿಗಳನ್ನು ಲಾಂಚ್‌ ಮಾಡುತ್ತಿರುವ ಥಾಮ್ಸನ್ ಇದೀಗ ಮತ್ತೆ ಐದು ಸ್ಮಾರ್ಟ್‌ಟಿವಿಗಳನ್ನು ಅನಾವರಣ ಮಾಡಿದೆ. ನೀವೇನಾದರೂ ಈ ವೇಳೆ ಸ್ಮಾರ್ಟ್‌ಟಿವಿ ಖರೀದಿ ಮಾಡಬೇಕು ಎಂದುಕೊಂಡರೆ ಇವು ಉತ್ತಮ ಆಯ್ಕೆಯಾಗಿವೆ.

ಹೌದು,ನೀವು ಬಜೆಟ್ ಬೆಲೆ ಹೊಂದಿರುವ ಸ್ಮಾರ್ಟ್‌ಟಿವಿಗಳನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಥಾಮ್ಸನ್ ಸ್ಮಾರ್ಟ್‌ಟಿವಿಗಳನ್ನು ಖರೀದಿ ಮಾಡಬಹುದು.ಈ ಕಂಪೆನಿಯು ಭಾರತದಲ್ಲಿ ಒಟ್ಟು 5 ಹೊಸ ಟಿವಿಗಳನ್ನು ಲಾಂಚ್‌ ಮಾಡಿದೆ.ಈ ಎಲ್ಲಾ ಐದು ಹೊಸ ಟಿವಿಗಳನ್ನು ಕಂಪನಿಯ ಹೊಸ FAಸರಣಿಯ ಅಡಿಯಲ್ಲಿ ಪರಿಚಯಿಸಲಾಗಿದೆ.ಅದರಲ್ಲೂ ರಿಯಲ್ಟೆಕ್ ಪ್ರೊಸೆಸರ್, ಗೂಗಲ್‌ ಟಿವಿ ಓಎಸ್‌,4K ಡಿಸ್‌ಪ್ಲೇ ಆಯ್ಕೆಗಳು ಈ ಸ್ಮಾರ್ಟ್‌ಟಿವಿಯಲ್ಲಿವೆ.ಹಾಗಿದ್ರೆ,ಬನ್ನಿ ಈ ಟಿವಿಗಳ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ಬಗ್ಗೆ ತಿಳಿಯೋಣ.

ಥಾಮ್ಸನ್‌ನಿಂದ 5 ಹೊಸ ಸ್ಮಾರ್ಟ್‌ಟಿವಿಗಳ ಅನಾವರಣ: ಅಗ್ಗದ ಬೆಲೆ!

ಥಾಮ್ಸನ್‌ನ ಹೊಸ ಸ್ಮಾರ್ಟ್‌ಟಿವಿಗಳಿವು: ಥಾಮ್ಸನ್‌ನ FA ಸರಣಿಯ ಗೂಗಲ್ ಟಿವಿಗಳು 5 ವಿಭಿನ್ನ ಗಾತ್ರದವನ್ನು ಹೊಂದಿವೆ. ಅಂದರೆ 32 ಇಂಚು, 40 ಇಂಚು, 42 ಇಂಚು, 43 ಇಂಚು ಮತ್ತು 50 ಇಂಚಿನ ಡಿಸ್‌ಪ್ಲೇ ಗಾತ್ರಗಳಲ್ಲಿ ಈ ಸ್ಮಾರ್ಟ್‌ಟಿವಿಗಳು ಕಾಣಿಸಿಕೊಂಡಿದ್ದು, ಪ್ರತಿ ಟಿವಿಗಳು ಸಹ ವಿವಿಧ ರೀರಿಯಲ್ಲಿ ಬಳಕೆದಾರರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಇವು ಭಿನ್ನ ಸಾಮರ್ಥ್ಯದಿಂದ ಕೂಡಿವೆ.

ಈ ಸ್ಮಾರ್ಟ್‌ಟಿವಿ ವಿಭಾಗದಲ್ಲಿ 30 ಇಂಚಿನ ಟಿವಿ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದರೆ, 40 ಮತ್ತು 42 ಇಂಚಿನ ಡಿವಿಗಳು ಫುಲ್‌ ಹೆಚ್‌ಡಿ ಡಿಸ್‌ಪ್ಲೇನಲ್ಲಿ ಕಾಣಿಸಿಕೊಂಡಿವೆ.ಇದಾದ ಬಳಿಕ 43ಇಂಚಿನ ಮತ್ತು 50ಇಂಚಿನ ಸ್ಮಾರ್ಟ್‌ಟಿವಿಗಳು 4Kಡಿಸ್‌ಪ್ಲೇಗಳೊಂದಿಗೆ ಕಾಣಿಸಿಕೊಂಡಿದ್ದು, ಈ ಎರಡೂ ಟಿವಿಗಳು ಗೂಗಲ್‌ ಟಿವಿಗಳಾಗಿವೆ.ಇದರಲ್ಲಿ ಹೆಚ್‌ಡಿ ಹಾಗೂ ಫುಲ್‌ ಹೆಚ್‌ಡಿ ವೇರಿಯಂಟ್‌ ಟಿವಿಗಳು ರಿಯಲ್ಟೆಕ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್‌ 11ಓಎಸ್‌ ಅನ್ನು ಹೊಂದಿದ್ದು, 30Wಸ್ಪೀಕರ್‌ಗಳು, ಡಾಲ್ಬಿ ಡಿಜಿಟಲ್‌ ಸೇರಿದಂತೆ ಇತರೆ ಸಾಮರ್ಥ್ಯ ಪಡೆದುಕೊಂಡಿವೆ.

ಥಾಮ್ಸನ್‌ನಿಂದ 5 ಹೊಸ ಸ್ಮಾರ್ಟ್‌ಟಿವಿಗಳ ಅನಾವರಣ: ಅಗ್ಗದ ಬೆಲೆ!

ಥಾಮ್ಸನ್ ನ 43 ಮತ್ತು 50 ಇಂಚಿನ ವೇರಿಯಂಟ್‌ ಸ್ಮಾರ್ಟ್‌ಟಿವಿಗಳು ಬೆಜೆಲ್-ಲೆಸ್ ಪ್ಯಾನೆಲ್‌ನೊಂದಿಗೆ ಕಾಣಿಸಿಕೊಂಡಿದ್ದು, ಇವು ಡಾಲ್ಬಿ ವಿಷನ್, ಹೆಚ್‌ಡಿಆರ್‌ 10+ ಮತ್ತು ಡಾಲ್ಬಿ ಅಟ್ಮಾಸ್‌ ನಂತಹ ಪ್ರೀಮಿಯಂ ಫೀಚರ್ಸ್‌ ಅನ್ನು ಪಡೆದುಕೊಂಡಿವೆ. ಇದರೊಂದಿಗೆ ಡಾಲ್ಬಿ ಡಿಜಿಟಲ್ ಪ್ಲಸ್, ಡಿಟಿಎಸ್‌ ಟ್ರೂಸರೌಂಡ್, 40W ಡಾಲ್ಬಿ ಆಡಿಯೋ ಸ್ಟೀರಿಯೋ ಬಾಕ್ಸ್ ಸ್ಪೀಕರ್ಸ್‌ ಆಯ್ಕೆ ಇದ್ದು, 2GB RAM ಹಾಗೂ16GB ಇಂಟರ್‌ ಸ್ಟೋರೇಜ್ ನಲ್ಲಿ ಕಾಣಿಸಿಕೊಂಡಿವೆ.

ಈ ಎಲ್ಲಾ ಸ್ಮಾರ್ಟ್‌ಟಿವಿಗಳು ಪ್ರಮುಖವಾಗಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ಹಾಟ್‌ಸ್ಟಾರ್ ಮತ್ತು ಆಪಲ್‌ ಟಿವಿಗೆ ಬೆಂಬಲ ನೀಡಲಿದ್ದು, ಗೂಗಲ್‌ ಪ್ಲೇ ಸ್ಟೋರ್‌ ಮೂಲಕ 6,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳನ್ನು ಡೌನ್‌ಲೋಡ್‌ ಮಾಡುವ ಅವಕಾಶವನ್ನು ಬಳಕೆದಾರರಿಗೆ ನೀಡಿವೆ. ಇದರ ಮೂಲ ಬಳಕೆದಾರರು ಅಗತ್ಯ ಸೇವೆಯನ್ನು ಅತ್ಯಂತ ಸುಲಭ ಮಾರ್ಗದಲ್ಲಿ ಪಡೆದುಕೊಳ್ಳಬಹುದಾಗಿದೆ.

ಥಾಮ್ಸನ್ ಸ್ಮಾರ್ಟ್‌ಟಿವಿಗಳ ಬೆಲೆ ವಿವರ: ಈ ಟಿವಿಗಳ ಬೆಲೆ ವಿಚಾರಕ್ಕೆ ಬರುವುದಾದರೆ 32 ಇಂಚಿನ ಹೆಚ್‌ಡಿ ಸ್ಮಾರ್ಟ್ ಟಿವಿ 10,499 ರೂ.ಗೆ ಲಭ್ಯವಿದೆ, ಹಾಗೂ 40 ಇಂಚಿನ ಮತ್ತು 42 ಇಂಚಿನ ಫುಲ್ ಹೆಚ್‌ಡಿ ಸ್ಮಾರ್ಟ್‌ಟಿವಿಗಳು ಕ್ರಮವಾಗಿ 15,999ರೂ.ಮತ್ತು 16,999 ರೂ. ಗಳಲ್ಲಿ ಲಭ್ಯ ಇದ್ದು, 43 ಮತ್ತು 50 ಇಂಚಿನ 4K ಗೂಗಲ್ ಟಿವಿ ಮಾದರಿಗಳು ಕ್ರಮವಾಗಿ 22,999ರೂ. ಮತ್ತು 27,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ಥಾಮ್ಸನ್‌ನಿಂದ 5 ಹೊಸ ಸ್ಮಾರ್ಟ್‌ಟಿವಿಗಳ ಅನಾವರಣ: ಅಗ್ಗದ ಬೆಲೆ!

ಈ ಸ್ಮಾರ್ಟ್‌ಟಿವಿಗಳ ಜೊತೆಗೆ ಥಾಮ್ಸನ್ ಹೊಸದಾಗಿ ವಾಷಿಂಗ್ ಮೆಷಿನ್ ಯಂತ್ರಗಳನ್ನು ಸಹ ಬಿಡುಗಡೆ ಮಾಡಿದೆ. ಇದು ಮೃದುವಾದ ಮುಚ್ಚಳವನ್ನು ಹೊಂದಿದ್ದು, 3D ವಾಶ್ ರೋಲರ್‌ಗಳು, ಡಿಟರ್ಜೆಂಟ್ ಬಾಕ್ಸ್ ಮತ್ತು ಇನ್ನೂ ಹೆಚ್ಚಿನ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಲಾಂಚ್‌ ಆದ ಮೆಷಿನ್‌ಗಳಲ್ಲಿ 9kg (TSA9000SP), 10kg (TSA1000SP), 11kg (TSA1100SP), ಮತ್ತು 12kg (TSA1200SP) ವೇರಿಯಂಟ್‌ನಲ್ಲಿ ಲಭ್ಯ ಇವೆ.

Best Mobiles in India

English summary
Thomson has launched 5 new Smart TVs in India. If want to buy budget smart TVs then you can buy these TVs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+