Home
ಸುದ್ದಿಜಾಲ

HMD ಯಿಂದ ಮೂರು ನೋಕಿಯಾ ಫೀಚರ್ ಫೋನ್‌ ಲಾಂಚ್‌! ಫೀಚರ್ಸ್‌ ಏನು?

ಸ್ಮಾರ್ಟ್‌ಫೋನ್‌ಗಳು (Smartphones) ಎಷ್ಟೇ ಜನಪ್ರಿಯತೆ ಪಡೆದರೂ ಸಹ ಫೀಚರ್‌ ಫೋನ್‌ಗಳಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಈ ಕಾರಣಕ್ಕೆ ವಿವಿಧ ಬ್ರ್ಯಾಂಡ್‌ಗಳು ವಿಶೇಷ ಫೀಚರ್ಸ್‌ ಆಯ್ಕೆ ಇರುವ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಈ ನಡುವೆ ನೋಕಿಯಾ (Nokia) ಒಂದೇ ಬಾರಿಗೆ ಮೂರು ಫೀಚರ್‌ ಫೋನ್‌ಗಳನ್ನು ಲಾಂಚ್‌ ಮಾಡಿದೆ.

ಹೌದು, HMD ಇದೀಗ ನೋಕಿಯಾ 6310 (2024), ನೋಕಿಯಾ 5310 (2024) ನೋಕಿಯಾ 230 (2024) ಎಂಬ ಮೂರು ಫೀಚರ್‌ ಫೋನ್‌ಗಳನ್ನು ಜಾಗತಿಕವಾಗಿ ಲಾಂಚ್‌ ಮಾಡಿದೆ. ಈ ಫೋನ್‌ಗಳು ಈ ಹಿಂದೆ ಬಿಡುಗಡೆಯಾದ ಫೀಚರ್ ಫೋನ್‌ಗಳ ರಿಫ್ರೆಶ್ ಆವೃತ್ತಿಗಳಾಗಿವೆ. ಹಾಗಿದ್ರೆ, ಇವುಗಳ ಫೀಚರ್ಸ್‌ ಏನು?, ಯಾವೆಲ್ಲಾ ಕಲರ್‌ನಲ್ಲಿ ಲಭ್ಯ ಇವೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

HMD ಯಿಂದ ಮೂರು ನೋಕಿಯಾ ಫೀಚರ್ ಫೋನ್‌ ಲಾಂಚ್‌! ಫೀಚರ್ಸ್‌ ಏನು?

ನೋಕಿಯಾ ಫೀಚರ್ ಫೋನ್‌ಗಳು: ಸ್ಮಾರ್ಟ್‌ಫೋನ್ ಬ್ರಾಂಡ್ ಎಚ್‌ಎಂಡಿ ಜಾಗತಿಕವಾಗಿ ಮೂರು ನೋಕಿಯಾ ಫೀಚರ್ ಫೋನ್‌ಗಳನ್ನು ಅನಾವರಣ ಮಾಡಿದೆ. ಇದರಲ್ಲಿ ನೀವು ನೋಕಿಯಾ 230 (2024), ನೋಕಿಯಾ 6310 (2024), ಮತ್ತು ನೋಕಿಯಾ 5310 (2024) ಫೋನ್‌ಗಳನ್ನು ಕಾಣಬಹುದಾಗಿದೆ. ಈ ನಡುವೆ ನೋಕಿಯಾ 230 (2024) ಫೀಚರ್ ಫೋನ್ 2.8-ಇಂಚಿನ QVGA ಡಿಸ್‌ಪ್ಲೇ ಹೊಂದಿದ್ದು, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ 2 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಇದರ ಜೊತೆಗೆ ಈ ಫೋನ್‌ನಲ್ಲಿನ ಎರಡೂ ಬದಿಗಳಲ್ಲಿ ಎಲ್‌ಇಡಿ ಫ್ಲ್ಯಾಶ್‌ ಅನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲದೆ ಈ ಫೋನ್‌ ಯುನಿಸೊಕ್ 6531F ಚಿಪ್‌ಸೆಟ್‌ನೊಂದಿಗೆ 8MB RAM ಮತ್ತು 16MB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಇದನ್ನು 32GB ವರೆಗೆ ಸ್ಟೋರೇಜ್‌ ಹೆಚ್ಚಿಗೆ ಮಾಡಲು ಅನುಮತಿಸುತ್ತದೆ. ಕೊನೆಯದಾಗಿ ಈ ಫೋನ್ 1,450 ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, MP3 ಪ್ಲೇಯರ್, ಎಫ್‌ಎಮ್‌ ರೇಡಿಯೋ, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ ಆಯ್ಕೆ ಪಡೆದಿದೆ.

HMD ಯಿಂದ ಮೂರು ನೋಕಿಯಾ ಫೀಚರ್ ಫೋನ್‌ ಲಾಂಚ್‌! ಫೀಚರ್ಸ್‌ ಏನು?

ಇದರೊಂದಿಗೆ ನೋಕಿಯಾ 6310 (2024) ಮತ್ತು ನೋಕಿಯಾ 5310 (2024) ಫೋನ್‌ಗಳು 2.8 ಇಂಚಿನ QVGA ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿವೆ. ಆದರೆ, ಈ ಫೋನ್‌ನಲ್ಲಿ 0.3 ಮೆಗಾಪಿಕ್ಸೆಲ್‌ ಕ್ಯಾಮೆರಾ ಇದ್ದು, ನೋಕಿಯಾ 230 (2024) ಫೋನ್‌ನಂತೆ ಈ ಎರಡೂ ಫೋನ್‌ಗಳೂ ಸಹ ಯುನಿಸೊಕ್ 6531 ಎಫ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿವೆ. ಅಲ್ಲದೆ ಅದೇ ರೀತಿಯ RAM ಮತ್ತು ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಈ ಫೋನ್‌ಗಳನ್ನು ಕಾಣಬಹುದಾಗಿದೆ.

ನೋಕಿಯಾ 230, ನೋಕಿಯಾ 6310, ನೋಕಿಯಾ 5310 ಯಾವ ಕಲರ್‌ನಲ್ಲಿ ಲಭ್ಯ?: ಈ ಫೋನ್‌ಗಳಲ್ಲಿ ನೋಕಿಯಾ 230 (2024) ಅನ್ನು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ನೋಕಿಯಾ 6310 (2024) ಕಪ್ಪು ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಹಾಗೆಯೇ ನೋಕಿಯಾ 5310 (2024) ಕಪ್ಪು ಮತ್ತು ಕೆಂಪು ಮತ್ತು ಬಿಳಿ ಮತ್ತು ಕೆಂಪು ಸಂಯೋಜನೆಯಲ್ಲಿ ಲಭ್ಯ ಇರಲಿದೆ.

HMD ಯಿಂದ ಮೂರು ನೋಕಿಯಾ ಫೀಚರ್ ಫೋನ್‌ ಲಾಂಚ್‌! ಫೀಚರ್ಸ್‌ ಏನು?

ನೋಕಿಯಾ 230, ನೋಕಿಯಾ 6310, ನೋಕಿಯಾ 5310 ಬೆಲೆ ಹಾಗೂ ಲಭ್ಯತೆ: ನೋಕಿಯಾ ಫೀಚರ್ ಫೋನ್‌ಗಳ ಬೆಲೆ, ಲಭ್ಯತೆ ಮತ್ತು ಭಾರತದ ಬಿಡುಗಡೆ ವಿವರಗಳನ್ನು ಇನ್ನೂ ಪ್ರಕಟ ಮಾಡಿಲ್ಲ. ಮುಂಬರುವ ದಿನಗಳು ಅಥವಾ ವಾರಗಳಲ್ಲಿ ಎಚ್‌ಎಂಡಿ ಅಗತ್ಯ ವಿವರಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಈ ಫೋನ್‌ಗಳು ಯಾವಾಗ ಭಾರತಕ್ಕೆ ಎಂಟ್ರಿ ನೀಡಲಿವೆ?, ಬೆಲೆ ಎಷ್ಟಿರಲಿದೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಲು ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

Best Mobiles in India

English summary
HMD has now launched three feature phones globally namely Nokia 6310 (2024), Nokia 5310 (2024) and Nokia 230 (2024). These phones are refreshed versions of the previously launched feature phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+