ವಾಟ್ಸಾಪ್‌ ರೆಡ್‌ ಟಿಕ್‌ ಮೆಸೆಜ್‌: ಸರ್ಕಾರ ವಾಟ್ಸಾಪ್‌ ಕರೆ ರೆಕಾರ್ಡ್ ಮಾಡುತ್ತಿಲ್ಲ!

|

ಸರ್ಕಾರದ ಹೊಸ ಐಟಿ ನಿಯಮ ಜಾರಿಯ ಬಗ್ಗೆ ಫೇಸ್‌ಬುಕ್‌ ಒಡೆತನದ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಭಾರತ ಸರ್ಕಾರದ ವಿರುದ್ಧ ದೆಹಲಿಯಲ್ಲಿ ನೆನ್ನೆಯಷ್ಟೆ ಕಾನೂನು ದೂರು ದಾಖಲಿಸಿದೆ. ಹೊಸ ಸಂವಹನ ನಿಯಮಗಳನ್ನು ಜಾರಿಗೊಳಿಸಿದ ನಂತರ, ನಿಮ್ಮ ಎಲ್ಲಾ ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ ಮತ್ತು ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ಮೇಲ್ವಿಚಾರಣೆ ಮಾಡಲಾಗುತ್ತದೆ ಎನ್ನುವ ಕುರಿತಾದ ಟಿಕ್ ಮಾರ್ಕ್‌ ಮೆಸೆಜ್‌ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಆದರೆ ಇದು ನಕಲಿ ಸುದ್ದಿ ಆಗಿದೆ.

ವಾಟ್ಸಾಪ್‌ ರೆಡ್‌ ಟಿಕ್‌: ಸರ್ಕಾರ ವಾಟ್ಸಾಪ್‌ ಕರೆ ರೆಕಾರ್ಡ್ ಮಾಡುತ್ತಿಲ್ಲ!

ಎರಡು ನೀಲಿ ಟಿಕ್‌ ಮತ್ತು ಒಂದು ಕೆಂಪು ಟಿಕ್ ಎಂದರೆ ಸರ್ಕಾರವು ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಮೂರು ಕೆಂಪು ಟಿಕ್‌ ಮಾರ್ಕ್‌ ಬಂದರೇ ಸರ್ಕಾರವು ನಿಮ್ಮ ವಿರುದ್ಧ ನ್ಯಾಯಾಲಯದ ವಿಚಾರಣೆಯನ್ನು ಪ್ರಾರಂಭಿಸಿದೆ ಎಂದರ್ಥ. ಈ ರೀತಿಯ ಹೊಸ ಮೆಸೆಜ್‌ ವಾಟ್ಸಾಪ್‌ನಲ್ಲಿ ವೈರಲ್‌ ಆಗುತ್ತಿದೆ. ಬಳಕೆದಾರರು ಫಾರ್ವರ್ಡ್‌ ಮಾಡುತ್ತಲಿದ್ದಾರೆ. ಆದರೆ ಬಳಕೆದಾರರು ಇದು ನಕಲಿ ಮೆಸೆಜ್‌ ಎಂದು ಗಮನಿಸಬೇಕು. ಇದೇ ರಿತಿಯ ಕೆಂಪು ಟಿಕ್ ಮಾರ್ಕ್‌ ಮೆಸೆಜ್ ಕಳೆದ ವರ್ಷ ವೈರಲ್ ಆಗಿತ್ತು.

ವಾಟ್ಸಾಪ್‌ ರೆಡ್‌ ಟಿಕ್‌: ಸರ್ಕಾರ ವಾಟ್ಸಾಪ್‌ ಕರೆ ರೆಕಾರ್ಡ್ ಮಾಡುತ್ತಿಲ್ಲ!

ಈ ಮೆಸೆಜ್ 'forwarded many times'' ಲೆಬಲ್ ಪಡೆದಿದೆ ಅಂದರೇ ಹೆಚ್ಚು ಫಾರ್ವರ್ಡ್ ಆಗಿದೆ. ಇದರಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಿದ ನಂತರ, ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಲಾಗುವುದು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನೂ ಸಹ ಮೇಲ್ವಿಚಾರಣೆ ಮಾಡಲಾಗುತ್ತದೆ ಎನ್ನುವ ಸಂದೇಶವಿದೆ. ಆದರೆ ಇದು ಸಂಪೂರ್ಣ ನಕಲಿ ಮತ್ತು ವಿಲಕ್ಷಣ ಸಂದೇಶವಾಗಿದ್ದು, ಇವುಗಳಲ್ಲಿ ಯಾವುದನ್ನೂ ಸರ್ಕಾರ ನಿಯಮಗಳಲ್ಲಿ ತಿಳಿಸಿಲ್ಲ. ಹೊಸ ಗೌಪ್ಯತೆ ನಿಯಮಗಳು ಬಳಕೆದಾರರ ಗೌಪ್ಯತೆಗೆ ಪರಿಣಾಮ ಬೀರುತ್ತವೆ ಎಂದು ಹೇಳುತ್ತಾ ವಾಟ್ಸಾಪ್ ನ್ಯಾಯಾಲಯಕ್ಕೆ ಹೋಗಿದ್ದರೆ, ದೇಶದ ಸಾರ್ವಭೌಮತ್ವಕ್ಕೆ ಬೆದರಿಕೆ ಇದ್ದಲ್ಲಿ ಸಂದೇಶದ ಮೊದಲ ಮೂಲದವರ ಬಗ್ಗೆ ಚಾಟ್ ಫೋರಂನಿಂದ ಮಾಹಿತಿಯನ್ನು ಪಡೆಯುವುದಾಗಿ ಸರ್ಕಾರ ಹೇಳಿದೆ.

ವಾಟ್ಸಾಪ್‌ ರೆಡ್‌ ಟಿಕ್‌: ಸರ್ಕಾರ ವಾಟ್ಸಾಪ್‌ ಕರೆ ರೆಕಾರ್ಡ್ ಮಾಡುತ್ತಿಲ್ಲ!

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ವಿಷಯದಲ್ಲಿ, ಭಾರತದಲ್ಲಿ ಅನುಸರಣೆ ಅಧಿಕಾರಿಯನ್ನು ನೇಮಿಸಲು, ಕುಂದುಕೊರತೆ ವ್ಯವಸ್ಥೆಯನ್ನು ಸ್ಥಾಪಿಸಲು ಮತ್ತು ಕಾನೂನು ಆದೇಶದ 36 ಗಂಟೆಗಳ ಒಳಗೆ ವಿಷಯವನ್ನು ಕೆಳಗಿಳಿಸಲು ಸರ್ಕಾರ ಕೇಳಿದೆ. ಕರೆಗಳನ್ನು ರೆಕಾರ್ಡ್ ಮಾಡಲಾಗುವುದು ಎಂದು ಅದು ಸ್ಪಷ್ಟವಾಗಿ ಹೇಳುವುದಿಲ್ಲ ಮತ್ತು ಹೆಚ್ಚುವರಿ ಟಿಕ್ ವ್ಯವಸ್ಥೆಯನ್ನು ಪರಿಚಯಿಸುವ ಬಗ್ಗೆಯೂ ಉಲ್ಲೇಖಿಸಿಲ್ಲ.

ಪ್ರಸ್ತುತ ನಿಮ್ಮ ಸಂದೇಶದ ವಿರುದ್ಧ ಎರಡು ಟಿಕ್‌ಗಳು ಕಾಣಿಸಿಕೊಂಡಾಗ ನಿಮ್ಮ ಸಂದೇಶವನ್ನು ನೋಡಲಾಗಿದೆ ಅಥವಾ ಓದಲಾಗಿದೆ ಎಂಬ ಸೂಚಕವಾಗಿದೆ. ಸರಿಯಾದ ಮಾಹಿತಿಗಾಗಿ ಐಟಿ ನಿಯಮಗಳು 2021 ಅನ್ನು ನೋಡಿ.

Best Mobiles in India

English summary
WhatsApp calls will be recorded and your social media accounts will also be monitored.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X