ಲಾಕ್‌ಡೌನ್ ಟೈಮ್‌ನಲ್ಲಿಯೂ ಟಿಕ್‌ಟಾಕ್ ಆಪ್ ನಂಬರ್ ಒನ್!
ಬೈಟ್‌ಡ್ಯಾನ್ಸ್ ಒಡೆತನದ ಶಾರ್ಟ್ ವಿಡಿಯೊ ಆಪ್ ಟಿಕ್‌ಟಾಕ್ ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟುಹಾಕಿದ್ದು, ಹೆಚ್ಚಿನ ಆಕ್ಟಿವ್ ಬಳಕೆದಾರರನ್ನು ಹೊಂದಿದೆ. ಇತ್ತೀಚಿಗೆ ಟಿಕ್‌ಟಾಕ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದ್ದು, ಅತೀ ಹೆಚ್ಚು ಡೌನ್‌ಲೋಡ್ ಕಂಡಿರುವುದು ನಿಮಗೆ ಗೊತ್ತಿರುವ ಸಂಗತಿಯೇ ಆಗಿದೆ. ಆದ್ರೆ ಭಾರತದಲ್ಲಿ ಈ ಲಾಕ್‌ಡೌನ್ ಅವಧಿಯಲ್ಲಿಯೂ ಸಹ ಟಿಕ್‌ಟಾಕ್ ವಿಡಿಯೊ ಆಪ್ ನಂಬರ್ ಒನ್ ಪಟ್ಟದಲ್ಲಿ ಕಾಣಿಸಿಕೊಂಡಿದ್ದು, ಫೇಸ್‌ಬುಕ್ ಅನ್ನು ಹಿಂದಾಕುವಲ್ಲಿ ಯಶಸ್ವಿಯಾಗಿದೆ.

ಹೌದು, ಲಾಕ್‌ಡೌನ್ ಅವಧಿಯಲ್ಲಿ ಭಾರತದಲ್ಲಿ ಟಿಕ್‌ಟಾಕ್ ಅಪ್ಲಿಕೇಶನ್ ಹೆಚ್ಚು ಡೌನ್‌ಲೋಡ್ ಆಗಿದೆ. ಈ ಮೂಲಕ ವಾಟ್ಸಪ್ ಮತ್ತು ಫೇಸ್‌ಬುಕ್‌ಗಳನ್ನು ಹಿಂದಿಕ್ಕಿದೆ ಎಂದು ಆಕ್ ಅನ್ನಿ -App Annie ವರದಿಯಿಂದ ತಿಳಿದುಬಂದಿದೆ, ಲಾಕ್‌ಡೌನ್ ಅವಧಿಯ ಕೆಲವೇ ದಿನಗಳಲ್ಲಿ ದೇಶದಲ್ಲಿ ಟಿಕ್‌ಟಾಕ್ ಆಪ್ ಡೌನ್‌ಲೋಡ್‌ನಲ್ಲಿ ಶೇ.20% ನಷ್ಟು ಹೆಚ್ಚಳವಾಗಿದೆ. ಆಪಲ್ ಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್ ಎರಡರಲ್ಲಿಯೂ ಡೌನ್‌ಲೋಡ್ ಅಧಿಕವಾಗಿದೆ.

ಎರಡನೇ ಸ್ಥಾನದಲ್ಲಿ ವಾಟ್ಸಪ್
ಶಾರ್ಟ್ ವಿಡಿಯೊ ಅಪ್ಲಿಕೇಶನ್ ಟಿಕ್‌ಟಾಕ್ ಅತೀ ಹೆಚ್ಚು ಡೌನ್‌ಲೋಡ್ ಕಂಡು ನಂಬರ್ ಒನ್ ಅನಿಸಿಕೊಂಡಿದೆ. ಟಿಕ್‌ಟಾಕ್ ನಂತರದ ಸ್ಥಾನದಲ್ಲಿ ವಾಟ್ಸಪ್ ಹಾಗೂ ಫೇಸ್‌ಬುಕ್‌ಗಳು ಕಾಣಿಸಿಕೊಂಡಿವೆ. ವಾಟ್ಸಪ್ ಬಳಕೆಯಲ್ಲಿಯೂ ಶೇ. 40% ಏರಿಕೆ ಆಗಿದೆ. ಹಾಗೆಯೇ ಇತ್ತೀಚಿಗೆ ಹೆಲೊ ಆಪ್ ಸಹ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅಂದಹಾಗೆ ಹೆಲೊ ಬೈಟ್‌ಡ್ಯಾನ್ಸ್ ಸಂಸ್ಥೆಯ ಅಂಗಸಂಸ್ಥೆಯಾಗಿದೆ.

ಅಧಿಕ ಡೌನ್‌ಲೋಡ್ ಕಂಡಿದೆ
ಕಳೆದ ವರ್ಷದಲ್ಲಿ ಟಿಕ್‌ಟಾಕ್ ಆಪ್ ಅತೀ ತ್ವರಿತವಾಗಿ ಬೆಳವಣಿಗೆಯನ್ನು ಹೊಂದಿದ್ದು, ಭಾರತದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಸೆನ್ಸಾರ್ ಟವರ್ ಪ್ರಕಾರ ಫೆಬ್ರುವರಿಯಲ್ಲಿ ಜಾಗತಿಕವಾಗಿ ಆಂಡ್ರಾಯ್ಡ್ ಮತ್ತು ಐಓಎಸ್‌ನಲ್ಲಿ 113 ಮಿಲಿಯನ್ ಡೌನ್‌ಲೋಡ್‌ಗಳ ಕಂಡಿದೆ. ಹಾಗೆಯೇ ಭಾರತದಲ್ಲಿ 46.6 ಮಿಲಿಯನ್ ಡೌನ್‌ಲೋಡ್ ಕಂಡಿದೆ.

ಲಾಕ್‌ಡೌನ್ ಟೈಂನಲ್ಲಿ ಸಾಮಾಜಿಕ ಜಾಣಗಳ ಸಾಥ್
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ 21 ದಿನಗಳ ಲಾಕ್‌ಡೌನ್ ಜಾರಿ ಮಾಡಿದೆ. ಹೀಗಾಗಿ ಎಲ್ಲರೂ ಮನೆಯಲ್ಲಿ ಇರುವುದು ಅಗತ್ಯವಾಗಿದೆ. ಈ ಅವಧಿಯನ್ನು ಕಳೆಯಲು ಅನೇಕರು ತಮ್ಮ ಅಭಿರುಚಿಯ ಹವ್ಯಾಸಗಳಲ್ಲಿ ಬ್ಯುಸಿಯಾಗಿದ್ದರೇ, ಮತ್ತೆ ಅನೇಕರು ಟಿಕ್ ಟಾಕ್, ಫೇಸ್‌ಬುಕ್, ವಾಟ್ಸಪ್, ಹೆಲ್ಲೊ ನಂತಹ ಸಾಮಾಜಿಕ ತಾಣಗಳಲ್ಲಿ ಸಮಯ ವ್ಯಯಸುತ್ತಿದ್ದಾರೆ.

ಜನೆವರಿ 2020ರಲ್ಲಿ ಟಿಕ್‌ಟಾಕ್ ಆಪ್ ಒಟ್ಟು 104.7 ಮಿಲಿಯನ್ ಡೌನ್‌ಲೋಡ್ ಆಗಿದ್ದು, ಈ ಬಾರಿ ಕಳೆದ ವರ್ಷಕ್ಕಿಂತ ಸುಮಾರು ಶೇ. 46% ರಷ್ಟು ಅಧಿಕ ಡೌನ್‌ಲೋಡ್ ಕಂಡಿದೆ. ಟಿಕ್‌ಟಾಕ್‌ನ ಒಟ್ಟು ಡೌನ್‌ಲೋಡ್ ಸಂಖ್ಯೆಯಲ್ಲಿ ಶೇ. 34.4% ಭಾರತದಲ್ಲಿಯೇ ಡೌನ್‌ಲೋಡ್ ಆಗಿರುವುದು ವಿಶೇಷ. ಇನ್ನು ಜನಪ್ರಿಯ ಫೇಸ್‌ಬುಕ್ ಒಟ್ಟು 61.9 ಮಿಲಿಯನ್ ಡೌನ್‌ಲೋಡ್ ಕಂಡಿದ್ದು, ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಇನ್ನು ಸೆಪ್ಟಂಬರ್ 2016ರಲ್ಲಿ ಲಾಂಚ್ ಆಗಿರುವ ಟಿಕ್‌ಟಾಕ್ ಸದ್ಯ ಲೀಡಿಂಗ್‌ನಲ್ಲಿರುವ ಸಾಮಾಜಿಕ ಜಾಲತಾಣವಾಗಿದ್ದು, ಹಲವಾರು ಕಾರಣಗಳಿಂದ ಸುದ್ದಿಯು ಸಹ ಆಗಿತ್ತು. ಈ ಆಪ್ ಇತ್ತೀಚಿಗೆ ಹಲವಾರು ಅಪ್‌ಡೇಟ್ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಫ್ಯಾಮಿಲಿ ಸೇಫ್ಟಿ ಮೋಡ್ ಆಯ್ಕೆ ಒಂದಾಗಿದೆ. ಈ ಆಯ್ಕೆಯಲ್ಲಿ ಮಕ್ಕಳು ಟಿಕ್‌ಟಾಕ್‌ನಲ್ಲಿ ಏನು ವೀಕ್ಷಿಸಿದ್ದಾರೆ ಎಂದು ತಿಳಿಯಬಹುದಾಗಿದೆ.


Click it and Unblock the Notifications








