Home
ಸುದ್ದಿಜಾಲ

ಟಿಕ್‌ಟಾಕ್‌ ಸೇರಿಕೊಳ್ಳಲಿದೆ ಹೊಸ ಫೀಚರ್‌!..ಏನದು ಗೊತ್ತಾ?

ಚೀನಾ ಮೂಲದ ಶಾರ್ಟ್‌ ವಿಡಿಯೊ ಮೇಕಿಂಗ್ ಅಪ್ಲಿಕೇಶನ್ 'ಟಿಕ್‌ಟಾಕ್' ಸದ್ಯ ದೇಶದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದ್ದು, ಎಲ್ಲ ವಯೋಮಾನದವರನ್ನು ಈ ಆಪ್‌ ಆವರಿಸಿಕೊಂಡಿದೆ. ಆಪ್‌ನಲ್ಲಿ ವಿಡಿಯೊ ಅಪ್‌ಲೋಡ್‌ ಮಾಡುವವರ ಸಂಖ್ಯೆ ಸಹ ದಿನೇ ದಿನೇ ಹೆಚ್ಚುತ್ತಲೇ ಸಾಗಿದ್ದು, ಅದರಲ್ಲಿ ಅನೇಕರು ತಮ್ಮ ಪ್ರತಿಭೆ ಹೊರಹಾಕಲು ಟಿಕ್‌ಟಾಕ್‌ ಅನ್ನು ಒಂದು ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಅದಕ್ಕೆ ಪೂರಕವೆಂಬಂತೆ ಟಿಕ್‌ಟಾಕ್‌ ಸಹ ಈಗ ಹೊಸ ಫೀಚರ್‌ ಸೇರಿಸಲಿದೆ.

ಟಿಕ್‌ಟಾಕ್‌ ಸೇರಿಕೊಳ್ಳಲಿದೆ ಹೊಸ ಫೀಚರ್‌!..ಏನದು ಗೊತ್ತಾ?

ಹೌದು, ಅತೀ ಜನಪ್ರಿಯತೆಯಲ್ಲಿರುವ 'ಟಿಕ್‌ಟಾಕ್'‌ ಆಪ್‌ ಇದೀಗ ಹೊಸದಾಗಿ 'ಶೇರ್' ಫೀಚರ್‌ ಅಳವಡಿಸಲು ಮುಂದಾಗಿದ್ದು, ಈ ಆಯ್ಕೆಯಿಂದಾಗಿ ಬಳಕೆದಾರರು ತಮ್ಮ ವಿಡಿಯೊಗಳನ್ನು ಟಿಕ್‌ಟಾಕ್‌ನಿಂದ ನೇರವಾಗಿ ವಾಟ್ಸಪ್‌ಗೆ ಶೇರ್ ಮಾಡಬಹುದಾಗಿದೆ. ಈ ಆಯ್ಕೆಯು ಈಗಾಗಲೇ ಪ್ರಾಯೋಗಿಕ ಹಂತದಲ್ಲಿದ್ದು, ಸದ್ಯದಲ್ಲಿಯೇ ಟಿಕ್‌ಟಾಕ್‌ನಲ್ಲಿ ವಾಟ್ಸಪ್‌ ಶಾರ್ಟ್‌ಕಟ್‌ ಆಯ್ಕೆ ಸೇರಿಕೊಳ್ಳಲಿದೆ.

ಟಿಕ್‌ಟಾಕ್‌ ಸೇರಿಕೊಳ್ಳಲಿದೆ ಹೊಸ ಫೀಚರ್‌!..ಏನದು ಗೊತ್ತಾ?

ಪ್ರಸ್ತುತ ಟಿಕ್‌ಟಾಕ್ ಶೇರ್‌ ಮೆನುವಿನಲ್ಲಿ ವಾಟ್ಸಪ್‌ ಆಯ್ಕೆ ಕಾಣಿಸುತಲಿದ್ದು, ಆದರೆ ನೇರವಾಗಿ ನಿಮ್ಮ ಆತ್ಮೀಯ ಸ್ನೇಹಿತರಿಗೆ ಕಳುಹಿಸಲು ಆಯ್ಕೆ ಇಲ್ಲ. ಹೀಗಾಗಿ ಇದೀಗ ಟಿಕ್‌ಟಾಕ್ ವಾಟ್ಸಪ್ ಶಾರ್ಟ್‌ಕಟ್ ಫೀಚರ್‌ ಶೇರಿಸಲಿದ್ದು, ಈ ಆಯ್ಕೆಯ ನೆರವಿನಿಂದ ಬಳಕೆದಾರರು ನೇರವಾಗಿ ತಮ್ಮ ನೆಚ್ಚಿನ ಫ್ರೆಂಡ್ಸ್‌ಗಳಿಗೆ, ಟಿಕ್‌ಟಾಕ್ ವಿಡಿಯೊಗಳನ್ನು ಶೇರ್ ಮಾಡಬಹುದಾಗಿದೆ. ಈ ಆಯ್ಕೆಯು ಶೇರ್ ಮೆನುವಿನಲ್ಲಿ ಕಾಣಿಸಿಕೊಳ್ಳಲಿದೆ.

ಟಿಕ್‌ಟಾಕ್‌ ಸೇರಿಕೊಳ್ಳಲಿದೆ ಹೊಸ ಫೀಚರ್‌!..ಏನದು ಗೊತ್ತಾ?

ಹಾಗೆಯೇ ಟಿಕ್‌ಟಾಕ್‌ ತನ್ನ ಸರ್ಚ್ ಆಯ್ಕೆಯಲ್ಲಿಯೂ ಮತ್ತಷ್ಟು ಬದಲಾವಣೆಗಳನ್ನು ಸೇರಿಸುವ ಪ್ರಯತ್ನದಲ್ಲಿದ್ದು, ಸರ್ಚ್ ಆಯ್ಕೆ ಬದಲಿಗೆ ಡಿಸ್ಕವರ ಟ್ಯಾಬ್ ಆಯ್ಕೆಯನ್ನು ಸೇರಿಸಲಿದೆ. ಇನ್‌ಸ್ಟಾಗ್ರಾಂನಲ್ಲಿರುವಂತೆ ಈ ಆಯ್ಕೆ ಇರಲಿದೆ ಎನ್ನಲಾಗಿದ್ದು, ಹಾಗೆಯೇ ಡಿಸ್ಕವರ ಟ್ಯಾಬ್‌ನಲ್ಲಿ ಗ್ರೀಡ್‌ ಫೀಡ್‌ ಲೇಔಟ್‌ ಮಾದರಿಯ ಪ್ಲಾಟ್‌ಫಾರ್ಮ್‌ ನೀಡುವ ತಯಾರಿಯನ್ನು ಮಾಡಿಕೊಳ್ಳುತ್ತಿದೆ.

ಟಿಕ್‌ಟಾಕ್‌ ಡೆವಲಪರ್ಸ್‌ಗಳು ನೂತನ ಹ್ಯಾಶ್‌ಟ್ಯಾಗ್‌ಗಳ ಆಯ್ಕೆಗಳನ್ನು ಅಳವಡಿಸುವ ಕುರಿತು ಪ್ರಾಯೋಗಿಕವಾಗಿ ಟೆಸ್ಟ್‌ಗಳನ್ನು ನಡೆಸಿದ್ದಾರೆ. ಸರ್ಚ್‌ನಲ್ಲಿ ಸಜೆಸ್ಟೆಡ್‌ ಯೂಸರ್ಸ್‌, ಸೌಂಡ್‌ ಮತ್ತು ಹ್ಯಾಶ್‌ಟ್ಯಾಗ್ ಗಳು ಕಾಣಿಸಿಕೊಳ್ಳಲಿದ್ದು, ಇದಲ್ಲದೇ ಲೈಕ್ಡ್‌ ಬೈ ಕ್ರಿಯೆಟರ್‌ ಟ್ಯಾಗ್‌ ಅನ್ನು ಸೇರಿಸಲಿದೆ ಎನ್ನಲಾಗಿದೆ. ಒಟ್ಟಾರೇ ಹೊಸ ಹೊಸ ಫೀಚರ್ಸ್‌ಗಳಿಂದ ಟಿಕ್‌ಟಾಕ್‌ ಆಪ್‌ ಬಳಕೆದಾರರಲ್ಲಿ ಮತ್ತಷ್ಟು ಕ್ರೇಜ್‌ ಹುಟ್ಟಿಸಲಿದೆ.

Best Mobiles in India

English summary
It is likely that not all of the mentioned features will make their way to the stable version of TikTok. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+