'ಟಿಕ್‌ಟಾಕ್' ಮಾತೃ ಸಂಸ್ಥೆಯಿಂದ ಹೊಸ 'ರೆಸ್ಸೊ' ಆಪ್ ಬಿಡುಗಡೆ!

|

ಕಿರು ವಿಡಯೊ ಮೇಕಿಂಗ್ ಅಪ್ಲಿಕೇಶನ್ ಟಿಕ್‌ಟಾಕ್‌ ದೇಶದಲ್ಲಿ ಈಗಾಗಲೇ ಸಾಕಷ್ಟು ಟ್ರೆಂಡ್ ಹುಟ್ಟುಹಾಕಿದೆ. ಚೀನಾ ಮೂಲದ ಬೈಟ್‌ಡ್ಯಾನ್ಸ್‌ ಸಂಸ್ಥೆಗೆ ಸೇರಿದ ಈ ಟಿಕ್‌ಟಾಕ್ ವಿಡಯೊ ಆಪ್ ಎಲ್ಲ ವಯೋಮಾನದವರಿಗೂ ವಿಡಿಯೊ ಕ್ರಿಯೇಟ್ ಮಾಡುವ ಅಭಿರುಚಿಯನ್ನು ಮೂಡಿಸಿರುವುದಂತು ಸುಳ್ಳಲ್ಲ. ಹೀಗೆ ಎಲ್ಲರನ್ನು ಮೋಡಿ ಮಾಡಿರೊ ಬೈಟ್‌ಡ್ಯಾನ್ಸ್ ಸಂಸ್ಥೆಯು ಇದೀಗ ಮತ್ತೊಂದು ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ.

ರೆಸ್ಸೊ ಆಪ್‌

ಹೌದು, ಬೈಟ್‌ಡ್ಯಾನ್ಸ್ ಸಂಸ್ಥೆಯು ಇದೀಗ ''ರೆಸ್ಸೊ ಆಪ್‌'' (Resso app) ಅನ್ನು ಬಿಡುಗಡೆ ಮಾಡಿದ್ದು, ಈ ಅಪ್ಲಿಕೇಶನ್ ಮ್ಯೂಸಿಕ್‌ ಸ್ಟ್ರೀಮಿಂಗ್ ಆಪ್‌ ಆಗಿದೆ. ರೆಸ್ಸೊ ಆಪ್ ಇದೀಗ ಭಾರತದಲ್ಲಿಯು ಲಭ್ಯವಾಗಿದ್ದು, ಬೀಟಾ ಆವೃತ್ತಿಯಲ್ಲಿದೆ. ಅಂದಹಾಗೇ ಈ ರೆಸ್ಸೊ ಮ್ಯೂಸಿಕ್ ಸ್ಟ್ರೀಮಿಂಗ್ ಆಪ್‌ ಆಂಡ್ರಾಯ್ಡ್‌ ಮತ್ತು ಐಓಎಸ್‌ ಓಎಸ್‌ ಸ್ಮಾರ್ಟ್‌ಫೋನ್‌ಗಳೆರಡಕ್ಕೂ ಬೆಂಬಲ ಪಡೆದುಕೊಂಡಿದೆ. ಬಳಕೆದಾರರು ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಹಾಗಾದರೇ ರೆಸ್ಸೊ ಆಪ್‌ ಇನ್‌ಸ್ಟಾಲ್ ಮಾಡುವ ಹಂತಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಸ್ಸೊ ಆಪ್‌ ಡೌನ್‌ಲೋಡ್ ಮಾಡೊದು ಹೇಗೆ

ರೆಸ್ಸೊ ಆಪ್‌ ಡೌನ್‌ಲೋಡ್ ಮಾಡೊದು ಹೇಗೆ

* ಗೂಗಲ್ ಪ್ಲೇ ಸ್ಟೋರ್‌ ತೆರೆದು ರೆಸ್ಸೊ-Resso app ಸರ್ಚ್ ಮಾಡುವುದು

* ರೆಸ್ಸೊ ಬೀಟಾ ಆವೃತ್ತಿಯ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವುದು.

* ಆಪಲ್‌ನಲ್ಲಿ ಆಪಲ್‌ ಸ್ಟೋರ್ ತೆರೆದು ರೆಸ್ಸೊ-Resso app ಸರ್ಚ್ ಮಾಡುವುದು

* ರೆಸ್ಸೊ ಬೀಟಾ ಆವೃತ್ತಿಯ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವುದು.

ರೆಸ್ಸೊ ಆಪ್‌ ಸೆಟ್‌ಅಪ್ ಮಾಡುವುದು ಹೇಗೆ

ರೆಸ್ಸೊ ಆಪ್‌ ಸೆಟ್‌ಅಪ್ ಮಾಡುವುದು ಹೇಗೆ

ಬೈಟ್‌ಡ್ಯಾನ್ಸ್‌ನ ಈ ರೆಸ್ಸೊ ಆಪ್ ಬಹುತೇಕ ಗಾನಾ ಮ್ಯೂಸಿಕ್ ಸ್ಟ್ರೀಮಿಂಗ್ ಆಪ್‌ನಂತೆ ಇದೆ. ಈ ಹಂತಗಳನ್ನು

* ಸ್ಮಾರ್ಟ್‌ಫೋನಿನಲ್ಲಿ ರೆಸ್ಸೊ ಆಪ್ ತೆರೆಯಿರಿ.

* ಆಪ್‌ನಲ್ಲಿ ಸೈನ್‌-ಇನ್‌ ಆಗಬೇಕು. ಫೇಸ್‌ಬುಕ್ ಖಾತೆಯೊಂದಿಗೆ ಅಥವಾ ನೇರವಾಗಿ ಸೈನ್‌ಇನ್ ಆಗಬಹುದು.

* ಸೈನ್‌-ಇನ್‌ ಆದ ನಂತರ ನಿಮ್ಮ ಇಷ್ಟದ ಭಾಷೆಯನ್ನು ಸೆಟ್‌ ಮಾಡಿಕೊಳ್ಳಿ, ಹಾಗೂ ನಿಮ್ಮ ಆಸಕ್ತಿಗನುಸಾರ/ಇಚ್ಛೆಗನುಸಾರ ಹಾಡುಗಳನ್ನು, ಮ್ಯೂಸಿಕ್ ಆರ್ಟಿಸ್ಟ್, ಸೆಲೆಕ್ಟ್ ಮಾಡಿಕೊಳ್ಳಿ.

* ಆಗ ನಿಮ್ಮ ಆಸಕ್ತಿಗನುಗುಣವಾಗಿ ಹಾಡುಗಳು ಪ್ಲೇ ಆಗುತ್ತವೆ. ಬೇರೆ ಹಾಡುಗಳ ಸರ್ಚ್ ಮಾಡುವುದಿದ್ದರೇ ಡಿಸ್ಕವರ್ ಆಯ್ಕೆಯಲ್ಲಿ ಸರ್ಚ್ ಮಾಡಬಹುದು.

ರೆಸ್ಸೊ ಆಪ್ ಚಂದಾ ಶುಲ್ಕ

ರೆಸ್ಸೊ ಆಪ್ ಚಂದಾ ಶುಲ್ಕ

ರೆಸ್ಸೊ ಅಪ್ಲಿಕೇಶನ್ ಉಚಿತವಾಗಿ ಮ್ಯೂಸಿಕ್ ಸ್ಟ್ರೀಮಿಂಗ್ ಮಾಡಲು ಅನುವು ಮಾಡಿಕೊಡುವುದಿಲ್ಲ. ರೆಸ್ಸೊ ಆಪ್‌ ಆಕ್ಸಸ್‌ ಮಾಡಲು ಚಂದಾದಾರಾಗಬೇಕಿದ್ದು, ಅದಕ್ಕಾಗಿ ತಿಂಗಳ ಶುಲ್ಕ 99ರೂ. ಆಗಿದೆ. ಇನ್ನು ಹೊಸ ಬಳಕೆದಾರರಿಗೆ ಮೊದಲ 30 ದಿನಗಳ ಕಾಲ ಉಚಿತ ಸೇವೆ ಲಭ್ಯವಾಗಲಿದೆ. ಚಂದಾದಾರಿಕೆಯ ಸೇವೆಯಲ್ಲಿ ಜಾಹಿರಾತು ಮುಕ್ತ, ಗುಣಮಟ್ಟದ ಮ್ಯೂಸಿಕ್ ಆಕ್ಸಸ್ ದೊರೆಯಲಿದೆ.

Most Read Articles
Best Mobiles in India

English summary
ByteDance, the parent company of TikTok has just launched its own music streaming service in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X