ಭಾರತದಲ್ಲಿ ಚೀನಾ ಮೂಲದ ಈ ವಿಡಿಯೊ ಆಪ್‌ ಸ್ಥಗಿತವಾಗಲಿದೆ!

|

ಸದ್ಯ ಅತೀ ಹೆಚ್ಚಿನ ಬಳಕೆದಾರರನ್ನು ಒಳಗೊಂಡು ಭಾರಿ ಟ್ರೆಂಡಿಂಗ್‌ನಲ್ಲಿರುವ ಆಪ್‌ ಅಂದ್ರೇ ಅದು ಟಿಕ್‌ಟಾಕ್. ಚೀನಾ ಮೂಲದ ಜನಪ್ರಿಯ ಟಿಕ್‌ಟಾಕ್‌ ಆಪ್‌ ದೇಶದಲ್ಲಿ ಬ್ಯಾನ್ ಆಗಬೇಕೆಂಬ ಕೂಗು ಚಾಲ್ತಿಯಲ್ಲಿದೆ. ಈ ನಡುವೆ ಟಿಕ್‌ಟಾಕ್ ಮಾತೃ ಸಂಸ್ಥೆಯಾದ ಬೈಟ್‌ಡ್ಯಾನ್ಸ್‌, ತನ್ನದೊಂದು ಜನಪ್ರಿಯ ಅಪ್ಲಿಕೇಶನ್ ಅನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ಥಗಿತ ಮಾಡಲು ನಿರ್ಧರಿಸಿದೆ.

ಬೈಟ್‌ಡ್ಯಾನ್ಸ್‌

ಹೌದು, ಚೀನಾ ಮೂಲದ ಬೈಟ್‌ಡ್ಯಾನ್ಸ್‌ ಸಂಸ್ಥೆಯು ಟಿಕ್‌ಟಾಕ್‌ ಸೇರಿದಂತೆ ಹಲವು ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಅವುಗಳಲ್ಲಿ ಟಿಕ್‌ಟಾಕ್‌ನಂತೆ ಜನರನ್ನು ಹೆಚ್ಚು ಆಕರ್ಷಿಸಿದ್ದು ವಿಗೊ ವಿಡಿಯೋ ಅಪ್ಲಿಕೇಶನ್. ಈ ವಿಗೊ ವಿಡಿಯೋ ಆಪ್ ಶಾರ್ಟ್‌ ವಿಡಿಯೋ ಶೇರಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಬೈಟ್‌ಡ್ಯಾನ್ಸ್‌ ಸದ್ಯದಲ್ಲಿಯೇ ದೇಶದಲ್ಲಿ ಈ 'ವಿಗೊ ವಿಡಿಯೋ' ಆಪ್‌ ಅನ್ನು ಸ್ಥಗಿತ ಮಾಡಲು ಮುಂದಾಗಿದೆ.

ವಿಡಿಯೊ ಆಪ್

ಬೈಟ್‌ಡ್ಯಾನ್ಸ್‌ ತನ್ನ ವಿಗೊ ವಿಡಿಯೊ ಆಪ್‌ ಅನ್ನು ಭಾರತದಲ್ಲಿ ನಿಲ್ಲಿಸಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ವಿಗೊ ವಿಡಿಯೊ ಬಳಕೆದಾರರಿಗೆ ಅಕ್ಟೋಬರ್ 31, 2020ರ ಒಳಗಾಗಿ ತಮ್ಮ ವಿಗೊ ಖಾತೆಯ ಕಂಟೆಂಟ್‌ಗಳನ್ನು ಟಿಕ್‌ಟಾಕ್‌ ಖಾತೆಗೆ ವರ್ಗಾಯಿಸಲು ತಿಳಿಸಿದೆ. ಬೈಟ್‌ಡ್ಯಾನ್ಸ್‌ ಈಗಾಗಲೇ ಬ್ರೆಜಿಲ್ ಮತ್ತು ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ವಿಗೊ ವಿಡಿಯೊ ಆಪ್‌ ಅನ್ನು ಸ್ಥಗಿತಗೊಳಿಸಿದೆ.

ಫೇವರೇಟ್ ಲಿಸ್ಟ್

ವಿಗೊ ವಿಡಿಯೊ ಆಪ್‌ನಲ್ಲಿನ ಶಾರ್ಟ್‌ ವೀಡಿಯೊಗಳು, ವೈಯಕ್ತಿಕ ಮಾಹಿತಿ, ಚಾಟ್ ಹಿಸ್ಟರಿ ಮತ್ತು ಫೇವರೇಟ್ ಲಿಸ್ಟ್‌ ಸೇರಿದಂತೆ ತಮ್ಮ ವೈಯಕ್ತಿಕ ಡೇಟಾವನ್ನು ಡೌನ್‌ಲೋಡ್ ಮಾಡಲು ಅಥವಾ ಅವರ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವ ಕುರಿತಾಗಿ ವಿಗೊ ವಿಡಿಯೋ ಆಪ್ ಬಳಕೆದಾರರಿಗೆ ವಿವರವಾದ ಸೂಚನೆಗಳನ್ನು ನೀಡುವುದಾಗಿ ಎಂದು ವಿಗೊ ವಿಡಿಯೋ ತಿಳಿಸಿದೆ.

ಭಾರತ

ಬೈಟ್‌ಡ್ಯಾನ್ಸ್‌ನ ಅಪ್ಲಿಕೇಶನ್‌ಗಳಿಗೆ ಭಾರತವು ದೊಡ್ಡ ಮಾರುಕಟ್ಟೆಯಾಗಿದೆ. ಮುಖ್ಯವಾಗಿ ಭಾರತದಲ್ಲಿ ಟಿಕ್‌ಟಾಕ್ ಬಳಕೆದಾರರ ಸಂಖ್ಯೆ ದೊಡ್ಡದಿದೆ. ಇನ್ನು ಈ ವಿಗೊ ವಿಡಿಯೊ 2017 ರಲ್ಲಿ ಬಿಡುಗಡೆಯಾಗಿತ್ತು ಆದರೆ ಅಷ್ಟೊಂದು ಜನಪ್ರಿಯತೆ ಹೊಂದಿಲ್ಲ. ಟೆಕ್ಕ್ರಂಚ್ನಲ್ಲಿನ ವರದಿಯ ಪ್ರಕಾರ, ವಿಗೊ ವಿಡಿಯೋ ಕಳೆದ ತಿಂಗಳು ಸುಮಾರು ನಾಲ್ಕು ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದ್ದದೆ. ಶಕ್ತಿ ಮತ್ತು ಸಂಪನ್ಮೂಲಗಳನ್ನು ಇತರ ವ್ಯವಹಾರಗಳ ಮೇಲೆ ಕೇಂದ್ರೀಕರಿಸುವ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಸಂಸ್ಥೆಯು ತಿಳಿಸಿದೆ.

Best Mobiles in India

English summary
ByteDance which owns TikTok has decided to shut down its short video-sharing platform Vigo Video in India by October 31.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X