'ಟಿಕ್‌ಟಾಕ್‌' ಸಂಸ್ಥೆಯಿಂದ ಮತ್ತೆ ಹೊಸದೊಂದು ಆಪ್‌ ಲಾಂಚ್!

|

ಇತ್ತೀಚಿಗೆ ಬ್ಯಾನ್‌ ಆಗಿ ಗೂಗಲ್‌ ಮತ್ತು ಆಪಲ್ ಪ್ಲೇ ಸ್ಟೋರ್‌ಗಳಲ್ಲಿ ಅಲಭ್ಯವಾಗಿ ಮತ್ತೆ ಮರುಜೀವ ಪಡೆದಿರುವ ಚೀನಾ ಮೂಲದ 'ಟಿಕ್‌ಟಾಕ್‌' ವಿಡಿಯೊ ಆಪ್‌ ಅತೀ ಹೆಚ್ಚು ಬಳಕೆದಾರರನ್ನು ಹೊಂದುತ್ತಿದೆ. ಇದೀಗ ಟಿಕ್‌ಟಾಕ್ ಆಪ್‌ ಅನ್ನು ಪರಿಚಯಿಸಿದ ಬೈಟ್‌ಡ್ಯಾನ್ಸ್ ಸಂಸ್ಥೆಯು ಗ್ರಾಹಕರಿಗೆ ಮತ್ತೊಂದು ಹೊಸ ಸೋಶಿಯಲ್ ಆಪ್‌ ಪರಿಚಯಿಸಿ ಅಚ್ಚರಿ ನೀಡಿದ್ದು, ಈ ಹೊಸ ಆಪ್‌ ಭಾರಿ ಜನಪ್ರಿಯತೆ ಹೊಂದಲಿದೆ ಎನ್ನುವ ಸೂಚನೆಗಳನ್ನು ಹೊರಹಾಕಿದೆ.

'ಟಿಕ್‌ಟಾಕ್‌' ಸಂಸ್ಥೆಯಿಂದ ಮತ್ತೆ ಹೊಸದೊಂದು ಆಪ್‌ ಲಾಂಚ್!

ಹೌದು, ಬೈಟ್‌ಡ್ಯಾನ್ಸ್‌ ಸಂಸ್ಥೆಯು ಹೊಸದಾಗಿ ಫೀಲಿಯಾಓ (Feiliao) ಹೆಸರಿನ ಸಾಮಾಜಿಕ ಅಪ್ಲಿಕೇಶನ್ ಅನ್ನು ಲಾಂಚ್‌ ಮಾಡಿದೆ. ಫೀಲಿಯಾಓ ಆಪ್‌ ಇನ್‌ಸ್ಟಂಟ್ ಮೆಸೆಜಿಂಗ್ ಆಪ್‌ ಆಗಿದ್ದು, ಇದರಲ್ಲಿ ಕೇಲವು ಟಾಪಿಕ್‌ಗಳ ಕುರಿತಾಗಿ ಚರ್ಚೆ ನಡೆಸಬಹುದಾದ ಆಯ್ಕೆಗಳು ಇವೆ ಎನ್ನಲಾಗಿದೆ. ಆಂಡ್ರಾಯ್ಡ್ ಓಎಸ್‌ ಮತ್ತು ಐಎಸ್‌ಓ ಮಾದರಿಯ ಓಎಸ್‌ ಬಳಕೆದಾರರಿಬ್ಬರೂ ಸಹ ಈ ಆಪ್‌ ಅನ್ನು ಬಳಕೆಮಾಡಬಹುದಾಗಿದೆ.

'ಟಿಕ್‌ಟಾಕ್‌' ಸಂಸ್ಥೆಯಿಂದ ಮತ್ತೆ ಹೊಸದೊಂದು ಆಪ್‌ ಲಾಂಚ್!

ಫೀಲಿಯಾಓ ಆಪ್‌ನಲ್ಲಿ ಪ್ರಮುಖ ವಿಷಯಗಳ ಕುರಿತು ಗ್ರೂಪ್‌ಗಳಲ್ಲಿ ಚರ್ಚಿಸಬಹುದಾಗಿದ್ದು, ಹಾಗೇ ಈ ಆಪ್‌ನ ವಿಶೇಷತೆಯೆಂದರೇ ಇದರಲ್ಲಿ ಎರಡು ಮಾದರಿ ಗ್ರೂಪ್‌ ಚಾಟ್‌ ಆಯ್ಕೆಗಳಿದೆ. ಅವುಗಳು ತೆರೆದ ಮತ್ತು ಸಾಮಾನ್ಯ ಎಂಬ ವರ್ಗೀಕರಣದಲ್ಲಿರಲಿವೆ. ಹಾಗಾದರೇ ಬೈಟ್‌ಡ್ಯಾನ್ಸ್‌ ಸಂಸ್ಥೆಯು ಅಭಿವೃದ್ದಿ ಪಡೆಸಿರುವ ಫೀಲಿಯಾಓ ಮೆಸೆಜಿಂಗ್ ಆಪ್‌ ಕುರಿತಾಗಿ ಇನ್ನಷ್ಟೂ ಮಾಹಿತಿಗಳನ್ನು ಮುಂದೆ ನೋಡೋಣ.

ಓದಿರಿ : ರೆಡ್ಮಿ ನೋಟ್‌ 7ಎಸ್‌ ಲಾಂಚ್!..48ಎಂಪಿ ಕ್ಯಾಮೆರಾ ಫೀಚರ್ ಸ್ಪೆಷಲ್!ಓದಿರಿ : ರೆಡ್ಮಿ ನೋಟ್‌ 7ಎಸ್‌ ಲಾಂಚ್!..48ಎಂಪಿ ಕ್ಯಾಮೆರಾ ಫೀಚರ್ ಸ್ಪೆಷಲ್!

ಬೈಟ್‌ಡ್ಯಾನ್ಸ್‌ ಹೊಸ ಅಸ್ತ್ರ

ಬೈಟ್‌ಡ್ಯಾನ್ಸ್‌ ಹೊಸ ಅಸ್ತ್ರ

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಬೈಟ್‌ಡ್ಯಾನ್ಸ್‌ ಸಂಸ್ಥೆಯ ಟಿಕ್‌ಟಾಕ್‌ ವಿಡಿಯೊ ಆಪ್‌ ಬಳಕೆದಾರರಲ್ಲಿ ಭಾರಿ ಕ್ರೇಜ್‌ ಹುಟ್ಟುಹಾಕಿದೆ. ಅದೇ ಹ್ಯಾಂಗೊವರ್‌ನಲ್ಲಿ ಸಂಸ್ಥೆಯು ಮೆಸೆಜ್‌ ಆಪ್‌ನಲ್ಲೂ ಬಳಕೆದಾರರನ್ನು ಫೀಲಿಯಾಓ ಆಪ್‌ ಮೂಲಕ ಸೆಳೆಯಲು ಮುಂದಾಗಿದೆ.

ಹಲವು ಆಯ್ಕೆಗಳು

ಹಲವು ಆಯ್ಕೆಗಳು

ಫೀಲಿಯಾಓ ಆಪ್‌ ಒಂದು ಮೆಸೆಜಿಂಗ್ ಆಪ್‌ ಆಗಿದ್ದು, ಈ ಆಪ್‌ನಲ್ಲಿ ಟೆಕ್ಟ್ಸ್ ಮೆಸೆಜ್, ಕರೆಗಳು, ವಿಡಿಯೊ ಕಾಲಿಂಗ್, ಪೋಟೊ ಶೇರಿಂಗ್, ಲೊಕೇಶನ್ ಶೇರಿಂಗ್ ಆಯ್ಕೆಗಳು ಸೇರಿದಂತೆ ಫೈಂಡ್‌ ಯೂವರ್‌ ಫ್ರೆಂಡ್‌, ಡೈಲಿ ಲೈಫ್‌ ಶೇರಿಂಗ್ ಎಂಬ ಆಯ್ಕೆಗಳನ್ನು ಸೇರಿಸಲಾಗಿದೆ.

ಮೂಡ್‌ ಸ್ಟಿಕ್ಕರ್ಸ್

ಮೂಡ್‌ ಸ್ಟಿಕ್ಕರ್ಸ್

ಮೆಸೆಜ್‌ಗಳಲ್ಲಿ ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಸಾಮಾನ್ಯವಾಗಿದ್ದು, GIFs ಸೇರಿದಂತೆ ಎಲ್ಲ ಬಗೆಯ ಸ್ಟಿಕ್ಕರ್ ಆಯ್ಕೆಗಳನ್ನು ಫೀಲಿಯಾಓ ಆಪ್‌ ಒಳಗೊಂಡಿದೆ. ಚಾಟ್‌ ಮಾಡುವಾಗ ಮೂಡ್‌ಗೆ ಅನುಗುಣವಾಗಿ ಸ್ಟಿಕ್ಕರ್‌ಗಳ ಮೂಲಕ ಪ್ರತಿಕ್ರಿಯಿಸಬಹುದಾಗಿದ್ದು, ಹಲವು ವಿಧದ ಸ್ಟಿಕ್ಕರ್ ಕಲೆಕ್ಷನ್ ನೀಡಲಾಗಿದೆ.

ಗ್ರೂಪ್‌ ಚಾಟ್‌

ಗ್ರೂಪ್‌ ಚಾಟ್‌

ಫೀಲಿಯಾಓ ಆಪ್‌ನಲ್ಲಿ ಓಪೆನ್ ಮತ್ತು ನಾರ್ಮಲ್ ಎಂಬ ಎರಡು ಗ್ರೂಪ್‌ ಮಾದರಿಗಳನ್ನು ನೀಡಲಾಗಿದ್ದು, ಓಪೆನ್‌ ಗ್ರೂಪ್‌ ಎಂಬುದು ಸಾಮಾನ್ಯ ಗ್ರೂಪ್‌ ಇದ್ದಂತೆ ಸದಸ್ಯರ ಸಂಖ್ಯೆಗೆ ಯಾವುದೇ ಲಿಮಿಟ್‌ ಇಲ್ಲ. ಆದರೆ ನಾರ್ಮಲ್ ಗ್ರೂಪ್ ಮಾದರಿಯಲ್ಲಿ ಪ್ರತಿ ಗ್ರೂಪ್‌ನಲ್ಲಿ ಗರಿಷ್ಠ 100 ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಲಭ್ಯತೆ

ಲಭ್ಯತೆ

ಆಂಡ್ರಾಯ್ಡ್ ಓಎಸ್‌ ಮತ್ತು ಐಓಎಸ್‌ ಮಾದರಿಯ ಓಎಸ್‌ಗಳಿಗೆ ಬೆಂಬಲ ನೀಡಲಿದ್ದು, ಆಪಲ್ ಆಪ್‌ ಸ್ಟೋರ್‌ಗಳಲ್ಲಿ ಈ ಆಪ್‌ ದೊರೆಯಲಿದೆ. ಹಾಗೆಯೇ ಅಂಡ್ರಾಯ್ಡ್‌ ಓಎಸ್‌ ಬಳಕೆದಾರರು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಆಪ್‌ ಅನ್ನು ಡೌನಲೋಡ್‌ ಮಾಡಿಕೊಳ್ಳಬಹುದು. ಎರಡು ಓಎಸ್‌ ಮಾದರಿಯ ಬಳಕೆದಾರರು ಫೀಲಿಯಾಓ ಆಪ್‌ ಬಳಸಬಹುದಾಗಿದೆ.

ಓದಿರಿ : ಎಲ್‌ಜಿ v/s ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ ; ಖರೀದಿಗೆ ಯಾವುದು ಬೆಸ್ಟ್‌!ಓದಿರಿ : ಎಲ್‌ಜಿ v/s ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ ; ಖರೀದಿಗೆ ಯಾವುದು ಬೆಸ್ಟ್‌!

Best Mobiles in India

English summary
TikTok parent company ByteDance has launched a new social app Feiliao.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X