Home
ಸುದ್ದಿಜಾಲ

ಟಿಕ್‌ಟಾಕ್‌ ಮತ್ತೆ ನಂ.1!..ಹಿಂದೆ ಸರಿದ ಫೇಸ್‌ಬುಕ್, ಇನ್‌ಸ್ಟಾಗ್ರಾಂ!

ಚೀನಾ ಮೂಲದ ಶಾರ್ಟ್‌ ವಿಡಿಯೊ ಅಪ್ಲಿಕೇಶನ್ ಟಿಕ್‌ಟಾಕ್ ಅದೀಗ ಟ್ರೆಂಡಿಂಗ್‌ನಲ್ಲಿದ್ದು, ಬಳಕೆದಾರರ ಸಂಖ್ಯೆ ಏರು ಗತಿಯಲ್ಲಿ ಸಾಗಿದೆ. ಸದ್ಯ ಬಹುತೇಕ ಬಳಕೆದಾರರು ಸ್ವಲ್ಪ ಸಮಯ ಸಿಕ್ಕರು ಸಹ ಟಿಕ್‌ಟಾಕ್ ಆಪ್‌ನಲ್ಲಿಯೇ ಎಂಗೇಜ್ ಆಗಿರುತ್ತಾರೆ ಹೀಗಾಗಿ ಮನರಂಜನೆಯ ಅಡ್ಡಾ ಆಗಿ ಗುರುತಿಸಿಕೊಂಡಿದೆ. ಜನೆವರಿಯಲ್ಲಿ ಟಿಕ್‌ಟಾಕ್ ಆಪ್ ಅತೀ ಹೆಚ್ಚು ಡೌನ್‌ಲೋಡ್ ಆಗಿರುವ ಅಪ್ಲಿಕೇಶನ್ ಆಗಿ ಗಮನಸೆಳೆದಿದೆ.

ಬೈಟ್‌ಡ್ಯಾನ್ಸ್‌ ಸಂಸ್ಥೆ

ಹೌದು, ಬೈಟ್‌ಡ್ಯಾನ್ಸ್‌ ಸಂಸ್ಥೆಯ ಮಾಲೀಕತ್ವದ ಟಿಕ್‌ಟಾಕ್ ಆಪ್‌ ಜನೆವರಿ 2020ರಲ್ಲಿ ಅತೀ ಹೆಚ್ಚು ಡೌನ್‌ಲೋಡ್ ಕಂಡಿರುವ ಆಪ್‌ ಆಗಿದೆ ಎಂದು ಸೆನ್ಸಾರ್ ಟವರ್ ವರದಿ ಮಾಡಿದೆ. ಪ್ರಮುಖ ಹತ್ತು ಸಾಮಾಜಿಕ ಜಾಲತಾಣಗಳಲ್ಲಿ ಟಿಕ್‌ಟಾಕ್ ಆಪ್‌ ಅಧಿಕ ಡೌನ್‌ಲೋಡ್ ಆಗಿದ್ದು, ನಂಬರ್ ಒನ್ ಸ್ಥಾನ ತನ್ನದಾಗಿಸಿಕೊಂಡಿದೆ. ಈ ಮೂಲಕ ಸಾಮಾಜಿಕ ಜಾಲತಾಣ್ಳ ದೈತ್ಯ ಎನಿಸಿಕೊಂಡಿರುವ ಫೇಸ್‌ಬುಕ್‌ಗೆ ಸೆಡ್ಡು ಹೊಡೆದಿದೆ.

ಟಿಕ್‌ಟಾಕ್ ಆಪ್‌

ಜನೆವರಿ 2020ರಲ್ಲಿ ಟಿಕ್‌ಟಾಕ್ ಆಪ್‌ ಒಟ್ಟು 104.7 ಮಿಲಿಯನ್ ಡೌನ್‌ಲೋಡ್ ಆಗಿದ್ದು, ಈ ಬಾರಿ ಕಳೆದ ವರ್ಷಕ್ಕಿಂತ ಸುಮಾರು ಶೇ. 46% ರಷ್ಟು ಅಧಿಕ ಡೌನ್‌ಲೋಡ್ ಕಂಡಿದೆ. ಟಿಕ್‌ಟಾಕ್‌ನ ಒಟ್ಟು ಡೌನ್‌ಲೋಡ್‌ ಸಂಖ್ಯೆಯಲ್ಲಿ ಶೇ. 34.4% ಭಾರತದಲ್ಲಿಯೇ ಡೌನ್‌ಲೋಡ್ ಆಗಿರುವುದು ವಿಶೇಷ. ಇನ್ನು ಜನಪ್ರಿಯ ಫೇಸ್‌ಬುಕ್ ಒಟ್ಟು 61.9 ಮಿಲಿಯನ್ ಡೌನ್‌ಲೋಡ್ ಕಂಡಿದ್ದು, ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಫೇಸ್‌ಬುಕ್ ಒಡೆತನದ

ಹಾಗೆಯೇ ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂ ತೃತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇನ್ನು ಟ್ವಿಟ್ಟರ್ ನಾಲ್ಕನೇ ಸ್ಥಾನ ಹೊಂದಿದ್ದು, ನಂತರದಲ್ಲಿ ಪಿಂಟೆರೆಸ್ಟ್, ಸ್ನ್ಯಾಪ್‌ಚಾಟ್‌, ಚೀನಾ ಮೂಲದ ವಿಡಿಯೊ ಆಪ್ ಲೈಕಿ ಅಪ್ಲಿಕೇಶನ್‌ಗಳು ಸಹ ಟಾಪ್‌ ಟೆನ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿವೆ. ಕಳೆದ ಡಿಸೆಂಬರ್ 2019ರಲ್ಲಿ ಟಿಕ್‌ಟಾಕ್ ಒಟ್ಟು 82.3 ಮಿಲಿಯನ್ ಡೌನ್‌ಲೋಡ್‌ ಕಂಡಿತ್ತು. ಅದೇ ರೀತಿ ಫೇಸ್‌ಬುಕ್ 60.9 ಮಿಲಿಯನ್ ಡೌನ್‌ಲೋಡ್ ಕಂಡಿತ್ತು.

2016ರಲ್ಲಿ

ಸೆಪ್ಟಂಬರ್ 2016ರಲ್ಲಿ ಲಾಂಚ್ ಆಗಿರುವ ಟಿಕ್‌ಟಾಕ್ ಸದ್ಯ ಲೀಡಿಂಗ್‌ನಲ್ಲಿರುವ ಸಾಮಾಜಿಕ ಜಾಲತಾಣವಾಗಿದ್ದು, ಹಲವಾರು ಕಾರಣಗಳಿಂದ ಸುದ್ದಿಯು ಸಹ ಆಗಿತ್ತು. ಈ ಆಪ್‌ ಇತ್ತೀಚಿಗೆ ಹಲವಾರು ಅಪ್‌ಡೇಟ್‌ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಫ್ಯಾಮಿಲಿ ಸೇಫ್ಟಿ ಮೋಡ್ ಆಯ್ಕೆ ಒಂದಾಗಿದೆ. ಈ ಆಯ್ಕೆಯಲ್ಲಿ ಮಕ್ಕಳು ಟಿಕ್‌ಟಾಕ್‌ನಲ್ಲಿ ಏನು ವೀಕ್ಷಿಸಿದ್ದಾರೆ ಎಂದು ತಿಳಿಯಬಹುದಾಗಿದೆ.

Best Mobiles in India

English summary
TikTok managed 104.7 million installs in January, which was 46% more than what was recorded during the same time period last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+