Home
ಸುದ್ದಿಜಾಲ

ಕೈಗೆಟಕುವ ಬೆಲೆಯಲ್ಲಿ ಕೂಲರ್‌ ಖರೀದಿಗೆ ಮುಂದಾಗಿದ್ದೀರಾ? ಈ ಟಿಪ್ಸ್‌ ಪಾಲಿಸಿ!

ಬೇಸಿಗೆಯ ಬಿಸಿಲು ತಾರಕಕ್ಕೆ ಏರುತ್ತಿದ್ದು, ಏರ್‌ಕೂಲರ್‌ಗಳ ಅವಶ್ಯಕತೆ ಹೆಚ್ಚಾಗಿದೆ. ಈ ನಡುವೆ ಹಲವಾರು ಮಂದಿ ತಮ್ಮ ಮನೆ ಅಥವಾ ಕೋಣೆಗೆ ಹೊಂದಿಕೆಯಾಗುವ ಏರ್‌ಕೂಲರ್‌ಗಳನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಆದರೆ, ಈ ಏರ್‌ಕೂಲರ್‌ ಖರೀದಿ ವೇಳೆ ನೀವು ಟಿಪ್ಸ್‌ ಬಳಕೆ ಬಳಕೆ ಮಾಡಿಕೊಂಡರೆ ಉತ್ತಮ ಕೂಲರ್‌ ಆಯ್ಕೆ ಮಾಡಿಕೊಳ್ಳಬಹುದು.

ಹೌದು, ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನವು ಭಾರತದ ಹೆಚ್ಚಿನ ನಗರಗಳಲ್ಲಿ ಸಾಮಾನ್ಯವಾಗುತ್ತದೆ. ಈ ತಾಪದಿಂದ ಪಾರಾಗಲು ಜನರು ಎಸಿ ಅಥವಾ ಏರ್ ಕೂಲರ್‌ಗಳಂತಹ ಕೂಲಿಂಗ್ ಡಿವೈಸ್‌ಗಳನ್ನು ಖರೀದಿ ಮಾಡುವುದು ಅನಿವಾರ್ಯವಾಗಿದೆ. ವಿಷಯ ಏನೆಂದರೆ ಎಸಿಗಳು ಹೆಚ್ಚಿನ ಬೆಲೆ ಹೊಂದಿದ್ದು, ಏರ್ ಕೂಲರ್‌ಗಳು ನಿಮ್ಮ ಕೈಗೆಕಟಕುವ ದರದಲ್ಲಿ ಲಭ್ಯವಾಗುತ್ತವೆ. ಅದರಂತೆ ಈ ಏರ್‌ಕೂಲರ್‌ಗಳ ಖರೀದಿ ಬಗ್ಗೆ ನೀಡಲಾದ ಈ ಕೆಲವು ಸಲಹೆಗಳನ್ನು ಗಮನಿಸಿ.

ಕೈಗೆಟಕುವ ಬೆಲೆಯಲ್ಲಿ ಕೂಲರ್‌ ಖರೀದಿಗೆ ಮುಂದಾಗಿದ್ದೀರಾ? ಈ ಟಿಪ್ಸ್‌ ಪಾಲಿಸಿ!

ನಿಮ್ಮ ಕೋಣೆ ಅಥವಾ ಮನೆಯ ಗಾತ್ರವನ್ನು ಗಮನದಲ್ಲಿ ಇಟ್ಟುಕೊಳ್ಳಿ : ನೀವು ಏರ್‌ಕೂಲರ್‌ ಖರೀದಿ ಮಾಡಲು ಮುಂದಾಗಿದ್ದರೆ ಅದನ್ನು ಎಲ್ಲಿ ಇರಿಸುತ್ತೀರಿ ಎನ್ನುವ ಬಗ್ಗೆ ತಿಳಿದುಕೊಳ್ಳಿ. ಯಾಕೆಂದರೆ ನಿಮ್ಮ ಮನೆ ಅಥವಾ ಕೋಣೆಗೆ ಹೊಂದಿಕೆ ಆಗುವಂತೆ ವಿವಿಧ ರೀತಿಯ ಏರ್‌ಕೂಲರ್‌ ಗಳು ಮಾರುಕಟ್ಟೆಯಲ್ಲಿ ಲಭ್ಯ ಇರಲಿವೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕೊಠಡಿಗಳಿಗೆ ಅಂದರೆ 300 ಚದರ ಅಡಿಗಿಂತ ಕಡಿಮೆ ಇರುವ ಕೋಣೆಗಳಿಗೆ ಚಿಕ್ಕಗಾತ್ರದ ಏರ್‌ಕೂಲರ್‌ ಖರೀದಿ ಮಾಡಬಹುದು.

ನೀರಿನ ಟ್ಯಾಂಕ್ ಸಾಮರ್ಥ್ಯ ಗಮನಿಸಿ: ಏರ್‌ಕೂಲರ್‌ಗೆ ನೀರು ಅಗತ್ಯವಾಗಿದ್ದು, ಡಿವೈಸ್‌ ಎಷ್ಟು ಸಾಮರ್ಥ್ಯದ ನೀರಿನ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಿದೆ. ಅದರಲ್ಲಿ 25ಲೀಟರ್ ಅಥವಾ ಅದಕ್ಕಿಂತ ಕಡಿಮೆ ಟ್ಯಾಂಕ್ ಸಾಮರ್ಥ್ಯವಿರುವ ಏರ್ ಕೂಲರ್ ಸಣ್ಣ ಅಥವಾ ಮಧ್ಯಮ ಗಾತ್ರದ ಕೊಠಡಿಗಳಿಗೆ ಸಾಕಾಗುತ್ತದೆ. ಜೊತೆಗೆ ದೊಡ್ಡ ಕೋಣೆಗಳಿಗಾಗಿ ನೀವು 40ಲೀಟರ್ ಅಥವಾ ಹೆಚ್ಚಿನ ಟ್ಯಾಂಕ್ ಸಾಮರ್ಥ್ಯಗಳನ್ನು ಹೊಂದಿರುವ ಕೂಲರ್‌ಖರೀದಿ ಮಾಡಬಹುದು. ಇದರಲ್ಲಿ ಮೀಸಲಾದ ಐಸ್ ಚೇಂಬರ್‌ಗಳನ್ನು ಸಹ ಗಮನಿಸಬಹುದು.

ಕೈಗೆಟಕುವ ಬೆಲೆಯಲ್ಲಿ ಕೂಲರ್‌ ಖರೀದಿಗೆ ಮುಂದಾಗಿದ್ದೀರಾ? ಈ ಟಿಪ್ಸ್‌ ಪಾಲಿಸಿ!

ಒಳಾಂಗಣ ಬಳಕೆಗಾಗಿ ಶಬ್ಧಮಾಡದಿರುವ ಏರ್ ಕೂಲರ್‌ಗಳು: ಏರ್ ಕೂಲರ್‌ ವಿಷಯದಲ್ಲಿ ಬೇಸರದ ವಿಷಯ ಏನೆಂದರೆ ಅವುಗಳು ಮಾಡುವ ಸೌಂಡ್‌. ಆದರೆ, ಇತ್ತೀಚೆಗೆ ಶಬ್ಧಮಾಡದಿರುವ ಏರ್‌ಕೂಲರ್‌ ಸಹ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಈ ಮೂಲಕ ನೀವು ಉತ್ತಮ ನಿದ್ದೆ ಮಾಡಬಹುದಾಗಿದೆ. ಆದರೆ, ಈ ರೀತಿಯ ವಿಶೇಷ ಕೂಲರ್‌ಗಳ ಬೆಲೆ ಸ್ವಲ್ಪ ಹೆಚ್ಚಾಗಿರಲಿದೆ.

ಆಟೋಫಿಲ್ ಫೀಚರ್ಸ್‌ ಇರುವ ಕೂಲರ್‌ಗಳು ಬೆಸ್ಟ್‌: ನೀವು ನಿದ್ದೆ ಮಾಡುವ ವೇಳೆ ಕೂಲರ್‌ನಲ್ಲಿ ಇರುವ ನೀರು ಖಾಲಿಯಾದರೆ ಅದನ್ನು ಮತ್ತೆ ತುಂಬಿ ಆನ್‌ ಮಾಡುವ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ನೀರು ಖಾಲಿಯಾಗಿದ್ದಾಗ ನೀವು ಕೂಲರ್‌ ಅನ್ನು ಆನ್‌ ಮಾಡಿದ್ದರೆ ಕೂಲರ್‌ ಸಮಸ್ಯೆಗೆ ಒಳಗಾಗುವುದು ಖಂಡಿತ. ಆದರೆ, ನೀರು ಖಾಲಿಯಾದಾಗ ಆಟೋಮ್ಯಾಟಿಕ್‌ ಆಗಿ ಫಿಲ್‌ ಆಗುವ ಸೌಲಭ್ಯ ಇರುವ ಕೂಲರ್‌ಗಳಿದ್ದು, ನೀವು ಇವುಗಳನ್ನು ಖರೀದಿ ಮಾಡಬಹುದು.

ಕೂಲಿಂಗ್ ಪ್ಯಾಡ್‌ಗಳು ಸುಧಾರಿತ ಗುಣಮಟ್ಟವನ್ನು ಹೊಂದಿರಬೇಕು: ಕೂಲಿಂಗ್ ಪ್ಯಾಡ್‌ಗಳನ್ನು ಮರ, ಉಣ್ಣೆ, ಆಸ್ಪೆನ್ ಪ್ಯಾಡ್‌ಗಳು ಮತ್ತು ಜೇನುಗೂಡು ಪ್ಯಾಡ್‌ಗಳಿಂದ ತಯಾರಿಸಲಾಗುತ್ತದೆ. ಆದರೆ, ನೀವು ಜೇನುಗೂಡು ಶೈಲಿಯ ಪ್ಯಾಡಿಂಗ್‌ನೊಂದಿಗೆ ಬರುವ ಕೂಲರ್‌ಗಳನ್ನು ಬಳಕೆ ಮಾಡಬಹುದು. ಇವು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುತ್ತವೆ ಹಾಗೆಯೇ ಹೆಚ್ಚಿನ ತಂಪನ್ನು ನೀಡುತ್ತವೆ.

ಕೈಗೆಟಕುವ ಬೆಲೆಯಲ್ಲಿ ಕೂಲರ್‌ ಖರೀದಿಗೆ ಮುಂದಾಗಿದ್ದೀರಾ? ಈ ಟಿಪ್ಸ್‌ ಪಾಲಿಸಿ!

ಕಾರ್ಯಕ್ಷಮತೆ ಹಾಗೂ ಇತರೆ: ಕೂಲರ್‌ಗಳು ರಾತ್ರಿಪೂರ್ತಿ ಕಾರ್ಯನಿರ್ವಹಿಸುವುದರಿಂದ ಅವುಗಳು ಯಾವಮಟ್ಟದಲ್ಲಿ ವಿದ್ಯುತ್ ಶಕ್ತಿಯನ್ನು ಪಡೆಯುತ್ತವೆ ಎಂಬುದರ ಬಗ್ಗೆ ಗಮನಹರಿಸಬೇಕು.ಅದರಲ್ಲೂ ಇತ್ತೀಚಿನ ಹೆಚ್ಚಿನ ಆಧುನಿಕ ಕೂಲರ್‌ಗಳು ಇನ್ವರ್ಟರ್ ತಂತ್ರಜ್ಞಾನವನ್ನು ಹೊಂದಿದ್ದು, ವಿದ್ಯುತ್ ಕಡಿತದ ಸಮಯದಲ್ಲಿಯೂ ಚಾಲನೆಯಲ್ಲಿ ಮುಂದುವರಿಯಲು ಸಹಾಯ ಮಾಡುತ್ತದೆ. ಇದಲ್ಲದೆ, ರಿಮೋಟ್ ಕಂಟ್ರೋಲ್, ಧೂಳು ಮತ್ತು ಸೊಳ್ಳೆ ಫಿಲ್ಟರ್‌ಗಳು ಮುಂತಾದ ಆಡ್-ಆನ್ ಫೀಚರ್ಸ್‌ಗಳ ಸಹ ಇರಲಿವೆ. ಏನೇ ಆದರೂ ನಿಮ್ಮ ಬಜೆಟ್‌ಗೆ ತಕ್ಕಂತೆ ಕೂಲರ್‌ ಖರೀದಿ ಮಾಡಿದರೆ ಒಳಿತು.

Best Mobiles in India

English summary
High temperatures in summer are common in most cities in India. To escape from this heat it is necessary for people to buy cooling devices like AC or air coolers. Take note of these few tips on buying them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+