ಜಿಯೋಗೆ ಕೌಂಟರ್ ಕೊಟ್ಟ ಏರ್‌ಟೆಲ್: ಅತೀ ಕಡಿಮೆ ಬೆಲೆಗೆ ಅತೀ ಹೆಚ್ಚು ಡೇಟಾ...!
ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಏರ್‌ಟೆಲ್, ರಿಲಯನ್ಸ್ ಮಾಲೀಕತ್ವದ ಜಿಯೋಗೆ ಸೆಡ್ಡ ಹೊಡೆಯುವ ಸಲುವಾಗಿ ಆಫರ್ ವೊಂದನ್ನು ಲಾಂಚ್ ಮಾಡಿದ್ದು, ಅತೀ ಕಡಿಮೆ ಬೆಲೆಗೆ ಅತೀ ಹೆಚ್ಚಿನ ಡೇಟಾವನ್ನು ನೀಡಲಿದೆ ಎನ್ನಲಾಗಿದೆ.

ಈಗಾಗಲೇ ಜಿಯೋ ಮತ್ತು ಏರ್‌ಟೆಲ್ ನಡುವೆ ದೊಡ್ಡ ಮಟ್ಟದಲ್ಲಿ ದರ ಸಮರವು ನಡೆಯುತ್ತಿದ್ದು, ಬಳಕೆದಾರರಿಗೆ ಹೆಚ್ಚಿನ ಆಫರ್ ಅನ್ನು ನೀಡುವ ಮೂಲಕ ಹೆಚ್ಚಿನ ಜನರನ್ನು ಸೆಳೆಯುವ ಕಾರ್ಯವನ್ನು ಈ ಎರಡು ಟೆಲಿಕಾಂ ಕಂಪನಿಗಳು ಮಾಡುತ್ತಿವೆ. ಈ ಹಿನ್ನಲೆಯಲ್ಲಿ ಜಿಯೋ ಈಗಾಗಲೇ ಲಾಂಚ್ ಮಾಡಿದ್ದ ಆಫರ್ ವೊಂದನ್ನು ಏರ್‌ಟೆಲ್ ಬಿಡುಗಡೆ ಮಾಡಿದೆ.
ಓದಿರಿ: ವೈರಲ್ ಆಗಿದೆ ಕರ್ನಾಟಕದ ವೋಟರ್ ಐಡಿ ಮದುವೆ ಆಮಂತ್ರಣ ಪತ್ರಿಕೆ...!

3GB ಡೇಟಾ:
ಏರ್‌ಟೆಲ್ ತನ್ನ ಬಳಕೆದಾರರಿಗೆ ಹೊಸದೊಂದು ಆಫರ್ ನೀಡಿದ್ದು, ಇದರಲ್ಲಿ ರೂ.49ಕ್ಕೆ 3GB ಡೇಟಾವನ್ನು ನೀಡಲಿದೆ ಎನ್ನಲಾಗಿದೆ. ಇದು ಕೇವಲ ಡೇಟಾ ಮಾತ್ರವನ್ನು ನೀಡುವ ಆಫರ್ ಆಗಿದೆ. ಇದನ್ನು ಬಿಟ್ಟು ಬೇರೆ ಯಾವುದೇ ಲಾಭಗಳು ಇಲ್ಲ.

ಜಿಯೋ ಪ್ಲಾನ್:
ಈ ಹಿಂದೆ ಬಳಕೆದಾರರಿಗೆ ಜಿಯೋ ರೂ.49ಕ್ಕೆ 3GB ಡೇಟಾವನ್ನು ಬಳಕೆ ನೀಡಿತ್ತು. ಇದು ಹೆಚ್ಚಿನ ಜನ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈಗ ಇದೇ ಆಫರ್ ಅನ್ನು ಏರ್‌ಟೆಲ್ ಕಾಪಿ ಮಾಡಿ ತನ್ನ ಬಳಕೆದಾರರಿಗೆ ನೀಡುತ್ತಿದೆ.


ಮೈ ಏರ್‌ಟೆಲ್ ಆಪ್‌ನಲ್ಲಿ:
ರೂ.49 ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಮೈ ಏರ್‌ಟೆಲ್ ಆಪ್‌ನಲ್ಲಿ ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದೆ. ಏರ್‌ಟೆಲ್ ವೆಬ್ ಸೈಟಿನ ಮೂಲಕವೂ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








