Paytm, ONDC ಮೂಲಕ ಅರ್ಧ ಬೆಲೆಗೆ ಟೊಮೆಟೊ: ಆನ್‌ಲೈನ್‌ನಲ್ಲಿ ಆರ್ಡರ್ ಆಯ್ಕೆ, ಆದರೆ..
ಭಾರತದಲ್ಲಿ ಟೊಮೆಟೊ ಬೆಲೆ ಗಗನಕ್ಕೆ ಏರಿದೆ. ಈ ನಡುವೆ ಕೆಲವು ರೈತರು ಟೊಮೆಟೊ (tomato) ಬೆಳೆದು ಶ್ರೀಂತರಾದರೆ ಇನ್ನೂ ಕೆಲವು ಕಡೆ ಟೊಮೆಟೊಗಾಗಿ ಕಳ್ಳತನದ ಪ್ರಕರಣಗಳು ವರದಿಯಾಗಿದೆ. ಈ ನಡುವೆ ಪೇಟಿಎಮ್ ಹಾಗೂ ಓಎನ್‌ಡಿಸಿ (Paytm, ONDC) ಗುಡ್ ನ್ಯೂಸ್ ನೀಡಿದ್ದು, ಅರ್ಧ ಬೆಲೆಗೆ ಟೊಮೆಟೊ ಮಾರುತ್ತಿದೆ.
ಹೌದು, ಅಚ್ಚರಿ ಎನಿಸಿದರೂ ಸತ್ಯ. ಟೊಮೆಟೊ ಇದೀಗ ಚಿನ್ನದ ಮೌಲ್ಯ ಪಡೆದಿದೆಯಾದರೂ ಪೇಟಿಎಮ್ ಹಾಗೂ ಓಎನ್‌ಡಿಸಿ ಅರ್ಧಬೆಲೆಗೆ ಮಾರಾಟ ಮಾಡುತ್ತಿದೆ. ಅದರಲ್ಲೂ ಬಳಕೆದಾರರು ಈ ಪ್ಲಾಟ್‌ಫಾರ್ಮ್ ಮೂಲಕ ಉಚಿತ ವಿತರಣೆಯೊಂದಿಗೆ ವಾರಕ್ಕೆ ಗರಿಷ್ಠ ಎರಡು ಕಿಲೋಗ್ರಾಂಗಳಷ್ಟು ಆರ್ಡರ್ ಮಾಡಬಹುದಾಗಿದೆ. ಹಾಗಿದ್ರೆ, ಏನಿದು ವಿಶೇಷ ಕೊಡುಗೆ?, ಆರ್ಡರ್ ಮಾಡುವುದು ಹೇಗೆ? ಎಂಬುದನ್ನು ತಿಳಿಯೋಣ ಬನ್ನಿ.

ಭಾರತದಲ್ಲಿ ಟೊಮೆಟೊ ಬೆಲೆ ಇತ್ತೀಚೆಗೆ ಗಮನಾರ್ಹ ಏರಿಕೆ ಕಂಡಿದ್ದು, ರಾಜಧಾನಿ ದೆಹಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಿಲೋಗ್ರಾಂಗೆ 150ರೂ.ವರೆಗೆ ಬೆಲೆ ನಿಗದಿಯಾಗಿದೆ. ಕೆಲವು ಅಂಗಡಿಗಳಲ್ಲಿ ಪ್ರತಿ ಕಿಲೋಗ್ರಾಮ್‌ಗೆ 200 ರಿಂದ 250 ರೂ.ವರೆಗೆ ಟೊಮೆಟೊ ಮಾರಾಟ ಮಾಡಲಾಗುತ್ತಿದೆ. ಈ ಬಿಕ್ಕಟ್ಟಿನ ನಡುವೆ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮತ್ತು ಪೇಟಿಎಮ್ ಖರೀದಿದಾರರಿಗೆ ಸ್ವಲ್ಪ ಸಮಾಧಾನ ನೀಡುವ ಕೆಲಸ ಮಾಡಿದೆ.
ಅರ್ಧ ಬೆಲೆಗೆ ಟೊಮೆಟೊ: ಇವೆರಡೂ ಪ್ಲಾಟ್‌ಫಾರ್ಮ್‌ಗಳು ಜೊತೆಯಾಗಿ ದೆಹಲಿ-ಎನ್‌ಸಿಆರ್‌ನಲ್ಲಿರುವ ಬಳಕೆದಾರರಿಗೆ ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (ಎನ್‌ಸಿಸಿಎಫ್) ಮೂಲಕ ಪ್ರತಿ ಕಿಲೋಗ್ರಾಂಗೆ 70ರೂ.ಗೆ ಟೊಮೆಟೊ ನೀಡುವುದಾಗಿ ತಿಳಿಸಿವೆ. ಈ ಉಪಕ್ರಮದೊಂದಿಗೆ ಬಳಕೆದಾರರಿಗೆ ಗರಿಷ್ಠ ಎರಡು ಕಿಲೋಗ್ರಾಂಗಳಷ್ಟು ಟೊಮೆಟೊಗಳನ್ನು ವಾರಕ್ಕೆ 140ರೂ.ಗಳಲ್ಲಿ ಉಚಿತ ವಿತರಣೆಯೊಂದಿಗೆ ಪಡೆದುಕೊಳ್ಳಬಹುದಾಗಿದೆ.
ಆಫರ್ ಕುರಿತು ಮಾತನಾಡಿದ ಪೇಟಿಎಮ್ ಇ-ಕಾಮರ್ಸ್ ಪ್ರೈವೇಟ್ ಲಿಮಿಟೆಡ್ ವಕ್ತಾರರು, ಟೊಮ್ಯಾಟೊ ಸೆರಿದಂತೆ ಅಡುಗೆ ಮನೆಗೆ ಬೇಕಾದ ವಸ್ತುಗಳ ಬೆಲೆಗಳು ದೇಶಾದ್ಯಂತ ಅನೇಕರ ಮೇಲೆ ಪರಿಣಾಮ ಬೀರುತ್ತಿದೆ. ಎನ್‌ಸಿಸಿಎಫ್ ಮತ್ತು ಓಎನ್‌ಡಿಸಿ ನಡುವಿನ ಈ ಸಹಯೋಗದೊಂದಿಗೆ ದೆಹಲಿ ಎನ್‌ಸಿಆರ್ ನಲ್ಲಿರುವ ಬಳಕೆದಾರರು ಈಗ ಸುಲಭವಾಗಿ ಟೊಮೆಟೊಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿ ಮಾಡಬಹುದು ಎಂದು ತಿಳಿಸಿದ್ದಾರೆ. ಹಾಗಿದ್ರೆ, ಆನ್‌ಲೈನ್‌ಲ್ಲಿ ಟೊಮೆಟೊಗಳನ್ನು ಆರ್ಡರ್ ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ.
ಹಂತ 1: ಮೊದಲು ಪೇಟಿಎಮ್ ಆಪ್ ಓಪನ್ ಮಾಡಬೇಕು. ಅಲ್ಲಿ ಕಾಣಿಸಿಕೊಳ್ಳುವ ಸರ್ಚ್ ಲಿಸ್ಟ್ ನಲ್ಲಿ ಓಎನ್‌ಡಿಸಿ ಎಂದು ಎಂಟ್ರಿ ಮಾಡಬೇಕು. ಇದಾದ ನಂತರ ಅದರ ಕೆಳಗೆ ಓಎನ್‌ಡಿಸಿ ಫುಡ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿದರೆ 'Tomatoes from NCCF' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಬೇಕು.
ಹಂತ 2: ಇದಾದ ನಂತರದಲ್ಲಿ ಬಳಕೆದಾರರು ಆರ್ಡರ್ ಮಾಡಲು ಬಯಸುವ ಟೊಮೆಟೊ ಪ್ರಮಾಣವನ್ನು ಆಯ್ಕೆ ಮಾಡಬೇಕಿದೆ. ಅಂದರೆ ಎಷ್ಟು ಕೆಜಿ ಎಂದು ನಮೂದು ಮಾಡಬೇಕು. ಇದರೊಂದಿಗೆ ವಿತರಣಾ ವಿಳಾಸವನ್ನು ನಮೂದಿಸಬೇಕು. ನಂತರದಲ್ಲಿ ಪಾವತಿ ವಿಧಾನವನ್ನು ಆಯ್ಕೆ ಮಾಡಿಕೊಂಡು ಹಣ ಪಾವತಿ ಮಾಡಬೇಕು. ಈ ವೇಳೆ ಬಳಕೆದಾರರು ದೃಢೀಕರಣದ ಮೆಸೆಜ್ ಅನ್ನು ಸ್ವೀಕಾರ ಮಾಡುತ್ತಾರೆ.
ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಮೊದಲೇ ತಿಳಿಸಿದಂತೆ ವಾರಕ್ಕೆ 140 ರೂಗಳಲ್ಲಿ ಎರಡು ಕಿಲೋಗ್ರಾಂಗಳಷ್ಟು ಟೊಮೆಟೊಗಳನ್ನು ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ. ಮತ್ಯಾಕೆ ತಡ ಬುಕ್ ಮಾಡೋಣ ಎಂದು ಪೇಟಿಎಮ್ ಓಪನ್ ಮಾಡಿ ಟೊಮೆಟೊ ಆರ್ಡರ್ ಮಾಡುವ ಕೆಲಸ ಮಾಡಬೇಡಿ. ಯಾಕೆಂದರೆ ಆರಂಭದಲ್ಲಿ ಇದು ದೆಹಲಿಯ ಎನ್‌ಆರ್‌ಸಿ ಪ್ರದೇಶಕ್ಕೆ ಸೀಮಿತಗೊಳಿಸಲಾಗಿದೆ. ಮುಂದಿನ ದಿಗಳಲ್ಲಿ ಎಲ್ಲಾ ಕಡೆ ವಿಸ್ತರಣೆ ಆಗುತ್ತದೋ ಇಲ್ಲವೋ ಎಂಬುದನ್ನು ನಿರೀಕ್ಷೆ ಮಾಡಲಾಗಿದೆ.

ಡಿಜಿಟಲ್ ವಾಣಿಜ್ಯಕ್ಕಾಗಿ ಓಪನ್ ನೆಟ್‌ವರ್ಕ್ (ONDC) ದೇಶದಲ್ಲಿ ಅಸ್ತಿತ್ವದಲ್ಲಿರುವ ಇ-ಕಾಮರ್ಸ್ ಪರಿಸರ ವ್ಯವಸ್ಥೆಯನ್ನು ಪ್ರಜಾಪ್ರಭುತ್ವಗೊಳಿಸಲು ಭಾರತ ಸರ್ಕಾರದಿಂದ ರಚಿಸಲಾದ ಸರ್ಕಾರದ ಬೆಂಬಲಿತ ಉಪಕ್ರಮವಾಗಿದೆ. ಬೆಂಗಳೂರಿನಲ್ಲಿ ಪ್ರಾರಂಭವಾದ ಈ ಓಎನ್‌ಡಿಸಿ ತನ್ನ ಅಸ್ತಿತ್ವವನ್ನು ದೆಹಲಿ-ಎನ್‌ಸಿಆರ್, ಮುಂಬೈ, ಕೋಲ್ಕತ್ತಾ, ಚೆನ್ನೈ, ಕಾಂಚೀಪುರಂ, ಹೈದರಾಬಾದ್, ಬಾಗಲಕೋಟೆ ಮತ್ತು ಲಕ್ನೋಗೆ ವಿಸ್ತರಿಸಿದೆ.
ಓಎನ್‌ಡಿಸಿ ಆಹಾರ ಮತ್ತು ಪಾನೀಯ, ದಿನಸಿ, ಮನೆ ಮತ್ತು ಅಡುಗೆಮನೆ, ಫ್ಯಾಷನ್, ಎಲೆಕ್ಟ್ರಾನಿಕ್ಸ್, ಆರೋಗ್ಯ ಮತ್ತು ಸ್ವಾಸ್ಥ್ಯ, ಮತ್ತು ಸೌಂದರ್ಯ ಮತ್ತು ವೈಯಕ್ತಿಕ ಆರೈಕೆಯಂತಹ ವಿವಿಧ ವರ್ಗಗಳ ವಿತರಣೆಯನ್ನು ನೀಡುತ್ತದೆ. ಅಂದರೆ ಈಗ ನೀವು ಅಮೆಜಾನ್, ಫ್ಲಿಪ್‌ಕಾರ್ಟ್,ಜೊಮೊಟೊ ಸೇರಿದಂತೆ ಇತರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಏನೆಲ್ಲಾ ಸೇವೆ ಪಡೆಯುತ್ತೀರೋ ಅದೇ ರೀತಿ ಇಲ್ಲೂ ಸೇವೆಗಳು ಲಭ್ಯ ಇವೆ.


Click it and Unblock the Notifications








