Home
ಸುದ್ದಿಜಾಲ

ನಾಳೆ ಸಿನಿಮಾ ಟಿಕೆಟ್‌ ಬೆಲೆ 99ರೂ ಮಾತ್ರ!..ನಿಮಗೂ ಟಿಕೆಟ್‌ ಬೇಕೆ? ಇಲ್ಲಿ ನೋಡಿ

ನಾಳೆ (ಅಕ್ಟೋಬರ್ 13 ರಂದು) ರಾಷ್ಟ್ರೀಯ ಸಿನಿಮಾ ದಿನವನ್ನು (National Cinema day) ಆಚರಿಸಲಾಗುವುದು ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಇತ್ತೀಚಿಗೆ ಘೋಷಿಸಿದೆ. ಈ ದಿನದ ಪ್ರಯುಕ್ತ ಭಾರತದ ಪ್ರಮುಖ ಮಲ್ಟಿಪ್ಲೆಕ್ಸ್ ಸಿನಿಮಾಗಳಲ್ಲಿ ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಸಿನಿಮಾ ಟಿಕೆಟ್‌ ಲಭ್ಯ ಆಗಲಿವೆ.

ಹೌದು, ರಾಷ್ಟ್ರೀಯ ಸಿನಿಮಾ ದಿನ ಅಂಗವಾಗಿ ಸಿನಿಮಾ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಿದ್ದು, ಅಕ್ಟೋಬರ್ 13 ರಂದು ಒಂದು ದಿನ ಸಿನಿಮಾ ಟಿಕೆಟ್‌ ಬೆಲೆಯನ್ನು 99ರೂ. ಗಳಿಗೆ ನಿಗದಿಪಡಿಸಿದೆ. ಪಿವಿಆರ್‌ ಐನಾಕ್ಸ್, ಸಿನಿಪೋಲಿಸ್‌, ಮೂವೀ ಟೈಮ್‌, ಸಿಟಿ ಪ್ರೈಡ್‌ ಸೇರಿದಂತೆ ದೇಶದಾದ್ಯಂತ ಸುಮಾರು 4,000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಕೊಡುಗೆ ಮಾನ್ಯವಾಗಿರಲಿದೆ.

ನಾಳೆ ಸಿನಿಮಾ ಟಿಕೆಟ್‌ ಬೆಲೆ 99ರೂ ಮಾತ್ರ!..ನಿಮಗೂ ಟಿಕೆಟ್‌ ಬೇಕೆ? ಇಲ್ಲಿ ನೋಡಿ

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯು ಈ ಹಿಂದೆ ಸೆಪ್ಟೆಂಬರ್ 16 ರಂದು ರಾಷ್ಟ್ರೀಯ ಸಿನಿಮಾ ದಿನವನ್ನಾಗಿ ಈ ಕೊಡುಗೆ ಘೋಷಿಸಿತ್ತು. ಆದಾದ ಬಳಿಕ ಕಳೆದ ಬಾರಿ ರಾಷ್ಟ್ರೀಯ ಸಿನಿಮಾ ದಿನವನ್ನು ಸೆಪ್ಟೆಂಬರ್ 23 ಕ್ಕೆ ನಿಗದಿಪಡಿಸಿ ಸಿನಿ ಪ್ರಿಯರಿಗೆ ಡಿಸ್ಕೌಂಟ್‌ ಕೊಡುಗೆ ಘೋಷಿಸಿತ್ತು. ಇದೀಗ ಅಕ್ಟೋಬರ್ 13 ರಂದು ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಲಿದ್ದು, ಸಿನಿಮಾ ಟಿಕೆಟ್‌ ಬೆಲೆಯಲ್ಲಿ ರಿಯಾಯಿತಿ ತಿಳಿಸಿದೆ.

ಅಂದಹಾಗೆ 2023 ರ ರಾಷ್ಟ್ರೀಯ ಸಿನಿಮಾ ದಿನಾಚರಣೆಯ ಅಂಗವಾಗಿ ರಿಯಾಯಿತಿ ದರದಲ್ಲಿ ಸಿನಿಮಾ ಟಿಕೆಟ್‌ಗಳನ್ನು ಬುಕ್‌ ಮೈ ಶೋ (Bookmyshow), ಪೇಟಿಎಮ್‌ ಹಾಗಯೇ ಅಧಿಕೃತ ಸಿನಿಮಾದ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದಾಗಿದೆ. ಆನ್‌ಲೈನ್‌ ಮೂಲಕ ಸಿನಿಮಾ ಟಿಕೆಟ್ ಬುಕ್ ಮಾಡುವ ಅಪ್ಲಿಕೇಶನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬುಕ್‌ ಮೈ ಶೋ (Bookmyshow) ಅಪ್ಲಿಕೇಶನ್

ಈ ಆಪ್‌ ಭಾರತದ ಸಿನಿ ಪ್ರಿಯರಿಗೆ ಅತ್ಯುತ್ತಮ ಆನ್‌ಲೈನ್ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಆಗಿ ಗುರುತಿಸಿಕೊಂಡಿದೆ. ಈ ಆಪ್‌ನ ಅತ್ಯುತ್ತಮ ಫೀಚರ್‌ಯೆಂದರೆ, ಫಿಲ್ಮ್ ಬುಕ್ ಮಾಡುವುದರ ಜೊತೆಗೆ ನಿರ್ದಿಷ್ಟ ಸಿನಿಮಾವನ್ನು ಎಷ್ಟು ಜನರು ನೋಡಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ. ಅದೇ ರೀತಿ ಈ ಆಪ್‌ನಲ್ಲಿ ಸಿನಿಮಾವು ಸುತ್ತುವ ಕಥೆಯ ಸಾರಾಂಶವನ್ನು ಓದಬಹುದು. ಅಲ್ಲದೇ ಇಷ್ಟಪಡುವ ಸಿನಿಮಾಗಳ ಪ್ರಕಾರ ಮತ್ತು ಪ್ರಕಾರವನ್ನು ಆಯ್ಕೆ ಮಾಡಲು ಇದು ನೆರವು ಮಾಡುತ್ತದೆ.

ನಾಳೆ ಸಿನಿಮಾ ಟಿಕೆಟ್‌ ಬೆಲೆ 99ರೂ ಮಾತ್ರ!..ನಿಮಗೂ ಟಿಕೆಟ್‌ ಬೇಕೆ? ಇಲ್ಲಿ ನೋಡಿ

ಪಿವಿಆರ್‌ ಸಿನಿಮಾ (PVR) ಅಪ್ಲಿಕೇಶನ್

ಭಾರತೀಯರಲ್ಲಿ ಸಿನಿ ಪ್ರೇಮಿಗಳ ನೆಚ್ಚಿನ ತಾನಗಳಲ್ಲಿ ಇದು ಕೂಡಾ ಒಂದಾಗಿದ್ದು, ಪ್ರಮುಖ ನಗರಗಳ ಮಾಲ್‌ಗಳಲ್ಲಿ ಪಿವಿಆರ್‌ ಸಿನಿಮಾ ಇದ್ದೆ ಇರುತ್ತದೆ. ಗ್ರಾಹಕರು ಪಿವಿಆರ್‌ ಸಿನೆಮಾದಲ್ಲಿ ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡಲು ಅವಕಾಶ ಇದೆ. ಇನ್ನು ಹೆಚ್ಚುವರಿಯಾಗಿ, ಪಿವಿಆರ್‌ ವೆಬ್‌ಸೈಟ್ ಮಾಸಿಕ ಆನ್‌ಲೈನ್ ನಿಯತಕಾಲಿಕೆಗಳನ್ನು ಪರಿಚಯಿಸಿದೆ. ಇದರಲ್ಲಿ ಸಿನಿಮಾ ವಲಯದ ಇತ್ತೀಚಿನ ಅಪ್‌ಡೇಟ್‌ಗಳು ಹಾಗೂ ಮುಂಬರುವ ಬಿಡುಗಡೆಗಳ ಮಾಹಿತಿಯನ್ನು ನೀಡುತ್ತದೆ. ಇವುಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

ಟಿಕೆಟ್‌ ನ್ಯೂ (Tickenew) ಅಪ್ಲಿಕೇಶನ್

ಟಿಕೆಟ್‌ ನ್ಯೂ ಸಹ ಒಂದು ಅದ್ಭುತವಾದ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಆಗಿದ್ದು, ಡಿಸ್ಕೌಂಟ್‌ ಬೆಲೆಯಲ್ಲಿ ಸಿನಿಮಾ ಟಿಕೆಟ್ ಪಡೆಯಲು ನೆರವು ಮಾಡುತ್ತದೆ. ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ನಲ್ಲಿ ಅಮೆಜಾನ್ ಪೇ ಮತ್ತು ಪೇಟಿಎಂ ನಂತಹ ಯುಪಿಐ ಪೇಮೆಂಟ್‌ ಪ್ಲಾಟ್‌ಫಾರ್ಮ್ ಗಳಿಂದ ಕೂಪನ್‌ಗಳು, ಬ್ಯಾಂಕ್‌ಗಳು ಒದಗಿಸಿದ ಮೊಬೈಲ್ ವ್ಯಾಲೆಟ್‌ಗಳು ಮತ್ತು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಸ್ವೀಕರಿಸಲಾಗುತ್ತದೆ. ಈ ವೆಬ್‌ಸೈಟ್ ಮತ್ತು ಆಪ್‌ ಭಾರತದಾದ್ಯಂತ ವಿವಿಧ ಥೇಯಟರ್‌ಗಳು, ಇನಾಕ್ಸ್‌, ಕಾರ್ನಿವಲ್, ವೇವ್ ಹಾಗೂ ಇನ್ನೋವೇಟಿವ್ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾಗಳನ್ನು ಪ್ರದರ್ಶಿಸುತ್ತದೆ.

Best Mobiles in India

English summary
National Cinema Day is back with Rs 99 Movie Tickets. so you will be able to grab tickets for just Rs 99 on October 13. check details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+