ಈ ದೇಶಗಳಲ್ಲಿ ಇಂಟರ್ನೆಟ್ ಬಳಸಿದವರಿಗೆ ಶಿಕ್ಷೆ
ಇಂದಿನ ಆಧುನಿಕ ಯುಗದಲ್ಲಿ ಇಂಟರ್ನೆಟ್ ಬಳಕೆಯನ್ನು ಮಾಡದವರು ಯಾರಿದ್ದಾರೆ ಹೇಳಿ. ಮಾಹಿತಿಯಿಂದ ಹಿಡಿದು ಪ್ರಪಂಚದ ಮೂಲೆ ಮೂಲೆಗಳ ರಹಸ್ಯಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುವ ಇಂಟರ್ನೆಟ್ ಅನ್ನು ನಿರ್ಬಂಧಿಸುವವರು ಇದ್ದಾರೆ ಎಂಬುದು ನಿಮಗೆ ತಿಳಿದರೆ ಆಶ್ಚರ್ಯವಾಗುವುದು ಖಂಡಿತ.
ಓದಿರಿ: ಫೋನ್ ಸ್ಫೋಟಕ್ಕೆ ಕಾರಣಗಳು ಮತ್ತು ಪರಿಹಾರಗಳು
ಹೌದು ಇಂಟರ್ನೆಟ್‌ಗಳು ದೇಶದ ಪ್ರಗತಿಯ ಮೇಲೆ ಅಡ್ಡಪರಿಣಾಮವನ್ನು ಬೀರಬಹುದು ಎಂಬ ಹೆದರಿಕೆಯಿಂದ ಕೆಲವು ದೇಶಗಳು ಈ ಸೇವೆಯನ್ನೇ ನಿಲ್ಲಿಸಿವೆ. ಇಂದಿನ ಲೇಖನದಲ್ಲಿ ಆ ದೇಶಗಳು ಯಾವುವು ಎಂಬುದನ್ನು ನಿಮಗೆ ತಿಳಿಸಲಿರುವೆವು. ಈ ದೇಶಗಳು ಅಭಿವೃದ್ಧಿಯನ್ನು ಹೊಂದುತ್ತಿರುವ ದೇಶಗಳಾದರೂ ಇಲ್ಲಿ ಇಂಟರ್ನೆಟ್ ಬಳಸುವಂತಿಲ್ಲ.

ತುರ್ಕಮೆನಿಸ್ತಾನ್
ಈ ದೇಶದಲ್ಲಿ ಇಂಟರ್ನೆಟ್ ಒದಗಿಸುವುದೇ ಸರಕಾರವಾಗಿದ್ದು, ಹಲವಾರು ಸೈಟ್‌ಗಳ ಮೇಲೆ ನಿರ್ಬಂಧವನ್ನು ಹೇರಿದೆ. ಜಿಮೇಲ್, ಯಾಹೂ, ಹಾಟ್‌ಮೇಲ್ ಮೇಲೆ ಕಟ್ಟುನಿಟ್ಟಿನ ಕಣ್ಣಿಟ್ಟಿದೆ. ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ನ್ಯೂಸ್ ಏಜೆನ್ಸಿಗಳನ್ನು ಇದು ಬ್ಲಾಕ್ ಮಾಡಿದೆ.

ವಿಯೇಟ್ನಾಮ್
ಇಂಟರ್ನೆಟ್‌ನಲ್ಲಿ ಹೊರಬಿಡುವ ಮಾಹಿತಿಯ ಮೇಲೆ ಕಣ್ಣಿಡಲಂದೇ ಸರಕಾರ ಏಜೆನ್ಸಿಯೊಂದನ್ನು ರಚಿಸಿದೆ. ಇನ್ನು ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡುವುದರಿಂದ ಸರಕಾರಕ್ಕೆ ಹಾನಿ ಇದೆ ಎಂಬುದು ಅದಕ್ಕೆ ತಿಳಿದಿರುವುದರಿಂದ ಅಷ್ಟೊಂದು ನಿರ್ಬಂಧ ಈ ದೇಶದಲ್ಲಿಲ್ಲ.

ಟ್ಯುನೀಶಿಯಾ
ಈ ದೇಶದ ಇಂಟರ್ನೆಟ್ ಪ್ರೊವೈಡರ್ಸ್ ಸರಕಾರಕ್ಕೆ ಐಪಿ ವಿಳಾಸ ಮತ್ತು ನಿಯಮಿತ ಆಧಾರದಲ್ಲಿ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ವರದಿ ಮಾಡಬೇಕು.

ಸಿರಿಯಾ
ಸರಕಾರದ ವಿರುದ್ಧ ಯಾರಾದರೂ ಬ್ಲಾಗರ್ ವಿರುದ್ಧ ಹೋದಲ್ಲಿ ಇವರನ್ನು ಬಂಧಿಸಲಾಗುತ್ತದೆ. ಮತ್ತು ಆ ಸೈಟ್‌ಗಳನ್ನು ಬ್ಲಾಕ್ ಮಾಡಲಾಗುತ್ತದೆ.

ಚೀನಾ
ವಿಶ್ವದಲ್ಲಿಯೇ ಅತಿ ಹೆಚ್ಚು ಕಟ್ಟುನಿಟ್ಟಿನ ಸೆನ್ಸಾರ್ ಕಾರ್ಯಕ್ರಮವನ್ನು ಚೀನಾ ದೇಶ ಹೊಂದಿದೆ. ಸೇವೆ ಒದಗಿಸುವವರ ಹುಡುಕಾಟಗಳನ್ನು ಫಿಲ್ಟರ್ ಮಾಡುವ ಮೂಲಕ ಸೈಟ್‌ಗಳನ್ನು ನಿರ್ಬಂಧಿಸುವ ಮೂಲಕ ಸರಕಾರದ ವಿರುದ್ಧ ದನಿ ಎತ್ತುವ ಸೇವೆಗಳನ್ನು ನಿಲ್ಲಿಸುತ್ತದೆ.

ಇರಾನ್
ವೈಯಕ್ತಿಕ ಬ್ಲಾಗ್ ಅನ್ನು ಹೊಂದಿರುವ ಯಾರೇ ಆದರೂ ಮಿನಿಸ್ಟರಿ ಆಫ್ ಆರ್ಟ್ ಮತ್ತು ಕಲ್ಚರ್‌ನಲ್ಲಿ ನೋಂದಾವಣೆಯನ್ನು ಮಾಡಬೇಕೆಂಬ ತಾಕೀತನ್ನು ಸರಕಾರ ವಿಧಿಸುತ್ತದೆ. ಇನ್ನು ವೆಬ್ ಪುಟಗಳನ್ನು ಸರಕಾರ ಫಿಲ್ಟರ್ ಕೂಡ ಮಾಡುತ್ತದೆ.

ಸೌದಿ ಅರೇಬಿಯಾ
400,000 ಸೈಟ್‌ಗಳನ್ನು ಬ್ಲಾಕ್ ಮಾಡಲಾಗಿದೆ ಇನ್ನು ರಾಜಕೀಯ ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳಿದ್ದರೂ ಅವುಗಳಿಗೂ ನಿರ್ಬಂಧನೆ ಈ ದೇಶದಲ್ಲಿ. ಅಶ್ಲೀಲತೆ, ಡ್ರಗ್ ಬಳಕೆ, ಜೂಜಾಟ ಇವುಗಳ ಮೇಲೆ ತೀವ್ರ ಸೆನ್ಸಾರ್ ಕ್ರಮವನ್ನು ಸೌದಿ ಅರೇಬಿಯಾ ಕೈಗೊಳ್ಳುತ್ತದೆ.

ಕ್ಯುಬಾ
ಕಂಪ್ಯೂಟರ್‌ಗಳ ಅತಿ ಕಡಿಮೆ ಶ್ರೇಣಿಯನ್ನು ಕ್ಯುಬಾ ದೇಶ ಹೊಂದಿದೆ. ಇನ್ನು ಇಂಟರ್ನೆಟ್ ಬಳಸುವವರ ಸಂಖ್ಯೆ ಕೂಡ ಈ ದೇಶದಲ್ಲಿ ವಿರಳ. ಇಲ್ಲಿ ಕೀವರ್ಡ್ ಫಿಲ್ಟರಿಂಗ್ ಮತ್ತು ಬ್ರೌಸಿಂಗ್ ಹಿಸ್ಟರಿ ಪರಿಶೀಲನೆಯನ್ನು ಸರಕಾರ ಕೈಗೊಳ್ಳುತ್ತದಂತೆ.

ಬರ್ಮಾ
ಇಮೇಲ್‌ಗಳನ್ನು ಫಿಲ್ಟರ್ ಮಾಡುವುದು ಮತ್ತು ಮಾನವ ಹಕ್ಕು ಆಯೋಗಗಳಿಗೆ ಪ್ರವೇಶವನ್ನು ನಿಷಿದ್ಧಗೊಳಿಸಿರುವುದು ಬರ್ಮಾ ದೇಶದ ಇಂಟರ್ನೆಟ್ ವಿರೋಧ ನೀತಿಯಾಗಿದೆ.

ನಾರ್ತ್ ಕೊರಿಯಾ
ಈ ದೇಶದಲ್ಲೂ ಇಂಟರ್ನೆಟ್ ಬಳಸುವವರು ಅತಿ ಕಡಿಮೆಯಾಗಿದ್ದು, ಸರಕಾರವು ಸೆನ್ಸಾರ್ ನೀತಿಯನ್ನು ಇಂಟರ್ನೆಟ್ ಬಳಕೆಯ ಮೇಲೆ ಹೇರಿದೆ. ಎಲ್ಲಾ ವೆಬ್‌ಸೈಟ್‌ಗಳನ್ನು ಸರಕಾರವು ತನ್ನ ಅಧಿಪತ್ಯದಲ್ಲಿ ಇರಿಸಿದೆ.


Click it and Unblock the Notifications








