ಫೋನ್ ಸ್ಫೋಟಕ್ಕೆ ಕಾರಣಗಳು ಮತ್ತು ಪರಿಹಾರಗಳು

Written By:

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಅನ್ನು ಆಟಿಕೆಯಾಗಿ ಕಾಣಲಾಗುತ್ತಿದೆ. ಆದರೆ ಜಾಗರೂಕತೆಯಿಂದ ನೀವು ಇವುಗಳ ಉಪಯೋಗವನ್ನು ಮಾಡಿಲ್ಲ ಎಂದಾದಲ್ಲಿ ಇವುಗಳು ನಿಮ್ಮ ಪ್ರಾಣಕ್ಕೆ ಕುತ್ತು ತರಬಹುದು. ಇನ್ನು ಅಜಾಗರೂಕತೆಯ ಪರಿಣಾಮದಿಂದಾಗಿ ಫೋನ್ ಬ್ಲಾಸ್ಟ್ ಆದ ಹಲವಾರು ನಿದರ್ಶನಗಳನ್ನು ನೀವು ಕಂಡಿರುತ್ತೀರಿ ಮತ್ತು ಕೇಳಿರುತ್ತೀರಿ.

ಓದಿರಿ: ಅಂಗೈಯಗಲದ ಜಾದೂ ಪೆಟ್ಟಿಗೆಯ ಕಮಾಲು ಬಲ್ಲವರಾರು?

ಅಚಾನಕ್ಕಾಗಿ ನಿಮ್ಮ ಫೋನ್‌ಗೆ ಸಂಭವಿಸುವ ಈ ದುರಂತಕ್ಕೆ ಕಾರಣಗಳೇನು ಎಂಬುದನ್ನು ನೀವು ಕಂಡುಕೊಂಡಲ್ಲಿ ನಿಜಕ್ಕೂ ನೀವು ಸ್ತಂಭೀಭೂತರಾಗುತ್ತೀರಿ. ಹೌದು ನೀವು ಮಾಡುವಂತಹ ಸಣ್ಣ ತಪ್ಪುಗಳು ಫೋನ್ ಬ್ಲಾಸ್ಟ್‌ನಂತಹ ಅಪಘಾತಕ್ಕೆ ಕಾರಣವಾಗಬಹುದು ಎಂಬ ಅಂಶವನ್ನು ನೀವು ತಿಳಿದಿದ್ದೀರಾ? ಬನ್ನಿ ಇಂದಿನ ಲೇಖನದಲ್ಲಿ ಅಂತಹ ಘಟನೆಗೆ ಕಾರಣಗಳೇನು ಎಂಬುದನ್ನು ಕಂಡುಕೊಳ್ಳೋಣ.

ಓದಿರಿ: ಆಂಡ್ರಾಯ್ಡ್ ಡಿವೈಸ್ ಸ್ನೇಹಿ ಬ್ಯಾಟರಿ ಟಿಪ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
IMEI ಸಂಖ್ಯೆ

IMEI ಸಂಖ್ಯೆ

ಬ್ರ್ಯಾಂಡ್ ಫೋನ್ ಖರೀದಿ

ನೀವು ಫೋನ್ ಖರೀದಿಸುವಾಗ ಆದಷ್ಟು ಬ್ರ್ಯಾಂಡ್ ಫೋನ್ ಖರೀದಿಯಲ್ಲಿ ತೊಡಗಿ. ಸೂಕ್ತವಾದ IMEI ಸಂಖ್ಯೆಯನ್ನು ಡಿವೈಸ್ ಒಳಗೊಂಡಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಇಯರ್ ಫೋನ್ಸ್, ಬ್ಯಾಟರಿ ಮತ್ತು ಚಾರ್ಜರ್

ಇಯರ್ ಫೋನ್ಸ್, ಬ್ಯಾಟರಿ ಮತ್ತು ಚಾರ್ಜರ್

ಆಕ್ಸೆಸರೀಸ್ ಪರಿಶೀಲನೆ

ಇನ್ನು ಫೋನ್‌ನ ಜೊತೆಗೆ ಅವುಗಳ ಆಕ್ಸೆಸರೀಸ್ ಅನ್ನು ಪರಿಶೀಲಿಸಿಕೊಳ್ಳಿ. ಇಯರ್ ಫೋನ್ಸ್, ಬ್ಯಾಟರಿ ಮತ್ತು ಚಾರ್ಜರ್ ಪರಿಶೀಲನೆ ಮಾಡಿ. ಬ್ಯಾಟರಿ ವಿವರಣೆಯು ವೋಲ್ಟೇಜ್ ಪ್ರಮಾಣಕ್ಕೆ ಸರಿಹೊಂದಿಕೊಳ್ಳುತ್ತಿದೆಯೇ ಎಂಬುದನ್ನು ಗಮನಿಸಿಕೊಳ್ಳಿ.

ಕರೆ ಸ್ವೀಕಾರ

ಕರೆ ಸ್ವೀಕಾರ

ಫೋನ್ ಬ್ಲಾಸ್ಟ್ ಹೇಗೆ?

ನಿಮ್ಮ ಫೋನ್ ಚಾರ್ಜ್‌ನಲ್ಲಿದ್ದ ಸಂದರ್ಭದಲ್ಲಿ ಅಥವಾ ಚಾರ್ಜ್‌ ಆಗುತ್ತಿರುವಾಗ ಕರೆ ಸ್ವೀಕಾರವನ್ನು ನೀವು ಮಾಡಿದಲ್ಲಿ ಹೆಚ್ಚಾಗಿ ಫೋನ್ ಬ್ಲಾಸ್ಟ್ ಉಂಟಾಗುತ್ತದೆ.

ಮದರ್ ಬೋರ್ಡ್‌

ಮದರ್ ಬೋರ್ಡ್‌

ಚಾರ್ಜರ್ ಪ್ರಭಾವ

ಫೋನ್ ಚಾರ್ಜ್ ಆಗುತ್ತಿರುವ ಸಂದರ್ಭದಲ್ಲಿ ಫೋನ್‌ನ ಮದರ್ ಬೋರ್ಡ್‌ಗೆ ಇದು ಒತ್ತಡವನ್ನು ಹಾಕುತ್ತದೆ. ಇನ್ನು ಚಾರ್ಜ್ ಆಗುತ್ತಿರುವ ಸಂದರ್ಭದಲ್ಲಿ ಫೋನ್ ಬಳಕೆ ಈ ಒತ್ತಡದ ಪ್ರಭಾವವನ್ನು ಹೆಚ್ಚಿಸುತ್ತದೆ.

ಕಡಿಮೆ ದರ್ಜೆಯ ಭಾಗಗಳು

ಕಡಿಮೆ ದರ್ಜೆಯ ಭಾಗಗಳು

ಬ್ಲಾಸ್ಟ್ ಸಂಭವ

ಇನ್ನು ಮೊಬೈಲ್‌ಗಳಲ್ಲಿರುವ ಕಡಿಮೆ ದರ್ಜೆಯ ಭಾಗಗಳು ಫೋನ್ ಬ್ಲಾಸ್ಟ್‌ಗೆ ಕಾರಣವಾಗುತ್ತವೆ.

ಅಂತರಾಷ್ಟ್ರೀಯ ಸಂಖ್ಯೆ

ಅಂತರಾಷ್ಟ್ರೀಯ ಸಂಖ್ಯೆ

ಕಾಲ್ ಬಾಂಬಿಂಗ್

ಅಂತರಾಷ್ಟ್ರೀಯ ಸಂಖ್ಯೆಗಳಿಂದ ನೀವು ಕರೆ ಸ್ವೀಕರಿಸಿದಲ್ಲಿ ಅಥವಾ ಮಿಸ್ ಕಾಲ್ ಬಂತೆಂದು ನೀವು ಮಾಡಿದಲ್ಲಿ ಕಾಲ್ ಬಾಂಬಿಂಗ್ ಅಪಾಯ ನಿಮಗೆ ಎದುರಾಗಬಹುದು.

ನಿರ್ದಿಷ್ಟ ಸಮಯ

ನಿರ್ದಿಷ್ಟ ಸಮಯ

ಕಾಲ್ ಬಾಂಬಿಂಗ್‌ನಿಂದ ಫೋನ್ ಬ್ಲಾಸ್ಟ್ ಹೇಗೆ

ಅಂತರಾಷ್ಟ್ರೀಯ ಕರೆಗಳಿಂದ ನೀವು ಕರೆ ಸ್ವೀಕರಿಸಿದಲ್ಲಿ ಅಥವಾ ಆ ಸಂಖ್ಯೆಗೆ ನೀವು ಫೋನ್ ಮಾಡಿದಲ್ಲಿ ನಿರ್ದಿಷ್ಟ ಸಮಯವನ್ನು ಕರೆ ಸಮಯ ದಾಟಿತು ಎಂದಾದಲ್ಲಿ ಫೋನ್ ಬ್ಲಾಸ್ಟ್ ಆಗುತ್ತದೆ.

ಆಂಡ್ರಾಯ್ಡ್ ಆಧಾರಿತ ಫೋನ್‌

ಆಂಡ್ರಾಯ್ಡ್ ಆಧಾರಿತ ಫೋನ್‌

ಮಾಲ್‌ವೇರ್

ಕೆಲವೊಂದು ಆಂಡ್ರಾಯ್ಡ್ ಆಧಾರಿತ ಫೋನ್‌ಗಳಲ್ಲಿ ಮಾಲ್‌ವೇರ್ ಅಥವಾ ಬಗ್‌ಗಳು ಕಂಡುಬಂದಿದ್ದು, ಚಾರ್ಜಿಂಗ್ ಸಮಯದಲ್ಲಿ ಇವು ಮದರ್ ಬೋರ್ಡ್ ಮೇಲೆ ಹಾಕುವ ಒತ್ತಡದಿಂದ ಫೋನ್ ಬ್ಲಾಸ್ಟ್ ಸಂಭವಿಸುತ್ತದೆ ಎನ್ನಲಾಗುತ್ತದೆ.

ಫೋನ್ ಬಳಕೆಯನ್ನು ಮಾಡಬೇಡಿ

ಫೋನ್ ಬಳಕೆಯನ್ನು ಮಾಡಬೇಡಿ

ಒತ್ತಡ ಬೀಳದಂತೆ ಜಾಗರೂಕತೆ ಹೇಗೆ

ಫೋನ್ ಚಾರ್ಜ್ ಆಗುತ್ತಿರುವಾಗ ಫೋನ್ ಬಳಕೆಯನ್ನು ಮಾಡಬೇಡಿ. ಈ ಸಮಯದಲ್ಲಿ ನೀವು ಕರೆ ಸ್ವೀಕರಿಸಬೇಕು ಎಂದಾದಲ್ಲಿ ಚಾರ್ಜರ್‌ನಿಂದ ಫೋನ್ ಅನ್ನು ತೆಗೆಯಿರಿ ನಂತರ ಕರೆ ಸ್ವೀಕರಿಸಿ.

ಚಾರ್ಜರ್‌ನಲ್ಲಿ ಕನೆಕ್ಟ್ ಮಾಡದಿರಿ

ಚಾರ್ಜರ್‌ನಲ್ಲಿ ಕನೆಕ್ಟ್ ಮಾಡದಿರಿ

ಓವರ್ ಚಾರ್ಜ್

ಬ್ಯಾಟರಿ ಪೂರ್ಣ ಚಾರ್ಜ್ ಆದ ನಂತರ ಕೂಡ ಫೋನ್ ಅನ್ನು ಚಾರ್ಜರ್‌ನಲ್ಲಿ ಕನೆಕ್ಟ್ ಮಾಡದಿರಿ. ಚಾರ್ಜರ್ ಸಂಪರ್ಕವನ್ನು ತೆಗೆಯಿರಿ.

ಬ್ಯಾಟರಿಯನ್ನು ಬದಲಾಯಿಸಿಕೊಳ್ಳಿ

ಬ್ಯಾಟರಿಯನ್ನು ಬದಲಾಯಿಸಿಕೊಳ್ಳಿ

ಬ್ಯಾಟರಿ ಸೋರಿಕೆ

ನಿಮ್ಮ ಫೋನ್ ಬ್ಯಾಟರಿ ಸೋರಿಕೆಯಾಗುತ್ತಿದೆ ಎನ್ನುವ ಸಂದರ್ಭದಲ್ಲಿ ಕೂಡಲೇ ಬ್ಯಾಟರಿಯನ್ನು ಬದಲಾಯಿಸಿಕೊಳ್ಳಿ.

ಕಡಿಮೆ ದರದ ಫೋನ್

ಕಡಿಮೆ ದರದ ಫೋನ್

ಕಡಿಮೆ ದರದ ಫೋನ್ ಖರೀದಿಸುವಾಗ ಇರಲಿ ಎಚ್ಚರ

ಚೀನಾ ಮಾಡೆಲ್ ಫೋನ್‌ಗಳು ಬಳಸುವ ಹಾರ್ಡ್‌ವೇರ್ ಬ್ರ್ಯಾಂಡೆಡ್ ಆಗಿರುವುದಿಲ್ಲ. ಬ್ಯಾಟರಿ ಇಯರ್ ಫೋನ್‌ಗಳು ಕೆಲವೊಂದು ದೋಷವನ್ನು ಒಳಗೊಂಡಿರುತ್ತವೆ.

ಡೌನ್‌ಲೋಡ್

ಡೌನ್‌ಲೋಡ್

ಫೋನ್‌ನಲ್ಲಿ ಡೌನ್‌ಲೋಡ್ ಪರಿಣಾಮ

ಫೋನ್‌ನಲ್ಲಿ ಇಂಟರ್ನೆಟ್ ಬಳಕೆಯನ್ನು ನೀವು ಮಾಡುತ್ತಿದ್ದೀರಿ ಎಂದಾದಲ್ಲಿ ಡೌನ್‌ಲೋಡ್ ಮಾಡುವಾಗ ವೆಬ್ ಸರ್ಫ್ ಮಾಡುವಾಗ ಹೆಚ್ಚು ಜಾಗರೂಕತೆಯಿಂದಿರಿ.

ಸಾರ್ವಜನಿಕ ವೈಫೈ

ಸಾರ್ವಜನಿಕ ವೈಫೈ

ಸಾರ್ವಜನಿಕ ವೈಫೈ ಬಳಕೆ ಕಡಿಮೆ ಮಾಡಿ

ಬಳಕೆಯಲ್ಲಿಲ್ಲದ ಅಥವಾ ಸಾರ್ವಜನಿಕ ವೈಫೈ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಹೆಚ್ಚು ಸುಭದ್ರವಾಗಿಲ್ಲದ ಪೋರ್ಟ್ ಮೂಲಕ ಹ್ಯಾಕರ್ ಮೊಬೈಲ್ ಡಿವೈಸ್ ಅನ್ನು ಪ್ರವೇಶಿಸಬಹುದು.

ಬ್ಲ್ಯೂಟೂತ್

ಬ್ಲ್ಯೂಟೂತ್

ಬ್ಲ್ಯೂಟೂತ್ ಬಳಕೆ

ಸಾರ್ವಜನಿಕ ಪ್ರದೇಶಗಳಲ್ಲಿ ಬ್ಲ್ಯೂಟೂತ್ ಆನ್ ಆಗದಿರುವಂತೆ ನೋಡಿಕೊಳ್ಳಿ. ನಿಮ್ಮ ಫೋನ್ ಓಎಸ್ ಅನ್ನು ನಾಶ ಮಾಡುವಂತಹ ದೋಷಪೂರಿತ ಫೈಲ್‌ಗಳನ್ನು ಕಳುಹಿಸಲು ಇದನ್ನು ಬಳಸುವ ಸಾಧ್ಯತೆ ಇರುತ್ತದೆ.

ರೇಡಿಯೇಶನ್ ಪ್ರಮಾಣ

ರೇಡಿಯೇಶನ್ ಪ್ರಮಾಣ

ಫೋನ್ ದೇಹದಿಂದ ದೂರವಿರಲಿ

ಫೋನ್‌ನೊಂದಿಗೆ ಸಂವಹನವನ್ನು ನೀವು ಮಾಡುತ್ತಿರುವಾಗ ನಿಮ್ಮ ದೇಹದಿಂದ ಫೋನ್ ಅನ್ನು ಆದಷ್ಟು ದೂರವಿರಿಸಿಕೊಳ್ಳಿ. ಇದರಿಂದ ರೇಡಿಯೇಶನ್ ಪ್ರಮಾಣ ಕುಗ್ಗಬಹುದು ಮತ್ತು ದುರಂತ ಉಂಟಾಗದೇ ಇರಬಹುದು.

ಸ್ಪೀಕರ್ ಫೋನ್

ಸ್ಪೀಕರ್ ಫೋನ್

ಸ್ಪೀಕರ್ ಫೋನ್ ಮೋಡ್

ಸ್ಪೀಕರ್ ಫೋನ್ ಮೋಡ್ ಅಥವಾ ವೈರ್‌ಲೆಸ್ ಬ್ಲ್ಯೂಟೂತ್ ಹೆಡ್ ಸೆಟ್ ಬಳಕೆಯನ್ನು ಮಾಡಿ. ಇನ್ನು ದೀರ್ಘ ಸಂವಹನಕ್ಕಾಗಿ ಲ್ಯಾಂಡ್‌ಲೈನ್ ಫೋನ್ ಬಳಕೆ ಮಾಡಿ.

ಸಿಗ್ನಲ್ ದುರ್ಬಲ

ಸಿಗ್ನಲ್ ದುರ್ಬಲ

ಸಿಗ್ನಲ್ ದುರ್ಬಲಗೊಂಡಿರುವಾಗ

ಫೋನ್ ಸಿಗ್ನಲ್ ದುರ್ಬಲಗೊಂಡಿರುವಂತಹ ಸಂದರ್ಭದಲ್ಲಿ ಅವುಗಳ ಬಳಕೆಯನ್ನು ಮಾಡದಿರಿ.

ನಿಮ್ಮ ಸನಿಹ

ನಿಮ್ಮ ಸನಿಹ

ನಿಮ್ಮ ದೇಹದೊಂದಿಗೆ ಫೋನ್ ಸಂಪರ್ಕ

ಸಾಧ್ಯವಾದಷ್ಟು ನಿಮ್ಮ ಫೋನ್ ಅನ್ನು ಪಾಕೆಟ್‌ನಲ್ಲಿ ಇರಿಸಿಕೊಳ್ಳುವ ಅಭ್ಯಾಸವನ್ನು ಬಿಟ್ಟುಬಿಡಿ. ರಾತ್ರಿ ಸಮಯದಲ್ಲಿ ನಿಮ್ಮ ಸನಿಹ ಫೋನ್ ಅನ್ನು ಇರಿಸುವುದನ್ನು ಆದಷ್ಟು ಕಡಿಮೆ ಮಾಡಿ.

ಮೋಡ್

ಮೋಡ್

ಫ್ಲೈಟ್ ಅಥವಾ ಆಫ್‌ಲೈನ್ ಮೋಡ್

ನೀವು ನಿದ್ದೆ ಮಾಡುತ್ತಿರುವಾಗ ಫೋನ್ ಅನ್ನು ಫ್ಲೈಟ್ ಮೋಡ್ ಅಥವಾ ಆಫ್‌ಲೈನ್ ಮೋಡ್‌ನಲ್ಲಿರಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Mobile phones may be treated like playthings these days. However, these flashy gadgets can prove dangerous if not handled with care.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot