ನೀವು ಬಯಸುವ ನಿಮ್ಮ ಕನಸಿನ ಫೋನ್ 2016 ಕ್ಕೆ ರೆಡಿ!!
ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ಬೇಡಿಕೆಗಳನ್ನು ಈಡೇರಿಸುವ ಮಾಯಾ ಪೆಟ್ಟಿಗೆ ಎಂದೆನಿಸಿದೆ. ನಾವು ನಮ್ಮೆಲ್ಲಾ ವಿವರಗಳನ್ನು ಹೆಚ್ಚು ಕಡಿಮೆ ಎಲ್ಲಾ ಕೆಲಸಗಳನ್ನು ಇದನ್ನು ಬಳಸಿಯೇ ನಿರ್ವಹಿಸಿಕೊಳ್ಳುತ್ತಿದ್ದೇವೆ. ಆದರೆ ಹೊಸ ಹೊಸ ಆವಿಷ್ಕಾರಗಳು ಈ ಫೋನ್ ಲೋಕದಲ್ಲಿ ನಡೆಯುತ್ತಿದ್ದು ಅದಕ್ಕನುಗುಣವಾದ ಅತ್ಯಪೂರ್ಣ ಡಿವೈಸ್‌ಗಳನ್ನು ನಮಗೆ ಕಾಣಬಹುದಾಗಿದೆ.
ಓದಿರಿ: ಆಂಡ್ರಾಯ್ಡ್ ಫೋನ್ ಇದ್ದರೆ ಜಾಕ್ ಪ್ಯಾಟ್ ಹೊಡೆದಂತೆ!!!
ಸ್ಮಾರ್ಟ್‌ಫೋನ್ ವಿನ್ಯಾಸಗಳು ಮಾತ್ರ ಬದಲಾಗದೇ ಇನ್ನಷ್ಟು ಸ್ಲಿಮ್, ಸ್ಮಾರ್ಟ್ ಲೋಕದಲ್ಲಿ ಫೋನ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿವೆ. ಫಿಂಗರ್ ಪ್ರಿಂಟ್ ಸೆನ್ಸಾರ್, ಆಂಡ್ರಾಯ್ಡ್ ಪೇ, ಟ್ಯಾಬ್ ಆನ್ ನೌ ಮತ್ತು ಇನ್ನಷ್ಟನ್ನು ಹೊಸ ಡಿವೈಸ್‌ಗಳಲ್ಲಿ ನಮಗೆ ಲಭ್ಯವಾಗುತ್ತಿದೆ. ಇಂದಿನ ಲೇಖನದಲ್ಲಿ ಈ ಹೊಸ ಮಾರ್ಪಾಡುಗಳ ಬಗ್ಗೆಯೇ ನಾವು ಮಾತನಾಡಲಿದ್ದು ಹೊಸ ವರ್ಷಕ್ಕಾಗಿ ಹೊಸ ಹೊಸ ಡಿವೈಸ್‌ಗಳು ಯಾವ ರೀತಿಯಲ್ಲಿ ಬದಲಾಗಿವೆ ಎಂಬುದನ್ನು ನೋಡೋಣ.

ಮುಂಭಾಗ ಸ್ಟಿರಿಯೊ ಸ್ಪೀಕರ್‌ಗಳು
ಮುಂಭಾಗ ಸ್ಟಿರಿಯೊ ಬೂಮ್ ಸೌಂಡ್ ಸ್ಪೀಕರ್ ಉತ್ತಮ ಮೀಡಿಯಾ ಅನುಭವವನ್ನು ಒದಗಿಸುತ್ತಿದೆ. ಎಚ್‌ಟಿಸಿ ಇಂತಹ ವಿಶಷ ಫೀಚರ್ ಅನ್ನು ಪಡೆದುಕೊಂಡಿದೆ. ಮಧ್ಯಮ ಕ್ರಮಾಂಕಿತ ಮತ್ತು ಬಜೆಟ್ ಹ್ಯಾಂಡ್‌ಸೆಟ್‌ಗಳಲ್ಲಿ ಈ ರೀತಿಯ ಫೀಚರ್ ಅನ್ನು ಕಾಣಲು ನಾವು ಬಯಸುತ್ತೇವೆ.

ಯುಎಸ್‌ಬಿ ಟೈಪ್ ಸಿ
ಯುಎಸ್‌ಬಿ ಟೈಪ್ ಸಿ ಪೋರ್ಟ್ ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆಯಾಗುತ್ತಿರುವ ಯುಎಸ್‌ಬಿ ಪೋರ್ಟ್‌ಗಿಂತಲೂ ವೇಗದ ಚಾರ್ಜ್ ಅನ್ನು ಫೋನ್‌ಗೆ ಮಾಡುತ್ತದೆ. ಒನ್ ಪ್ಲಸ್ ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಪ್ರಸ್ತುತಪಡಿಸಿದ್ದು 2016 ರ ಫೋನ್‌ಗಳಲ್ಲಿ ಈ ಫೀಚರ್ ಅನ್ನು ನಮಗೆ ಕಾಣಬಹುದಾಗಿದೆ.

ಕ್ಯಾಮೆರಾ ಆಪ್ಟಿಕ್ಸ್
ಕಳೆದ ವರ್ಷಕ್ಕಿಂತ ಈ ವರ್ಷದ ಫೋನ್‌ಗಳಲ್ಲಿ ಹೆಚ್ಚು ಸುಧಾರಿತ ಕ್ಯಾಮೆರಾ ತಂತ್ರಜ್ಞಾನವನ್ನು ನಮಗೆ ಕಾಣಬಹುದಾಗಿದೆ. ಸೆಲ್ಫಿ ಕ್ಯಾಮೆರಾಗಳು ಅಗಲವಾದ ಆಂಗಲ್ ಮತ್ತು ಉತ್ತಮ ಫ್ಲ್ಯಾಶ್ ಮಾಡ್ಯೂಲ್ ಅನ್ನು ಪಡೆದುಕೊಂಡು ಬಂದಿದೆ. ಹಿಂಭಾಗ ಕ್ಯಾಮೆರಾ ಕೂಡ ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋವನ್ನು ನೀಡಲಿದೆ.

ಕ್ವಿಕ್ ಚಾರ್ಜ್
ಕಳೆದ ವರ್ಷ ಹೆಚ್ಚಿನ ಡಿವೈಸ್‌ಗಳಲ್ಲಿ ಕ್ವಿಕ್ ಚಾರ್ಜ್ ಅನ್ನು ಪ್ರಸ್ತುತಪಡಿಸಲಾಗಿತ್ತು. ಮಧ್ಯಮ ಕ್ರಮಾಂಕಿತ ಫೋನ್‌ಗಳಲ್ಲಿ ಕೂಡ ಈ ಫೀಚರ್ ಅನ್ನು ನಮಗೆ ಕಾಣಬಹುದಾಗಿದೆ.

ವಿಸ್ತರಿತ ಸಂಗ್ರಹಣಾ ಸಾಮರ್ಥ್ಯ
ತಮ್ಮ ಡಿವೈಸ್‌ಗಳಲ್ಲಿ ಹೆಚ್ಚುವರಿ ಸಂಗ್ರಹಣಾ ಸಾಮರ್ಥ್ಯಗಳನ್ನು ಪಡೆದುಕೊಂಡಿವೆ. ಈ ಬಾರಿಯೂ ಹಲವಾರು ಡಿವೈಸ್‌ಗಳು ಸಂಗ್ರಹಣಾ ಸಾಮರ್ಥ್ಯವನ್ನು ವಿಸ್ತರಿಸುವ ಸೌಲಭ್ಯವನ್ನು ಪಡೆದುಕೊಂಡು ಎಸ್‌ಡಿ ಕಾರ್ಡ್‌ನೊಂದಿಗೆ ಬಂದಿದೆ.

3ಡಿ ಟಚ್
ಐಫೋನ್ 6ಎಸ್‌ನಲ್ಲಿ ಆಪಲ್ 3ಡಿ ಟಚ್ ಕ್ರಾಂತಿಯನ್ನು ಹುಟ್ಟುಹಾಕಿದೆ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಕೂಡ ಈ ತಂತ್ರಜ್ಞಾನ ಬರುವಂತಾಗಲೀ ಎಂದೇ ನಾವು ಬಯಸುತ್ತೇವೆ.

ಹೆಚ್ಚುವರಿ RAM
3ಜಿಬಿ RAM ಉಳ್ಳ ಸ್ಮಾರ್ಟ್‌ಫೋನ್‌ಗಳನ್ನು ನಾವು 2015 ರಲ್ಲಿ ನೋಡಿದ್ದೇವೆ. ಮುಂಬರುವ ಡಿವೈಸ್‌ಗಳು 4ಜಿಬಿ RAM ಅನ್ನು ಹೊಂದಿರುವ ಸಾಧ್ಯತೆಗಳಿವೆ.

ಕಡಿಮೆ ಹೀಟಿಂಗ್ ಸಮಸ್ಯೆಗಳು
ಸ್ನ್ಯಾಪ್‌ಡ್ರ್ಯಾಗನ್ 810 ಚಿಪ್‌ಸೆಟ್‌ಗಳು ಸ್ಮಾರ್ಟ್‌ಫೋನ್‌ನ ಹೀಟಿಂಗ್ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹೆಚ್ಚಿನ ಪಾತ್ರ ವಹಿಸಿದೆ. ಈ ವರ್ಷ ಸ್ಮಾರ್ಟ್‌ಫೋನ್‌ನ ಹೀಟಿಂಗ್ ಸಮಸ್ಯೆಗಳನ್ನು ನಿವಾರಿಸುವ ಇನ್ನಷ್ಟು ಅಪ್‌ಗ್ರೇಡ್‌ಗಳನ್ನು ನಮಗೆ ಕಾಣಬಹುದು.

ಫಿಂಗರ್ ಪ್ರಿಂಟ್ ಸ್ಕ್ಯಾನರ್
ನಮ್ಮ ಡಿವೈಸ್‌ಗಳಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಫೀಚರ್ ಅನ್ನು ನಾವು ಮೆಚ್ಚದೇ ಇರಲಾರೆವು. ನಮ್ಮ ಡಿವೈಸ್ ಅನ್ನು ಹೆಚ್ಚು ಸುಭದ್ರ ಮತ್ತು ಅನುಕೂಲಕರವಾಗಿ ಈ ಫೀಚರ್ ಮಾಡಲಿದೆ.

ದೊಡ್ಡ ಬ್ಯಾಟರಿ
ಸಾಕಷ್ಟು ಫೀಚರ್‌ಗಳನ್ನು ನಮ್ಮ ಫೋನ್ ಹೊಂದಿದ್ದರೂ ಅದರ ಬ್ಯಾಟರಿಯತ್ತಲೂ ನಾವು ಗಮನ ನೀಡುತ್ತೇವೆ. ದೀರ್ಘ ಸಮಯದವರೆಗೆ ಅದು ನಮಗಾಗಿ ಕೆಲಸ ಮಾಡಬೇಕು ಎಂದೇ ನಾವು ಹಂಬಲಿಸುತ್ತೇವೆ. ದೊಡ್ಡ ಗಾತ್ರದ ಬ್ಯಾಟರಿಗಳು ಈ ವರ್ಷದ ಸಾಕಷ್ಟು ಡಿವೈಸ್‌ಗಳಲ್ಲಿ ತಮ್ಮ ಸ್ಥಾನವನ್ನು ಅಲಂಕರಿಸಲಿವೆ ಮತ್ತು ಇನ್ನಷ್ಟು ಹೆಚ್ಚಾಗಿ ಕಾರ್ಯನಿರ್ವಹಿಸಲಿವೆ.


Click it and Unblock the Notifications








