Subscribe to Gizbot

ಆಂಡ್ರಾಯ್ಡ್ ಫೋನ್ ಇದ್ದರೆ ಜಾಕ್ ಪ್ಯಾಟ್ ಹೊಡೆದಂತೆ!!!

Written By:

ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಡಿವೈಸ್ ಸಾಕಷ್ಟು ಕೆಲಸಗಳನ್ನು ಮಾಡುತ್ತದೆ. ಆಟಗಳನ್ನು ಆಡುವುದರಿಂದ ಹಿಡಿದು, ಹಾಡು ಕೇಳುವುದು, ಇಮೇಲ್ ಚಾಟಿಂಗ್ ಮಾಡುವುದು ಮತ್ತು ವೆಬ್ ಬ್ರೌಸಿಂಗ್ ಹೀಗೆ ಸಾಕಷ್ಟು ಕೆಲಸಗಳನ್ನು ಮಾಡುತ್ತದೆ.

ಓದಿರಿ: ಆಂಡ್ರಾಯ್ಡ್ ಬಗ್ಗೆ ನಿಮಗೆಷ್ಟು ಗೊತ್ತು?

ಆಂಡ್ರಾಯ್ಡ್ ಬಳಕೆದಾರರ ಅನುಕೂಲಕ್ಕೆಂದೇ ಇಂದಿನ ಲೇಖನದಲ್ಲಿ 10 ಟಿಪ್ಸ್ ಮತ್ತು ಸಲಹೆಗಳೊಂದಿಗೆ ನಾವು ಬಂದಿದ್ದು ನಿಮ್ಮ ಆಂಡ್ರಾಯ್ಡ್ ಡಿವೈಸ್‌ ಬಳಕೆಯ ಉತ್ತಮತೆಯನ್ನು ಇದು ಅಭಿವೃದ್ಧಿಗೊಳಿಸಲಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಆ ಸಲಹೆಗಳನ್ನು ಪಡೆದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೀಮ್ ವ್ಯೂವರ್

ರಿಮೋಟ್ ಕಂಟ್ರೋಲ್‌ನಂತೆ ಬಳಸುವುದು

ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್ ಅನ್ನು ಟೀಮ್ ವ್ಯೂವರ್ ಮತ್ತು ಇತರ ಅಪ್ಲಿಕೇಶನ್ ಬಳಸಿ ರಿಮೋಟ್ ಕಂಟ್ರೋಲ್‌ನಂತೆ ಸ್ಮಾರ್ಟ್‌ಫೋನ್ ಅನ್ನು ಬಳಸಬಹುದು.

ವಯರ್‌ಗಳ ಬಳಕೆ

ಏರ್‌ಡ್ರಾಯ್ಡ್

ವೈರ್‌ಲೆಸ್ ಸಂಪರ್ಕದ ಯುಗದಲ್ಲಿ, ಫೈಲ್‌ಗಳನ್ನು ವರ್ಗಾಯಿಸಲು ವಯರ್‌ಗಳ ಬಳಕೆಯನ್ನು ಏಕೆ ಮಾಡಿಕೊಳ್ಳುತ್ತಿದ್ದೀರಿ? ಏರ್‌ಡ್ರಾಯ್ಡ್ 3 ನಂತಹ ಅಪ್ಲಿಕೇಶನ್‌ಗಳ ಬಳಕೆಯನ್ನು ಮಾಡಿ ಮತ್ತು ತೊಂದರೆಯಿಲ್ಲದೆ ವೈರ್‌ಲೆಸ್ ಟ್ರಾನ್ಸ್‌ಫರ್ ಅನ್ನು ಮಾಡಿಕೊಳ್ಳಿ.

ಅಪ್ಲಿಕೇಶ

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್

ಫೋನ್ ಅನ್ನು ಎಲ್ಲಿಯಾದರೂ ಇಟ್ಟಿದ್ದೀರಾ? ಮೊಬೈಲ್ ಕಳೆದುಕೊಂಡಿದ್ದೀರಾ? ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಮತ್ತು ಇತರ ಅಪ್ಲಿಕೇಶನ್‌ಗಳನ್ನು ಬಳಸಿ ನಿಮ್ಮ ಫೋನ್ ಅನ್ನು ಟ್ರ್ಯಾಕ್ ಮಾಡಬಹುದು.

ಕಣ್ಗಾವಲು

ಐಪಿ ವೆಬ್‌ಕ್ಯಾಮ್

ಐಪಿ ವೆಬ್‌ಕ್ಯಾಮ್ ಅಪ್ಲಿಕೇಶನ್‌ನೊಂದೊಗೆ, ನಿಮ್ಮ ಫೋನ್ ಕ್ಯಾಮೆರಾವನ್ನು ಕಣ್ಗಾವಲು ಕ್ಯಾಮೆರಾವನ್ನಾಗಿ ಮಾರ್ಪಡಿಸಬಹುದು.

ಗೇಮ್ಸ್‌

ಮಲ್ಟಿ ಪ್ಲೇಯರ್ ಗೇಮ್ಸ್‌

ಆಸ್ಫಾಲ್ಟ್ 8, ಬ್ರದರ್ಸ್ ಇನ್ ಆರ್ಮ್ಸ್ ಸೇರಿದಂತೆ ಮಲ್ಟಿ ಪ್ಲೇಯರ್ ಗೇಮ್ಸ್‌ಗಳನ್ನು ನಿಮ್ಮ ಫೋನ್‌ನಲ್ಲಿ ಆಡಬಹುದಾಗಿದೆ.

ಟಿವಿಯಲ್ಲಿ ಗೇಮ್ಸ್

ಆಂಡ್ರಾಯ್ಡ್ ಪೇರ್

ಎಮ್‌ಎಚ್‌ಎಲ್ ಕೇಬಲ್‌ನೊಂದಿಗೆ ಆಂಡ್ರಾಯ್ಡ್ ಅನ್ನು ಪೇರ್ ಮಾಡಿ ಟಿವಿಯಲ್ಲಿ ಗೇಮ್ಸ್ ಆಡಬಹುದು.

ಟಿವಿ ಪರದೆ

ಗೇಮ್ಸ್

ನಿಮ್ಮ ಫೋನ್‌ನಲ್ಲಿ ನೀವಾಡುವ ಯಾವುದೇ ಗೇಮ್ಸ್ ಅನ್ನು ಟಿವಿ ಪರದೆಯಲ್ಲಿ ಕೂಡ ಆಡಬಹುದಾಗಿದೆ.

ಹಾರ್ಟ್ ರೇಟ್ ಅಪ್ಲಿಕೇಶನ್

ಇನ್‌ಸ್ಟಂಟ್ ಹಾರ್ಟ್ ರೇಟ್ ಅಪ್ಲಿಕೇಶನ್

ಇನ್‌ಸ್ಟಂಟ್ ಹಾರ್ಟ್ ರೇಟ್ ಅಪ್ಲಿಕೇಶನ್ ಹೆಚ್ಚು ಉಪಯೋಗಕಾರಿ ಎಂದೆನಿಸಿದ್ದು ಬಳಕೆದಾರರ ಹಾರ್ಟ್ ರೇಟ್ ಅನ್ನು ತಿಳಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see some tips on how your android phone going more better by suing these tips.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot