ಭಾರತಕ್ಕೆ ಕಾಲಿರಿಸಲಿರುವ ಅತ್ಯುನ್ನತ ಗ್ಯಾಜೆಟ್‌ಗಳು
ಹೊಸ ಗ್ಯಾಜೆಟ್ ಅನ್ನು ಖರೀದಿಸಬೇಕೆಂಬ ಆಶಯವನ್ನು ಹೊಂದಿರುವಿರಾ ಹಾಗಿದ್ದರೆ ಇದು ಸಕಾಲವಾಗಿದೆ. ಈ ವರ್ಷದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿರುವ ಅತ್ಯುನ್ನತ ಗ್ಯಾಜೆಟ್‌ಗಳು ನಿಮ್ಮ ಆಸೆಯನ್ನು ನೆರವೇರಿಸುವ ನಿಟ್ಟಿನಲ್ಲಿವೆ. ಸ್ಯಾಮ್‌ಸಂಗ್ ತನ್ನ ಅತ್ಯದ್ಭುತ ಗ್ಯಾಲಕ್ಸಿ ಎಸ್6 ನೊಂದಿಗೆ ಈ ವರ್ಷವನ್ನು ಆರಂಭಿಸಿದ್ದು, ಏಪ್ರಿಲ್ 10 ರಂದು ಈ ಫೋನ್ ಭಾರತದಲ್ಲಿ ಮಾರಾಟವನ್ನು ಕಂಡುಕೊಳ್ಳಲಿದೆ. [ಟೆಕ್ ಜಗತ್ತಿನ ಅವಿಸ್ಮರಣೀಯ ವಿಸ್ಮಯಗಳು]
ಅದೇ ರೀತಿ ಐಫೋನ್, ಎಲ್‌ಜಿ ಮೊದಲಾದ ದೊಡ್ಡ ದೊಡ್ಡ ಟೆಕ್ ಕುಳಗಳೂ ಕೂಡ ತಮ್ಮ ಶ್ರೀಮಂತ ಉತ್ಪನ್ನಗಳ ಮೂಲಕ ಭರ್ಜರಿ ಪೈಪೋಟಿಯನ್ನು ನೀಡುವ ನಿಟ್ಟಿನಲ್ಲಿವೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಉತ್ಪನ್ನಗಳ ಕುರಿತ ಮಾಹಿತಿಯನ್ನು ಅರಿಯೋಣ.

ಅತ್ಯುನ್ನತ ಗ್ಯಾಜೆಟ್‌ಗಳು
ಇದು 5.1 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಫಾಸ್ಟ್ ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ಶಕ್ತಿಯುತ ಕ್ಯಾಮೆರಾವನ್ನು ಹೊಂದಿದ್ದು, ವೈರ್‌ಲೆಸ್ ಪಾವತಿಗಳನ್ನು ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರ ಬೆಲೆ ಸರಿಸುಮಾರು ರೂ 49,990 ಎಂದು ಅಂದಾಜಿಸಲಾಗಿದೆ.

ಅತ್ಯುನ್ನತ ಗ್ಯಾಜೆಟ್‌ಗಳು
ಮೂಲ ಗ್ಯಾಲಕ್ಸಿ ಎಸ್6 ನ ಪ್ರೀಮಿಯಮ್ ಆವೃತ್ತಿಯಾಗಿರುವ ಗ್ಯಾಲಕ್ಸಿ ಎಸ್6 ಎಡ್ಜ್ ಡ್ಯುಯಲ್ ಎಡ್ಜ್ ಸ್ಕ್ರೀನ್ ಅನ್ನು ಹೊಂದಿದೆ. ಬೆಲೆ ರೂ 58,990 ಆಗಿದೆ.

ಅತ್ಯುನ್ನತ ಗ್ಯಾಜೆಟ್‌ಗಳು
ಸಿಇಎಸ್‌ನಲ್ಲಿ ಘೋಷಣೆಯಾದ ಈ ಟಿವಿ ನೀವು ಈ ಹಿಂದೆ ನೋಡಿರುವ ಯುಎಚ್‌ಡಿ ಟಿವಿಗಿಂತ ದೊಡ್ಡದಿದೆ. ವಿಶ್ವದ ಪ್ರಥಮ 5 ಕೆ ಟಿವಿ ಇದಾಗಿದ್ದು ಬೆಲೆ ರೂ 60,00,000 ಆಗಿದೆ.

ಅತ್ಯುನ್ನತ ಗ್ಯಾಜೆಟ್‌ಗಳು
ಭಾರತದಲ್ಲಿ ರೂ 6,999 ಕ್ಕೆ ಲಭ್ಯವಿರುವ ಶ್ಯೋಮಿ ರೆಡ್ಮಿ 2, ಭಾರತದಲ್ಲಿರುವ ಹೆಚ್ಚು ಬಳಕೆದಾರರನ್ನು ಆಕರ್ಷಿಸಿದೆ. ಇದು 64 ಬಿಟ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಜೊತೆಗೆ ಬಂದಿದೆ. ಇದರ ಬ್ಯಾಟರಿ 2,200mAh ಆಗಿದೆ.

ಅತ್ಯುನ್ನತ ಗ್ಯಾಜೆಟ್‌ಗಳು
ಗಾರ್ಮಿನ್ ಇತ್ತೀಚೆಗೆ ವಿವೊಸ್ಮಾರ್ಟ್ ಅನ್ನು ಲಾಂಚ್ ಮಾಡಿದ್ದು, ಬೆಲೆ ರೂ 10,990 ಆಗಿದೆ. ಇದೊಂದು ಫಿಟ್‌ನೆಸ್ ಬ್ಯಾಂಡ್ ಆಗಿದ್ದು ಓಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು ರೀಚಾರ್ಜ್ ಮಾಡಬಹುದಾದ ಲಿಥಿಯಮ್ ಬ್ಯಾಟರಿ ಇದರಲ್ಲಿದೆ.

ಅತ್ಯುನ್ನತ ಗ್ಯಾಜೆಟ್‌ಗಳು
ಆಪಲ್ ಐಪ್ಯಾಡ್ ಏರ್2 ಗೆ ಬದ್ಧ ಸ್ಪರ್ಧಿಯನ್ನು ಶ್ಯೋಮಿ ಹೊರತರುವ ನಿಟ್ಟಿನಲ್ಲಿದ್ದು ಬೆಲೆ ರೂ 12,999 ಆಗಿದೆ ಎಂದು ಅಂದಾಜಿಸಲಾಗಿದೆ.

ಅತ್ಯುನ್ನತ ಗ್ಯಾಜೆಟ್‌ಗಳು
ಸಿಇಎಸ್ ಟೆಕ್ ಶೋದಲ್ಲಿ ಎಲ್‌ಜಿ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 810 ಚಿಪ್‌ಸೆಟ್‌ನ ಫೋನ್ ಅನ್ನು 2015 ಕ್ಕೆ ಬಿಡುಗಡೆ ಮಾಡಿದೆ. ಬೆಲೆ ರೂ 55,000 ಆಗಿದೆ.

ಅತ್ಯುನ್ನತ ಗ್ಯಾಜೆಟ್‌ಗಳು
ಹಸ್ತ ಗಾತ್ರದಲ್ಲಿರುವ ಮಿನಿ ಪಿಸಿ ರೂ 26,000 ಕ್ಕೆ ಭಾರತದಲ್ಲಿ ಲಭ್ಯವಿದೆ. ಇದು 4 ಜಿಬಿ RAM ಅನ್ನು ಒಳಗೊಂಡಿದ್ದು, ಕೀಬೋರ್ಡ್ ಮತ್ತು ಮೌಸ್ ಕೂಡ ಇದರಲ್ಲಿದೆ.

ಅತ್ಯುನ್ನತ ಗ್ಯಾಜೆಟ್‌ಗಳು
ವಿಲ್‌ಕಿನ್ಸ್ ತನ್ನ ಪಿ3 ಹೆಡ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದರ ಬೆಲೆ ರೂ 16,000 ಆಗಿದೆ.

ಅತ್ಯುನ್ನತ ಗ್ಯಾಜೆಟ್‌ಗಳು
ಆಪಲ್ ಮ್ಯಾಕ್‌ಬುಕ್ ಪ್ರೊ ಕಿಲ್ಲರ್ ಸ್ಪರ್ಧಿ ಲೆನೊವೊ ಯೋಗಾ ಪ್ರೊ 3 ಲ್ಯಾಪ್‌ಟಾಪ್ ಆಗಿದ್ದು ನಿಜಕ್ಕೂ ಸುಂದರ ನೋಟವನ್ನು ಹೊಂದಿದೆ. ಬೆಲೆ ರೂ 1,14,990 ಆಗಿದೆ.


Click it and Unblock the Notifications








