ಬಳಕೆದಾರರ ಆಪತ್ಬಾಂಧವ ಆಂಡ್ರಾಯ್ಡ್ ಸಲಹೆಗಳು
ಸ್ಮಾರ್ಟ್‌ಫೋನ್ ಬಳಕೆದಾರರ ಮೆಚ್ಚಿನ ಓಎಸ್ ಎಂದೇ ಪ್ರಸಿದ್ಧಗೊಂಡಿರುವ ಆಂಡ್ರಾಯ್ಡ್ ಸ್ವತಂತ್ರ ಪ್ಲಾಟ್‌ಫಾರ್ಮ್ ಆಗಿ ಹೆಚ್ಚಿನ ಕಸ್ಟಮೈಸೇಶನ್ ಅನ್ನು ಬಳಕೆದಾರರಿಗೆ ಒದಗಿಸುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ವೈಯಕ್ತೀಕರಿಸುವುದು ಮಾತ್ರವಲ್ಲದೆ ನಿಮ್ಮ ಫೋನ್ ಬ್ಯಾಟರಿಯನ್ನು ಸಂಘಟಿಸುವ ಹಲವಾರು ವಿಧಾನಗಳನ್ನು ಆಂಡ್ರಾಯ್ಡ್ ನಿಮಗೆ ಒದಗಿಸುತ್ತದೆ.
ಓದಿರಿ: ಆಶ್ಲೇ ಮೆಡಿಸನ್ ಸೈಟ್ ಬಳಕೆ: ಮಹಿಳೆಯರಿಗಿಂತ ಪುರುಷರ ಮೇಲುಗೈ
ಇಂದಿನ ಲೇಖನದಲ್ಲಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಿಂದ ಬಹಳಷ್ಟನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಕುರಿತ ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

ಗೂಗಲ್ ನೌ
ಆಂಡ್ರಾಯ್ಡ್‌ನ ವೈಯಕ್ತಿಕ ಸಹಾಯಕ ಅಪ್ಲಿಕೇನ್ ಆಗಿರುವ ಗೂಗಲ್ ನೌ ನಿಮ್ಮ ಆದ್ಯತೆಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಸ್ಟಾಕ್‌ಗಳು, ಕ್ರೀಡಾ ತಂಡಗಳ ಮಾಹಿತಿಯನ್ನು ಇದು ನಿಮಗೆ ಒದಗಿಸುತ್ತದೆ. ನಿಮಗೆ ವೈಯಕ್ತೀಕರಿಸಿದ ಅಧಿಸೂಚನೆಗಳನ್ನು ಕೂಡ ಇದು ಒಸಗಿಸುತ್ತದೆ.

ಲಾಂಚರ್‌ಗಳು ಮತ್ತು ಲಾಕ್ ಸ್ಕ್ರೀನ್
ಗೂಗಲ್ ಪ್ಲೇ ಸ್ಟೋರ್‌ನಿಂದ ಆಕರ್ಷಕ ಲಾಂಚರ್ ಮತ್ತು ಲಾಕ್ ಸ್ಕ್ರೀನ್ ಅಪ್ಲಿಕೇಶನ್‌ಗಳನ್ನು ನಿಮಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ನ ಇಂಟರ್ಫೇಸ್ ಅನ್ನು ಇದು ಬದಲಾಯಿಸಬಲ್ಲುದು.

ಪವರ್ ಸೇವಿಂಗ್ ಮೋಡ್
ನಿಮ್ಮ ಬ್ಯಾಟರಿ ದೀರ್ಘತೆಯನ್ನು ಉಳಿಸುವ ಉತ್ತಮ ಆಯ್ಕೆಗಳಲ್ಲಿ ಪವರ್ ಸೇವಿಂಗ್ ಮೋಡ್ ಒಂದಾಗಿದೆ. ದೀರ್ಘ ಬ್ಯಾಟರಿ ಮತ್ತು ಹೆಚ್ಚು ಸಾಮರ್ಥ್ಯದ ವೈಶಿಷ್ಟ್ಯಗಳೊಂದಿಗೆ ಇದು ಬಂದಿದೆ.

ಹೆಚ್ಚುವರಿ ಬ್ಯಾಟರಿ
ನೀವು ಪ್ರಯಾಣದಲ್ಲಿರುವಾಗ ಹೆಚ್ಚುವರಿ ಬ್ಯಾಟರಿಯನ್ನು ಇರಿಸಿಕೊಳ್ಳಿ. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ರಿಮೂವೇಬಲ್ ಬ್ಯಾಟರಿಯೊಂದಿಗೆ ಬಂದಿದ್ದರೂ ಕೆಲವೊಂದರ ಬ್ಯಾಟರಿ ಇನ್‌ಬಿಲ್ಟ್ ಆಗಿರುತ್ತದೆ. ಆದ್ದರಿಂದ ಪವರ್ ಬ್ಯಾಂಕ್ ಅನ್ನು ಕೊಂಡೊಯ್ಯುವುದು ಉತ್ತಮ ಆಯ್ಕೆಯಾಗಿದೆ.

ಗೂಗಲ್ ಕ್ರೋಮ್
ಡೀಫಾಲ್ಟ್ ವೆಬ್ ಬ್ರೌಸರ್ ಆದ ಗೂಗಲ್ ಕ್ರೋಮ್‌ನೊಂದಿಗೆ ಆಂಡ್ರಾಯ್ಡ್ ಬಂದಿದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕ್ರೋಮ್ ಬ್ರೌಸರ್ ಅಪ್ಲಿಕೇಶನ್‌ನಲ್ಲಿ ಗೂಗಲ್ ಖಾತೆಯೊಂದಿಗೆ ನೀವು ಸೈನ್ ಇನ್ ಮಾಡಿದಾಗ, ನಿಮ್ಮೆಲ್ಲಾ ಬುಕ್‌ಮಾರ್ಕ್‌ಗಳು, ಉಳಿಸಿರುವ ಪಾಸ್‌ವರ್ಡ್‌ಗಳು ಮತ್ತು ಆದ್ಯತೆಗಳು ಸ್ವಯಂಚಾಲಿತವಾಗಿ ಕ್ರೋಮ್ ಅಪ್ಲಿಕೇಶನ್‌ನೊಂದಿಗೆ ಸಿಂಕ್ ಆಗುತ್ತದೆ.

ಅಪ್ಲಿಕೇಶನ್ ಸಂಘಟನೆ
ಸೋಶೀಯಲ್ ಮೀಡಿಯಾ, ಫನ್, ಗೇಮ್ಸ್ ಮತ್ತು ಇನ್ನಷ್ಟನ್ನು ವಿವಿಧ ವರ್ಗಗಳಲ್ಲಿ ಫೋಲ್ಡರ್ ರಚಿಸುವ ಮೂಲಕ ಅಪ್ಲಿಕೇಶನ್ ವಿಭಾಗಿಸಬಹುದಾಗಿದೆ.

ಕೀಬೋರ್ಡ್
ಟೈಪ್ ಮಾಡುವುದಕ್ಕಿಂತಲೂ ಸ್ವೈಪ್ ಮಾಡುವುದು ಹೆಚ್ಚು ಸರಳ ವಿಧಾನವಾಗಿದೆ. ಗೂಗಲ್ ಪ್ಲೇ ಸ್ಟೋರ್ ಹೆಚ್ಚಿನ ಕೀಬೋರ್ಡ್ ಅಪ್ಲಿಕೇಶನ್‌ಗಳನ್ನು ಹೊಂದಿದ್ದು ಬೆರಳುಗಳನ್ನು ಇದರ ಮೇಲೆ ಸ್ವೈಪ್ ಮಾಡುವುದರ ಮೂಲಕ ಟೈಪ್ ಮಾಡುವ ತೊಂದರೆ ನಿಮಗಿರುವುದಿಲ್ಲ.

ಬ್ಯಾಂಡ್ ವಿಡ್ತ್ ಮ್ಯಾನೇಜ್‌ಮೆಂಟ್
ಕ್ರೋಮ್‌ನಲ್ಲಿ ಡೇಟಾ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ಅನಗತ್ಯ ಚಿತ್ರಗಳನ್ನು ನಿವಾರಿಸಿ ಹೆಚ್ಚುವರಿ ಡೇಟಾ ಬಳಕೆಯನ್ನು ಕಡಿತಗೊಳಿಸುವುದಕ್ಕಾಗಿ ವೆಬ್ ಪುಟಗಳನ್ನು ಅಚ್ಚುಕಟ್ಟಾದ ರೀತಿಯಲ್ಲಿ ನಿಮಗೆ ತೋರಿಸುತ್ತದೆ.

ಗೂಗಲ್ ಅಥೆಂಟಿಕೇಟರ್
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಎರಡು ಹಂತದ ಪ್ರಮಾಣೀಕರಣವನ್ನು ಗೂಗಲ್ ಅಥೆಂಟಿಕೇಟರ್ ನಿಮಗೆ ಒದಗಿಸುತ್ತದೆ. ನೀವು ಲಾಗಿನ್ ಮಾಡಿದಾಗ, ಹೆಚ್ಚುವರಿ ಭದ್ರತೆಗಾಗಿ ಅಪ್ಲಿಕೇಶನ್ ಮೂಲಕ ಕೋಡ್ ರಚನೆಯಾಗುತ್ತದೆ.

ಡೀಫಾಲ್ಟ್ ಅಪ್ಲಿಕೇಶನ್
ವಿಷಯಗಳಿಗಾಗಿ ಆಂಡ್ರಾಯ್ಡ್ ಹೆಚ್ಚಿನ ಬಿಲ್ಟ್ ಇನ್ ಬೆಂಬಲದೊಂದಿಗೆ ಬರುತ್ತದೆ. ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಡೋಬ್ ರೀಡರ್ ಅನ್ನು ಪಿಡಿಎಫ್‌ಗಾಗಿ ನಿಮ್ಮ ಡೀಫಾಲ್ಟ್ ಅಪ್ಲಿಕೇಶನ್ ಆಗಿ ಮಾಡಿಕೊಳ್ಳಬಹುದು.


Click it and Unblock the Notifications








