Subscribe to Gizbot

ವಿಶ್ವ ದಾಖಲೆ ಮಾಡಿದ ಟಾಪ್ ಅನ್ವೇಷಣೆಗಳು

Written By:

ಇಂದಿನ ವಿಜ್ಞಾನ ಯುಗದಲ್ಲಿ ನೈಸರ್ಗಿಕ ಶಕ್ತಿಯನ್ನು ಬಳಸಿಕೊಂಡು ಅದರಿಂದ ನಿತ್ಯದ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಶಕ್ತಿಯ ಮೂಲವೆಂದೇ ಜನಜನಿತವಾಗಿರುವ ನೈಸರ್ಗಿಕ ಎನರ್ಜಿಯಿಂದ ಇಂದು ಮನುಷ್ಯ ವಿಶ್ವಮಟ್ಟದಲ್ಲಿ ಸ್ಥಾನ ಗಳಿಸಿದ್ದಾನೆ. ಪ್ರಾಕೃತಿಕ ಶಕ್ತಿ ಮಾನವ ನಿರ್ಮಿತ ಶಕ್ತಿಗಿಂತ ಹಿರಿದಾಗಿದ್ದು ಹೆಚ್ಚು ಶಕ್ತಿಯುತವಾಗಿದೆ ಮತ್ತು ಯಾವುದೇ ಹಾನಿಯನ್ನೂ ಉಂಟುಮಾಡುವುದಿಲ್ಲ.

ಓದಿರಿ:"ಬೆಳೆಯುವ ಸಿರಿ ಮೊಳಕೆಯಲ್ಲಿ" ವಿದ್ಯಾರ್ಥಿಗಳ ಟಾಪ್ ಅನ್ವೇಷಣೆಗಳು

ಇಂದಿನ ಲೇಖನದಲ್ಲಿ ನೈಸರ್ಗಿಕ ಶಕ್ತಿಯಿಂದ ಮಾನವ ಪಡೆದುಕೊಂಡಿರುವ ಸೌಲಭ್ಯಗಳ ಪಟ್ಟಿಯನ್ನು ನಾವು ನೀಡುತ್ತಿದ್ದು ಇದು ನಿಮ್ಮನ್ನು ಬೆಕ್ಕಸಬೆರಗಾಗಿಸುವುದು ಖಂಡಿತ. ಬನ್ನಿ ಹಾಗಿದ್ದರೆ ಅದೇನು ಎಂಬುದನ್ನು ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೀರು ಶುದ್ಧೀಕರಣ

ಸೋಲಾರ್ ಶಕ್ತಿಯುಳ್ಳ ನೀರು ಶುದ್ಧೀಕರಣ

ಭಾರತೀಯ ಮೂಲದ ಹುಡುಗಿ ದೀಪಿಕಾ ಕುರುಪ್, ಸೋಲಾರ್ ವಾಟರ್ ಪ್ಯೂರಿಫೈಯರ್ ಅನ್ನು ಅನ್ವೇಷಿಸಿದ್ದು, ಸ್ವಲ್ಪ ಹಣ ಖರ್ಚು ಮಾಡಿದರೆ ಸಾಕು ಶುದ್ಧವಾದ ನೈಸರ್ಗಿಕ ನೀರನ್ನು ಕುಡಿಯಬಹುದಾಗಿದೆ. ಸೂರ್ಯನ ಬೆಳಕಿನ ಟೈಟಾನಿಯಮ್ ಆಕ್ಸೈಡ್ ಮತ್ತು ಜಿಂಕ್ ಆಕ್ಸೈಡ್ ಈ ವ್ಯವಸ್ಥೆಗೆ ಸಾಕು.

ಮಾನವನ ಮೂತ್ರ

ಮಾನವನ ಮೂತ್ರದಿಂದ ಜನರೇಟರ್ ಚಾಲನೆ

ನೈಜೀರಿಯಾದ ಹದಿಹರೆಯದ ಇಂಜಿನಿಯರ್‌ಗಳು ಅನ್ವೇಷಿಸಿದ ಸಂಶೋಧನೆಯೊಂದು ಇಲ್ಲಿದೆ. ನಾಲ್ಕು ವಿದ್ಯಾರ್ಥಿಗಳು ಒಂದು ಜನರೇಟರ್ ಅನ್ನು ಅಭಿವೃದ್ಧಿಪಡಿಸಿದ್ದು ಮಾನವನ ಮೂತ್ರದಿಂದ ಹೈಡ್ರೋಜನ್ ಗ್ಯಾಸ್ ಅನ್ನು ಬೇರ್ಪಡಿಸಿ ಚಾಲನೆಯಾಗುವ ಜನರೇಟರ್ ಅನ್ನು ಕಂಡುಹುಡುಕಿದ್ದಾರೆ.

ಆಕ್ವಾಪೊನಿಕ್ಸ್ ಎಂಬ ವ್ಯವಸ್ಥೆ

ಆಕ್ವಾಪೊನಿಕ್ಸ್

ಜಪಾನ್‌ನ ರಿಟೈಲ್ ಕಂಪೆನಿ ಆಕ್ವಾಪೊನಿಕ್ಸ್ ಎಂಬ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಆಸ್ಪತ್ರೆಗಳಲ್ಲಿ ಇದನ್ನು ಕಲಾವಸ್ತುವಾಗಿ ಬಳಸುತ್ತಿದ್ದಾರೆ. ಸಸ್ಯಗಳನ್ನು ಮತ್ತು ಮೀನುಗಳನ್ನು ಬೆಳೆಸಿಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಫಿಶ್ ಟ್ಯಾಂಕ್‌ನಲ್ಲಿರುವ ನೀರು ಸಸ್ಯಗಳಿಗೆ ನೀರನ್ನು ಉಣಿಸುತ್ತದೆ ಮತ್ತು ಪೈಪ್ ಮೂಲಕ ಮೀನುಗಳಿಗೂ. ಇನ್ನು ಮೀನಿನ ಕಲ್ಮಶಗಳನ್ನು ಸಸ್ಯಗಳಿಗೆ ಗೊಬ್ಬರವನ್ನಾಗಿ ಬಳಸಲಾಗುತ್ತದೆ.

ಬ್ಲೇಡ್ ತಿರುಗದೇ ಇದ್ದರೂ ಶಕ್ತಿ

ವಿಂಡ್ ಟರ್ಬಿನ್

ವಿಂಡ್ ಟರ್ಬಿನ್‌ಗಳ ಬ್ಲೇಡ್ ತಿರುಗದೇ ಇದ್ದರೂ ಶಕ್ತಿಯನ್ನು ಉತ್ಪಾದಿಸಬಲ್ಲವು. ಜೂನ್ 2011 ರಲ್ಲಿ ವಿಂಡ್‌ಮಿಲ್‌ಗಳಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಆಪಲ್ ಅಡಿಇಟ್ಟಿತು. ವಿಂಡ್ ಶಕ್ತಿಯನ್ನು ಬಿಸಿಗೆ ಪರಿವರ್ತಿಸಿ ಅದರಿಂದ ಶಕ್ತಿಯನ್ನು ಉತ್ಪಾದಿಸುವ ಹೊಸ ವಿಧಾನ ಇತ್ತೀಚಿನ ಸಂಶೋಧನೆಯಾಗಿದೆ.

ಮರುಬಳಕೆ

ರೀಸೈಕ್ಲಿಂಗ್ ಕಾಂಕ್ರೀಟ್

ಕಟ್ಟಡ ನಿರ್ಮಾಣಕ್ಕೆ ಬಳಸುವ ಸಾಮಾನ್ಯ ಮತ್ತು ಕಡಿಮೆ ವೆಚ್ಚದ ಕಾಂಕ್ರೀಟ್ ಅನ್ನು ಮರುಬಳಕೆ ಮಾಡಲಾಗುವುದಿಲ್ಲ ಎಂಬ ಮಾತಿದೆ. ಆದರೆ ಕಾಂಕ್ರೀಟ್ ಅನ್ನು ಮರುಬಳಕೆ ಮಾಡಬಹುದಾದ ವಿಧಾನವನ್ನು ಇದೀಗ ಅನ್ವೇಷಿಸಲಾಗಿದೆ.

ಬಿಸಿಯಿಂದ ಕಾಂಕ್ರೀಟ್

ಸೆಲ್ಫ್ ಹೀಲಿಂಗ್ ಕಾಂಕ್ರೀಟ್

ರೀಸೈಕ್ಲಿಂಗ್ ಕಾಂಕ್ರೀಟ್ ಅನ್ನು ಹೊರತುಪಡಿಸಿ, ಹೆಂಕ್ ಜಾಂಕರ್ಸ್ ಮತ್ತು ಅವರ ತಂಡದವರು ಬಿಸಿಯಿಂದ ಕಾಂಕ್ರೀಟ್ ಅನ್ನು ಉತ್ಪಾದಿಸುವ ಹೊಸ ಅನ್ವೇಷಣೆಯನ್ನು ಕೈಗೆತ್ತಿಕೊಂಡಿದ್ದಾರೆ.

ನೀರಿನ ಅಲೆಗಳಿಂದ ಚಲಿಸುತ್ತದೆ

ವೇವ್ ಪವರ್ ರೊಬೋಟ್

ಲಿಕ್ವಿಡ್ ರೊಬೋಟಿಕ್ಸ್ ತಯಾರಿಸಿರುವ ವೇವ್ ಪವರ್ ರೊಬೋಟ್ ನೀರಿನ ಅಲೆಗಳಿಂದ ಚಲಿಸುತ್ತದೆ. ನೀರಿನಲ್ಲಿ ಚಲಿಸುವಾಗ ಈ ವಾಹನಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ. ಇದು 9000 ಮೈಲಿಗಳಿಗಿಂತ ಅಧಿಕ ದೂರವನ್ನು ಕ್ರಮಿಸಿದ್ದು ವಿಶ್ವ ದಾಖಲೆಯನ್ನು ಮಾಡಿದೆ.

ನೀರಿನ ಬಾಟಲ್

ಸ್ವಯಂ ತುಂಬಿಕೊಳ್ಳುವ ನೀರಿನ ಬಾಟಲ್

ಎನ್‌ಬಿಡಿ ನ್ಯಾನೊ ಹೊಸ ವಿಚಾರದೊಂದಿಗೆ ಬಂದಿದ್ದು ಗಾಳಿಯ ಸಹಾಯದಿಂದ ಶುದ್ಧವಾದ ನೀರನ್ನು ತಾನೇ ಬಾಟಲ್‌ನಲ್ಲಿ ತುಂಬಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಟ್ರೈನ್ ವೈಬ್ರೇಶನ್

ಟ್ರೈನ್ ವೈಬ್ರೇಶನ್ ಬಳಸಿ ಶಕ್ತಿಯನ್ನು ಸೆರೆಹಿಡಿಯುವುದು

ಸ್ಟೋನಿ ಬ್ರೂಕ್ ಯೂನಿವರ್ಸಿಟಿಯ ಸಂಶೋಧಕರು ಹೊಸದೊಂದು ಐಡಿಯಾದೊಂದಿಗೆ ಬಂದಿದ್ದು, ಚಲಿಸುತ್ತಿರುವ ರೈಲಿನಿಂದ ಉತ್ಪಾದನೆಯಾಗುವ ವೈಬ್ರೇಶನ್ ಅನ್ನು ಬಳಸಿಕೊಂಡು ಶಕ್ತಿಯನ್ನು ಪಡೆದುಕೊಳ್ಳುವುದಾಗಿದೆ. ಈ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿಸುವ ಡಿವೈಸ್ ಅನ್ನು ಇರಿಸಿ ಈ ರೀತಿ ಮಾಡಲಾಗುತ್ತದೆ.

ಶಕ್ತಿಗೆ ಪರಿವರ್ತಿಸುವ ಕಾರ್ಯ

ಸೋಲಾರ್ ಸೆಲ್ಸ್

ಸೂರ್ಯನ ಬೆಳಕನ್ನು ಹೀರಿಕೊಂಡು ಅದನ್ನು ಶಕ್ತಿಗೆ ಪರಿವರ್ತಿಸುವ ಕಾರ್ಯವನ್ನು ಸೋಲಾರ್ ಸೆಲ್ಸ್ ಮಾಡುತ್ತದೆ. ಎರಡು ಪಟ್ಟು ಅಧಿಕವಾಗಿಸುವ ನಿಟ್ಟಿನಲ್ಲಿ ಸೋಲಾರ್ ಸೆಲ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯ ನಡೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can find some inventions which have been made from natural energy..It is a kind of interested idea which will create different thoughts.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot