Home
ಸುದ್ದಿಜಾಲ

ಸದ್ಯ ಈ ಮೊಬೈಲ್‌ಗಳದ್ದೇ ಫುಲ್‌ ಹವಾ!..ಟಾಪ್‌ ಫೋನ್‌ ಲಿಸ್ಟ್‌ ಇಲ್ಲಿದೆ!

ಸದ್ಯ ಫೋನ್‌ ಜನರ ಅಗತ್ಯ ಡಿವೈಸ್‌ ಎನಿಸಿದ್ದು, ಈ ನಿಟ್ಟಿನಲ್ಲಿ ಮಾರುಕಟ್ಟೆಗೆ ಹಲವು ಅಪ್‌ಡೇಟ್‌ನೊಂದಿಗೆ ಹೊಸ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತಲೇ ಸಾಗಿವೆ. ಆದರೆ ಲಾಂಚ್‌ ಆಗುವ ಎಲ್ಲ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಕಮಾಲ್‌ ಮಾಡುವುದಿಲ್ಲ. ಕೆಲವೇ ಕೆಲವು ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಸ್‌ಗಳಿಂದ ಭಾರೀ ಸದ್ದು ಮಾಡಿ ಬಿಡುತ್ತವೆ.

ಹೌದು, ಲೀಡಿಂಗ್‌ ಮೊಬೈಲ್‌ ಕಂಪನಿಗಳು ಸೇರಿ ಇತರೆ ಬ್ರ್ಯಾಂಡ್‌ಗಳು ಹೊಸ ಸ್ಮಾರ್ಟ್‌ಫೋನ್‌ ಪರಿಚಯಿಸುತ್ತವೆ. ಅವುಗಳಲ್ಲಿ ಕೆಲವು ಮೊಬೈಲ್‌ಗಳು ಹೈ ಎಂಡ್‌ ಫೀಚರ್ಸ್‌ ಗ್ರಾಹಕರ ಗಮನ ಸೆಳೆಯುತ್ತವೆ. ಇನ್ನು ಕೆಲವು ಫೋನ್‌ಗಳು ಬಜೆಟ್‌ ಪ್ರೈಸ್‌ಟ್ಯಾಗ್‌ನಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಸಮಯ ಉಳಿದುಕೊಳ್ಳುತ್ತವೆ. ಹಾಗಾದರೆ ಸದ್ಯ ಈ ಮಾರ್ಚ್‌ ತಿಂಗಳಿನ ಕೊನೆಯಲ್ಲಿ ಮಾರುಕಟ್ಟೆಯಲ್ಲಿ ಹವಾ ಉಳಿಸಿಕೊಂಡಿರುವ ಮೊಬೈಲ್‌ಗಳ ಲಿಸ್ಟ್‌ ಇಲ್ಲಿದೆ ಮುಂದೆ ಓದಿರಿ.

ಸದ್ಯ ಈ ಮೊಬೈಲ್‌ಗಳದ್ದೇ ಫುಲ್‌ ಹವಾ!..ಟಾಪ್‌ ಫೋನ್‌ ಲಿಸ್ಟ್‌ ಇಲ್ಲಿದೆ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ

ಸ್ಯಾಮ್‌ಸಂಗ್‌ ಸಂಸ್ಥೆಯ ಈ ಸ್ಮಾರ್ಟ್‌ಫೋನ್‌ 6.8 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು ಡಿಸ್‌ಪ್ಲೇ 3120 x 1440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಪಡೆದಿದೆ. ಅಲ್ಲದೇ ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್‌ 3 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಕೂಡಾ ಪಡೆದಿದೆ. ಹಾಗೆಯೇ ಕ್ವಾಡ್‌ ಕ್ಯಾಮೆರಾ ರಚನೆ ಇದ್ದು, 45W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ.

ಸದ್ಯ ಈ ಮೊಬೈಲ್‌ಗಳದ್ದೇ ಫುಲ್‌ ಹವಾ!..ಟಾಪ್‌ ಫೋನ್‌ ಲಿಸ್ಟ್‌ ಇಲ್ಲಿದೆ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A55 5G

ಗ್ಯಾಲಕ್ಸಿ A55 5G ಮೊಬೈಲ್‌ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಹಾಗೆಯೇ ಇದು ಎಕ್ಸಿನೋಸ್ 1480 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ AMD Xclipse 530 GPU ಸಪೋರ್ಟ್‌ ಹಾಗೂ ಆಂಡ್ರಾಯ್ಡ್ 14 ಓಎಸ್‌ ಸಪೋರ್ಟ್‌ ಕಾಣಬಹುದಾಗಿದೆ.

ಅಲ್ಲದೇ ಈ ಫೋನ್ ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಇದರ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G

ಇತ್ತೀಚಿಗೆ ಬಿಡುಗಡೆ ಆಗಿರುವ ಈ ಗ್ಯಾಲಕ್ಸಿ A35 5G ಫೋನ್‌ 1080 × 2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಜೊತೆಗೆ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಅಲ್ಲದೇ ಈ ಸ್ಯಾಮ್‌ಸಂಗ್‌ ಫೋನ್‌ Exynos 1380 ಚಿಪ್‌ಸೆಟ್‌ ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಇದರ ಜೊತೆಗೆ ಮಾಲಿ G68 GPU ಹಾಗೂ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲದಲ್ಲಿ ಕೆಲಸ ಮಾಡಲಿದೆ.

ಹಾಗೆಯೇ ಈ ಮೊಬೈಲ್‌ ಮೂರು ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಮುಂಭಾಗದ ಸೆಲ್ಫಿ ಕ್ಯಾಮೆರಾವು 13 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪವರ್‌ ಪಡೆದುಕೊಂಡಿದೆ. ಇದರೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆ ಇದ್ದು, ಇದಕ್ಕೆ ಅನುಗುಣವಾಗಿ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದುಕೊಂಡಿದೆ.

Best Mobiles in India

English summary
Top 3 Trending Mobiles in Indian Market March 2024. Check Phones List here and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+