1000ರೂ. ಒಳಗೆ ಈ ಇಯರ್‌ಬಡ್ಸ್ ಖರೀದಿಸಬಹುದು!..ಫೀಚರ್ಸ್ ಹೇಗಿವೆ?
ಮ್ಯೂಸಿಕ್ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವೇ ಆಗಿದೆ. ಈ ನಿಟ್ಟಿನಲ್ಲಿ ಜನರು ಮ್ಯೂಸಿಕ್ ಕೇಳಲು, ಕರೆಯಲ್ಲಿ ಮಾತನಾಡಲು ಹಾಗೂ ಇತ್ತೀಚಿಗೆ ಗೇಮಿಂಗ್ ಆಡಲು ಸಹ ಫೋನ್ ಜೊತೆಗೆ ಅತ್ಯುತ್ತಮ ಇಯರ್‌ಬಡ್ಸ್ ಹೊಂದಿರುತ್ತಾರೆ. ಮಾರುಕಟ್ಟೆಯಲ್ಲಿ ತರಹೇವಾರಿ ಇಯರ್‌ಬಡ್ಸ್ ಲಭ್ಯ ಇದ್ರೂ, ಅಗ್ಗದ ಬೆಲೆಯ ಡಿವೈಸ್‌ಗಳಿಗೆನೇ ಭಾರೀ ಬೇಡಿಕೆ.
ಹೌದು, ಬಳಕೆದಾರರು ಸ್ಮಾರ್ಟ್‌ಫೋನ್ ಜೊತೆಗೆ ಅಗ್ಗದ ದರದಲ್ಲಿ ಲಭ್ಯವಾಗುವ ಬೆಸ್ಟ್ ಇಯರ್‌ಬಡ್ ಹೊಂಡಲು ಮುಂದಾಗುತ್ತಾರೆ. ಈಗಂತೂ ಬ್ರ್ಯಾಂಡೆಡ್ ಸಂಸ್ಥೆಗಳು ಸಹ ಆಕರ್ಷಕ ಬೆಲೆಯಲ್ಲಿ ಅತ್ಯುತ್ತಮ ಡಿಸೈನ್‌ನ ಇಯರ್‌ಬಡ್ಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಅದರಲ್ಲಿಯೂ ಸುಮಾರು 1000ರೂ. ಒಳಗೆ ಖರೀದಿಗೆ ಲಭ್ಯ ಇರುವ ಇಯರ್‌ಬಡ್ಸ್ ಸಿಕ್ಕಾಪಟ್ಟೆ ಡಿಮ್ಯಾಂಡ್ ಪಡೆದಿವೆ ಎನ್ನಬಹುದು. ಅಂತಹ ಕೆಲವು ಅಗ್ಗದ ಇಯರ್‌ಬಡ್ಸ್‌ಗಳ ಬಗ್ಗೆ ಇಲ್ಲಿದೆ ವಿವರ. ಮುಂದೆ ಓದಿರಿ.

ಮಿವಿ ಡ್ಯುಯೋಪಾಡ್ಸ್ F30 : ಮಿವಿ ಸಂಸ್ಥೆಯ (Duopods F30) ಈ ಸಾಧನವು ಹೈ ಡೆಫ್ನಿಸಿನ್ ಸೌಂಡ್ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 42 ಗಂಟೆಗಳ ಪ್ಲೇ ಬ್ಯಾಕ್ ಒದಗಿಸುತ್ತದೆ. ನಯವಾದ ರಚನೆ ಇದ್ದು, ಕಿವಿಗಳಿಗೆ ಕಂಫರ್ಟ್ ಧರಿಸಬಹುದಾಗಿದೆ. ಅಂದಹಾಗೆ ಇದು ಮೇಡ್ ಇನ್ ಇಂಡಿಯಾ ಆಗಿದೆ. ಗ್ರಾಹಕರು ಅಧಿಕೃತ ಮಿವಿ ವೆಬ್‌ಸೈಟ್ ಮೂಲಕ ಇದನ್ನು ಖರೀದಿ ಮಾಡಬಹುದಾಗಿದೆ.

ಪೋಟ್ರಾನ್ ಬಾಸ್‌ಬಡ್ಸ್ ಜಾಡೆ : ಈ (PTron Bassbuds Jade) ಡಿವೈಸ್ ಟ್ರೂ ವಾಯರ್‌ಲೆಸ್ ಇಯರ್‌ಬಡ್ಸ್ ಆಗಿದ್ದು, ಈ ಸಾಧನವು ಒಂದೇ ಬಾರಿಗೆ ಎರಡು ಡಿವೈಸ್‌ಗಳಿಗೆ ಕನೆಕ್ಟ್ ಮಾಡಲು ಸಪೋರ್ಟ್ ಮಾಡುತ್ತದೆ. ಈ ಡಿವೈಸ್ ಬ್ಲೂಟೂತ್ 5.0, ಕಾಲ್ ವೈಬ್ರೇಶನ್ ಅಲರ್ಟ್ ಮತ್ತು ಇನ್‌ಸ್ಟಾಚಾರ್ಜ್ ಜೊತೆಗೆ 1000 ವೈರ್‌ಲೆಸ್ ಅಡಿಯಲ್ಲಿ ಅತ್ಯುತ್ತಮ ಹೆಡ್‌ಫೋನ್‌ಗಳಲ್ಲಿ ಒಂದಾಗಿದೆ.

ವಿಕೂಲ್ ಇಯರ್‌ಬಡ್ಸ್ : (WeCool Moonwalk Mini Earbuds) ಈ ಡಿವೈಸ್ ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಸ್ ಸೌಲಭ್ಯ ಸಹ ಪಡೆದಿದೆ. ಇನ್ನು ಇದರ ಪ್ರತಿ ಇಯರ್‌ಬಡ್ ಕೇವಲ 4 ಗ್ರಾಂ ತೂಕ ಪಡೆದಿದ್ದು, ಚಾರ್ಜಿಂಗ್ ಕೇಸ್ ಡಿಜಿಟಲ್ ಇಂಟಿಕೇಟರ್ ಆಯ್ಕೆ ಪಡೆದಿದೆ. ಇದರ ಇಯರ್‌ಬಡ್‌ಗಳು ಐದು ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಹೊಂದಿವೆ ಆದರೆ ಚಾರ್ಜಿಂಗ್ ಕೇಸ್ 30 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಹೊಂದಿದೆ. ಒಂದು ಚಾರ್ಜ್ ಮಾಡಿದ ಕೇಸ್‌ನೊಂದಿಗೆ ನಿಮ್ಮ ಇಯರ್‌ಬಡ್‌ಗಳನ್ನು 6 ಬಾರಿ ರೀಚಾರ್ಜ್ ಮಾಡಬಹುದು.
ಪೋಟ್ರಾನ್ ಬಾಸ್‌ಬಡ್ಸ್ ಇಯಾನ್ : ಈ ಡಿವೈಸ್ (PTron Bassbuds Eon) ಟ್ರೂ ವೈರ್‌ಲೆಸ್ ಇಯರ್‌ಬಡ್ಸ್ ಆಗಿದ್ದು, ಜೊತೆಗೆ ಮೈಕ್ ಸಪೋರ್ಟ್ ಸಹ ಪಡೆದಿದೆ. ಈ ಡಿವೈಸ್ ಒಂದು ಪೂರ್ಣ ಚಾರ್ಜ್‌ನಲ್ಲಿ ಸುಮಾರು 30 ಗಂಟೆಗಳ ಪ್ಲೇಬ್ಯಾಕ್ ಟೈಮ್ ನೀಡಬಲ್ಲದು. ಈ ಸಾಧನವು ಟಚ್ ಸೆನ್ಸೆಟಿವ್ ಸೆನ್ಸಾರ್ ಹಾಗೂ ಅತ್ಯುತ್ತಮ ಸ್ಟೀರಿಯೋ ಸೌಂಡ್ ಸೌಲಭ್ಯವನ್ನು ಇದು ಒಳಗೊಂಡಿದೆ.

ಮಿವಿ ಡ್ಯುಯೋಪಾಡ್ಸ್ K1 : ಮಿವಿ ಸಂಸ್ಥೆಯ (DuoPods K1) ಈ ಸಾಧನವು ಅತ್ಯುತ್ತಮ ಸೌಂಡ್ ಹೊಂದಿದ್ದು, ಜೊತೆಗೆ IPX4 ರೇಟಿಂಗದ ಸಹ ಪಡೆದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 42 ಗಂಟೆಗಳಿಗೂ ಅಧಿಕ ಪ್ಲೇ ಬ್ಯಾಕ್ ಒದಗಿಸುತ್ತದೆ. ವಾಯಿಸ್ ಅಸಿಸ್ಟಂಟ್ ಸೌಲಭ್ಯದ ಸಹ ಪಡೆದಿದೆ. ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಗ್ರಾಹಕರು ಅಧಿಕೃತ ಮಿವಿ ವೆಬ್‌ಸೈಟ್ ಮೂಲಕ ಇದನ್ನು ಖರೀದಿ ಮಾಡಬಹುದಾಗಿದೆ.


Click it and Unblock the Notifications








